ಮತದಾರರ ಪಟ್ಟಿಯಿಂದ ನಾಗರಿಕರನ್ನು ಕೈಬಿಡುವುದಾದರೆ, ‘SIR’ ಉದ್ದೇಶವೇನು? ಚುನಾವಣಾ ಆಯೋಗಕ್ಕೆ ಬಾಂಬೆ ಹೈಕೋರ್ಟ್ ಪ್ರಶ್ನೆ

Date:

ಎಲ್ಲ ನಾಗರಿಕರು ಮತದಾರರ ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಜವಾಬ್ದಾರಿ. ಆದರೆ, ಮತದಾರರ ಪಟ್ಟಿಯಿಂದ ನಾಗರಿಕರನ್ನೇ ಕೈಬಿಡುತ್ತಿದ್ದರೆ, ಈ ‘ವಿಶೇಷ ಸಮಗ್ರ ಪರಿಷ್ಕರಣೆ’ (Special Intensive Revision – SIR) ಪ್ರಕ್ರಿಯೆಯ ಉದ್ದೇಶವಾದರೂ ಏನು ಎಂದು ಗೋವಾದಲ್ಲಿರುವ ಬಾಂಬೆ ಹೈಕೋರ್ಟ್ ಪೀಠವು ಚುನಾವಣಾ ಆಯೋಗವನ್ನು ಕಟುವಾಗಿ ಪ್ರಶ್ನಿಸಿದೆ.

- Advertisement -

​ವಿಳಾಸ ಬದಲಾವಣೆಗಾಗಿ ಸಲ್ಲಿಸಿದ್ದ ‘ನಮೂನೆ 8’ (Form 8) ಅರ್ಜಿಗಳು ತಿರಸ್ಕೃತಗೊಂಡು, ಮತದಾರರ ಪಟ್ಟಿಯಿಂದ ಗೋವಾದ ಒಂದೇ ಕುಟುಂಬದ ಆರು ಸದಸ್ಯರ ಹೆಸರುಗಳನ್ನು ಡಿಲೀಟ್ ಮಾಡಲಾದ ಪ್ರಕರಣದ ವಿಚಾರಣೆಯನ್ನು ಸೋಮವಾರ ನಡೆಸಿದ ಹೈಕೋರ್ಟ್, ಈ ವಿಚಾರದಲ್ಲಿ ಮತದಾರರು ಅಕ್ಷರಶಃ ‘ಇಕ್ಕಟ್ಟಿನ ಸ್ಥಿತಿಗೆ’ (Catch-22 situation) ಸಿಲುಕಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಗೋವಾದ ಸಾಂತಾ ಕ್ರೂಜ್ ವಿಧಾನಸಭಾ ಕ್ಷೇತ್ರದ ನಿವಾಸಿ ಪರೇಶ್ ಸಾಲ್ಗಾಂವ್ಕರ್ ಮತ್ತು ಅವರ ಕುಟುಂಬದ ಐವರು ಸದಸ್ಯರು ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಈ ಕುಟುಂಬವು ಎಂಟು ವರ್ಷಗಳ ಹಿಂದೆ ಅದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಬೇರೊಂದು ಮನೆಗೆ ವಾಸ್ತವ್ಯ ಬದಲಿಸಿತ್ತು. ಬೂತ್ ಮಟ್ಟದ ಅಧಿಕಾರಿಯ (BLO) ಸೂಚನೆಯಂತೆ, ವಿಳಾಸ ಬದಲಾವಣೆ ಮಾಡಿಕೊಳ್ಳಲು ಅವರು ‘ನಮೂನೆ 8’ ಅನ್ನು ಸಲ್ಲಿಸಿದ್ದರು. ಆದರೆ, ಮತದಾರರ ಪಟ್ಟಿಯಿಂದ ಅವರ ಗುರುತಿನ ಚೀಟಿಗಳನ್ನು (EPIC) ಡಿಲೀಟ್ ಮಾಡಲಾಗಿದೆ ಎಂದು ತಿಳಿಸಿದ ಸಹಾಯಕ ಚುನಾವಣಾ ನೋಂದಣಾಧಿಕಾರಿಯು ಅವರ ಅರ್ಜಿಯನ್ನು ತಿರಸ್ಕರಿಸಿದ್ದರು.

​ERONET ತಂತ್ರಾಂಶದಲ್ಲಿ ಒಮ್ಮೆ ಡಿಲೀಟ್ ಆದ ಇಪಿಕ್ (EPIC) ಕಾರ್ಡ್‌ಗಳನ್ನು ಮರುಸ್ಥಾಪಿಸಲು ಅವಕಾಶವಿಲ್ಲದ ಕಾರಣ, ಹೊಸ ಮತದಾರರಂತೆ ‘ನಮೂನೆ 6’ (Form 6) ಸಲ್ಲಿಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಕುಟುಂಬವು ನ್ಯಾಯಾಲಯದ ಮೆಟ್ಟಿಲೇರಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಮಿತ್ ಎಸ್. ಜಮ್ಸಾಂಡೇಕರ್ ಮತ್ತು ವಾಲ್ಮೀಕಿ ಮಿನೆಜಸ್ ಅವರಿದ್ದ ವಿಭಾಗೀಯ ಪೀಠವು, ಹೊಸದಾಗಿ ನಮೂನೆ ಸಲ್ಲಿಸಲು ಸೂಚಿಸಿದ ಆಯೋಗದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿತು.

​”ಹೊಸದಾಗಿ ಅರ್ಜಿ (ನಮೂನೆ 6) ಸಲ್ಲಿಸುವಾಗ, ಮತದಾರನು ತಾನು ಹಿಂದಿದ್ದ ವಾರ್ಡ್‌ನಲ್ಲೇ ಇದ್ದೇನೆ, ಬೇರೆಲ್ಲೂ ಇಲ್ಲ ಎಂಬ ಪೂರ್ವ-ಮುದ್ರಿತ ಸುಳ್ಳು ಘೋಷಣೆಗೆ ಸಹಿ ಹಾಕಬೇಕಾಗುತ್ತದೆ. ತಾನು ಬೇರೆಡೆ ವಾಸಿಸುತ್ತಿರುವುದು ಗೊತ್ತಿದ್ದೂ ಆತ ಇಂತಹ ಸುಳ್ಳು ಘೋಷಣೆ ಮಾಡಿದರೆ, ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಪಾಯವಿರುತ್ತದೆ. ಯಾವುದೇ ಮತದಾರನೂ ಇಂತಹ ಸುಳ್ಳು ಘೋಷಣೆಗೆ ಸಹಿ ಹಾಕಬಾರದು” ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಚುನಾವಣಾ ಆಯೋಗದ ಪರ ವಕೀಲರು ವಾದ ಮಂಡಿಸಿ, “ಮತದಾರರು ನಿಗದಿತ ಸಮಯದೊಳಗೆ ಮಾಹಿತಿ ನಮೂನೆಯನ್ನು ಸಲ್ಲಿಸದಿದ್ದರೆ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಮಾರ್ಗಸೂಚಿಗಳು ಅವಕಾಶ ನೀಡುತ್ತವೆ. ಕರಡು ಪಟ್ಟಿಯಲ್ಲಿ ಹೆಸರಿಲ್ಲದಿದ್ದಾಗ, ಅಸ್ತಿತ್ವದಲ್ಲೇ ಇಲ್ಲದ ಹೆಸರನ್ನು ‘ನಮೂನೆ 8’ರ ಅಡಿಯಲ್ಲಿ ವಿಳಾಸ ಬದಲಾವಣೆ ಮಾಡಲು ಅಥವಾ ವರ್ಗಾಯಿಸಲು ಬರುವುದಿಲ್ಲ” ಎಂದು ಸಮರ್ಥಿಸಿಕೊಂಡರು.

ಆಯೋಗದ ವಾದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, “1960ರ ಮತದಾರರ ನೋಂದಣಿ ನಿಯಮಗಳ ‘ನಿಯಮ 21’ರ ಪ್ರಕಾರ ಕರಡು ಪಟ್ಟಿಯ ಆಧಾರದ ಮೇಲಲ್ಲ, ಬದಲಾಗಿ ಅಸ್ತಿತ್ವದಲ್ಲಿರುವ ಮೂಲ ಮತದಾರರ ಪಟ್ಟಿಯ ಆಧಾರದ ಮೇಲೆ ಪ್ರಕ್ರಿಯೆ ನಡೆಯಬೇಕು. ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕುವ ಮುನ್ನ ಅವರ ಅಹವಾಲನ್ನು ಆಲಿಸಲೇಬೇಕು. ವಿಳಾಸ ಬದಲಾಗಿದೆ ಎಂದು ಸ್ವತಃ ಬಂದು ‘ನಮೂನೆ 8’ ಸಲ್ಲಿಸುವ ವ್ಯಕ್ತಿಯ ಮಾತನ್ನು ಕೇಳುವುದಿಲ್ಲ ಎನ್ನಲು ನಿಮಗೆ ಸಾಧ್ಯವಿಲ್ಲ” ಎಂದು ಆಯೋಗಕ್ಕೆ ಚಾಟಿ ಬೀಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರೆಜಿಲ್‌ ಚುನಾವಣೆ | ಬಲಪಂಥೀಯ ಬೊಲ್ಸೊನಾರೊ ಮುನ್ನಡೆ; ಲೂಲಾ ಜೊತೆ ಅ.25ರಂದು ರನ್‌ಆಫ್

ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯ ಮೊದಲ ಹಂತದಲ್ಲಿ ಬಲಪಂಥೀಯ ನಾಯಕ ಫ್ಲಾವಿಯೊ ಬೊಲ್ಸೊನಾರೊ...

ವಿಜಯಪುರ | ವಿಶೇಷಚೇತನರ ಸಬಲೀಕರಣಕ್ಕೆ ವಿವಿಧ ಯೋಜನೆ: ಆನ್‌ಲೈನ್ ಅರ್ಜಿ ಆಹ್ವಾನ

ವಿಜಯಪುರ ಜಿಲ್ಲೆಯ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ...

ಬಾಗಲಕೋಟೆ | ಬರದ ಹೊಡೆತಕ್ಕೆ ಬೆಳೆ ನಿರ್ನಾಮ! ಎಕರೆಗೆ ರೂ.30 ಸಾವಿರ ಖರ್ಚು, ಕೈ ಸೇರದ ಫಸಲು

ಬಾಗಲಕೋಟೆ ಜಿಲ್ಲೆಯ ರೈತರು ಬಿತ್ತನೆ, ಗೊಬ್ಬರ, ಕೂಲಿ ಸೇರಿದಂತೆ ಎಕರೆಗೆ ರೂ.25ರಿಂದ...

SIR | ಮಲ್ಲೇಶ್ವರಂನಲ್ಲಿ ಬಿಜೆಪಿಯಿಂದ ಭಾರೀ ಅಕ್ರಮ; ಮೇಲಧಿಕಾರಿಗಳೇ ಶಾಮೀಲು ಶಂಕೆ- ʼಈ ದಿನʼಕ್ಕೆ ಸಿಕ್ಕಿದೆ ಸಾಕ್ಷ್ಯ

ಬಿಜೆಪಿಯ ಬಿಎಲ್‌ಎಗಳು ಸಲ್ಲಿಸಿರುವ ಅರ್ಜಿಗಳಲ್ಲಿ ನೂರಕ್ಕೆ ನೂರು ಹೆಸರುಗಳು ಮುಸ್ಲಿಮರದ್ದು. ಕಳೆದ...