ಬೆಂಗಳೂರು | ಎಚ್‌ಎಎಲ್ ಆದಾಯ 11% ಹೆಚ್ಚಳ

Date:

ಸಾರ್ವಜನಿಕ ವಲಯದ ರಕ್ಷಣಾ ಉದ್ಯಮ – ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) – 2023-24ರ ಹಣಕಾಸು ವರ್ಷದಲ್ಲಿ 29,810 ಕೋಟಿ ರೂ. ಆದಾಯ ಗಳಿಸಿದೆ ಎಂದು ವರದಿಯಾಗಿದೆ.

- Advertisement -

ಎಚ್‌ಎಎಲ್ 2022-23ರಲ್ಲಿ 26,928 ಕೋಟಿ ರೂ. (9%) ಆದಾಯಗಳಿಸಿತ್ತು. ಈ ವರ್ಷ, 11% ಆದಾಯಗಳಿಸಿದೆ. ಆ ಮೂಲಕ ಕಳೆದ ವರ್ಷಕ್ಕಿಂತ ಈ ವರ್ಷ 2% ಅಧಿಕ ಆದಾಯ ದಾಖಲಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

“ನಾನಾ ಸಮಸ್ಯೆಗಳ ನಡುವೆಯು ರಕ್ಷಣಾ ಉತ್ಪನ್ನಗಳ ಉತ್ಪಾದನೆಯಲ್ಲಿ ಕಾರ್ಯಕ್ಷಮತೆಯೊಂದಿಗೆ ಕೆಲಸ ಮಾಡಿರುವ ಎಚ್‌ಎಎಲ್ ನಿರೀಕ್ಷಿತ ಆದಾಯ ಬೆಳವಣಿಗೆ ಸಾಧಿಸಿದೆ. 2024-25ರ ಹೊಸ ಹಣಕಾಸು ವರ್ಷದಲ್ಲಿ ಹೆಚ್ಚುವರಿ ಪ್ರಮುಖ ‘ಕಾರ್ಯಾದೇಶ’ಗಳು ಬರುವ ನಿರೀಕ್ಷೆಯೊಂದಿಗೆ 94,000 ಕೋಟಿ ರೂ.ಗಳ ‘ಉತ್ಪಾದನಾ ಆದೇಶ’ವನ್ನು ಹೊಂದಿದೆ” ಎಂದು ಎಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನಂತಕೃಷ್ಣನ್ ಹೇಳಿದ್ದಾರೆ.

2023-24ರಲ್ಲಿ ಎಚ್‌ಎಎಲ್ 19,000 ಕೋಟಿ ರೂ.ಗಳ ಹೊಸ ಉತ್ಪಾದನಾ ಒಪ್ಪಂದಗಳನ್ನು ಮತ್ತು 16,000 ಕೋಟಿ ರೂ.ಗಳ ರಿಪೇರಿ ಮತ್ತು ಓವರ್‌ಹಾಲ್ (ಆರ್‌ಒಎಚ್) ಒಪ್ಪಂದಗಳನ್ನು ಪಡೆದುಕೊಂಡಿದೆ.

2023-24ರ ಅವಧಿಯಲ್ಲಿ ಎರಡು ಹಿಂದೂಸ್ತಾನ್-228 ವಿಮಾನಗಳ ಪೂರೈಕೆಗಾಗಿ ಗಯಾನಾ ರಕ್ಷಣಾ ಪಡೆಗಳೊಂದಿಗೆ ರಫ್ತು ಒಪ್ಪಂದಕ್ಕೆ ಸಹಿ ಹಾಕಿದೆ. ಅಲ್ಲದೆ, ಒಪ್ಪಂದಕ್ಕೆ ಸಹಿ ಹಾಕಿದ ಒಂದೇ ತಿಂಗಳೊಳಗೆ ದಾಖಲೆ ಸಮಯದಲ್ಲಿ ಎರಡೂ ವಿಮಾನಗಳನ್ನು ಸರಬರಾಜು ಮಾಡಲಾಗಿದೆ ಎಂದು ಎಚ್‌ಎಎಲ್ ಪ್ರಕಟಣೆ ಬಿಡುಗಡೆ ಮಾಡಿದೆ.

ಎಲ್‌ಸಿಎ ಎಂಕೆ1ಎ ವಿಮಾನಗಳ ಉತ್ಪಾದನಾ ಸರಣಿಯ ಮೊದಲ ಫೈಟರ್ ಮಾರ್ಚ್ 28 ರಂದು ತನ್ನ ಮೊದಲ ಹಾರಾಟವನ್ನು ಪೂರ್ಣಗೊಳಿಸಿದೆ. ಆ ಮೂಲಕ ಮಹತ್ವದ ಮೈಲಿಗಲ್ಲನ್ನು ಎಚ್‌ಎಎಲ್ ಸಾಧಿಸಿದೆ.

ಭಾರತೀಯ ಮಲ್ಟಿ-ರೋಲ್ ಹೆಲಿಕಾಪ್ಟರ್ (IMRH) ಮತ್ತು ಡೆಕ್ ಬೇಸ್ಡ್ ಮಲ್ಟಿ-ರೋಲ್ ಹೆಲಿಕಾಪ್ಟರ್ (DBMRH)ಗಾಗಿ ಇಂಜಿನ್‌ಗಳ ಸ್ವದೇಶಿ ವಿನ್ಯಾಸ ಮತ್ತು ಅಭಿವೃದ್ಧಿಗಾಗಿ ಫ್ರಾನ್ಸ್‌ನ ಸಫ್ರಾನ್ ಹೆಲಿಕಾಪ್ಟರ್ ಇಂಜಿನ್‌ಗಳೊಂದಿಗೆ ಜಂಟಿ ಉದ್ಯಮವನ್ನು ಎಚ್‌ಎಎಲ್ ಆರಂಭಿಸಿದೆ.

ಎಚ್‌ಎಎಲ್ ಮತ್ತು ಏರ್‌ಬಸ್ ನವದೆಹಲಿಯಲ್ಲಿ ಎ-320 ವಿಮಾನದ ನಿರ್ವಹಣೆ, ದುರಸ್ತಿ ಮತ್ತು ಕಾರ್ಯಾಚರಣೆ (ಎಂಆರ್‌ಒ) ಸೌಲಭ್ಯಗಳನ್ನು ಒದಗಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಸಹಯೋಗವು ‘ಮೇಕ್ ಇನ್ ಇಂಡಿಯಾ’ ಮಿಷನ್‌ಅನ್ನು ಬಲಪಡಿಸುತ್ತದೆ. ರಫ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಗೃಹಬಂಧನ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಖಂಡನೆ

ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು, ಮತದಾರರ ಪಟ್ಟಿಯಲ್ಲಿನ...

ಡ್ರೋನ್ ಪ್ರತಾಪ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು:‌ ಹೈಕೋರ್ಟ್ ಹೇಳಿದ್ದೇನು?

ಕೃಷಿ ಹೊಂಡಲ್ಲಿ 100 ಗ್ರಾಂ ಸೋಡಿಯಂ ಬಳಸಿ ವಿಜ್ಞಾನ ಪ್ರಯೋಗ ನಡೆಸಿದ...

ಬೆಂಗಳೂರು | 700 ಕೆ.ಜಿ ಪಿಒಪಿ ಗಣೇಶ ಮೂರ್ತಿ ತ್ಯಾಜ್ಯ ತೆರವುಗೊಳಿಸಿದ ‘ವಿ ಆರ್ ಆರಂಭ್’

ಬೆಂಗಳೂರಿನ ಸರ್ಜಾಪುರ ಸಮೀಪದ ಹಲನಾಯಕನಹಳ್ಳಿ ಕೆರೆಯಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟರ್ ಆಫ್ ಪ್ಯಾರಿಸ್...

ಹವಾಮಾನ | ರಾಜ್ಯದಲ್ಲಿ ಮುಂದಿನ 2 ದಿನ ಭಾರಿ ಮಳೆ: 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಬಿರುಗಾಳಿ ಸಹಿತ...