ಅಬಕಾರಿ ನೀತಿ ಪ್ರಕರಣ | ಎಎಪಿ ಸಂಸದ ಸಂಜಯ್‌ಗೆ ಜಾಮೀನು; ‘ಸತ್ಯಮೇವ ಜಯತೆ’ ಎಂದ ಎಎಪಿ

Date:

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಆಮ್‌ ಆದ್ಮಿ ಪಕ್ಷ (ಎಎಪಿ) ಸಂಸದ ಸಂಜಯ್ ಸಿಂಗ್‌ ಅವರಿಗೆ ಜಾಮೀನು ದೊರೆತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಎಪಿ, ‘ಸತ್ಯಮೇವ ಜಯತೆ’ (ಎಂದಿಗೂ ಸತ್ಯಕ್ಕೆ ಗೆಲುವು) ಎಂದು ಹೇಳಿದೆ. ಸಂಜಯ್ ಸಿಂಗ್‌ ಅವರಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ಸ್ವಾಗತಿಸಿದೆ.

“ಇದು ಪ್ರಜಾಪ್ರಭುತ್ವದ ಅತೀ ಪ್ರಮುಖ ದಿನವಾಗಿದೆ ಮತ್ತು ಭರವಸೆಯ ಕ್ಷಣವಾಗಿದೆ” ಎಂದು ಸಂಜಯ್‌ ಸಿಂಗ್‌ ಅವರಿಗೆ ಜಾಮೀನು ಲಭಿಸಿದ ಬಳಿಕ ಎಎಪಿ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಜಾಮೀನು ದೆಹಲಿ ಅಬಕಾರಿ ನೀತಿ ಪ್ರಕರಣವು ಬರೀ ಸಾಕ್ಷಿಗಳ ಮತ್ತು ಅನುಮೋದಕರ ಹೇಳಿಕೆ ಎಂಬುವುದನ್ನು ಸಾಬೀತುಪಡಿಸಿದೆ ಎಂದಿದ್ದಾರೆ.

ಇದನ್ನು ಓದಿದ್ದೀರಾ?  ಅಬಕಾರಿ ನೀತಿ ಹಗರಣದಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್‌ಗೆ ಸುಪ್ರೀಂನಿಂದ ಜಾಮೀನು

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದೆಹಲಿ ಹಣಕಾಸು ಸಚಿವೆ, ಎಎಪಿ ನಾಯುಕಿ ಅತಿಶಿ ಮಾತನಾಡಿ, “ನಕಲಿ ಪ್ರಕರಣದಲ್ಲಿ ಎರಡು ವರ್ಷದಿಂದ ಎಎಪಿ ನಾಯಕರನ್ನು ಗುರಿಯಾಗಿಸಲಾಗುತ್ತಿದೆ, ಬಂಧಿಸಲಾಗುತ್ತಿದೆ. ಕೋರ್ಟ್ ವಿಚಾರಣೆಯಿಂದ ಪ್ರಮುಖ ಎರಡು ವಿಚಾರಗಳು ಬಹಿರಂಗವಾಗಿದೆ. ಹಣದ ಜಾಡು (money trail) ಎಲ್ಲಿ ಎಂದು ಸುಪ್ರೀಂ ಕೋರ್ಟ್ ಕೇಳಿದಾಗ ಇಡಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬರೀ ಅನುಮೋದಕರ ಹೇಳಿಕೆ ಆಧಾರದಲ್ಲಿ ಈ ಪ್ರಕರಣ ನಿಂತಿದೆ” ಎಂದು ಆರೋಪಿಸಿದರು.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಈವರೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ನಾಲ್ವರು ಎಎಪಿ ಮುಖಂಡರುಗಳನ್ನು ಬಂಧಿಸಲಾಗಿದೆ. ಈ ಪೈಕಿ ಈಗ ಸಂಸದ ಸಂಜಯ್‌ ಸಿಂಗ್‌ ಅವರಿಗೆ ಜಾಮೀನು ನೀಡಲಾಗಿದೆ. ಉಳಿದಂತೆ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಒಂದು ವರ್ಷಕ್ಕೂ ಅಧಿಕ ಅವಧಿಯಿಂದ ಜೈಲಿನಲ್ಲಿದ್ದಾರೆ. ಇನ್ನು ಸಂಜಯ್ ಸಿಂಗ್ ಅವರನ್ನು ಅಕ್ಟೋಬರ್ 4ರಂದು ಬಂಧಿಸಲಾಗಿತ್ತು.

ಇದನ್ನು ಓದಿದ್ದೀರಾ?  ಬಿಜೆಪಿ ಸೇರದಿದ್ದರೆ ಒಂದು ತಿಂಗಳಲ್ಲೇ ನಮ್ಮ ಬಂಧನ: ಎಎಪಿ ನಾಯಕಿ ಅತಿಶಿ

ಇನ್ನು”ಬಿಜೆಪಿ ಸೇರುವಂತೆ ನಮ್ಮ ಮೇಲೆ ಒತ್ತಡ ಹಾಕಲಾಗುತ್ತಿದೆ. ಬಿಜೆಪಿ ಸೇರದಿದ್ದರೆ ಒಂದು ತಿಂಗಳ ಒಳಗಾಗಿ ನಮ್ಮ ಬಂಧನ ಮಾಡಲಾಗುವುದು ಎಂದು ಬೆದರಿಕೆ ಹಾಕಲಾಗುತ್ತಿದೆ” ಎಂದು ದೆಹಲಿ ಹಣಕಾಸು ಸಚಿವೆ, ಎಎಪಿ ನಾಯಕಿ ಅತಿಶಿ ಮರ್ಲೆನಾ ಆರೋಪಿಸಿದ್ದಾರೆ.

“ಲೋಕಸಭೆ ಚುನಾವಣೆಗೂ ಮುನ್ನ ಎಎಪಿಯ ನಾಲ್ವರು ನಾಯಕರನ್ನು ಬಂಧಿಸಲು ಬಿಜೆಪಿ ಮುಂದಾಗಿದೆ. ಒಂದು ತಿಂಗಳೊಳಗೆ ನನ್ನನ್ನು, ಸೌರಬ್ ಭಾರದ್ವಾಜ್, ದುರ್ಗೇಶ್ ಪಾಟಕ್, ರಾಘವ್ ಚಡ್ಡಾ ಅವರನ್ನು ಬಂಧಿಸಲಿದೆ” ಎಂದು ದೂರಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿಎ ಅವಧಿಗಿಂತ ಬಿಜೆಪಿ ಅವಧಿಯಲ್ಲಿ 86 ಪಟ್ಟು ಹೆಚ್ಚು ಇ.ಡಿ ದಾಳಿ

ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಯುಪಿಎ...

‘ಮೋದಿ, ಯೋಗಿಗಿಂತ ದೊಡ್ಡವರಿದ್ದಾರೆ ಎನ್ನುವವರು ದೇಶದ್ರೋಹಿ; ಬಿಜೆಪಿ ಅಭ್ಯರ್ಥಿ ಮಹೇಶ್‌ ಶರ್ಮಾ ವಿವಾದಾತ್ಮಕ ಹೇಳಿಕೆ

"ಪ್ರಧಾನಿ ಮೋದಿ-ಸಿಎಂ ಯೋಗಿಯನ್ನು ತಮ್ಮವರು ಎಂದು ಯಾರು ಪರಿಗಣಿಸುವುದಿಲ್ಲವೋ ಅವರು ತಮ್ಮ...

ಲೋಕಸಭಾ ಚುನಾವಣೆ | ಪ್ರಕಾಶ್ ಅಂಬೇಡ್ಕರ್‌ಗೆ ಎಐಎಂಐಎಂ ಬೆಂಬಲ: ಓವೈಸಿ

ಲೋಕಸಭೆ ಚುನಾವಣೆಗೆ ಮಹಾರಾಷ್ಟ್ರದ ಅಕೋಲಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ವಂಚಿತ್ ಬಹುಜನ ಅಘಾಡಿ...

ಕೇಂದ್ರ ಸರ್ಕಾರ ಉದ್ಯಮಿಗಳ ಏಳಿಗೆಗಾಗಿ ಮಾತ್ರ ಕೆಲಸ ಮಾಡುತ್ತಿದೆ: ರಾಹುಲ್‌ ಗಾಂಧಿ ವಾಗ್ದಾಳಿ

"ಕೇಂದ್ರ ಸರ್ಕಾರ 20-25 ಉದ್ಯಮಿಗಳ ಏಳಿಗೆಗಾಗಿ ಮಾತ್ರ ಕೆಲಸ ಮಾಡುತ್ತಿದೆ. ಉದ್ಯಮಿಗಳ...