ನಾರಾಯಣ ಗುರುಗಳ ಆದರ್ಶಗಳಿಗೆ ಹೊಸ ಸಾಮಾಜಿಕ ಕ್ರಾಂತಿಯ ಅಗತ್ಯ

Date:

ಸಾಮಾಜಿಕ ಪರಿವರ್ತನೆ ಕೇವಲ ಕಾನೂನಿನಿಂದ ಸಾಧ್ಯವಿಲ್ಲ. ಜನರ ಮನಸ್ಸು ಬದಲಾಯಿಸುವ ಮೂಲಕ ಮಾತ್ರ ಸಾಧ್ಯ ಎಂಬುದು ಗುರುಗಳ ಸ್ಪಷ್ಟ ನಿಲುವಾಗಿತ್ತು. ಅದಕ್ಕಾಗಿ ಗುರುಗಳು ಜನರನ್ನು ಅವಮಾನಿಸುವ ಭಾಷೆಯನ್ನು ಬಳಸಲಿಲ್ಲ; ಬದಲಾಗಿ ಅವರೊಳಗಿನ ಆತ್ಮಗೌರವವನ್ನು ಜಾಗೃತಗೊಳಿಸಿದರು. ಸಂಘರ್ಷವನ್ನು ದ್ವೇಷದ ರೂಪಕ್ಕೆ ಪರಿವರ್ತಿಸದೆ, ಜ್ಞಾನ, ಸಂಘಟನೆ, ಸ್ವಾಭಿಮಾನ ಮತ್ತು ನೈತಿಕತೆಯ ಮೂಲಕ ಸಮಾಜವನ್ನು ಮುನ್ನಡೆಸಿದರು.

- Advertisement -

ಇಂದು ನಾರಾಯಣ ಗುರುಗಳ ಜಯಂತಿಯನ್ನು ಗೌರವ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಒಂದು ಪ್ರಶ್ನೆ ನಮ್ಮನ್ನು ಕಾಡಬೇಕಾಗಿದೆ: ಗುರುಗಳ ಜಯಂತಿಯನ್ನು ಆಚರಿಸುವುದರಿಂದ ಮಾತ್ರ ಅವರ ಆದರ್ಶಗಳು ಈಡೇರುತ್ತವೆಯೇ? ಖಂಡಿತವಾಗಿಯೂ ಇಲ್ಲ. ಜಯಂತಿ ಒಂದು ದಿನದ ಸ್ಮರಣೆಯಾಗಬಹುದು, ಆದರೆ ಗುರುಗಳ ಚಿಂತನೆಗಳು ನಮ್ಮ ಬದುಕಿನ ಪ್ರತಿದಿನದ ಸಾಮಾಜಿಕ ಹೊಣೆಗಾರಿಕೆಯಾಗಬೇಕಾಗಿದೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ನಾರಾಯಣ ಗುರುಗಳು ಬದುಕಿದ್ದ ಕಾಲದಲ್ಲಿ ಜಾತಿ ಆಧಾರಿತ ಅಸಮಾನತೆ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ ಮತ್ತು ಶಿಕ್ಷಣದ ಅವಕಾಶಗಳ ನಿರಾಕರಣೆ ಸಮಾಜದ ವಾಸ್ತವಿಕತೆಯಾಗಿತ್ತು. ಜನ್ಮದ ಆಧಾರದ ಮೇಲೆ ಮನುಷ್ಯನ ಮೌಲ್ಯವನ್ನು ನಿರ್ಧರಿಸುವ ವ್ಯವಸ್ಥೆ ಅನೇಕ ಜನರ ಬದುಕನ್ನು ಅಮಾನವೀಯ ಸ್ಥಿತಿಗೆ ತಳ್ಳಿತ್ತು. ಇಂತಹ ಸಂದರ್ಭದಲ್ಲಿ ಗುರುಗಳು ಕೇವಲ ಭಾಷಣಗಳ ಮೂಲಕ ಪರಿವರ್ತನೆ ತರಲು ಪ್ರಯತ್ನಿಸಲಿಲ್ಲ. ಅವರು ಸಮಾಜದ ಮುಂದೆ ಪರ್ಯಾಯ ಮಾದರಿಯನ್ನು ನಿರ್ಮಿಸಿದರು. “ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ಅವರ ಸಂದೇಶ ಮನುಷ್ಯನನ್ನು ಜಾತಿಯ ಗೋಡೆಗಳಿಂದ ಹೊರತಂದು ಮಾನವೀಯತೆಯ ನೆಲೆಯಲ್ಲಿ ನಿಲ್ಲಿಸುವ ಪ್ರಯತ್ನವಾಗಿತ್ತು

ಅವರು ಶಿಕ್ಷಣಕ್ಕೆ ಮಹತ್ವ ನೀಡಿದರು. ಸಂಘಟನೆಗೆ ಪ್ರೇರಣೆ ನೀಡಿದರು. ಜನರಲ್ಲಿ ಸ್ವಾಭಿಮಾನವನ್ನು ಬೆಳೆಸಿದರು. ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಮಾನತೆಯ ಸಂದೇಶವನ್ನು ಕಾರ್ಯರೂಪಕ್ಕೆ ತಂದರು. ದೇವಾಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾಮಾಜಿಕ ಸಂಘಟನೆಗಳ ಮೂಲಕ ಜನರನ್ನು ಜಾಗೃತಗೊಳಿಸಿದರು. ಇದರಿಂದ ಅವರ ಚಳವಳಿ ಕೇವಲ “ವಿರೋಧದ ಚಳವಳಿ” ಆಗಿರಲಿಲ್ಲ; ಅದು “ಪರ್ಯಾಯ ನಿರ್ಮಾಣದ ಚಳವಳಿ”ಯಾಗಿತ್ತು

ಸಾಮಾಜಿಕ ಪರಿವರ್ತನೆ ಕೇವಲ ಕಾನೂನಿನಿಂದ ಸಾಧ್ಯವಿಲ್ಲ. ಜನರ ಮನಸ್ಸು ಬದಲಾಯಿಸುವ ಮೂಲಕ ಮಾತ್ರ ಸಾಧ್ಯ ಎಂಬುದು ಗುರುಗಳ ಸ್ಪಷ್ಟ ನಿಲುವಾಗಿತ್ತು. ಅದಕ್ಕಾಗಿ ಗುರುಗಳು ಜನರನ್ನು ಅವಮಾನಿಸುವ ಭಾಷೆಯನ್ನು ಬಳಸಲಿಲ್ಲ; ಬದಲಾಗಿ ಅವರೊಳಗಿನ ಆತ್ಮಗೌರವವನ್ನು ಜಾಗೃತಗೊಳಿಸಿದರು. ಸಂಘರ್ಷವನ್ನು ದ್ವೇಷದ ರೂಪಕ್ಕೆ ಪರಿವರ್ತಿಸದೆ, ಜ್ಞಾನ, ಸಂಘಟನೆ, ಸ್ವಾಭಿಮಾನ ಮತ್ತು ನೈತಿಕತೆಯ ಮೂಲಕ ಸಮಾಜವನ್ನು ಮುನ್ನಡೆಸಿದರು. ಅವರ ಮಾತುಗಳು ಸರಳವಾಗಿದ್ದವು; ಆದರೆ ಅದರ ಹಿಂದಿನ ಚಿಂತನೆ ಅತ್ಯಂತ ಆಳವಾಗಿತ್ತು. “ಮನುಷ್ಯ ಮೊದಲು” ಎಂಬ ಸಂದೇಶ ಜನಸಾಮಾನ್ಯರ ಮನಸ್ಸಿಗೆ ಸುಲಭವಾಗಿ ತಲುಪಿತು.

ಅವರು ಜನರನ್ನು ಕೇವಲ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಮಾತ್ರ ಕರೆ ನೀಡಲಿಲ್ಲ. ತಮ್ಮ ಬದುಕನ್ನು ಬದಲಿಸಿಕೊಳ್ಳಲು, ಶಿಕ್ಷಣ ಪಡೆಯಲು, ಸಂಘಟಿತರಾಗಲು ಮತ್ತು ಸಮಾಜದ ಪ್ರಗತಿಯಲ್ಲಿ ಪಾಲುದಾರರಾಗಲು ಪ್ರೇರೇಪಿಸಿದರು.

21ನೇ ಶತಮಾನದಲ್ಲಿ ನಾವು ತಂತ್ರಜ್ಞಾನ, ಆರ್ಥಿಕತೆ ಮತ್ತು ವಿಜ್ಞಾನದಲ್ಲಿ ಬಹಳಷ್ಟು ಮುಂದುವರಿದಿದ್ದೇವೆ. ಆದರೆ ಸಾಮಾಜಿಕ ನ್ಯಾಯದ ಪ್ರಶ್ನೆಯಲ್ಲಿ ಇನ್ನೂ ಅನೇಕ ಸವಾಲುಗಳು ನಮ್ಮ ಮುಂದಿವೆ.

Narayana guru

ಜಾತಿಯ ಹೆಸರಿನಲ್ಲಿ ನಡೆಯುವ ತಾರತಮ್ಯ, ಅಸ್ಪೃಶ್ಯತೆಯ ಹೊಸ ರೂಪಗಳು, ಧರ್ಮ ಮತ್ತು ಜಾತಿಯ ಆಧಾರದ ದ್ವೇಷ, ಮಹಿಳೆಯರ ಮೇಲಿನ ತಾರತಮ್ಯ, ಬಡವರು ಮತ್ತು ದುರ್ಬಲ ವರ್ಗಗಳ ಶೋಷಣೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಅಸಮಾನ ಅವಕಾಶಗಳು, ರಾಜಕೀಯದ ಅಪರಾಧೀಕರಣ, ಭ್ರಷ್ಟಾಚಾರ, ಸುಳ್ಳು ಸುದ್ದಿಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ದ್ವೇಷ—ಇವೆಲ್ಲವೂ ಇಂದಿನ ಸಮಾಜದ ಹೊಸ ಸಾಮಾಜಿಕ ಪಿಡುಗುಗಳಾಗಿವೆ.

ಒಂದು ಕಾಲದಲ್ಲಿ ಮನುಷ್ಯನನ್ನು ಜಾತಿಯ ಹೆಸರಿನಲ್ಲಿ ದೂರ ಇಡಲಾಗುತ್ತಿತ್ತು. ಇಂದು ಕೆಲವೊಮ್ಮೆ ಅವನನ್ನು ಜಾತಿ, ಧರ್ಮ, ಭಾಷೆ, ಪ್ರದೇಶ ಅಥವಾ ರಾಜಕೀಯ ಅಭಿಪ್ರಾಯದ ಆಧಾರದ ಮೇಲೆ ದ್ವೇಷಿಸುವ ಪ್ರಯತ್ನ ನಡೆಯುತ್ತಿದ ಕೆಡುಕಿನ ರೂಪ ಬದಲಾಗಿರಬಹುದು; ಆದರೆ ಮನುಷ್ಯನನ್ನು ಮನುಷ್ಯನಿಗಿಂತ ಕೆಳಗೆ ನೋಡುವ ಮನಸ್ಥಿತಿ ಇನ್ನೂ ಸಂಪೂರ್ಣವಾಗಿ ಮಾಯವಾಗಿಲ್ಲ.

ಇಂತಹ ಸಂದರ್ಭದಲ್ಲಿ ನಾರಾಯಣ ಗುರುಗಳ ಚಿಂತನೆಗಳು ಇನ್ನಷ್ಟು ಪ್ರಸ್ತುತವಾಗುತ್ತವೆ. ಗುರುಗಳ ಅನುಯಾಯಿಗಳೆಂದು ಹೇಳಿಕೊಳ್ಳುವುದು, ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರಿಂದ ಮತ್ತು ಜಯಂತಿ ಆಚರಿಸುವುದರಿಂದ ಗುರುಗಳ ಆದರ್ಶಗಳನ್ನು ಸಮಾಜದ ಬದುಕಿನಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ .

ಜಯಂತಿ ಆಚರಣೆ ಒಂದು ದಿನ ನಡೆಯಬಹುದು. ಆದರೆ ಜಾತಿ ನಿರ್ಮೂಲನೆ, ಶಿಕ್ಷಣದ ವಿಸ್ತರಣೆ, ಸಾಮಾಜಿಕ ನ್ಯಾಯ, ಮಾನವ ಘನತೆ, ಮಹಿಳಾ ಸಬಲೀಕರಣ, ಬಡವರ ಪರವಾದ ಹೋರಾಟ ಮತ್ತು ಸೌಹಾರ್ದದ ನಿರ್ಮಾಣ ನಿರಂತರ ನಡೆಯಬೇಕಾಗಿದೆ. ಗುರುಗಳ ಅನುಯಾಯಿಗಳು ಇಂದು ಸಮಾಜದ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ರಾಜಕೀಯವನ್ನು ಪ್ರಶ್ನಿಸಬೇಕು. ಯುವಜನರಿಗೆ ವೈಜ್ಞಾನಿಕ ಮತ್ತು ಮಾನವೀಯ ಚಿಂತನೆ ಬೆಳೆಸಬೇಕು. ಶಿಕ್ಷಣದಿಂದ ವಂಚಿತರಾದವರಿಗೆ ಅವಕಾಶ ಕಲ್ಪಿಸಬೇಕು. ಮಹಿಳೆಯರು ಮತ್ತು ದುರ್ಬಲ ವರ್ಗಗಳ ಹಕ್ಕುಗಳಿಗಾಗಿ ನಿಲ್ಲಬೇಕು.

ಮುಖ್ಯವಾಗಿ, ಗುರುಗಳ ಮೌಲ್ಯಗಳನ್ನು ಸಮಾಜದ ಪರಿವರ್ತನೆಯ ಸಾಧನವಾಗಿ ಬಳಸಬೇಕಾಗಿದೆ ನಾರಾಯಣ ಗುರುಗಳ ಜಯಂತಿ ಜನರಲ್ಲಿ ಹೆಮ್ಮೆ ಮೂಡಿಸುವ ಜೊತೆಗೆ ; ಅದಕ್ಕಿಂತ ಹೆಚ್ಚಾಗಿ ಆತ್ಮಪರಿಶೀಲನೆಯ ದಿನವಾಗಬೇಕು. ಗುರುಗಳು ಇಂದು ಬದುಕಿದ್ದರೆ ನಮ್ಮ ಸಮಾಜವನ್ನು ನೋಡಿ ಏನು ಹೇಳುತ್ತಿದ್ದರು ಪ್ರಶ್ನೆಯನ್ನು ಪ್ರತಿಯೊಬ್ಬ ಅನುಯಾಯಿಯೂ ತನ್ನನ್ನು ತಾನು ಕೇಳಿಕೊಳ್ಳಬೇಕು.

ಗುರುಗಳು ಜಾತಿಯ ಗೋಡೆಗಳನ್ನು ಪ್ರಶ್ನಿಸಿದ್ದರು. ಇಂದು ನಾವು ಯಾವ ಗೋಡೆಗಳನ್ನು ಪ್ರಶ್ನಿಸುತ್ತಿದ್ದೇವೆ?
ಗುರುಗಳು ಶಿಕ್ಷಣ ಮತ್ತು ಸ್ವಾಭಿಮಾನಕ್ಕೆ ಕರೆ ನೀಡಿದ್ದರು. ಇಂದು ನಾವು ಎಷ್ಟು ಜನರಿಗೆ ಶಿಕ್ಷಣ ಮತ್ತು ಸ್ವಾಭಿಮಾನದ ಅವಕಾಶ ಕಲ್ಪಿಸುತ್ತಿದ್ದೇವೆ? ಗುರುಗಳು ಮಾನವೀಯ ಏಕತೆಯ ಸಂದೇಶ ನೀಡಿದ್ದರು. ಇಂದು ದ್ವೇಷದ ರಾಜಕೀಯದ ವಿರುದ್ಧ ನಾವು ಎಷ್ಟು ಗಟ್ಟಿಯಾಗಿ ನಿಲ್ಲುತ್ತಿದ್ದೇವೆ?
ಈ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ಹುಡುಕಿದಾಗ ಮಾತ್ರ ನಾರಾಯಣ ಗುರುಗಳ ಜಯಂತಿ ನಿಜವಾದ ಅರ್ಥವನ್ನು ಪಡೆಯುತ್ತದೆ

ಈ ಶತಮಾನದಲ್ಲೂ ಜಾತಿ, ದ್ವೇಷ, ಅಸಮಾನತೆ ಮತ್ತು ಶೋಷಣೆಯ ವಿರುದ್ಧ ನಾವು ಯಾವ ರೀತಿಯ ಸಮಾಜವನ್ನು ನಿರ್ಮಿಸಲಿದ್ದೇವೆ?
ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರತಿಯೊಂದು ಪ್ರಯತ್ನವೂ ನಾರಾಯಣ ಗುರುಗಳಿಗೆ ಸಲ್ಲಿಸುವ ನಿಜವಾದ ಗೌರವವಾಗಲಿದೆ.

WhatsApp Image 2026 06 06 at 10.32.40 AM
ಅಬ್ದುಲ್ ಅಝೀಝ್ ಉದ್ಯಾವರ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್ ಕಿರಿಕಿರಿಗೆ ಪ್ರಯಾಣಿಕರು ಹೈರಾಣ

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...