ನ.26ರಂದು ದೇಶದ 100 ನಗರಗಳಲ್ಲಿ SIR ವಿರುದ್ಧ ಪ್ರತಿಭಟನೆ: ಬೃಹತ್‌ ಹೋರಾಟ ಘೋಷಿಸಿದ ನಾಗರಿಕ ಸಂಘಟನೆಗಳು

Date:

ಸಂವಿಧಾನ ದಿನದಂದು 'ಪ್ರಜಾತಂತ್ರ ಮರುಸ್ಥಾಪನಾ ಅಭಿಯಾನ'ಕ್ಕೆ ಚಾಲನೆ ನೀಡಲು ಎಸ್‌ಐಆರ್‌ ವಿರೋಧಿ ಸಂಘಟನೆಗಳು ನಿರ್ಧರಿಸಿವೆ. ಡಿಸೆಂಬರ್‌ 20ರಂದು ಕರ್ನಾಟಕದ ವಿವಿಧೆಡೆ ಬೂತ್‌ ಮಟ್ಟದ ಸಾರ್ವಜನಿಕ ವಿಚಾರಣೆಗಳನ್ನು ನಡೆಸಲು ಯೋಜಿಸಲಾಗಿದೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಾಗರಿಕ ಸಂಘಟನೆಗಳು ನಿರ್ಧರಿಸಿವೆ. ನವೆಂಬರ್‌ 26ರ ಸಂವಿಧಾನ ದಿನದಂದು ದೇಶದ 100 ನಗರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್‌ಐಆರ್‌ ವಿರೋಧಿ ಒಕ್ಕೂಟ ಪ್ರಕಟಿಸಿದೆ.

- Advertisement -

ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ನಾಯಕ ನೂರ್ ಶ್ರೀಧರ್, ರಾಷ್ಟ್ರಮಟ್ಟದಲ್ಲಿ ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ‘ಪೀಪಲ್‌ ಅಗೇನ್ಸ್ಟ್‌ ಎಸ್‌ಐಆರ್‌’ (People Against SIR) ಎಂಬ ವಿಶಾಲ ವೇದಿಕೆಯನ್ನು ರೂಪಿಸಿರುವುದಾಗಿ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಆರ್‌ಟಿಇ ಶಿಕ್ಷಣ ಹಕ್ಕೋ, ಶಾಲೆಗಳಲ್ಲಿನ ಸಾಮಾಜಿಕ ಅಂತರಕ್ಕೆ ಕಾರಣವೋ?

ಶಿಕ್ಷಣದ ಸಮಾನ ಅವಕಾಶದ ಆಶಯಕ್ಕೆ ಸವಾಲಾಗುತ್ತಿರುವ ನಿಯಮಗಳು, ಖಾಸಗೀಕರಣ ಮತ್ತು ಸರ್ಕಾರಿ ಶಾಲೆಗಳ ದುಸ್ಥಿತಿ ಒಂದೇ ಶಾಲೆಯ ಆವರಣ, ಒಂದೇ ತರಗತಿಯ ಕೊಠಡಿ, ಒಂದೇ ಪಠ್ಯಪುಸ್ತಕ, ಒಂದೇ ಶಿಕ್ಷಕರು. ಆದರೆ ಆ ಮಕ್ಕಳ ಹಿನ್ನೆಲೆ...

ಬಿಲ್ಕಿಸ್‌ ಬಾನೋ ‘ಮುಸ್ಲಿಂ’ ಎಂಬ ಕಾರಣಕ್ಕೇ ಪದೇ-ಪದೇ ದೂರವಾಗುತ್ತಿದೆಯೇ...

ಅಪರಾಧಿಗಳ ಹಕ್ಕುಗಳ ಬಗ್ಗೆ ಮಾತನಾಡುವ ನ್ಯಾಯವ್ಯವಸ್ಥೆ, ಸಂತ್ರಸ್ತೆಯ ಬದುಕುವ ಹಕ್ಕು, ಸುರಕ್ಷತೆ ಮತ್ತು ಘನತೆಯನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸುತ್ತಿದೆಯೇ? ಬಿಲ್ಕಿಸ್‌ ಬಾನೋ ಪ್ರಕರಣದಲ್ಲಿ ಈ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭಾರತದಲ್ಲಿ ನ್ಯಾಯದ ಮುಂದೆ...

ನವ-ಉದಾರವಾದದ ಬಿಕ್ಕಟ್ಟು ಮತ್ತು ಫ್ಯಾಸಿಸ್ಟ್-ವಿರೋಧಿ ಅರ್ಥಶಾಸ್ತ್ರ: ಡಾ. ಇಸಬೆಲ್ಲಾ...

ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ಬೆಲೆ ಏರಿಕೆ, ಆರ್ಥಿಕ ಅಸಮಾನತೆ ಮತ್ತು ಅದರಿಂದಾಗಿ ಜಾಗತಿಕವಾಗಿ ತಲೆ ಎತ್ತುತ್ತಿರುವ ಫ್ಯಾಸಿಸಂ ಪ್ರವೃತ್ತಿಗಳಿಗೆ ಪರ್ಯಾಯ ಆರ್ಥಿಕ ಮಾರ್ಗವನ್ನು ಡಾ. ಇಸಬೆಲ್ಲಾ ವೆಬರ್ ಇಲ್ಲಿ ಚರ್ಚಿಸಿದ್ದಾರೆ. ಜರ್ಮನಿಯ ಪ್ರಖ್ಯಾತ ಅರ್ಥಶಾಸ್ತ್ರಜ್ಞೆ...

“ಈ ವೇದಿಕೆಯ ನೇತೃತ್ವದಲ್ಲಿ ನವೆಂಬರ್‌ 26ರಂದು ‘ಪ್ರಜಾತಂತ್ರ ಮರುಸ್ಥಾಪನಾ ಅಭಿಯಾನ’ಕ್ಕೆ ಚಾಲನೆ ನೀಡಲಾಗುವುದು. ಮತದಾನದ ಹಕ್ಕು, ಪ್ರತಿಭಟಿಸುವ ಹಕ್ಕು ಹಾಗೂ ಜೀವಿಸುವ ಹಕ್ಕುಗಳ ರಕ್ಷಣೆಯನ್ನು ಅಭಿಯಾನದ ಪ್ರಮುಖ ಉದ್ದೇಶಗಳನ್ನಾಗಿ ಗುರುತಿಸಲಾಗಿದೆ” ಎಂದು ಹೇಳಿದ್ದಾರೆ.

“ದೆಹಲಿ, ಬೆಂಗಳೂರು ಸೇರಿದಂತೆ ದೇಶದ 100 ನಗರಗಳಲ್ಲಿ ನಡೆಯಲಿರುವ ಪ್ರತಿಭಟನೆಗಳಲ್ಲಿ ಎಸ್‌ಐಆರ್‌ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಗುವುದು. ಜೊತೆಗೆ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರ ರಾಜೀನಾಮೆ ಮತ್ತು ಚುನಾವಣಾ ಆಯೋಗದ ಆಯುಕ್ತರನ್ನು ನೇಮಿಸುವ ವಿಧಾನದಲ್ಲಿ ಬದಲಾವಣೆ ತರಬೇಕೆಂಬ ಬೇಡಿಕೆಗಳನ್ನು ಮುಂದಿಡಲಾಗುವುದು” ಎಂದು ನೂರ್ ಶ್ರೀಧರ್ ತಿಳಿಸಿದ್ದಾರೆ.

“ಕರ್ನಾಟಕದಲ್ಲಿಯೂ ಎಲ್ಲಾ ಜಿಲ್ಲೆಗಳಲ್ಲಿ ವಿವಿಧ ಜನಪರ ಸಂಘಟನೆಗಳು ಮತ್ತು ಹೋರಾಟದ ವೇದಿಕೆಗಳೊಂದಿಗೆ ಸಮನ್ವಯ ಸಾಧಿಸಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ‘ಪ್ರಜಾ ಪಾರ್ಲಿಮೆಂಟ್‌’ ಆಯೋಜಿಸಲು ಒಕ್ಕೂಟ ಯೋಜಿಸಿದೆ” ಎಂದು ತಿಳಿಸಿದ್ದಾರೆ.

“ಎಸ್‌ಐಆರ್‌ ಪ್ರಕ್ರಿಯೆಯ ಪರಿಣಾಮವನ್ನು ತಳಮಟ್ಟದಲ್ಲಿ ಪರಿಶೀಲಿಸಲು ನವೆಂಬರ್‌ 20ರಿಂದ ಡಿಸೆಂಬರ್‌ 20ರವರೆಗೆ ರಾಜ್ಯಾದ್ಯಂತ ವಿಶೇಷ ಪರಿಶೋಧನಾ ಅಭಿಯಾನ ಹಮ್ಮಿಕೊಳ್ಳಲಾಗುವುದು. ಈ ಅಭಿಯಾನದ ಮೂಲಕ ಮತದಾರರ ಪಟ್ಟಿಯಿಂದ ಕೈಬಿಡಲಾದವರ ವಿವರಗಳು, ತಪ್ಪಾದ ನೋಂದಣಿಗಳು ಹಾಗೂ ಅರ್ಹ ಮತದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ದಾಖಲಿಸಲು ಉದ್ದೇಶಿಸಲಾಗಿದೆ” ಎಂದು ತಿಳಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ ಹಿಂದಿನ ತರ್ಕವೇನು?

“ಅಭಿಯಾನ ಪೂರ್ಣಗೊಂಡ ಬಳಿಕ, ಡಿಸೆಂಬರ್‌ 20ರಂದು ರಾಜ್ಯದ ವಿವಿಧೆಡೆ ಮತಗಟ್ಟೆ ಮಟ್ಟದಲ್ಲಿ ‘ಪಬ್ಲಿಕ್‌ ಹಿಯರಿಂಗ್‌’ (ಸಾರ್ವಜನಿಕ ವಿಚಾರಣೆ) ನಡೆಸಲಾಗುವುದು. ಇದರಲ್ಲಿ ಮತದಾರರು ತಮ್ಮ ಸಮಸ್ಯೆಗಳನ್ನು ನೇರವಾಗಿ ಹಂಚಿಕೊಳ್ಳಲು ಅವಕಾಶ ಕಲ್ಪಿಸುವ ಯೋಜನೆ ಇದೆ” ಎಂದು ಹೇಳಿದ್ದಾರೆ.

“ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಸಮರ್ಪಕ ಪರಿಹಾರ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ” ಎಂದು ಎಸ್‌ಐಆರ್‌ ವಿರೋಧಿ ಒಕ್ಕೂಟ ಪ್ರಕಟಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಐಆರ್ ವಿರೋಧಿ ಒಕ್ಕೂಟದ ವೀರಸಂಗಯ್ಯ, ಶ್ರೀಮತಿ, ಅಮ್ಜದ್ ಪಾಶಾ, ನಾಗೇಶ್ ಅರಳಕುಪ್ಪೆ, ಹೈದರ್ ಬೇಗ್ ಸೇರಿದಂತೆ ಹಲವರು ಇದ್ದರು.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನನಗೀಗ 80 ವರ್ಷ, ವಯೋಸಹಜ ಕಾರಣದಿಂದಾಗಿ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ನನಗೀಗ 80 ವರ್ಷ, ಯಯೋಸಹಜ ಕಾರಣದಿಂದಾಗಿ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ...

ಈ ದಿನ ಸಂಪಾದಕೀಯ | ಬರಗಾಲ, ಬೆಲೆ ಏರಿಕೆ, ಭ್ರಷ್ಟಾಚಾರ: ಬಡವರು ಬದುಕುವುದು ಹೇಗೆ?

ಲಂಚ ಕೊಡುವ ಸಾಮಾನ್ಯ ನಾಗರಿಕನನ್ನು ಮಾತ್ರ ಅಪರಾಧಿ ಎಂದು ನೋಡುವುದಕ್ಕಿಂತ, ಭ್ರಷ್ಟ...

GTA ಶೈಲಿಯಲ್ಲಿ ಪ್ರಗತಿ ಪಟ್ಟಿ ಹಂಚಿಕೊಂಡ ಮೋದಿ; ಜೈರಾಮ್ ರಮೇಶ್ ಟೀಕೆ

ಜಾಗತಿಕವಾಗಿ ಭಾರೀ ಕುತೂಹಲ ಮೂಡಿಸಿದ್ದ ಜನಪ್ರಿಯ ವಿಡಿಯೋ ಗೇಮ್ 'ಗ್ರ್ಯಾಂಡ್ ಥೆಫ್ಟ್...

ಬಿಲ್ಕಿಸ್‌ ಬಾನೋ ‘ಮುಸ್ಲಿಂ’ ಎಂಬ ಕಾರಣಕ್ಕೇ ಪದೇ-ಪದೇ ದೂರವಾಗುತ್ತಿದೆಯೇ ನ್ಯಾಯ?

ಅಪರಾಧಿಗಳ ಹಕ್ಕುಗಳ ಬಗ್ಗೆ ಮಾತನಾಡುವ ನ್ಯಾಯವ್ಯವಸ್ಥೆ, ಸಂತ್ರಸ್ತೆಯ ಬದುಕುವ ಹಕ್ಕು, ಸುರಕ್ಷತೆ...