ಅಭಯ ದಿನ: ಭಯಮುಕ್ತ ಬದುಕಿನ ಭರವಸೆಗೆ ನಾಂದಿ

Date:

ವೈದ್ಯಕೀಯ ವೃತ್ತಿಯನ್ನು ಸಮಾಜದಲ್ಲಿ ಅತ್ಯಂತ ಪವಿತ್ರವಾದ ಸೇವೆ ಎಂದು ಪರಿಗಣಿಸಲಾಗುತ್ತದೆ. ರೋಗಿಗಳ ಪ್ರಾಣ ಉಳಿಸಲು ಹಗಲಿರುಳು ಶ್ರಮಿಸುವ ವೈದ್ಯರ ಪ್ರಾಣಕ್ಕೇ ಕುತ್ತು ಬಂದರೆ, ಸಮಾಜದ ಆರೋಗ್ಯ ವ್ಯವಸ್ಥೆಯೇ ಕುಸಿಯುತ್ತದೆ. ಈ ಕುರಿತು ಅರಿವು ಮೂಡಿಸಲು, ಫೆಡರೇಶನ್ ಆಫ್ ಅಬ್ಸ್‌ಟೆಟ್ರಿಕ್ ಅಂಡ್ ಗೈನಕಾಲಜಿಕಲ್ ಸೊಸೈಟೀಸ್ ಆಫ್ ಇಂಡಿಯಾ (FOGSI) ಪ್ರತಿ ವರ್ಷ ಆಗಸ್ಟ್ 9 ರಂದು ‘ಅಭಯ ದಿನ’ವನ್ನು ಆಚರಿಸುತ್ತದೆ.

- Advertisement -

ಇಲ್ಲಿ ‘ಅಭಯ’ ಎಂದರೆ ಭಯಮುಕ್ತ ಬದುಕಿನ ಭರವಸೆ. ಮಹಿಳೆಯರು ಹಾಗೂ ಆರೋಗ್ಯ ಸೇವೆ ನೀಡುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಸುರಕ್ಷಿತವಾಗಿ, ಗೌರವದಿಂದ ಮತ್ತು ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಿಸುವುದೇ ‘ಅಭಯ’ದ ಮುಖ್ಯ ಉದ್ದೇಶವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ವೈದ್ಯರು ರೋಗಿಯ ಜೀವ ಉಳಿಸಲು ತಮ್ಮ ಜ್ಞಾನ, ಸಮಯ ಮತ್ತು ಮಾನವೀಯತೆಯನ್ನು ಸಮರ್ಪಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ವೈದ್ಯರ ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಯಾವುದೇ ಅನಗತ್ಯ ವಿಷಯಗಳಲ್ಲಿ ವೈದ್ಯರನ್ನೇ ಹೊಣೆಗಾರರನ್ನಾಗಿ ಮಾಡಿ ಹಲ್ಲೆ ನಡೆಸುವುದು ಸಾಮಾನ್ಯವಾಗುತ್ತಿದೆ. FOGSI ಅಭಯ ದಿನದ ಮೂಲಕ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡುತ್ತಿದೆ: “ಚಿಕಿತ್ಸೆ ನೀಡುವುದು ನಮ್ಮ ಧರ್ಮ, ಆದರೆ ಅದಕ್ಕೆ ಪ್ರತಿಯಾಗಿ ಹಿಂಸೆ ನೀಡುವುದು ಅಕ್ಷಮ್ಯ. ಚಿಕಿತ್ಸೆ ನೀಡುವ ವೈದ್ಯರನ್ನು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಗೌರವಿಸುವುದು ಎಲ್ಲರ ಕರ್ತವ್ಯ.”

ವೈದ್ಯರು ಮುಷ್ಕರ ನಡೆಸದಂತೆ ತಡೆಯುವುದು ಎಷ್ಟು ಮುಖ್ಯವೋ, ಅವರು ಮುಷ್ಕರ ನಡೆಸುವಂತಹ ಪರಿಸ್ಥಿತಿ ಬರದಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ‘ಅಭಯ ದಿನ’ ಕೇವಲ ವೈದ್ಯರ ದಿನವಲ್ಲ; ಇದು ಪ್ರತಿಯೊಬ್ಬ ನಾಗರಿಕನೂ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗೆ ದನಿಗೂಡಿಸಬೇಕಾದ ದಿನ. ವೈದ್ಯರು ಸುರಕ್ಷಿತರಾಗಿದ್ದರೆ ಮಾತ್ರ ಸಮಾಜ ಆರೋಗ್ಯವಾಗಿರಲು ಸಾಧ್ಯ.

ಈ ಆಗಸ್ಟ್ 9 ರಂದು “ವೈದ್ಯರ ರಕ್ಷಣೆ – ಸಮಾಜದ ರಕ್ಷಣೆ” ಎಂಬ ಪ್ರತಿಜ್ಞೆ ಮಾಡೋಣ. ಮೃತಪಟ್ಟ ಆ ‘ಅಭಯ’ಳಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವವೆಂದರೆ, ಇನ್ನೊಬ್ಬ ವೈದ್ಯರಿಗೆ, ಆರೋಗ್ಯ ಕಾರ್ಯಕರ್ತರಿಗೆ ಅಂತಹ ಪರಿಸ್ಥಿತಿ ಬಾರದಂತೆ ತಡೆಯುವುದೇ ಆಗಿದೆ.

ವೈದ್ಯರ ಮೇಲೆ ನಡೆಯುವ ಯಾವುದೇ ರೀತಿಯ ಹಿಂಸೆ ಅಥವಾ ಅವಮಾನವನ್ನು ಯಾರೂ ಸಹಿಸಬಾರದು. ಶಾಂತಿಯುತವಾಗಿ, ಕಾನೂನುಬದ್ಧವಾಗಿ ಮತ್ತು ಒಗ್ಗಟ್ಟಿನಿಂದ ಧ್ವನಿ ಎತ್ತುವುದು ಅಗತ್ಯ. ಅದಕ್ಕಾಗಿ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಅಭಯಕ್ಕೆ ಈ ಕೆಳಗಿನ ಸಾಲುಗಳ ಪಾಲನೆ ಅಗತ್ಯವಾಗಿದೆ:

  • “ಭಯದಿಂದ ಮೌನವಾಗಬೇಡಿ — ಧೈರ್ಯದಿಂದ ಧ್ವನಿ ಎತ್ತಿ.”
  • “ವೈದ್ಯರ ಸುರಕ್ಷತೆ ಎಂದರೆ ಆರೋಗ್ಯ ವ್ಯವಸ್ಥೆಯ ಸುರಕ್ಷತೆ.”
  • “ಗೌರವ ನೀಡಿ, ಸುರಕ್ಷತೆ ನೀಡಿ — ಉತ್ತಮ ಆರೋಗ್ಯ ಸಮಾಜವನ್ನು ನಿರ್ಮಿಸೋಣ.”
  • “ಯಾವುದೇ ವೈದ್ಯರು ಸೇವೆ ಸಲ್ಲಿಸುವಾಗ ಭಯಪಡಬಾರದು; ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತರೂ ಸುರಕ್ಷಿತವಾಗಿ ಮನೆಗೆ ಮರಳಬೇಕು.”
  • “ಸುರಕ್ಷತೆ, ಗೌರವ ಮತ್ತು ನ್ಯಾಯಕ್ಕಾಗಿ ಒಗ್ಗಟ್ಟಾಗಿ ನಿಲ್ಲೋಣ.”

ಅಭಯ ದಿನದಂದು, “ಹಿಂಸೆಗೆ ಇಲ್ಲ, ಗೌರವಕ್ಕೆ ಹೌದು; ಭಯಕ್ಕೆ ಇಲ್ಲ, ಅಭಯಕ್ಕೆ ಹೌದು” ಎಂಬ ಸಂಕಲ್ಪ ಮಾಡೋಣ. ನಾವು ಒಂದಾಗಿ ನಿಂತಾಗ ನಮ್ಮ ಧ್ವನಿ ಇನ್ನಷ್ಟು ಬಲವಾಗುತ್ತದೆ. ಅಭಯವು ಕೇವಲ ಒಂದು ದಿನದ ಘೋಷಣೆಯಾಗದೆ, ಪ್ರತಿದಿನದ ನಮ್ಮ ನಡೆ-ನುಡಿಯಾಗಲಿ.

‘ಅಭಯ ದಿನ’ದ ಹಿನ್ನೆಲೆ ಮತ್ತು ಉದ್ದೇಶ

ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯನಿರತ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ದಾರುಣ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಘಟನೆ ನಡೆದದ್ದು ಆಗಸ್ಟ್ 9 ರಂದು. ಆ ದುರ್ಘಟನೆಯಲ್ಲಿ ಮೃತಪಟ್ಟ ಯುವ ವೈದ್ಯೆಯ ಸ್ಮರಣಾರ್ಥ ಮತ್ತು ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಯನ್ನು ಒತ್ತಾಯಿಸಿ ಈ ದಿನವನ್ನು ‘ಅಭಯ ದಿನ’ವನ್ನಾಗಿ ಆಚರಿಸಲಾಗುತ್ತದೆ. “ಅಭಯ” ಎಂದರೆ ಭಯವಿಲ್ಲದ ಸ್ಥಿತಿ. ವೈದ್ಯರು, ಅದರಲ್ಲೂ ಮಹಿಳಾ ವೈದ್ಯರು, ಆಸ್ಪತ್ರೆಗಳಲ್ಲಿ ಯಾವುದೇ ಭಯವಿಲ್ಲದೆ ತಮ್ಮ ಕರ್ತವ್ಯ ನಿರ್ವಹಿಸುವಂತಾಗಬೇಕು ಎಂಬುದು ಇದರ ಮುಖ್ಯ ಆಶಯ.

ಬರಹ: ಡಾ. ಸಪ್ನಾ ಕೆ. ಕಾಳೆ
ಅಧ್ಯಕ್ಷರು, ಗದಗ ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘ (GOGS)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಗ್ರಾಮೀಣದಲ್ಲಿ ಕುಡಿಯುವ ನೀರಿನ ಸಮಸ್ಯೆಯೇ? ಹಾಗಾದ್ರೆ ಈ ನಂಬರ್‌ಗೆ ಕರೆ ಮಾಡಿ

ಬೀದರ್ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಸಂಬಂಧಿಸಿದ ಸಮಸ್ಯೆಗಳು...

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ ಹಾಕಿದ ಮಾಧ್ಯಮಗಳು

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ...

ಕಲಬುರಗಿಯಲ್ಲಿ ಸೆ.27ರಂದು ಬಸವಾದಿ ಶರಣರ ಹಿಂದೂ ಸಮಾವೇಶ : ಕನೇರಿ ಸ್ವಾಮೀಜಿಗೆ ಅನುಮತಿ ಬೇಡ

ಕಲಬುರಗಿಯಲ್ಲಿ ಸೆ. 27ರಂದು ಹಮ್ಮಿಕೊಳ್ಳಲಾಗಿರುವ ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ...