ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್ ನೋಟ್ ನಲ್ಲಿ ಬಯಲಾದ ಅಸಲಿಯತ್ತು!

Date:

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ (Yogendra Yadav writes: With its press note, the Election Commission makes the case against itself) ವಿಶೇಷ ಅಂಕಣದ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

- Advertisement -

​”ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ವಜಾಗೊಳಿಸಲು ಅವರು ಇನ್ನೇನು ಮಾಡಬೇಕು?” ಎಂದು ಗ್ಯಾನೇಶ್ ಕುಮಾರ್ ವಿರುದ್ಧ ವಿರೋಧ ಪಕ್ಷಗಳ ವಜಾ ನಿರ್ಣಯವನ್ನು ಬೆಂಬಲಿಸಿ, ಈ ಹಿಂದೆ ಪ್ರಶ್ನಿಸಿದ್ದೆ (‘The move to impeach the CEC, though symbolic, matters’, IE, March 17).

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

​ಆದರೆ ನನ್ನ ಆ ಊಹೆ ತಪ್ಪಾಗಿತ್ತು. ಇತ್ತೀಚೆಗೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ನಡೆಸಿದ ಅತ್ಯುತ್ತಮ ತನಿಖಾ ವರದಿಯು, ಮುಖ್ಯ ಚುನಾವಣಾ ಆಯುಕ್ತರು ಯಾರೂ ಊಹಿಸದಷ್ಟು ಅನಾಹುತಗಳನ್ನು ಮಾಡಬಲ್ಲರು ಎಂಬುದನ್ನು ತೋರಿಸಿಕೊಟ್ಟಿದೆ. ಈ ಬಗ್ಗೆ ಯಾರಿಗಾದರೂ ಏನಾದರೂ ಸಂದೇಹವಿದ್ದರೆ, ಚುನಾವಣಾ ಆಯೋಗವು ತಾನೇ ಬಿಡುಗಡೆ ಮಾಡಿರುವ ಹೇಳಿಕೆಯೇ ಅದನ್ನು ಅಧಿಕೃತವಾಗಿ ನಿವಾರಿಸಿದೆ.

​ಸೆಪ್ಟೆಂಬರ್ 26ರಂದು ಚುನಾವಣಾ ಆಯೋಗ (ಇಸಿಐ) ಹೊರಡಿಸಿದ ಪತ್ರಿಕಾ ಪ್ರಕಟಣೆಯು, ಔಪಚಾರಿಕವಾಗಿ ಆಯೋಗವು ತನ್ನ ತಪ್ಪನ್ನು ತಾನೇ ಒಪ್ಪಿಕೊಂಡಂತಿದೆ. ಆ ಎರಡು ಪುಟಗಳ ಪ್ರಕಟಣೆಯು ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಲು ಇರುವ ಬಲವಾದ ಕಾನೂನು ಆಧಾರವಾಗಿದೆ. ಅಲ್ಲದೆ, ಈ ಪ್ರಕಟಣೆಯನ್ನು ಅನುಮೋದಿಸಿದ ಇತರ ಇಬ್ಬರು ಚುನಾವಣಾ ಆಯುಕ್ತರನ್ನೂ ಹುದ್ದೆಯಿಂದ ಕಿತ್ತುಹಾಕಲು ಇದು ಸಾಕ್ಷ್ಯವೊದಗಿಸುತ್ತದೆ.

​ಒಮ್ಮೆ ಮೆಲುಕು ಹಾಕುವುದಾದರೆ: ಸಂವಿಧಾನದ (ಕಲಂ 124(4) ರೊಂದಿಗೆ ಓದಲಾಗುವ ಕಲಂ 324(5)) ಪ್ರಕಾರ “ಸಾಬೀತಾದ ದುರ್ವರ್ತನೆ ಅಥವಾ ಅಸಮರ್ಥತೆ”ಯ ಆಧಾರದ ಮೇಲೆ ಮಹಾಭಿಯೋಗದ ಮೂಲಕವೇ ಹೊರತು ಬೇರೆ ಯಾವುದೇ ರೀತಿಯಲ್ಲಿ ಸಿಇಸಿಯನ್ನು ವಜಾಗೊಳಿಸಲು ಅವಕಾಶವಿಲ್ಲ. ಆದ್ದರಿಂದ, ಮಹಾಭಿಯೋಗಕ್ಕೆ “ಅಪರಾಧ” ಸಾಬೀತಾಗಬೇಕಾಗಿಲ್ಲವಾದರೂ, “ದುರ್ವರ್ತನೆ ಅಥವಾ ಅಸಮರ್ಥತೆ” ಎಂಬುದು ಯಾವುದೇ ಸಾಮಾನ್ಯ ತಪ್ಪು ಅಥವಾ ಸದ್ಭಾವನೆಯಿಂದ ಮಾಡಿದ ತಪ್ಪು ವ್ಯಾಖ್ಯಾನಕ್ಕೆ ಅನ್ವಯಿಸುವುದಿಲ್ಲ. ಇಂಥ ಉನ್ನತ ಹುದ್ದೆಯ ಮೂಲಭೂತ ನಿಯಮಗಳ ಉದ್ದೇಶಪೂರ್ವಕ ಉಲ್ಲಂಘನೆಯನ್ನು ಒಳಗೊಂಡಿರುವ ಗಂಭೀರ ದುರ್ವರ್ತನೆಯ ಪ್ರಕರಣಗಳಲ್ಲಿ ಮಾತ್ರವೇ ಮಹಾಭಿಯೋಗವನ್ನು ಜಾರಿಗೊಳಿಸಬೇಕು.

Yogendra Yadav 1

​’ಅನೂಪ್ ಬರಣ್ವಾಲ್’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಚುನಾವಣಾ ಆಯುಕ್ತರಿಂದ ನಿರೀಕ್ಷಿಸುವ ನಿಯಮಗಳನ್ನು ರೂಪಿಸಿದೆ. ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ “ಬೆಂಗಳೂರು ನ್ಯಾಯಾಂಗ ನಡವಳಿಕೆಯ ತತ್ವಗಳು” ಸಹ ಆರು ಅಂಶಗಳನ್ನು ಹೊಂದಿವೆ: ಸ್ವಾತಂತ್ರ್ಯ, ನಿಷ್ಪಕ್ಷಪಾತ, ಸಮಗ್ರತೆ, ಔಚಿತ್ಯ, ಸಮಾನತೆ ಮತ್ತು ಸಾಮರ್ಥ್ಯ ಹಾಗೂ ಶ್ರದ್ಧೆ. ಜ್ಞಾನೇಶ್ ಕುಮಾರ್ ಅವರಲ್ಲಿ ಈ ಯಾವುದೇ ಸದ್ಗುಣಗಳಿವೆಯೇ ಎಂದು ಯಾರಾದರೂ ಹೇಳಬಲ್ಲರೇ? ಹಿಂದಿನ ಲೇಖನದಲ್ಲಿ ನಾನು, ನಿಯಮಗಳ ತತ್ವಗಳು ಮತ್ತು ಅದರ ಗಂಭೀರ ಪರಿಣಾಮಗಳ ಆಧಾರದ ಮೇಲೆ– ಅಂದರೆ, ಸಂಪೂರ್ಣ ಪಕ್ಷಪಾತ, ಅನೌಚಿತ್ಯ ಮತ್ತು ಜನಸಾಮಾನ್ಯರ ಮತದಾನದ ಹಕ್ಕನ್ನು ಕಿತ್ತುಕೊಳ್ಳುಲು ಅಧಿಕಾರದ ದುರ್ಬಳಕೆ ಕುರಿತಂತೆ ಒಂದು ಪ್ರಕರಣವನ್ನು ನಿರೂಪಿಸಿದ್ದೆ. ಈಗ, ಸಿಇಸಿ ಮತ್ತು ಇತರ ಚುನಾವಣಾ ಆಯುಕ್ತರ ವಿರುದ್ಧ ಬಲವಾದ ಕಾನೂನು ಪ್ರಕರಣವನ್ನು ದಾಖಲಿಸಲು, ಕಾನೂನಿನ ಉದ್ದೇಶಪೂರ್ವಕ ಮತ್ತು ಅನೇಕ ಗಂಭೀರ ಉಲ್ಲಂಘನೆಗಳನ್ನೂ ನಾವು ಸೇರಿಸಬಹುದು.

​ಚುನಾವಣಾ ಆಯೋಗ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ಯಾರಾ 1(vi) ಅನ್ನು ಓದಿ: “ಆಯೋಗದ ಎಲ್ಲಾ ಸಭೆಗಳಿಗೂ ಕಾರ್ಯಸೂಚಿಯನ್ನು (ಅಜೆಂಡಾ) ಮುಂಚಿತವಾಗಿ ವಿತರಿಸಲಾಗುವುದು ಮತ್ತು ನಡಾವಳಿಗಳನ್ನು (ಮಿನಿಟ್ಸ್) ನೀಡಲಾಗುವುದು” ಎಂಬುದು ದಂಗುಬಡಿಸುವ ಹೇಳಿಕೆ. ಏಕೆಂದರೆ, ಕಳೆದ ಒಂದು ವರ್ಷದಿಂದ ಯಾವುದೇ ಕಾರ್ಯಸೂಚಿ ಅಥವಾ ನಡಾವಳಿಗಳಿಲ್ಲದೆ ಸಭೆ ನಡೆಸಲಾಗಿದೆ. ಇದೇ ವರ್ಷ ಏಪ್ರಿಲ್ 16 ರಂದು ಚುನಾವಣಾ ಆಯುಕ್ತರಲ್ಲೊಬ್ಬರಾದ ವಿವೇಕ್ ಜೋಷಿ ಅವರು ಎತ್ತಿದ ಆಕ್ಷೇಪಣೆಗಳಲ್ಲಿ ಇದೂ ಒಂದಾಗಿತ್ತು. ‘ಇಂಡಿಯನ್ ಎಕ್ಸ್‌ಪ್ರೆಸ್’ ಈ ಅಂಶವನ್ನು ಬಹಿರಂಗಪಡಿಸಿದೆ. ಹೀಗಾಗಿ, ಯಾವುದೇ ಸಮಿತಿ, ಸಂಘ ಅಥವಾ ಸ್ಥಳೀಯ ಕ್ಲಬ್‌ಗೆ ಇರಬೇಕಾದ ಕನಿಷ್ಠ ಕಾರ್ಯವಿಧಾನಗಳನ್ನೂ ಪಾಲಿಸದೆ ಈ ಸಾಂವಿಧಾನಿಕ ಪ್ರಾಧಿಕಾರವು ತನ್ನ ವ್ಯವಹಾರವನ್ನು ನಡೆಸುತ್ತಿದೆ ಎಂಬುದಕ್ಕೆ ಇದೊಂದು ಅಧಿಕೃತ ತಪ್ಪೊಪ್ಪಿಗೆ.

​ಆ ಸಭೆಗಳ ನಡಾವಳಿಗಳನ್ನು ಆಯೋಗವು ಹೊರತರುವವರೆಗೂ, ಚುನಾವಣಾ ಆಯೋಗದ ಹೆಸರಿನಲ್ಲಿ ತೆಗೆದುಕೊಳ್ಳಲಾದ, ಅದರಲ್ಲೂ ವಿಶೇಷವಾಗಿ ಎಸ್‌ಐಆರ್‌ (SIR) ಕುರಿತಾದ ಸರಣಿ ಪ್ರಮುಖ ನಿರ್ಧಾರಗಳನ್ನು ಬೆಂಬಲಿಸಲು ಯಾವುದೇ ದಾಖಲೆಗಳಿಲ್ಲ ಎಂದು ನಾವು ಭಾವಿಸಬೇಕಾಗುತ್ತದೆ. ಎಲ್ಲಾ ಆಯುಕ್ತರೂ ಈಗ “ಸರ್ವಾನುಮತದ ನಿರ್ಧಾರ” ಎಂದು ಬಿಂಬಿಸುತ್ತಿರುವ ಮೂರು ಎಸ್‌ಐಆರ್ ಆದೇಶಗಳಿಗೂ ಈ ಅಕ್ರಮದ ಊಹೆಯೇ ಅನ್ವಯಿಸಬೇಕು. ಪ್ರಶ್ನೆಯಿರುವುದು ಈ ಮೂವರು ಆಯುಕ್ತರು ಆಗ ಅಥವಾ ಈಗ ಆ ಆದೇಶಗಳನ್ನು ಒಪ್ಪುತ್ತಾರೆಯೇ ಎಂಬುದಲ್ಲ. ಬದಲಾಗಿ, ಈ ಆದೇಶಗಳನ್ನು ಪ್ರಕಟಿಸುವ ಮತ್ತು ಜಾರಿಗೊಳಿಸುವ ಮೊದಲು ಸಂಪೂರ್ಣ ಆಯೋಗವು ಈ ನಿರ್ಧಾರವನ್ನು ಪ್ರಸ್ತಾಪಿಸಿ, ಚರ್ಚಿಸಿ, ಒಪ್ಪಿ, ದಾಖಲಿಸಿದೆಯೇ ಎಂಬುದು ಮುಖ್ಯವಾಗುತ್ತದೆ. ಇದಕ್ಕೆ ವಿರುದ್ಧವಾದ ಯಾವುದೇ ಪುರಾವೆಗಳಿಲ್ಲದಿರುವಾಗ, ಈ ಗಂಭೀರ ಲೋಪವು ಅಸಮರ್ಥತೆ ಮತ್ತು ಸಾಂವಿಧಾನಿಕ ಕರ್ತವ್ಯಗಳ ಗಂಭೀರ ಉಲ್ಲಂಘನೆಯನ್ನು ಸಾಬೀತುಪಡಿಸುತ್ತದೆ ಎಂದೇ ನಾವು ತೀರ್ಮಾನಿಸಬೇಕಾಗುತ್ತದೆ.

​ಮುಂದೆ, ಬಹುಚರ್ಚಿತ ನಮೂನೆ-6 ರ (Form 6) ಬದಲಾವಣೆಗಳಿಗೆ ಸಂಬಂಧಿಸಿದ ಪ್ಯಾರಾ 1(iii) ಮತ್ತು 3(iii) ಅನ್ನು ಗಮನಿಸಿ. ಇಸಿಐನ ಪತ್ರಿಕಾ ಪ್ರಕಟಣೆಯು, ಚುನಾವಣಾ ಆಯೋಗವು ಮಾಡಿದ ಮೂರು ಉದ್ದೇಶಪೂರ್ವಕ ಕಾನೂನು ಉಲ್ಲಂಘನೆಗಳನ್ನು ಒಪ್ಪಿಕೊಳ್ಳುತ್ತದೆ. ಮೊದಲನೆಯದಾಗಿ, “ಎಸ್‌ಐಆರ್‌ಗಾಗಿ ನಮೂನೆ 6ಕ್ಕೆ ಲಗತ್ತಿಸಲಾದ ಘೋಷಣೆಯನ್ನು ಮಾನ್ಯ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ” ಎಂದು ಹೇಳುವ ಮೂಲಕ ಅದು ಸುಪ್ರೀಂ ಕೋರ್ಟ್‌ನ ಆದೇಶವನ್ನು ತಪ್ಪಾಗಿ ಪ್ರತಿನಿಧಿಸಿದೆ. ಹಲವು ಕಾನೂನು ತಜ್ಞರು ಬೊಟ್ಟು ಮಾಡಿರುವಂತೆ, ನ್ಯಾಯಾಲಯವು ಹಾಗೆ ಹೇಳಿಲ್ಲ. ಎರಡನೆಯದಾಗಿ, ಶಾಸನಬದ್ಧ ನಮೂನೆಯಲ್ಲಿನ ಈ ಬದಲಾವಣೆಯು “ಅನಧಿಕೃತ ಮತ್ತು ಕಾನೂನುಬಾಹಿರ” ಎಂದು ಇಬ್ಬರು ಆಯುಕ್ತರು ಎತ್ತಿದ ಆಕ್ಷೇಪಣೆಗೆ ಸ್ಪಂದಿಸಿ, ಎಸ್‌ಐಆರ್-ಅಲ್ಲದ ಅವಧಿಗೆ ಮೂಲ ನಮೂನೆ 6ಕ್ಕೆ ಮರಳುವ ನಿರ್ಧಾರವು, ಇದುವರೆಗೂ ಇಸಿಐ ಬಳಸುತ್ತಿದ್ದ ಮಾರ್ಪಡಿಸಿದ ನಮೂನೆಯು ಕಾನೂನಿನ ಗಂಭೀರ ಉಲ್ಲಂಘನೆಯಾಗಿತ್ತು ಎಂಬುದರ ಒಪ್ಪಿಗೆಯಾಗಿದೆ.

​ಮೂರನೆಯದಾಗಿ, ತಪ್ಪಾಗಿ ಕೈಬಿಡಲಾದ ಗೋವಾದ 97 ಮತದಾರರಿಗೆ ನಮೂನೆ 6 ಅನ್ನು ಭರ್ತಿ ಮಾಡುವ ಮೂಲಕ ಮತ್ತೆ ಮತದಾರರಾಗಲು ನೆರವಾಗಿದ್ದೇವೆ ಎಂಬ ಹೇಳಿಕೆಯು, ಉದ್ದೇಶಪೂರ್ವಕ ಕಾನೂನು ಉಲ್ಲಂಘನೆಗೆ ಮತ್ತೊಂದು ಸಾಕ್ಷಿಯಾಗಿದೆ. ಎಸ್‌ಐಆರ್-ಪೂರ್ವ ಪಟ್ಟಿಗಳಲ್ಲಿ ಈ 97 ಮಂದಿ ಇದ್ದರು. ಅವರ ಹೆಸರುಗಳನ್ನು ತಪ್ಪಾಗಿ ಕೈಬಿಡಲಾಗಿತ್ತು. ಈಗ ಸುಳ್ಳು ಹೇಳಿಕೆಗೆ ಸಹಿ ಹಾಕಲು ಈ ಮತದಾರರನ್ನು ಇಸಿಐ ಕೇಳುತ್ತಿದೆ. ಅವರು ತಾವು “ಹೊಸ” ಮತದಾರರೆಂದು ನಟಿಸಬೇಕಿದೆ ಮತ್ತು “ನಾನು ಮೊದಲ ಬಾರಿಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅರ್ಜಿ ಸಲ್ಲಿಸುತ್ತಿದ್ದೇನೆ” ಎಂದು ಮುಚ್ಚಳಿಕೆ ಬರೆದುಕೊಡಬೇಕಿದೆ. ಸುಳ್ಳು ಹೇಳಿಕೆ ನೀಡಿದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂಬುದನ್ನು ದೃಢೀಕರಿಸುವ ಸಹಿಯನ್ನೂ ಅವರಿಂದ ಮಾಡಿಸಲಾಗುತ್ತಿದೆ. ಕಳೆದ ಒಂದು ವರ್ಷದಿಂದ, ಇಸಿಐ ಹತ್ತಾರು ಲಕ್ಷ ಮತದಾರರನ್ನು ಈ ಕಾನೂನುಬಾಹಿರ ಕೃತ್ಯ ಎಸಗುವಂತೆ ಒತ್ತಾಯಿಸಿದೆ. ಏಕೆಂದರೆ ಅದು, ತಪ್ಪಾಗಿ ಕೈಬಿಟ್ಟ ತನ್ನದೇ ದೋಷವನ್ನು ಸರಿಪಡಿಸಲು ಯಾವುದೇ ಕಾರ್ಯವಿಧಾನವನ್ನು ರೂಪಿಸುವಲ್ಲಿ ವಿಫಲವಾಗಿದೆ.

​ಪ್ರಕಟಣೆಯ ಪ್ಯಾರಾ 1(iv) ರಲ್ಲಿ ಆಯೋಗದ ಸದಸ್ಯರ ಆಕ್ಷೇಪಣೆಗಳಿಗೆ ಪ್ರತಿಕ್ರಿಯೆಯಾಗಿ, “ಇಸಿನೆಟ್ (ECINet) ವ್ಯವಸ್ಥೆಯು ಕಾಯ್ದೆಗಳು ಮತ್ತು ನಿಯಮಗಳ ನಿಬಂಧನೆಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಮರುಪರಿಶೀಲಿಸಲು” ತಜ್ಞರ ಸಮಿತಿಯೊಂದನ್ನು ರಚಿಸಲು ಪ್ರಸ್ತಾಪಿಸಲಾಗಿದೆ. ಇದು ಮತ್ತೊಂದು ದಿಗ್ಭ್ರಮೆಗೊಳಿಸುವ ತಪ್ಪೊಪ್ಪಿಗೆಯಾಗಿದೆ: ಅಂದರೆ, ಮತದಾರರ ಪಟ್ಟಿಯಿಂದ 13 ಕೋಟಿಗೂ ಹೆಚ್ಚು ಹೆಸರುಗಳನ್ನು ಅಳಿಸಲು ಈಗಾಗಲೇ ಬಳಸಲಾದ ಆನ್‌ಲೈನ್ ಪೋರ್ಟಲ್ ಮತ್ತು ಸಾಫ್ಟ್‌ವೇರ್, ಕಾನೂನಿಗೆ ಅನುಗುಣವಾಗಿದೆಯೇ ಎಂಬುದರ ಬಗ್ಗೆ ಇಸಿಐಗೇ ಈಗ ಖಚಿತತೆಯಿಲ್ಲ. ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಪ್ರಕಾರ, ಅದು ಕಾನೂನುಬದ್ಧವಾಗಿಲ್ಲ ಎಂಬುದು ಇಬ್ಬರು ಆಯುಕ್ತರಿಗೆ ಖಚಿತವಾಗಿತ್ತು. ಜೊತೆಗೆ, ಈ ಪ್ರಕಟಣೆಯು “ಕ್ಷೇತ್ರಾಧಿಕಾರಿಗಳಿಗೆ” (field officers) “ಹೆಚ್ಚಿನ ನಮ್ಯತೆ” (flexibility) ನೀಡುವುದಾಗಿ ಭರವಸೆ ನೀಡುತ್ತದೆ. ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಅಥವಾ ತೆಗೆದುಹಾಕುವಿಕೆಗೆ ಏಕೈಕ ಕಾನೂನುಬದ್ಧ ಅಧಿಕಾರ ಹೊಂದಿರುವ ಇಆರ್‌ಒಗಳು (EROs) ಈ ವ್ಯವಸ್ಥೆಯಿಂದ ತಮ್ಮನ್ನು ಹೊರಗಿಡಲಾಗಿದೆ ಎಂದು ಪದೇ ಪದೇ ದೂರಿದ್ದರು. ಈಗ ಅವರು ಕಾನೂನು ತಮಗೆ ನೀಡಿರುವ ‘ಅಧಿಕಾರ’ವನ್ನು ಚಲಾಯಿಸುವ ಬದಲು ಕೇವಲ ಒಂದಷ್ಟು “ನಮ್ಯತೆ”ಯನ್ನು ಮಾತ್ರ ಪಡೆಯಲಿದ್ದಾರೆ.

​ಅಂತಿಮವಾಗಿ, ಇಸಿಐ ತನ್ನ ಪ್ರಕಟಣೆಯಲ್ಲಿ ಇನ್ನೂ ಪ್ರಸ್ತಾಪಿಸದಿರುವ ವಿಷಯವನ್ನು ನಾವು ಗಮನಿಸೋಣ: ಪಶ್ಚಿಮ ಬಂಗಾಳದಲ್ಲಿ ಮತ್ತೆ ಮತದಾರರ ಪಟ್ಟಿಗೆ ತಮ್ಮ ಹೆಸರುಗಳನ್ನು ಸೇರಿಸುವಲ್ಲಿ ಯಶಸ್ವಿಯಾದ ಮತದಾರರ ವಿರುದ್ಧ ದಾಖಲಾದ, 16 ಲಕ್ಷಕ್ಕೂ ಹೆಚ್ಚು ಮೇಲ್ಮನವಿಗಳಿಗೆ ಯಾರು ಅಧಿಕಾರ ನೀಡಿದರು? ಬಹುಶಃ, ಕಾನೂನಿನ ಈ ಉಲ್ಲಂಘನೆಯು ಊಹಿಸಲೂ ಸಾಧ್ಯವಾಗದಷ್ಟು ಹಗರಣದಿಂದ ಕೂಡಿದೆ ಎಂದು ಆಯೋಗಕ್ಕೆ ಅನಿಸಿರಬಹುದು.

​ಈಗ ನೀವು ತಿಳಿದುಕೊಳ್ಳಬೇಕಾಗಿರುವುದು ಜನಪ್ರತಿನಿಧಿ ಕಾಯ್ದೆ 1950 ರ ಸೆಕ್ಷನ್ 32(1) ರ ಬಗ್ಗೆ. ಇದರ ಪ್ರಕಾರ, ಮತದಾರರ ಪಟ್ಟಿಗಳನ್ನು ಸಿದ್ಧಪಡಿಸುವಾಗ ಯಾವುದೇ ಚುನಾವಣಾ ಅಧಿಕಾರಿಯು “ಸಮಂಜಸ ಕಾರಣವಿಲ್ಲದೆ, ತನ್ನ ಅಧಿಕೃತ ಕರ್ತವ್ಯದ ಉಲ್ಲಂಘನೆಯಾಗುವಂತಹ ಯಾವುದೇ ಕೃತ್ಯ ಅಥವಾ ಲೋಪವೆಸಗಿದರೆ” ಅದು ಕ್ರಿಮಿನಲ್ ಅಪರಾಧವಾಗುತ್ತದೆ. ಹಾಗಾದರೆ, ಇಡೀ ಚುನಾವಣಾ ಆಯೋಗವೇ ಇಂಥದ್ದೊಂದು ಕ್ರಿಮಿನಲ್ ಅಪರಾಧ ಎಸಗಿಲ್ಲವೇ ಎಂಬುದನ್ನು ನಾವೆಲ್ಲರೂ ಪ್ರಶ್ನಿಸಿಕೊಳ್ಳಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹನೂರು | ರಾತ್ರಿಪೂರ್ತಿ ಸುರಿದ ಭಾರೀ ಮಳೆ: ಮನೆ, ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಹುತೇಕ ಕಡೆ ರಾತ್ರಿಪೂರ್ತಿ ಭಾರೀ ಮಳೆಯಾಗಿದ್ದು,...

ಉತ್ತರ ಪ್ರದೇಶ ಚುನಾವಣೆ: ಯಾವುದೇ ಪಕ್ಷ ಸೇರದೆ, ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತೇನೆ: ಮಾಜಿ ಐಎಎಸ್ ದಿವ್ಯಾ ಮಿತ್ತಲ್

ಇತ್ತೀಚೆಗೆ, ತಮ್ಮ ಆಡಳಿತಾತ್ಮಕ ಸೇವೆಯ (ಐಎಎಸ್‌) ಹುದ್ದೆಗೆ ರಾಜೀನಾಮೆ ನೀಡಿದ್ದ ಉತ್ತರ...

ಬೆಂಗಳೂರು | 700 ಕೆ.ಜಿ ಪಿಒಪಿ ಗಣೇಶ ಮೂರ್ತಿ ತ್ಯಾಜ್ಯ ತೆರವುಗೊಳಿಸಿದ ‘ವಿ ಆರ್ ಆರಂಭ್’

ಬೆಂಗಳೂರಿನ ಸರ್ಜಾಪುರ ಸಮೀಪದ ಹಲನಾಯಕನಹಳ್ಳಿ ಕೆರೆಯಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟರ್ ಆಫ್ ಪ್ಯಾರಿಸ್...

ಮಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬಳಿಕ ಬಂಧನವಾಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪ್ರಧಾನ್‌ಗೆ ಮಧ್ಯಂತರ ಜಾಮೀನು

2007ರ ನಂದಿಗ್ರಾಮ್ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಸಂಬಂಧಿಸಿದ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿ...