ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಆದಾಯವೆಷ್ಟು? ಇಲ್ಲಿದೆ ಆಸ್ತಿ ವಿವರ

Date:

ಪತ್ರಕರ್ತ ಕರಣ್ ಥಾಪರ್ ಅವರ ಸಂದರ್ಶನದಲ್ಲಿ ತಬ್ಬಿಬ್ಬಾಗಿ, ಆಕ್ರೋಶದಲ್ಲಿ ಸುಳ್ಳು ವಾದ ಮಾಡಿ ಟ್ರೋಲಿಗರ ಕೈಯಲ್ಲಿ ಸಿಲುಕಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಮತ್ತೆ ಸುದ್ದಿಯಲ್ಲಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಕರಣ್ ಥಾಪರ್ ಅವರು ಪ್ರಶಾಂತ್ ಕಿಶೋರ್ ಅವರ ಈ ಹಿಂದಿನ ಎಕ್ಸ್‌ (ಟ್ವಿಟ್ಟರ್) ಪೋಸ್ಟ್‌ ಒಂದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ ಪ್ರಶಾಂತ್ ಮಾತ್ರ ತಾನು ಆ ರೀತಿ ಹೇಳಿಕೆ ನೀಡಿಯೇ ಇಲ್ಲ ಎಂದು ವಾದಿಸುವ ಮೂಲಕ ಈ ಟ್ರೋಲಿಗರಿಗೆ ಬಲಿಯಾಗಿದ್ದಾರೆ.

ಈ ನಡುವೆ ಚುನಾವಣಾ ತಂತ್ರಜ್ಞರಾಗಿ ಕಾರ್ಯನಿರ್ವಹಿಸುವ ಪ್ರಶಾಂತ್ ಬದುಕಿನ ಬಗ್ಗೆ, ಆದಾಯ, ಆಸ್ತಿಯ ವಿವರವನ್ನು ತಿಳಿಯೋಣ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪ್ರಶಾಂತ್ ಕಿಶೋರ್ ಆದಾಯ, ಆಸ್ತಿ, ಕಾರು, ಮನೆ

caknowledge ವೆಬ್‌ಸೈಟ್ ಪ್ರಕಾರ 2024ರ ಹೊತ್ತಿಗೆ ಪ್ರಶಾಂತ್ ಕಿಶೋರ್ ಆದಾಯವು 5 ಮಿಲಿಯನ್ ಡಾಲರ್, ಅಂದರೆ 37 ಕೋಟಿ ರೂಪಾಯಿ ಆಗಿದೆ ಎಂದು ಅಂದಾಜಿಸಲಾಗಿದೆ. ಪ್ರಶಾಂತ್ ಕಿಶೋರ್ ಅವರ ಬಳಿ ಹೆಚ್ಚು ಕಾರು ಇಲ್ಲ ಎಂದು ಹೇಳಲಾಗಿದೆ. ಮಾಹಿತಿ ಪ್ರಕಾರ ಅವರು ಟೊಯೊಟಾ ಇನ್ನೋವಾವನ್ನು ಹೊಂದಿದ್ದಾರೆ. ಪ್ರಶಾಂತ್ ಕಿಶೋರ್ ಬಳಿ ಅವರು ಜನಿಸಿದ ಬಿಹಾರದ ಮನೆ ಮತ್ತು ಉತ್ತರ ಪ್ರದೇಶದಲ್ಲಿ ಅವರ ಪೂರ್ವಜರ ಮನೆಯಿದೆ.

ಇದನ್ನು ಓದಿದ್ದೀರಾ?  Viral Video| ಕರಣ್ ಥಾಪರ್ ಪ್ರಶ್ನೆಗೆ ತಬ್ಬಿಬ್ಬಾದ ಪ್ರಶಾಂತ್ ಕಿಶೋರ್; ಬೆವರಿಳಿಸಿದ ನೆಟ್ಟಿಗರು

ಪ್ರಶಾಂತ್ ಕಿಶೋರ್ ಅವರ ಆದಾಯದ ಮೂಲದಲ್ಲಿ ಅತಿ ಹೆಚ್ಚು ರಾಜಕೀಯ ಸಲಹೆಗಾರ ಮತ್ತು ತಂತ್ರಗಾರರಾಗಿ ಗಳಿಸಿದ್ದಾರೆ ಎನ್ನಲಾಗಿದೆ. ಏನೇ ಆದರೂ ಪ್ರಶಾಂತ್ ಕಿಶೋರ್ ತನ್ನ ವೈಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಬಹಿರಂಗಪಡಿಸಿಲ್ಲ. 1977ರಲ್ಲಿ ಜನಿಸಿರುವುದಾಗಿ ಹೇಳುವ ಪ್ರಶಾಂತ್ ತನ್ನ ಜನನ ದಿನಾಂಕವನ್ನು ಕೂಡಾ ಎಲ್ಲಿಯೂ ಹೇಳಿಲ್ಲ. ವಿವಾಹಿತರಾಗಿರುವ ಪ್ರಶಾಂತ್ ಕಿಶೋರ್ ಜೀವನವೇ ರಹಸ್ಯದಿಂದ ಕೂಡಿದೆ ಎಂದರೆ ತಪ್ಪಾಗಲಾರದು.

ಪ್ರಶಾಂತ್ ಕಿಶೋರ್ ವೃತ್ತಿ ಜೀವನ

ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2014ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿದ ಬಳಿಕ ಪ್ರಶಾಂತ್ ಕಿಶೋರ್ ಮುನ್ನೆಲೆಗೆ ಬಂದಿದ್ದಾರೆ. ಪ್ರಶಾಂತ್ ಕಿಶೋರ್ ಅವರು ವಿಧಾನಸಭೆ ಚುನಾವಣೆಗಳು, ಶಾಸಕಾಂಗ ಚುನಾವಣೆಗಳು ಮತ್ತು ಇನ್ನೂ ಹಲವಾರು ಚುನಾವಣೆಗಳಲ್ಲಿ ಬೇರೆ ಬೇರೆ ಪಕ್ಷಗಳಿಗೆ ಸಹಾಯ ಮಾಡಿದ್ದಾರೆ.

ನರೇಂದ್ರ ಮೋದಿ ಗೆಲುವಿಗೆ ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಗಾರಿಕೆಯೇ ಸಹಾಯ ಮಾಡಿದೆ ಎನ್ನಲಾದರೂ ಕೂಡಾ ಈ ಹೆಸರಾಂತ ವ್ಯಕ್ತಿಯ ಚುನಾವಣಾ ಭವಿಷ್ಯವು ಅದೆಷ್ಟೋ ಬಾರಿ ಹುಸಿಯಾಗಿದೆ.

ಇದನ್ನು ಓದಿದ್ದೀರಾ?  ಪ್ರಶಾಂತ್ ಕಿಶೋರ್ ಚುನಾವಣಾ ಭವಿಷ್ಯ ‘ಹಾಸ್ಯಾಸ್ಪದ, ಬಿಜೆಪಿ ಪ್ರಾಯೋಜಿತ’ ಎಂದ ಕಾಂಗ್ರೆಸ್

ಇತ್ತೀಚೆಗೆ ನಡೆದ ತೆಲಂಗಾಣ ಚುನಾವಣೆಯಲ್ಲಿ ಬಿಆರ್‌ಎಸ್‌ ಗೆಲುವಿನ ಮುನ್ಸೂಚನೆಯನ್ನು ಪ್ರಶಾಂತ್ ಕಿಶೋರ್ ನೀಡಿದ್ದರು. ಆದರೆ, ನಡೆದಿದ್ದು ಬೇರೆಯೇ. ಬಿಆರ್‌ಎಸ್ಅನ್ನು ಮಣಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇನ್ನು ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು. ಆದರೆ, ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಿದ್ದು ಇಲ್ಲಿಯೂ ಪ್ರಶಾಂತ್ ಚುನಾವಣಾ ಭವಿಷ್ಯ ಸುಳ್ಳಾಗಿದೆ.

ಇನ್ನು ಹಿಮಾಚಲ ಪ್ರದೇಶದಲ್ಲಿ ಹಿಂದೂ ಜನಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು. ಆದರೆ ಮತದಾರರು ಅಲ್ಲಿಯೂ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಹಿತಿಗಳೂ ರಾಜಕಾರಣಿಗಳೇ, ಸರ್ಕಾರದಿಂದ ನೇಮಕವಾಗಿದ್ದಾರೆ, ಸಭೆ ಮಾಡಿದ್ದೇನೆ: ಡಿ ಕೆ ಶಿವಕುಮಾರ್

ಇತ್ತೀಚೆಗೆ ಕೆಪಿಸಿಸಿ ಕಚೇರಿಗೆ ಸಾಹಿತ್ಯ, ಸಂಸ್ಕೃತಿ ಹಾಗೂ ಇತರ ಅಕಾಡೆಮಿಗಳ ಅಧ್ಯಕ್ಷರ...

ವಿನೀತ ಮೋದಿಗೆ ಜಾಗತಿಕ ಒತ್ತಡ; ದುರ್ಬಲಗೊಳ್ಳುತ್ತಿದೆ ವಿದೇಶಾಂಗ ಸಂಬಂಧ

ಭಾರತದಲ್ಲಿ ದುರ್ಬಲರಾಗಿ, ವಿನೀತರಾಗಬೇಕಾದ ಒತ್ತಡ ಹೊಂದಿರುವ ಮೋದಿ, ತಮ್ಮ ಮೂರನೇ ಅವಧಿಯಲ್ಲಿ...

ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ‌ ಹೇಳಿಕೆ; ಸಿ.ಟಿ ರವಿ ವಿರುದ್ಧ ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ‌ ಹೇಳಿಕೆ ನೀಡಿದ್ದ ಮಾಜಿ ಸಚಿವ, ವಿಧಾನ...