ಪ್ರಜ್ವಲ್‌ ಪ್ರಕರಣ | ಸತ್ಯ ಹರಿಶ್ಚಂದ್ರ ಪಾತ್ರಕ್ಕೆ ಬಣ್ಣ ಬಳಿದುಕೊಂಡ ಕುಮಾರಸ್ವಾಮಿ: ಕಾಂಗ್ರೆಸ್‌ ಲೇವಡಿ

Date:

ಸಿಡಿ ಮಾಡಿದವರನ್ನು ಎಸ್‌ಐಟಿ ಮುಂದೆ ನಿಲ್ಲಿಸಲು ಆಗದ ಬ್ರದರ್ ಸ್ವಾಮಿ ತನಿಖೆಯ ದಾರಿ ತಪ್ಪಿಸಲು ಅಧಿಕಾರಿಗಳ ಜರಿಯುತ್ತಿದ್ದಾರೆ. ಬ್ರದರ್ ಸ್ವಾಮಿ ನಿಮ್ಮ ಬಳಿ ಅಷ್ಟೊಂದು ದಾಖಲೆ ಇದ್ದರೆ ನೀವೇ ಎಸ್‌ಐಟಿಗೆ ಪ್ರಮಾಣ ಪತ್ರ ನೀಡಿ ಸಾಕ್ಷಿ ಹೇಳಿ? ನೊಂದವರಿಗೆ ಸಾಂತ್ವನ ಹೇಳಿ. ಮನಃಸಾಕ್ಷಿ ಇದ್ದರೆ ನೊಂದವರ ಕ್ಷಮೆ ಕೇಳಿ ಎಂದು ಕಾಂಗ್ರೆಸ್‌ ಕುಟುಕಿದೆ.

ಎಚ್‌ ಡಿ ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌, “ಕರ್ನಾಟಕದಲ್ಲಿ ಸಿಡಿ ಜನಕ ಬ್ರದರ್ ಸ್ವಾಮಿ! ಮಗನ ಪಟ್ಟಾಭಿಷೇಕದ ಆಸೆಗಾಗಿ ಆರು ತಿಂಗಳು ಮುಂಚೆನೇ ಡೀಲ್ ವಕೀಲನ ಬಳಸಿಕೊಂಡು ಸಿಡಿ ಬ್ಲಾಕ್ಮೇಲ್ ಮಾಡಿದ ಕೀರ್ತಿ ಬ್ರದರ್ ಸ್ವಾಮಿಗೆ ಸೇರುತ್ತದೆ” ಎಂದು ಟೀಕಿಸಿದೆ.

“ತನ್ನ ಕುಟುಂಬದ ಅವಾಂತರ ತಡೆದು ಹೆಣ್ಣುಮಕ್ಕಳ ರಕ್ಷಣೆ ಮಾಡದ ಬ್ರದರ್ ಸ್ವಾಮಿ ತನ್ನ ಪಟಾಲಂ ಬಳಸಿ ಸಿಡಿ ಹಂಚಿಸಿ ಈಗ ಪತಿವ್ರತೆ ನಾಟಕ ಆಡುತ್ತಿದ್ದಾರೆ” ಎಂದು ಲೇವಡಿ ಮಾಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಹಾಸನದ ಟಿಕೆಟ್ ಹಂಚಿಕೆ ಇಂದ ಚುನಾವಣೆವರೆಗೆ ಒಳ ಆಟ ಆಡಿ ಈಗ ಮಾನ ಹರಾಜು ಆದ ಮೇಲೆ ಸತ್ಯ ಹರೀಶ್ಚಂದ್ರ ಪಾತ್ರಕ್ಕೆ ಬಣ್ಣ ಬಳಿದುಕೊಳ್ಳುತ್ತಿದ್ದಾರೆ! ಅಸೆಂಬ್ಲಿಯ ಫಲಿತಾಂಶಕ್ಕೆ ಮೊದಲೇ ಸಿಂಗಾಪುರದಲ್ಲಿ ಕುಳಿತು ಮುಖ್ಯಮಂತ್ರಿ ಕನಸು ಕಂಡ ಬ್ರದರ್ ಸ್ವಾಮಿ ಸಿಗದ ಕುರ್ಚಿಗಾಗಿ ಹತಾಶೆಗೊಂಡು ಏನೆಲ್ಲಾ ಮಾಡಿ ತನ್ನ ಅಣ್ಣನ ಮಗನಂತೆ ಬಯಲಾಗುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದೆ.

“ಪಲಾಯನ ಬಿಟ್ಟು ರಾಜ್ಯದ ಗೌರವ ಮಣ್ಣು ಪಾಲು ಮಾಡಿ ಹೆಣ್ಣುಮಕ್ಕಳ ಬಾಳಿಗೆ ಕಂಠಕವಾದ ನಿಮ್ಮ ಅಣ್ಣನ ಮಗನಿಗೆ ಬುದ್ದಿ ಕಲಿಸಿ ಮರ್ಯಾದೆ ಉಳಿಸಿಕೊಳ್ಳಿ. ನಿಮ್ಮ ಕುಟುಂಬದ ಒಳ ಜಗಳಕ್ಕೆ ರಾಜ್ಯದ ಹೆಣ್ಣುಮಕ್ಕಳ ಬದುಕಿನೊಂದಿಗೆ ಆಟವಾಡಿ ಈಗ ಪೆನ್ ಡ್ರೈವ್ ಹಂಚಿಕೆ ಹೆಸರಲ್ಲಿ ರಕ್ಷಣೆ ಪಡೆಯುವ ನಾಟಕ ಕೊನೆಗೊಳಿಸಿ ಮಹಾನ್ ಚಿತ್ರ ನಿರ್ಮಾಪಕ ಬ್ರದರ್ ಸ್ವಾಮಿ ಅವರೇ” ಎಂದು ವ್ಯಂಗ್ಯವಾಡಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಕುಡಿಯುವ ನೀರಿನ ದರ ಏರಿಕೆ ಅನಿವಾರ್ಯ: ಡಿ.ಕೆ ಶಿವಕುಮಾರ್

ರಾಜ್ಯದಲ್ಲಿ ಸದ್ಯ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ....

ವಿನೀತ ಮೋದಿಗೆ ಜಾಗತಿಕ ಒತ್ತಡ; ದುರ್ಬಲಗೊಳ್ಳುತ್ತಿದೆ ವಿದೇಶಾಂಗ ಸಂಬಂಧ

ಭಾರತದಲ್ಲಿ ದುರ್ಬಲರಾಗಿ, ವಿನೀತರಾಗಬೇಕಾದ ಒತ್ತಡ ಹೊಂದಿರುವ ಮೋದಿ, ತಮ್ಮ ಮೂರನೇ ಅವಧಿಯಲ್ಲಿ...

ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ‌ ಹೇಳಿಕೆ; ಸಿ.ಟಿ ರವಿ ವಿರುದ್ಧ ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ‌ ಹೇಳಿಕೆ ನೀಡಿದ್ದ ಮಾಜಿ ಸಚಿವ, ವಿಧಾನ...

ಸೆಲೆಬ್ರಿಟಿಗಳ ಸುದ್ದಿಗಳು, ಮಾಧ್ಯಮಗಳು ಮತ್ತು ಜನಸಾಮಾನ್ಯರು

ಜವಾಬ್ದಾರಿಯುತ ಮಾಧ್ಯಮಗಳು ಮತ್ತು ಪ್ರಜ್ಞಾವಂತ ಜನರು ಸಕ್ರಿಯವಾಗಿ ಜನರನ್ನು ನಿರಂತರವಾಗಿ ಎಚ್ಚರಿಸುತ್ತಾ...