ಕರ್ನಾಟಕ SIR | ಮತ ಹಕ್ಕಿಗೇ ಕನ್ನ: ಪರಿಶೋಧನಾ ವರದಿ ಬಿಚ್ಚಿಟ್ಟ ಮತದಾರರ ಕಣ್ಣೀರ ಕಥನ

Date:

ಪ್ರಜಾಪ್ರಭುತ್ವದ ಅಡಿಪಾಯವೇ ಮತದಾರ ಮತ್ತು ಮತದಾನ. ಆದರೆ, ಈ ಅಡಿಪಾಯವನ್ನೇ ಕೆಡವುವ ಸಂಚು ನಡೆದಿದೆ. ಕೇಂದ್ರ ಸರ್ಕಾರ (ಮೋದಿ-ಶಾ ಜೋಡಿ) ಮತ್ತು ಚುನಾವಣಾ ಆಯೋಗ (ಗ್ಯಾನೇಶ್‌ ಕುಮಾರ್‌) ಜಂಟಿಯಾಗಿ ಎಸ್‌ಐಆರ್‌ ಹೆಸರಿನಲ್ಲಿ ಅರ್ಹ ಮತದಾರರ ಹಕ್ಕುಗಳನ್ನೇ ಕಸಿದುಕೊಂಡು, ವಿರೋಧಿ ಮತದಾರರನ್ನು ಮತಪಟ್ಟಿಯಿಂದ ಹೊರದಬ್ಬುತ್ತಿದ್ದಾರೆ.  ‘ನಾಗರಿಕ ಮತ ಕಾವಲು ಸಮಿತಿ’ ಮತ್ತು ‘SIR ವಿರೋಧಿ ಒಕ್ಕೂಟ’ ಜಂಟಿಯಾಗಿ ಹೊರತಂದಿರುವ ‘SIR ಪರಿಶೋಧನಾ ವರದಿ: ದ್ರೋಹ ಮತ್ತು ಕಣ್ಣೀರ ಕಥನ’ ಎಂಬ ವರದಿಯು ಎಸ್‌ಐಆರ್‌ನಲ್ಲಿ ನಡೆಯುತ್ತಿರುವ ಷಡ್ಯಂತ್ರಗಳು, ಲೋಪಗಳು ಹಾಗೂ ತಳಸಮುದಾಯಗಳ ಮೇಲಾಗಿರುವ ಗಂಭೀರ ಪರಿಣಾಮಗಳನ್ನು ಅತ್ಯಂತ ವಿವರವಾಗಿ ಬಿಚ್ಚಿಟ್ಟಿದೆ. ವರದಿಯ ಸಮಗ್ರ ವಿವರ ಇಲ್ಲಿದೆ:

- Advertisement -

ವರದಿಯ ಪ್ರಮುಖ ಭಾಗ ‘ನೆಲಮಟ್ಟದ ಪರಿಶೋಧನೆ’. ಮತ ಕಾವಲು ಸಮಿತಿಯು ಕೇವಲ ಚುನಾವಣಾ ಆಯೋಗದ ಕಾಗದದ ಮೇಲಿನ ಅಂಕಿ-ಸಂಖ್ಯೆಗಳನ್ನು ನೆಚ್ಚಿಕೊಳ್ಳದೆ, ಪ್ರತ್ಯಕ್ಷವಾಗಿ ನೆಲಮಟ್ಟದಲ್ಲಿ ವಾಸ್ತವ ಸ್ಥಿತಿಯನ್ನು ಅರಿಯುವ ಪ್ರಯತ್ನ ಮಾಡಿದೆ. ರಾಜ್ಯದ ನಾನಾ ಭಾಗಗಳ ಸುಮಾರು 100 ವಿಧಾನಸಭಾ ಕ್ಷೇತ್ರಗಳಲ್ಲಿ ಅಧ್ಯಯನ ನಡೆಸಿದೆ. ಜೊತೆಗೆ, ಬಿಎಲ್‌ಒ ಆ್ಯಪ್‌ ಮಾದರಿಯಲ್ಲಿ, ‘ಮತಕಾವಲು ಆ್ಯಪ್‌’ಅನ್ನೂ ಅಭಿವೃದ್ಧಿ ಪಡಿಸಿ, ಕರ್ನಾಟಕದ ಪ್ರತಿಯೊಂದು ಬೂತಿನ ಮತದಾರರ 2025ರ ಪಟ್ಟಿಯ ವಿವರ, ಕರಡು ಪಟ್ಟಿಯ ಸ್ಥಿತಿ, ಎಎಸ್‌ಡಿಡಿಒ ಅಡಿಯಲ್ಲಿ ಕಡಿತಗೊಂಡ ವಿವರ ಮತ್ತು ಬಂದಿರುವ ನೋಟೀಸ್‌ಗಳ ಪೂರ್ಣ ಮಾಹಿತಿ ಸಂಗ್ರಹಿಸಿದೆ. ಜೊತೆಗೆ, ತಮ್ಮದೇ ಕಾರ್ಯಪಡೆಯನ್ನು ಕಣಕ್ಕಿಳಿಸಿ ಪರಿಶೀಲನೆಗಳನ್ನೂ ಪಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು...

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ ಮಹಿಳಾ ಕ್ರೀಡಾಪಟುಗಳ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ಬಡತನ, ಗಾಯದ ನೋವು ಹಾಗೂ ಸಮಾಜದ ಕಟ್ಟುಪಾಡುಗಳನ್ನು ಮೆಟ್ಟಿ ನಿಂತು 14 ಚಿನ್ನದ...

ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು...

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ ಮತ ಬಾಚುವ ಕಣ್ಣು ಮುಚ್ಚಿ ತನ್ಮ ಕರ್ತವ್ಯದ ಕಣ್ಣು ತೆರೆದು ನೋಡುವುದು ಅಗತ್ಯ. ಬೈಗಾ ಸಮುದಾಯದಂತಹ ಅಪರೂಪದ ಬುಡಕಟ್ಟು ಸಂತತಿಯನ್ನು...

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18...

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ ವಿಶಾಲ ವೃಕ್ಷ, ಪ್ರಕೃತಿ ಮತ್ತು ಬದುಕಿನ ಸಂಬಂಧದ ಪ್ರತಿಫಲನ. ಗೊಂಡ್ ಆದಿವಾಸಿ ಕಲಾವಿದನ ಚಿತ್ರ ಕಲಾಕೃತಿಯೊಂದು ಆತನ ಮರಣದ 25...

ರಾಜ್ಯದ 25 ಜಿಲ್ಲೆಗಳಲ್ಲಿ ಆಯ್ಕೆ ಮಾಡಿದ 100 ಬೂತುಗಳಲ್ಲಿ ತರಬೇತಿ ಪಡೆದ ಸ್ವಯಂಸೇವಕರು ಮನೆಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ ಚುನಾವಣಾ ಆಯೋಗದ ಅಂಕಿ-ಸಂಖ್ಯೆಗಳಿಗೂ ಮತ್ತು ಪ್ರತ್ಯಕ್ಷ ವಾಸ್ತವಕ್ಕೂ ಅತಿ ದೊಡ್ಡ ಅಂತರವಿತ್ತು ಎಂಬುದನ್ನು ಸಮಿತಿಯು ಕಂಡುಕೊಂಡಿದೆ. ನಟ ಪ್ರಕಾಶ್ ರಾಜ್ ಅವರು ಕೂಡ ರಾಜ್ಯವ್ಯಾಪಿ ಪ್ರವಾಸ ನಡೆಸಿ, ಸಂತ್ರಸ್ತರೊಂದಿಗೆ ಸಂವಾದ ನಡೆಸಿ, ಜನರ ಕಣ್ಣೀರ ಕಥನವನ್ನು ಆಲಿಸಿದ್ದಾರೆ.

WhatsApp Image 2026 10 03 at 4.32.40 PM

ವರದಿ ವಿವರಿಸಿರುವ ಎಸ್‌ಐಆರ್‌ನ ಪ್ರಮುಖ ದೋಷಗಳಿವು

Advertisements
  • ತಮ್ಮ ಹೆಸರು ಡಿಲೀಟ್‌ ಆಗಿದೆ ಎಂಬುದು ಸ್ವತಃ ಮತದರರಿಗೇ ತಿಳಿದಿಲ್ಲ: ಪ್ರತಿಯೊಂದು ಚುನಾವಣೆಯಲ್ಲೂ ಮತ ಚಲಾಯಿಸುತ್ತಾ, ವರ್ಷಗಳಿಂದ ಒಂದೇ ಮನೆಯಲ್ಲಿ ವಾಸಿಸುತ್ತಿರುವ ಸಾವಿರಾರು ಅರ್ಹ ಮತದಾರರ ಹೆಸರುಗಳು ಮತಪಟ್ಟಿಯಿಂದ ಡಿಲೀಟ್‌ ಆಗಿವೆ. ಇದಕ್ಕಿಂತ ಆಘಾತಕಾರಿ ಎಂದರೆ, ತಮ್ಮ ಹೆಸರು ಮತಪಟ್ಟಿಯಿಂದ ಮಾಯವಾಗಿರುವುದೇ ಎಂಬುದು ಮತದ ಹಕ್ಕು ಕಳೆದುಕೊಂಡ ನಾಗರಿಕರಿಗೇ ಗೊತ್ತಿಲ್ಲ. ಆಯೋಗವು ಎಎಸ್‌ಡಿಡಿಒ ಪಟ್ಟಿಯನ್ನು ಬೂತ್ ಮಟ್ಟದಲ್ಲಿ ಪ್ರಕಟಿಸದೇ ಇರುವುದು ಮತ್ತು ಡೇಟಾವನ್ನು ಕೇವಲ ಆನ್‌ಲೈನ್‌ನಲ್ಲಿ ನೀಡಿದ್ದರಿಂದ ಗ್ರಾಮೀಣ ಜನರಿಗೆ, ವೃದ್ಧರಿಗೆ ಹಾಗೂ ಅಕ್ಷರಸ್ಥರಲ್ಲದವರಿಗೆ ಇದನ್ನು ಪರಿಶೀಲಿಸಿಕೊಳ್ಳಲು ಸಾಧ್ಯವಾಗಿಲ್ಲ.
  • ಹಲವು ಮತದಾರರಿಗೆ ಎನ್ಯುಮರೇಷನ್‌ ಫಾರ್ಮ್‌ಗಳೇ ಸಿಕ್ಕಿಲ್ಲ: ಧಾರವಾಡದ ಹಿರಿಯ ನಾಗರಿಕ ದಂಪತಿ ಶಿವಪ್ಪ ಮತ್ತು ಅನ್ನಪೂರ್ಣ ನಂಜನ್ನವರ್, ಮಂಡ್ಯದ ಖಲಂದರ್ ಮತ್ತು ಪ್ರಕಾಶ್ ಎಸ್., ಕೊಡಗಿನ ಪಾಲೇಮಾಡು ಬೂತ್‌ನ ಪಿ.ಸಿ. ಸೀತಮ್ಮ, ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಪ್ರಿಥ್ವಿರಾಜ್ ಕುಟುಂಬ ಹೀಗೆ ಸ್ವಂತ ಮನೆಯಲ್ಲೇ ವಾಸವಿರುವ ಸಾವಿರಾರು ಮತದಾರರಿಗೆ ಎನ್ಯುಮುರೇಷನ್ ಫಾರಂ ತಲುಪಿಯೇ ಇಲ್ಲ. ಆದರೂ, ಅವರನ್ನು ಎಎಸ್‌ಡಿಡಿಒ ಅಡಿಯಲ್ಲಿ ಡಿಲೀಟ್‌ ಮಾಡಲಾಗಿದೆ.
  • ಅಲ್ಲೇ ವಾಸವಿದ್ದರೂ ಶಿಫ್ಟೆಡ್ ಅಥವಾ ಆಬ್ಸೆಂಟ್ ಎಂದು ಡಿಲೀಟ್: ಬೆಂಗಳೂರಿನ ಬಾಪೂಜಿನಗರದ ನರಸಿಂಹರಾಜ ಕಾಲೋನಿಯ 1,300 ಜನರಲ್ಲಿ 826 ಜನರು ಎನ್ಯುಮುರೇಷನ್ ಫಾರಂ ತುಂಬಿಕೊಟ್ಟು ಅಲ್ಲೇ ವಾಸವಿದ್ದರೂ ಅವರ ಹೆಸರನ್ನು ‘ಶಿಫ್ಟೆಡ್’ ಎಂದು ತೆಗೆದುಹಾಕಲಾಗಿದೆ. ಬಳ್ಳಾರಿಯ ಕಂಪ್ಲಿಯ ಎಂ.ಡಿ. ಕ್ಯಾಂಪ್‌ನಲ್ಲಿ ಅಲೆಮಾರಿ ಸಮುದಾಯದ ಕಾವೇರಿ, ದುರ್ಗಣ್ಣ, ಈರಣ್ಣ ಅವರು ನಮೂನೆ ಸಲ್ಲಿಸಿದ್ದರೂ ಅವರ ಹೆಸರುಗಳು ಕರಡು ಪಟ್ಟಿಯಿಂದ ಮಾಯವಾಗಿವೆ. ಕಲಬುರಗಿ ಉತ್ತರ, ಬೆಂಗಳೂರು ಬಿಬಿಎಂಪಿ ದಕ್ಷಿಣ, ಕೊಡಗು, ಚಿಕ್ಕಬಳ್ಳಾಪುರ, ಕೊಪ್ಪಳ, ತುಮಕೂರು, ಮಂಡ್ಯ, ಬಸವಕಲ್ಯಾಣ ಹಾಗೂ ವಿಜಯನಗರ ಕ್ಷೇತ್ರಗಳಲ್ಲಿ ಇದೇ ರೀತಿಯ ಸಾವಿರಾರು ಪ್ರಕರಣಗಳು ಕಂಡುಬಂದಿವೆ.
  • ಬದುಕಿದ್ದವರನ್ನೂ ಕೊಂದಿದೆ ಎಸ್‌ಐಆರ್‌: ಸ್ವತಃ ಬದುಕಿದ್ದು, ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಾಗರಿಕರನ್ನು SIR ದಾಖಲೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ನಮೂದಿಸಿ ಮತಪಟ್ಟಿಯಿಂದ ಹೊರಗಿಡಲಾಗಿದೆ. ಮುಂಡಗೋಡಿನ ಬಸವತಿ ಅಲ್ಲಾಪುರ ಮತ್ತು ಕಲಬುರಗಿ ಉತ್ತರದ ನೇಹಾ ಪರ್ವೀನ್ ಈ ಕೃತ್ಯಕ್ಕೆ ಪ್ರತ್ಯಕ್ಷ ಉದಾಹರಣೆಗಳು.
  • ತಳ ಸಮುದಾಯಗಳ ಮೇಲೆ ತೀವ್ರ ಪೆಟ್ಟು: ತಳಮಟ್ಟದ ಪರಿಶೋಧನಾ ವರದಿಯು ಎತ್ತಿ ತೋರಿಸಿರುವ ಮತ್ತೊಂದು ಕಟು ಸತ್ಯವೆಂದರೆ, ಈ ಡಿಲೀಷನ್ ಸುನಾಮಿಗೆ ಅತಿ ಹೆಚ್ಚು ಬಲಿಯಾದವರು ಅಲೆಮಾರಿಗಳು, ಆದಿವಾಸಿಗಳು, ಸ್ಲಂ ನಿವಾಸಿಗಳು, ದಲಿತರು ಹಾಗೂ ಮುಸ್ಲಿಂ ಸಮುದಾಯದ ಬಡಜನರು. ಮುಂಡಗೋಡಿನ ಸಿದ್ಧಿ ಮತ್ತು ಗೌಳಿ ಸಮುದಾಯ, ಕೊಡಗಿನ ಗಿರಿಜನರು ಹಾಗೂ ವಿವಿಧ ಸ್ಲಂ ಪ್ರದೇಶದ ದುಡಿಯುವ ವರ್ಗದ ಮತಗಳನ್ನು ಬೇಕಾಬಿಟ್ಟಿಯಾಗಿ ತೆಗೆದುಹಾಕಲಾಗಿದೆ.

‘ನೋಟೀಸ್’ ಎಂಬ ಚಿತ್ರಹಿಂಸೆ ಮತ್ತು ‘ತಾರ್ಕಿಕ ವ್ಯತ್ಯಾಸ’

ರಾಜ್ಯದ ಒಟ್ಟು 43 ಲಕ್ಷ ಮತದಾರರಿಗೆ ಚುನಾವಣಾ ಆಯೋಗವು ನೋಟೀಸ್ ಜಾರಿ ಮಾಡಿದೆ. 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪ್ ಆಗಿಲ್ಲವೆಂಬ ಕಾರಣಕ್ಕೆ 23 ಲಕ್ಷ ಜನರಿಗೆ ಮತ್ತು ‘ತಾರ್ಕಿಕ ವ್ಯತ್ಯಾಸ’ (Logical Discrepancy) ಎಂಬ ನೆಪದಲ್ಲಿ 20 ಲಕ್ಷ ಜನರಿಗೆ ನೋಟೀಸ್ ಕಳುಹಿಸಲಾಗಿದೆ.

  • ಸಾರ್ವಜನಿಕರ ಪರದಾಟ: ಆಯೋಗ ಕೇಳುತ್ತಿರುವ ಹಳೆಯ ದಾಖಲೆಗಳನ್ನು ಹುಡುಕಿಕೊಟ್ಟು, ವಿಚಾರಣೆಗೆ ಹಾಜರಾಗಿ ತಾವು ಈ ದೇಶದ ಪ್ರಜೆ ಎಂದು ಸಾಬೀತುಪಡಿಸಿಕೊಳ್ಳುವ ಅವಮಾನಕರ ಸ್ಥಿತಿಗೆ ನಾಗರಿಕರು ತಳ್ಳಲ್ಪಟ್ಟಿದ್ದಾರೆ. 2002ರ ಮತದಾರರ ಪಟ್ಟಿಯ ದೋಷಗಳು, ಅಧಿಕಾರಿಗಳ ಅರ್ಧಸತ್ಯದ ಮಾಹಿತಿಗಳು ಹಾಗೂ ಆನ್‌ಲೈನ್ ಗೊಂದಲಗಳಿಂದಾಗಿ ಜನ ಸಾಮಾನ್ಯರು ದಾಖಲೆ ಸಿಗದೆ ನೋಟೀಸ್ ಹಿಡಿದು ತತ್ತರಿಸುತ್ತಿದ್ದಾರೆ.
  • ಅತಾರ್ಕಿಕ ಮಾನದಂಡಗಳು: ಹೆಸರುಗಳ ಸ್ಪೆಲ್ಲಿಂಗ್‌ನಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳು, ತಂದೆ-ತಾಯಿ ಮತ್ತು ಮಕ್ಕಳ ವಯಸ್ಸಿನ ಅಂತರದಲ್ಲಿನ ವ್ಯತ್ಯಾಸಗಳು, ಒಡಹುಟ್ಟಿದವರ ನಡುವಿನ ವಯಸ್ಸಿನ ವ್ಯತ್ಯಾಸ 9 ತಿಂಗಳಿಗಿಂತ ಕಡಿಮೆಯಿರುವುದು ಅಥವಾ ಒಬ್ಬ ತಂದೆಗೆ 6ಕ್ಕಿಂತ ಹೆಚ್ಚು ಮಕ್ಕಳಿದ್ದಾರೆ ಎಂಬ ಕಾರಣಗಳನ್ನು ‘ತಾರ್ಕಿಕ ವ್ಯತ್ಯಾಸ’ ಎಂದು ನೋಟೀಸ್ ನೀಡಲಾಗಿದೆ. ಭಾರತೀಯ ಗ್ರಾಮೀಣ ಹಾಗೂ ಬಡ ಕುಟುಂಬಗಳ ವಾಸ್ತವತೆಯನ್ನು ಅರಿಯದೆ ಇಂತಹ ತರ್ಕರಹಿತ ಶರತ್ತುಗಳನ್ನು ಹೇರಿರುವುದು ಪ್ರಜಾತಂತ್ರದ ಕೊಲೆಯಾಗಿದೆ.
  • ಅಲ್ಪಸಂಖ್ಯಾತರನ್ನೇ ಗುರಿಯಾಗಿಸಿಕೊಂಡ ಲಾಜಿಕಲ್ ಡಿಸ್ಕ್ರಿಪೆನ್ಸಿ: ಅನ್-ಮ್ಯಾಪಿಂಗ್ ನೋಟೀಸುಗಳಲ್ಲಿ ಇತರ ಸಮುದಾಯಗಳು 4.36%ರಷ್ಟಿದ್ದರೆ, ಮುಸ್ಲಿಂ ಸಮುದಾಯದವರ ಪ್ರಮಾಣ 2.67% ರಷ್ಟಿತ್ತು. ಆದರೆ, ಲಾಜಿಕಲ್ ಡಿಸ್ಕ್ರಿಪೆನ್ಸಿ ಹೆಸರಿನಲ್ಲಿ ನೀಡಲಾದ ನೋಟೀಸುಗಳಲ್ಲಿ ಮುಸ್ಲಿಂ ಸಮುದಾಯ ಒಂದಕ್ಕೇ 21.44%ನೋಟೀಸುಗಳನ್ನು ನೀಡಲಾಗಿದೆ. ಅಂದರೆ ಸಾಮಾನ್ಯ ಅನುಪಾತಕ್ಕಿಂತ ಬಹುಪಾಲು ಹೆಚ್ಚಿನ ನೋಟೀಸುಗಳನ್ನು ಕಳುಹಿಸುವ ಮೂಲಕ ಅಲ್ಪಸಂಖ್ಯಾತರನ್ನು ಸ್ಪಷ್ಟವಾಗಿ ಟಾರ್ಗೆಟ್ ಮಾಡಲಾಗಿದೆ ಎಂಬುದು ಸಾಬೀತಾಗಿದೆ.

ಕರಡು ಪಟ್ಟಿಯ ಆಘಾತಕಾರಿ ಅಂಕಿ-ಸಂಖ್ಯೆಗಳು ಹಾಗೂ ಆಪರೇಷನ್ ಫಾರಂ-7

SIR ಕರಡು ಪಟ್ಟಿ ಪ್ರಕಟವಾದಾಗ ರಾಜ್ಯಾದ್ಯಂತ 1.08 ಕೋಟಿ (ಶೇ. 19.5) ಮತದಾರರು ಪಟ್ಟಿಯಿಂದ ಹೊರಬಿದ್ದಿದ್ದರು. ಬೆಂಗಳೂರಿನಲ್ಲಿ 43.6% ರಷ್ಟು ಮತಗಳು (1.11 ಕೋಟಿಯಲ್ಲಿ 48.48 ಲಕ್ಷ) ಕಣ್ಮರೆಯಾಗಿದ್ದವು. ಇಷ್ಟೊಂದು ದೊಡ್ಡ ಪ್ರಮಾಣದ ಡಿಲೀಷನ್ ದೇಶದಲ್ಲೇ ಗರಿಷ್ಠ ಮಟ್ಟದ್ದಾಗಿದೆ.

ಇದರ ಮಧ್ಯೆ, ಅಪೀಲ್ ಅವಧಿಯ ಕೊನೆಯಲ್ಲಿ (ಸೆಪ್ಟೆಂಬರ್ 20-24) ಭಾಲ್ಕಿ, ಬಬಲೇಶ್ವರ, ಮೂಡಿಗೆರೆ, ಬೆಳಗಾವಿ, ಧಾರವಾಡ ಮುಂತಾದ ಕ್ಷೇತ್ರಗಳಲ್ಲಿ ‘ಆಪರೇಷನ್ ಫಾರಂ-7’ ಮೂಲಕ ಬಲ್ಕ್ ಅರ್ಜಿಗಳನ್ನು ಸಲ್ಲಿಸಿ ಕಾನೂನುಬಾಹಿರವಾಗಿ ಸಾವಿರಾರು ಮುಸ್ಲಿಂ ಮತದಾರರ ಹೆಸರುಗಳನ್ನು ತೆಗೆದುಹಾಕು ಷಡ್ಯಂತ್ರವೂ ನಡೆದಿದೆ. ನಿಯಮಗಳ ಪ್ರಕಾರ ಒಬ್ಬ ಬಿಎಲ್‌ಎ 10 ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದಾಗಿದ್ದರೂ, ಒಂದೇ ವ್ಯಕ್ತಿಯ ಹೆಸರಿನಲ್ಲಿ ನೂರಾರು ಅರ್ಜಿಗಳನ್ನು ಸಲ್ಲಿಸಿರುವುದು ಕೇಂದ್ರೀಕೃತ ಸಂಚನ್ನು ಬಯಲುಗೊಳಿಸಿದೆ.

ವರದಿಯಲ್ಲಿ ಕಂಡುಕೊಂಡಂತೆ SIR ಎಸಗಿರುವ ಟಾಪ್-10 ಅಪರಾಧಗಳು

  1. ಯಾವುದೇ ಸಂಸದೀಯ ಚರ್ಚೆಯಿಲ್ಲದೆ ಪ್ರಜಾತಂತ್ರದ ಮೇಲೆ ಅಕ್ರಮವಾಗಿ SIR ಪ್ರಕ್ರಿಯೆ ಹೇರಲಾಗಿದೆ.
  2. ಬಿಹಾರ ಮತ್ತು ಇತರ ರಾಜ್ಯಗಳ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮತಗಳನ್ನು ಕಡಿತಗೊಳಿಸುವ ರಾಜಕೀಯ ಗೇಮ್ ಪ್ಲಾನ್ ಮಾಡಿ, ಡಿಲೀಷನ್ ಕೃತ್ಯ ಎಸಗಲಾಗಿದೆ.
  3. ಮತಗಳ ಡಿಜಿಟಲೀಕರಣ ಮತ್ತು ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಹೆಸರಿನಲ್ಲಿ ಕೇಂದ್ರೀಕೃತ ಸಾಫ್ಟ್‌ವೇರ್ ಮೂಲಕ ಮತಹಕ್ಕನ್ನು ಕಸಿದುಕೊಳ್ಳಲಾಗಿದೆ.
  4. ಆಬ್ಸೆಂಟ್, ಶಿಫ್ಟೆಡ್, ಅದರ್ಸ್ ಹೆಸರಿನಲ್ಲಿ ಅಪೀಲಿಗೂ ಅವಕಾಶ ನೀಡದೆ ಸಾರಾಸಗಟಾಗಿ ಅರ್ಹ ಮತದಾರರನ್ನು ತೆಗೆದುಹಾಕಲಾಗಿದೆ.
  5. ವಿಳಾಸ ಬದಲಾಯಿಸಿದವರಿಗೆ ಫಾರಂ-8 ಮತ್ತು ಎನ್ಯುಮುರೇಷನ್ ಫಾರಂ ನಿರಾಕರಿಸಿ ಅನ್ಯಾಯ ಎಸಗಲಾಗಿದೆ.
  6. ತಪ್ಪಾಗಿ ಡಿಲೀಟ್ ಆದವರು ಮತ್ತೆ ಸೇರಲು ‘ಮೊದಲ ಬಾರಿಗೆ ನೋಂದಾಯಿಸುತ್ತಿದ್ದೇನೆ’ ಎಂಬ ಸುಳ್ಳು ಡಿಕ್ಲರೇಷನ್ ನೀಡುವಂತೆ ಒತ್ತಡ ಹೇರಲಾಗಿದೆ.
  7. ಬದುಕಿರುವವರನ್ನು ‘ಡೆಡ್’ ಮತ್ತು ವಾಸವಿರುವವರನ್ನು ‘ಶಿಫ್ಟೆಡ್’ ಎಂದು ತಪ್ಪು ದಾಖಲೆ ಸೃಷ್ಟಿಸಲಾಗಿದೆ.
  8. ಅರ್ಥಹೀನ 2002ರ ಮತಪಟ್ಟಿಯ ಲಿಂಕ್ ಹಾಗೂ ವಯಸ್ಸು/ಸ್ಪೆಲ್ಲಿಂಗ್ ವ್ಯತ್ಯಾಸಗಳ ನೆಪದಲ್ಲಿ ನೋಟೀಸ್ ಚಿತ್ರಹಿಂಸೆ ನೀಡಲಾಗಿದೆ.
  9. ತಳಸಮುದಾಯಗಳನ್ನು ಹಾಗೂ ಮುಸ್ಲಿಂ ಸಮುದಾಯವನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿ ನೋಟೀಸ್ ಕಳುಹಿಸಲಾಗಿದೆ.
  10. ಫಾರಂ-7 ದುರ್ಬಳಕೆ ಮತ್ತು ಆಡಳಿತಾತ್ಮಕ ಸರ್ವಾಧಿಕಾರದ ಮೂಲಕ ಪ್ರಜಾಪ್ರಭುತ್ವದ ಮೂಲ ವ್ಯವಸ್ಥೆಯನ್ನೇ ಧ್ವಂಸಗೊಳಿಸಲು ಯತ್ನಿಸಲಾಗಿದೆ.

ವರದಿಯು ತಿಳಿಸಿರುವಂತೆ ನಾಗರಿಕ ಸಮಾಜ ಮತ್ತು ಒಕ್ಕೂಟದ ಪ್ರಮುಖ ಹಕ್ಕೊತ್ತಾಯಗಳು

ಚುನಾವಣಾ ಆಯೋಗಕ್ಕೆ:

  • ಗ್ಯಾನೇಶ್ ಕುಮಾರ್ ಅವರು ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು.
  • ಪ್ರಸ್ತುತ ನಡೆಯುತ್ತಿರುವ SIR ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಡಿಲೀಟ್ ಆದ ಎಲ್ಲ ಅರ್ಹ ಮತದಾರರನ್ನು ಮರುಸೇರ್ಪಡೆ ಮಾಡಬೇಕು.
  • ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರನ್ನೊಳಗೊಂಡ ನಿಷ್ಪಕ್ಷಪಾತ ಸಮಿತಿಯ ಮೂಲಕ ಆಯುಕ್ತರ ಆಯ್ಕೆ ನಡೆಯಬೇಕು.

ಕೇಂದ್ರ ಸರ್ಕಾರಕ್ಕೆ:

  • ಗ್ಯಾನೇಶ್ ಕುಮಾರ್ ಅವರ ಮೇಲೆ ಸಂಸತ್ತಿನಲ್ಲಿ ಪದಚ್ಯುತಿ (Impeachment) ಪ್ರಕ್ರಿಯೆ ನಡೆಸಬೇಕು.
  • ಸಂವಿಧಾನ ವಿರೋಧಿ SIR ಹೇರಿದ್ದಕ್ಕಾಗಿ ಪ್ರಧಾನಿ ಮತ್ತು ಗೃಹಸಚಿವರು ದೇಶದ ಕ್ಷಮೆಯಾಚಿಸಬೇಕು ಹಾಗೂ ಪ್ರಕ್ರಿಯೆ ಬಾಧಿತ ರಾಜ್ಯಗಳಲ್ಲಿ ಮರು ಚುನಾವಣೆ ನಡೆಸಬೇಕು.

ರಾಜ್ಯ ಸರ್ಕಾರಕ್ಕೆ:

  • SIR ಅವಾಂತರಗಳ ಕುರಿತು ಚರ್ಚಿಸಲು ತಕ್ಷಣವೇ ವಿಶೇಷ ಶಾಸನಸಭೆ ಅಧಿವೇಶನ ಕರೆಯಬೇಕು.
  • ದೋಷಪೂರಿತ SIR ಪ್ರಕ್ರಿಯೆ ಮತ್ತು ಅದರ ಪಟ್ಟಿಯನ್ನು ಕರ್ನಾಟಕ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸುವ ನಿರ್ಣಯ ಕೈಗೊಳ್ಳಬೇಕು.
  • ರಾಜ್ಯ ಸರ್ಕಾರದ ವತಿಯಿಂದಲೇ ವೈಜ್ಞಾನಿಕ ‘ಸೋಷಿಯಲ್ ಆಡಿಟಿಂಗ್’ ನಡೆಸಿ, ಬಿಟ್ಟುಹೋದ ಅರ್ಹ ಮತದಾರರನ್ನು ಪಟ್ಟಿಗೆ ತರುವ ಅಭಿಯಾನ ಹಮ್ಮಿಕೊಳ್ಳಬೇಕು ಮತ್ತು ಅಲ್ಲಿಯವರೆಗೆ ಈ ವಿಕೃತ ಪಟ್ಟಿಯನ್ನು ಯಾವುದೇ ಚುನಾವಣೆಗೆ ಬಳಸಬಾರದು.

ಪ್ರಜಾಪ್ರಭುತ್ವದ ಅಸ್ತಿತ್ವ ನಿಂತಿರುವುದೇ ಪ್ರಜೆಯ ಮತದಾನದ ಹಕ್ಕಿನ ಮೇಲೆ. SIR ನಂತಹ ವಿಪರೀತ ತಾಂತ್ರಿಕ ಮತ್ತು ಅಸಂವಿಧಾನಿಕ ಪ್ರಕ್ರಿಯೆಯಿಂದ ದೇಶದ ಪ್ರಜೆ ತನ್ನ ನಾಗರಿಕತ್ವ ಮತ್ತು ಮತಹಕ್ಕನ್ನು ಸಾಬೀತುಪಡಿಸಲು ಅಲೆಯುವಂತೆ ಮಾಡಿರುವುದು ಅತ್ಯಂತ ವಿಷಾದನೀಯ. ಪ್ರಜಾತಂತ್ರ ಉಳಿಯಬೇಕಾದರೆ ಪ್ರತಿಯೊಬ್ಬ ಅರ್ಹ ನಾಗರಿಕನ ಮತವೂ ಪಟ್ಟಿಯಲ್ಲಿ ಸುರಕ್ಷಿತವಾಗಿರಬೇಕು. ನಾಗರಿಕ ಸಮಾಜ ಮತ್ತು ಜನಪರ ಸಂಘಟನೆಗಳು ಜಂಟಿಯಾಗಿ ರೂಪಿಸಿರುವ ಈ ಹೋರಾಟವು ನ್ಯಾಯ ಸಿಗುವವರೆಗೆ ಮುಂದುವರಿಯುವುದು ಇಂದಿನ ತುರ್ತು ಅಗತ್ಯ ಎಂದು ವರದಿ ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು ಮೆಟ್ಟಿ ನಿಂತ ಗೆಲುವಿನ ಗಾಥೆ

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ...

ಶಿವಮೊಗ್ಗ | ಚಲಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕನಿಗೆ ಹೃದಯಾಘಾತ: ಸಮಯಪ್ರಜ್ಞೆ ಮೆರೆದ ಚಾಲಕ

ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕನೊಬ್ಬರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು...

ಶಿವಮೊಗ್ಗ | ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು, ಚಾಲಕನ ಸಮಯಪ್ರಜ್ಞೆಯಿಂದಾಗಿ ಭಾರಿ...