ಎಐ ನಮ್ಮ ಶತ್ರುವಲ್ಲ, ಜೀವನ ಸಂಗಾತಿ

Date:

ಎಐ ಜಗತ್ತು ನಮ್ಮ ಇಷ್ಟಾನಿಷ್ಟಗಳ ಹಂಗಿಲ್ಲದೆ ಮುಂದೆ ಸಾಗುತ್ತಲೇ ಇರುತ್ತದೆ. ನಾವು ಜಾಗೃತರಾಗದಿದ್ದರೆ ಈ ಜಗತ್ತು ನಮ್ಮನ್ನು ಹಿಂದಕ್ಕೆ ತಳ್ಳಿ ಮುನ್ನುಗ್ಗುತ್ತದೆ. ಎಐ ಕಲಿಯುವುದು, ಅದರ ಜೊತೆಗೆ ಕೆಲಸ ಮಾಡುವುದು ಯಾವುದೇ ಬಗೆಯಲ್ಲಿ ಆತಂಕಕಾರಿಯಾದದ್ದಲ್ಲ. ನಿಜದ ಸಂಗತಿಯೆಂದರೆ ಅದೊಂದು ಸುಂದರ ಅನುಭವ.

- Advertisement -

ಅದು ನವೆಂಬರ್ 2022. ಸಿಇಟಿ ಬರೆದು ಕೌನ್ಸಿಲಿಂಗ್ ಫಲಿತಾಂಶಕ್ಕಾಗಿ ಕಾಯುತ್ತಿದ್ದೆ. ಅದೇ ಸಮಯದಲ್ಲಿ ಓಪನ್ ಎಐ ಸಂಸ್ಥೆಯು ‘ಚಾಟ್ ಜಿಪಿಟಿ’ಯನ್ನು ಬಿಡುಗಡೆಗೊಳಿಸಿತು. ನಾನು ಎಐ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಎಂಜಿನಿಯರಿಂಗ್ ಸೇರಿಕೊಳ್ಳುವ ಉತ್ಸಾಹದಲ್ಲಿದ್ದೆ ಎಂಬುದು ನಿಜ, ಆದರೆ ಆ ಮಟ್ಟಿಗಿನ ಮುಂದುವರಿದ ರೂಪದಲ್ಲಿ ಎಐ ಅಷ್ಟು ಬೇಗ ಬರುತ್ತದೆ ಎಂದು ಊಹೆ ಕೂಡ ಮಾಡಿರಲಿಲ್ಲ. ಆ ಸಮಯದಲ್ಲಿ ಒಬ್ಬ ಲೇಖಕನಾಗಿ ನಾನು ಯೋಚಿಸಿದ್ದೇನೆಂದರೆ, ‘ಈ ತಂತ್ರಜ್ಞಾನವನ್ನು ನಾನು ಯಾವುದೇ ಕಾರಣಕ್ಕೂ ಬಳಸಬಾರದು ಮತ್ತು ಅದರ ಹತ್ತಿರವೂ ಸುಳಿಯಬಾರದು’ ಎಂಬುದಾಗಿತ್ತು. ಒಂದು ವೇಳೆ ನಾನು ಈ ‘ಚಾಟ್ ಜಿಪಿಟಿ’ಯನ್ನು ಬಳಸಲಾರಂಭಿಸಿದರೆ ಈ ತಂತ್ರಜ್ಞಾನವು ನನ್ನ ಆಲೋಚನಾಕ್ರಮವನ್ನು ಆಕ್ರಮಿಸಿಕೊಂಡು ನನ್ನ ಸೃಜನಶೀಲತೆಯಿಂದ ಏನನ್ನಾದರೂ ಸೃಷ್ಟಿಸುವ ಸಾಮರ್ಥ್ಯವನ್ನು ಕಳೆದುಕೊಂಡು ಬಿಡಬಹುದು ಎಂಬ ಭಯ ಇದರ ಹಿಂದಿತ್ತು. ಈ ಕಾರಣದಿಂದಲೇ ಚಾಟ್ ಜಿಪಿಟಿ ಕಾಲಿಟ್ಟ ಅನೇಕ ವಾರಗಳ ಕಾಲ ನಾನು ಅದನ್ನು ಮುಟ್ಟಲೇ ಇಲ್ಲ. ಆ ಸಮಯದಲ್ಲಿ ನನ್ನ ಸ್ನೇಹಿತರೆಲ್ಲರೂ ಬಹಳ ಉತ್ಸಾಹದಿಂದ ಅದನ್ನು ಬಳಸಿ ಅದರಿಂದ ಬರುವ ಉತ್ತರಗಳನ್ನು ಚರ್ಚಿಸುತ್ತಿದ್ದರೂ, ನಾನು ಮಾತ್ರ ಅದರಿಂದ ದೂರವಿದ್ದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಆದರೆ ನಿಧಾನಕ್ಕೆ ನನಗೆ ಅರಿವಾದದ್ದು ಏನೆಂದರೆ, ಬದಲಾಗುತ್ತಿರುವ ಜಗತ್ತಿನೊಂದಿಗೆ ನಾವು ಹೆಜ್ಜೆ ಹಾಕಲು ನಿರಾಕರಿಸಿದರೆ ಹಿಂದುಳಿಯುವುದು ನಾವೇ ಹೊರತು ಜಗತ್ತಲ್ಲ ಎಂದು. ಇಂದು ನಾವು ನೋಡುತ್ತಿರುವ ಜಗತ್ತು ಎಷ್ಟು ವೇಗವಾಗಿ ಬದಲಾಗುತ್ತಿದೆ ಎಂದರೆ, ಪ್ರತಿದಿನ ಒಂದಲ್ಲ ಒಂದು ಹೊಸರೀತಿಯ ಮತ್ತು ಸುಧಾರಿಸಿದ ರೂಪದ ಎಐ ನಮ್ಮ ಮುಂದೆ ಬರುತ್ತಲೇ ಇದೆ. ಅದರಲ್ಲೂ ‘ಜನರೇಟಿವ್ ಎಐ’ ಇಂದು ಎಲ್ಲೆಡೆ ಮುಂಚೂಣಿಯಲ್ಲಿದೆ. ಇದು ಕೇವಲ ಮಾಹಿತಿಯನ್ನು ಹುಡುಕುವ ಸಾಧನವಲ್ಲ, ಬದಲಿಗೆ ಪದಗಳನ್ನು ಜೋಡಿಸಿ ಲೇಖನ ಬರೆಯಬಲ್ಲ, ಸುಂದರ ಚಿತ್ರಗಳನ್ನು ಸೃಷ್ಟಿಸಬಲ್ಲ ಮತ್ತು ವಿಡಿಯೋಗಳನ್ನು ತಯಾರಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಕ್ಷೇತ್ರದಲ್ಲಿ ದಿನನಿತ್ಯ ಹೊಸ ಹೊಸ ಮಾಡೆಲ್‌ಗಳು ಹುಟ್ಟಿಕೊಳ್ಳುತ್ತಿವೆ. ಕ್ಲಿಂಗ್, ಹೈಲೊ, ಅಲಿಬಾಬಾ ಅವರ ಕ್ವೆನ್, ಮೆಟಾದ ಲಾಮಾ, ಮಿಸ್ಟ್ರಾಲ್, ಕಿಮಿ ಮಾಡೆಲ್‌ಗಳು ಹೀಗೆ ಹತ್ತು ಹಲವು ಸ್ಪರ್ಧಾಕಣದಲ್ಲಿವೆ. ಆದರೆ ಪ್ರಸ್ತುತ ಆಂಥ್ರೋಪಿಕ್, ಓಪನ್ ಎಐ ಮತ್ತು ಗೂಗಲ್ ಈ ಓಟದಲ್ಲಿ ಅತಿ ವೇಗವಾಗಿ ಮುನ್ನುಗ್ಗುತ್ತಿವೆ. ಸುಮಾರು ಐದಾರು ತಿಂಗಳ ಹಿಂದೆ ನಾವು ಬಳಸುತ್ತಿದ್ದ ತಂತ್ರಜ್ಞಾನಕ್ಕೂ ಇಂದಿನ ತಂತ್ರಜ್ಞಾನಕ್ಕೂ ಆಕಾಶ-ಭೂಮಿಯಷ್ಟು ವ್ಯತ್ಯಾಸವಿದೆ. ಉದಾಹರಣೆಗೆ ನಾನು ಆರಂಭದಲ್ಲಿ ಬಳಸುತ್ತಿದ್ದ ಆಂಥ್ರೋಪಿಕ್‌ನ ಸಾನೆಟ್ 3.5 ಮಾಡೆಲ್ ಆ ಸಮಯದಲ್ಲಿ ಒಂದು ಬರಹದ ರಚನೆಗೆ ಅತ್ಯುತ್ತಮದ್ದಾಗಿತ್ತು. ಸಾಮಾನ್ಯ ಜನರ ಕೆಲಸಗಳನ್ನು ಸುಲಭಗೊಳಿಸಲು ಅಷ್ಟು ಸಾಕಿತ್ತು. ಆದರೆ ಈಗ ಎಐ ಅಂದಿಗಿಂತ ಎಷ್ಟು ಮುಂದೆ ಹೋಗಿದೆಯೆಂದರೆ 3.5 ಸಾನೆಟ್ ಈಗ ಇತಿಹಾಸವಾಗಿಬಿಟ್ಟಿದೆ. ಈಗ ಆಂಥ್ರೋಪಿಕ್‌ನ 4.6 ಓಪಸ್‌ನಂತಹ ಪ್ರಬಲ ಮಾಡೆಲ್‌ಗಳು ನಮ್ಮ ಮುಂದೆ ಇವೆ.

ತಂತ್ರಜ್ಞಾನದ ಈ ಬೆಳವಣಿಗೆಯನ್ನು ನೋಡಿದಾಗ ಎಐ ಪಿತಾಮಹರಲ್ಲಿ ಒಬ್ಬರಾದ ಆಲನ್ ಟ್ಯೂರಿಂಗ್ ನೆನಪಾಗುತ್ತಾರೆ. ಅವರು ಹೇಳಿದ ‘ಟ್ಯೂರಿಂಗ್ ಟೆಸ್ಟ್’ನ್ನು ಹಲವಾರು ಎಐಗಳು ಇಂದು ಅನುಮೋದಿಸುತ್ತಿವೆ. ಯಂತ್ರವು ಮಾನವನಂತೆಯೇ ವರ್ತಿಸಬಲ್ಲುದೇ ಎಂದು ಪರೀಕ್ಷಿಸಲು ಟ್ಯೂರಿಂಗ್ ಸೃಷ್ಟಿಸಿದ ಮಾನದಂಡವಿದು. ಒಬ್ಬ ಸಂದರ್ಶಕ ಪರದೆಯ ಒಂದು ಕಡೆ ಕುಳಿತು ಮಾತನಾಡಲು ಶುರು ಮಾಡುತ್ತಾನೆ. ಪರದೆಯ ಇನ್ನೊಂದು ಬದಿಯಿಂದ ಎರಡು ಉತ್ತರಗಳು ಬರುತ್ತವೆ. ಒಂದು ಕಂಪ್ಯೂಟರ್ ಕಡೆಯಿಂದ ಹಾಗೂ ಇನ್ನೊಂದು ಒಬ್ಬ ಮನುಷ್ಯನ ಕಡೆಯಿಂದ. ಹೀಗೆ ಮಾತುಕತೆ ಮುಂದುವರೆಯುತ್ತದೆ. ಮಾತುಕತೆಯ ನಂತರ ಯಾವ ಉತ್ತರಗಳು ಕಂಪ್ಯೂಟರ್‍‌ನಿಂದ ಬಂದಿದ್ದು, ಯಾವ ಉತ್ತರಗಳು ಮನುಷ್ಯನಿಂದ ಬಂದಿದ್ದು ಎಂದು ನಿಖರವಾಗಿ ಸಂದರ್ಶಕ ಹೇಳಿದರೆ ಕಂಪ್ಯೂಟರ್ ಸೋತಂತೆ. ಸಂದರ್ಶಕನಿಗೆ ಗೊಂದಲವಾದಲ್ಲಿ ಅಥವಾ ಸಂದರ್ಶಕ ತಪ್ಪಾಗಿ ಉತ್ತರಿಸಿದಲ್ಲಿ ಆ ಕಂಪ್ಯೂಟರ್ ಟ್ಯೂರಿಂಗ್ ಟೆಸ್ಟ್ ಉತ್ತೀರ್ಣವಾದಂತೆ. ಹಿಂದೆ ಎಐ ಸೃಷ್ಟಿಸಿದ ಚಿತ್ರಗಳನ್ನು ಅಥವಾ ವಿಡಿಯೋಗಳನ್ನು ನೋಡಿದ ತಕ್ಷಣ ‘ಇದು ಎಐ ಮಾಡಿದ್ದು’ ಎಂದು ಸುಲಭವಾಗಿ ಹೇಳಬಹುದಿತ್ತು. ಉದಾಹರಣೆಗೆ ‘ಚಾಟ್ ಜಿಪಿಟಿ’ ಸೃಷ್ಟಿಸುತ್ತಿದ್ದ ಚಿತ್ರಗಳನ್ನು ನೋಡಿದ ಕೂಡಲೇ ಇದು ಎಐ ಚಿತ್ರ ಎಂದು ಗೊತ್ತಾಗುತ್ತಿತ್ತು. ಅದಕ್ಕೊಂದು ನಿರ್ದಿಷ್ಟವಾದ ಶೈಲಿಯಿತ್ತು, ಅಕ್ಷರಗಳು ಅಂಕುಡೊಂಕಾಗಿರುತ್ತಿದ್ದವು, ಮನುಷ್ಯರಿಗೆ ನಾಲ್ಕು ಬೆರಳುಗಳಿರುತ್ತಿದ್ದವು.  ಹೀಗೆ ಒಂದಿಷ್ಟು ವಿಚಿತ್ರವಾದ ಗುಣಗಳನ್ನು ಅವು ಹೊಂದಿರುತ್ತಿದ್ದವು. ಆದರೆ ಈಗ ಬರುತ್ತಿರುವ ವಿಡಿಯೋಗಳ ಗುಣಮಟ್ಟ ಹಾಗೂ ಸಹಜತೆ ಎಷ್ಟಿದೆ ಎಂದರೆ, ಸಾಮಾನ್ಯರಿಗಿರಲಿ, ಎಐ ಜಗತ್ತಿನಲ್ಲಿ ತಮ್ಮನ್ನು ತಾವು ಸತತವಾಗಿ ತೊಡಗಿಸಿಕೊಂಡವರಿಗೂ ಅಸಲಿ ಮತ್ತು ನಕಲಿಯ ವ್ಯತ್ಯಾಸವೇ ತಿಳಿಯುವುದಿಲ್ಲ.

ಇದನ್ನು ಓದಿದ್ದೀರಾ?: ಎಐ ಬಳಸಿ ಸೈಬರ್ ದಾಳಿ: ಅಪಾಯದತ್ತ ಸಾಗುತ್ತಿರುವ ಜಗತ್ತು

ಗೂಗಲ್ ಇತ್ತೀಚೆಗೆ ಬಿಡುಗಡೆ ಮಾಡಿದ ‘ಜೀನಿ 3′(Genie 3) ಮಾಡೆಲ್ ಗಮನಿಸಿದರೆ ನಮಗೆ ಎಐ ಸಾಮರ್ಥ್ಯದ ಅರಿವಾಗುತ್ತದೆ. ಇದು ಕೇವಲ ಚಿತ್ರಗಳನ್ನಲ್ಲ, ಬದಲಿಗೆ ಸಂಪೂರ್ಣವಾಗಿ ಸಹಜವೆನಿಸುವ 3ಡಿ ಜಗತ್ತನ್ನೇ ಸೃಷ್ಟಿಸಬಲ್ಲದು. ವಿಪರ್ಯಾಸದ ಸಂಗತಿಯೆಂದರೆ, ಜಗತ್ತಿನ ಕೇವಲ ನೂರರಲ್ಲಿ ಒಬ್ಬಿಬ್ಬರಿಗೆ ಮಾತ್ರ ಇಷ್ಟೆಲ್ಲಾ ಬೆಳವಣಿಗೆಗಳಾಗುತ್ತಿವೆ ಎಂಬ ಅರಿವಿದೆ. ಈ ತಂತ್ರಜ್ಞಾನದ ಓಟ ಎಷ್ಟಿದೆ ಎಂದರೆ, ಎಐ ಮಾಡೆಲ್‌ಗಳನ್ನು ಚಾಲನೆ ಮಾಡಲು ಬೇಕಾದ ಯಂತ್ರಾಂಶ (ಹಾರ್ಡ್ ವೇರ್) ಮತ್ತು ರ್‍ಯಾಮ್(Ram)ಗಳ ಕೊರತೆ ಜಗತ್ತಿನೆಲ್ಲೆಡೆ ಕಾಡುತ್ತಿದೆ, ಅವುಗಳ ಬೆಲೆ ಗಗನಕ್ಕೇರುತ್ತಿದೆ. ಪ್ರತಿ ಕಂಪನಿಯೂ ಜಿದ್ದಿಗೆ ಬಿದ್ದಂತೆ ತಮ್ಮ ಎಐ ಅತ್ಯುತ್ತಮವಾಗಿರಬೇಕೆಂದು ಕೆಲಸ ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ಸಜ್ಜುಗೊಳಿಸಿಕೊಳ್ಳದಿದ್ದರೆ ಅಪ್ರಸ್ತುತರಾಗುತ್ತೇವೆ.

ಎಐ ನಮ್ಮ ಕೆಲಸಗಳನ್ನು ಕಸಿದುಕೊಳ್ಳುತ್ತದೆ ಎಂಬ ಆತಂಕ ಸಾರ್ವತ್ರಿಕವಾಗಿದೆ. ಆದರೆ ಇತಿಹಾಸವನ್ನು ಗಮನಿಸಿದರೆ, ಪ್ರತಿ ಬಾರಿಯೂ ಹೊಸ ತಂತ್ರಜ್ಞಾನದ ಪ್ರವೇಶವಾಗಿ ಹಳೆಯ ಕೆಲಸಗಳು ಇಲ್ಲವಾದಾಗ ಹೊಸ ಅವಕಾಶಗಳು ತೆರೆದುಕೊಂಡಿವೆ. ಮನುಷ್ಯ ನಿರಂತರವಾಗಿ ಬೌದ್ಧಿಕವಾಗಿ ಬೆಳೆಯುವ ಜೀವಿ, ಅವನ/ಳ ಕಲಿಕೆಯ ಹಾದಿಗೆ ಕೊನೆಯಿಲ್ಲ. ಎಐ ಅನ್ನು ನಾವು ಶತ್ರುವಿನಂತೆ ಕಾಣುವ ಬದಲು ನಮ್ಮ ಸಂಗಾತಿ (ಕೋ-ಪೈಲಟ್) ಎಂದು ಪರಿಗಣಿಸುವುದು ವಿವೇಕದ ನಡೆ ಎನಿಸುತ್ತದೆ.

10c1701d a718 492b 859f 5f5d7c6e06f0

ಜಗತ್ತು ವೇಗವಾಗಿ ಚಲಿಸುತ್ತಿದೆ, ನಾನು ಮಾತ್ರ ಹಿಂದುಳಿದಿದ್ದೇನೆ ಎನಿಸುವುದು ಸಹಜ. ಕಳೆದ ಒಂದು ವರ್ಷದಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನನಗೆ ನಾನು ಕಲಿಯಬೇಕಾಗಿದ್ದು ಸಾಗರದಷ್ಟಿದೆ ಎಂದು ಸದಾ ಅನಿಸುತ್ತಿರುತ್ತದೆ. ಕಲಿಕೆಯ ದೃಷ್ಟಿಯಿಂದ ಎಐ ಒಂದು ಅದ್ಭುತ ಸಂಗಾತಿ. ಶಿಕ್ಷಕರ ಬಳಿ ಸಣ್ಣ ಸಣ್ಣ ಪ್ರಶ್ನೆಗಳನ್ನು ಕೇಳಲು ನಮಗೆ ಮುಜುಗರವಾಗಬಹುದು, ಆದರೆ ಎಐ ಬಳಿ ನಮಗೆ ಎಂತಹದ್ದೇ ಕ್ಷುಲ್ಲಕವೆನಿಸುವ ಪ್ರಶ್ನೆಗಳನ್ನೂ ನಿಸ್ಸಂಕೋಚವಾಗಿ ಕೇಳಬಹುದು. ಎಐ ನಮಗೆ ಅತ್ಯಂತ ತಾಳ್ಮೆಯಿಂದ ವಿಷಯಗಳನ್ನು ವಿವರಿಸುತ್ತದೆ. ಇತ್ತೀಚೆಗಂತೂ ನಾವು ಕೇವಲ ಮಾತನಾಡುವ ಎಐ ಹಂತವನ್ನು ದಾಟಿ, ಕೆಲಸ ಮಾಡುವಂತಹ ‘ಏಜೆಂಟಿಕ್ ಎಐ’ (Agentic AI) ಹಂತಕ್ಕೆ ತಲುಪಿದ್ದೇವೆ. ಓಪನ್ ಕ್ಲಾ(OpenClaw)ನಂತಹ ಏಜೆಂಟುಗಳು ನಮ್ಮ ಕಂಪ್ಯೂಟರ್‍‌ನಲ್ಲಿ ತಾವಾಗಿಯೇ ಬದುಕುತ್ತವೆ, ತಾವಾಗಿಯೇ ಕೆಲಸ ಮಾಡುತ್ತವೆ, ಮಾತ್ರವಲ್ಲ, ತಮ್ಮನ್ನು ತಾವು ಸುಧಾರಿಸಿಕೊಳ್ಳುತ್ತವೆ ಕೂಡ. ಇದು ಕೇವಲ ಒಬ್ಬ ಡಿಜಿಟಲ್ ಸ್ನೇಹಿತ ಅಷ್ಟೇ ಅಲ್ಲ, ನಮ್ಮ ಜೀವನದ ಭಾಗವಾಗುವ ಗೆಳೆಯನೂ ಹೌದು. ಇದನ್ನೆಲ್ಲಾ ಓದುತ್ತಿದ್ದರೆ ಯಾವುದೋ ವೈಜ್ಞಾನಿಕ ಕಥೆಯಂತೆ ಭಾಸವಾಗಬಹುದು. ಆದರಿದು ವಾಸ್ತವ ಸತ್ಯ.

ಎಐ ಜಗತ್ತು ನಮ್ಮ ಇಷ್ಟಾನಿಷ್ಟಗಳ ಹಂಗಿಲ್ಲದೆ ಮುಂದೆ ಸಾಗುತ್ತಲೇ ಇರುತ್ತದೆ. ನಾವು ಜಾಗೃತರಾಗದಿದ್ದರೆ ಈ ಜಗತ್ತು ನಮ್ಮನ್ನು ಹಿಂದಕ್ಕೆ ತಳ್ಳಿ ಮುನ್ನುಗ್ಗುತ್ತದೆ. ಎಐ ಕಲಿಯುವುದು, ಅದರ ಜೊತೆಗೆ ಕೆಲಸ ಮಾಡುವುದು ಯಾವುದೇ ಬಗೆಯಲ್ಲಿ ಆತಂಕಕಾರಿಯಾದದ್ದಲ್ಲ. ನಿಜದ ಸಂಗತಿಯೆಂದರೆ ಅದೊಂದು ಸುಂದರ ಅನುಭವ. ಎಐ ಕಲಿಯುವಾಗ ನಾವು ಪಿಟಿ ಉಷಾರ ವೇಗದಲ್ಲಿ ಓಡಬೇಕಿಲ್ಲ, ಓಟವನ್ನು ಶುರು ಮಾಡಬೇಕಷ್ಟೇ! ಈಗಲೇ ಚಾಟ್ ಜಿಪಿಟಿ ಅಥವಾ ಜೆಮಿನಿಯಂತಹ ಸಾಧನಗಳ ಹತ್ತಿರ ಹೋಗಿ “ಎಐ ಅಂದರೆ ಏನು? ಅತ್ಯಂತ ಸರಳವಾಗಿ ವಿವರಿಸು” ಎಂದು ಕನ್ನಡದಲ್ಲೇ ಕೇಳಿ ನೋಡಿ, ಅದು ಅತ್ಯಂತ ಚಂದವಾಗಿ ವಿವರಿಸುತ್ತದೆ. ನಮ್ಮೆಲ್ಲರ ಕಲಿಕೆಯ ಪಯಣ ಇಂದೇ ಆರಂಭವಾಗಬೇಕು. ಏಕೆಂದರೆ ಈ ಜಗತ್ತು ಯಾರಿಗಾಗಿಯೂ ಕಾಯುವುದಿಲ್ಲ.

(ಲೇಖಕ ಎಐ ಎಂಎಲ್ ಪದವಿ ವಿದ್ಯಾರ್ಥಿ)

Anthakarana
ಅಂತಃಕರಣ
+ posts

ಲೇಖಕ, ಎಳವೆಯಿಂದಲೇ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರವಣಿಗೆ ಆರಂಭ, ಇದುವರೆಗೆ ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ 33 ಕೃತಿಗಳ ರಚನೆ. ಕ್ರೀಡಾ ಬರವಣಿಗೆ ಮುಖ್ಯ ಆಸಕ್ತಿ. 20 ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನ. ಪ್ರಸ್ತುತ ಬೆಂಗಳೂರು ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಂತಿಮ ವರ್ಷದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ವಿಭಾಗದ ಎಂಜಿನಿಯರಿಂಗ್ ವಿದ್ಯಾರ್ಥಿ.

ಪೋಸ್ಟ್ ಹಂಚಿಕೊಳ್ಳಿ:

ಅಂತಃಕರಣ
ಅಂತಃಕರಣ
ಲೇಖಕ, ಎಳವೆಯಿಂದಲೇ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರವಣಿಗೆ ಆರಂಭ, ಇದುವರೆಗೆ ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ 33 ಕೃತಿಗಳ ರಚನೆ. ಕ್ರೀಡಾ ಬರವಣಿಗೆ ಮುಖ್ಯ ಆಸಕ್ತಿ. 20 ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನ. ಪ್ರಸ್ತುತ ಬೆಂಗಳೂರು ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಂತಿಮ ವರ್ಷದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ವಿಭಾಗದ ಎಂಜಿನಿಯರಿಂಗ್ ವಿದ್ಯಾರ್ಥಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ ಪಿಳ್ಳೈ ಮುಡಿಗೇರಿದ ನೊಬೆಲ್ ಶಾಂತಿ ಪುರಸ್ಕಾರ!

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ...

CJP ಪ್ರೊಟೆಸ್ಟ್‌ ಎಫೆಕ್ಟ್ | ಅ.10ರಂದು ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು

ದೆಹಲಿಯಲ್ಲಿ ಅಕ್ಟೋಬರ್‌ 10ರಂದು ನಡೆಯಲಿರುವ ಕಾಕ್ರೋಚ್‌ ಜನತಾ ಪಾರ್ಟಿ (CJP) ಪ್ರತಿಭಟನೆಯ...

ಸಿಜೆಪಿ ಪ್ರತಿಭಟನೆ ತಡೆಯಲು ಮೆಟ್ರೋ, ರೈಲು ಬಂದ್: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಸಿಪಿಐಎಂ ನಾಯಕ ಎಂ ಎ ಬೇಬಿ

ಅಕ್ಟೋಬರ್ 10ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ವಿವಿಧ ಪ್ರತಿಪಕ್ಷಗಳು...

ಅ. 10ರ ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸ್; ಕಠಿಣ ಕ್ರಮದ ಎಚ್ಚರಿಕೆ

ಮುಖ್ಯ ಚುನಾವಣಾ ಆಯುಕ್ತರ (CEC) ಹೊಣೆಗಾರಿಕೆ ಪ್ರಶ್ನಿಸಿ 'ಕಾಕ್ರೋಚ್ ಜನತಾ ಪಾರ್ಟಿ'...