ಬೆಂಗಳೂರಿನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಆರ್‌ಎಸ್‌ಎಸ್ ಆಯೋಜಿಸಿದ್ದ ಸಭೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಸತಿ ಸಮುಚ್ಚಯಗಳ ಆಡಳಿತ ಮಂಡಳಿಗಳು ಇಂತಹ ಸಂಘಟನೆಗಳಿಗೆ ಅವಕಾಶ ನೀಡುವ ಮುನ್ನ ಈ ಸಂಘಟನೆಗಳ ಪಾರದರ್ಶಕತೆಯನ್ನು ಕಡ್ಡಾಯವಾಗಿ ಪ್ರಶ್ನಿಸಬೇಕು ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರಿನ ಫೀನಿಕ್ಸ್ OBW ಮತ್ತು ಕೇಸಕು ಅಪಾರ್ಟ್‌ಮೆಂಟ್‌ನಲ್ಲಿ ಸೆಪ್ಟೆಂಬರ್ 26ರಂದು ‘ಆರ್‌ಎಸ್‌ಎಸ್ ಪರಿಚಯ: ಗುರಿಗಳು, ಚಟುವಟಿಕೆಗಳು ಮತ್ತು ಕಾರ್ಯಗಳು’ ಎಂಬ ವಿಷಯದ ಕುರಿತು ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆರ್‌ಎಸ್‌ಎಸ್‌ನ ಧೈಯೋದ್ದೇಶಗಳು ಹಾಗೂ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ತನ್ನ ಕೊಡುಗೆಯನ್ನು ಪ್ರಚಾರ ಮಾಡಿಕೊಳ್ಳಲು ಸಂಘಪರಿವಾದ ಈ ಕಾರ್ಯಕ್ರಮ ರೂಪಿಸಿತ್ತು. ಪರಿಚಯಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿತ್ತು.
ಈ ಕಾರ್ಯಕ್ರಮದ ಪೋಸ್ಟರ್ ಅನ್ನು ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, “ಕಾನೂನು ಮತ್ತು ನಿಯಂತ್ರಕ ಸ್ಥಾನಮಾನವೇ ಪ್ರಶ್ನಾರ್ಹವಾಗಿರುವ ಸಂಘಟನೆಗಳಿಗೆ ಅಪಾರ್ಟ್‌ಮೆಂಟ್ ಸಮುದಾಯಗಳು ಬಾಗಿಲು ತೆರೆಯುತ್ತಿವೆ. ವಿಶೇಷವಾಗಿ, ಈ ಕಾರ್ಯಕ್ರಮಗಳು ಯುವ ಮನಸ್ಸುಗಳ ಮೇಲೆ ಪ್ರಭಾವ ಬೀರುವ ಉದ್ದೇಶವನ್ನು ಹೊಂದಿದ್ದಾಗ, ಈ ರೀತಿ ಅವಕಾಶ ಕೊಡುತ್ತಿರುವುದು ಕುತೂಹಲಕಾರಿ” ಎಂದು ಕಳವಳ/ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, “ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳು ತಮ್ಮನ್ನು ತಾವು ಒಂದು ಸರಳ ಪ್ರಶ್ನೆಯನ್ನು ಕೇಳಿಕೊಳ್ಳಬೇಕು: ‘ವಸತಿ ಸಮುದಾಯಗಳು ಸಂಘಟಿತ ರಾಜಕೀಯ-ಸಾಮಾಜಿಕ ಸಿದ್ಧಾಂತಗಳ ಬೋಧನೆಗೆ, ಅದರಲ್ಲೂ ವಿಶೇಷವಾಗಿ ಯುವಜನರನ್ನು ಗುರಿಯಾಗಿಸಿಕೊಂಡು ನಡೆಸುವ ಪ್ರಚಾರಕ್ಕೆ ಸೂಕ್ತವಾದ ಸ್ಥಳಗಳೇ” ಎಂದು ಅವರು ಪ್ರಶ್ನಿಸಿದ್ದಾರೆ.
Interesting to see apartment communities opening their doors to organisations whose legal and regulatory status itself raises questions, especially when the outreach is aimed at influencing young minds.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 27, 2026
The advertised session is:
“Introduction to RSS”
Goals • Activities •… pic.twitter.com/3z5BPmwaNt
“ಯಾವುದೇ ಸಂಘಟನೆಯು ನಿವಾಸಿಗಳನ್ನು ಮತ್ತು ಅವರ ಮಕ್ಕಳನ್ನು ತಲುಪಲು ಬಯಸಿದರೆ, ಆ ಸಂಘಟನೆಯ ಕಾನೂನುಬದ್ಧ ನೋಂದಣಿ ಸ್ಥಿತಿ, ಹಣಕಾಸಿನ ಮೂಲಗಳು, ಆಡಳಿತ ರಚನೆ ಹಾಗೂ ಹೊಣೆಗಾರಿಕೆಯ ಬಗ್ಗೆ ಕನಿಷ್ಠ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ” ಎಂದು ಪ್ರಿಯಾಂಕ್ ಖರ್ಗೆ ಪ್ರತಿಪಾದಿಸಿದ್ದಾರೆ.
ಆರ್‌ಎಸ್‌ಎಸ್‌ನ ಕಾನೂನಾತ್ಮಕ ನೋಂದಣಿ ಮತ್ತು ಹಣಕಾಸಿನ ಪಾರದರ್ಶಕತೆಯ ಕುರಿತು ಸಚಿವ ಖರ್ಗೆ ಅವರು ಸತತವಾಗಿ ಪ್ರಶ್ನಿಸುತ್ತಲೇ ಬಂದಿದ್ದಾರೆ. ತಮ್ಮ ಪ್ರಶ್ನೆಗಳನ್ನು ಮುಂದುವರೆಸಿದ್ದಾರೆ.



