ಈ ದಿನ ಸಂಪಾದಕೀಯ | ಎಐ ಬಳಸಿ ಸೈಬರ್ ದಾಳಿ: ಅಪಾಯದತ್ತ ಸಾಗುತ್ತಿರುವ ಜಗತ್ತು

Date:

ತಂತ್ರಜ್ಞಾನ ಮಾನವನ ಕೈಯಲ್ಲಿರುವ ಶಕ್ತಿ. ಆದರೆ ಆ ಶಕ್ತಿ ನಿಯಂತ್ರಣ ತಪ್ಪಿದರೆ ಸಮಾಜಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಎಐ ಆಧಾರಿತ ಸೈಬರ್ ದಾಳಿಗಳು ನಮಗೆ ನೀಡುತ್ತಿರುವ ಎಚ್ಚರಿಕೆ ಸ್ಪಷ್ಟ- ಭವಿಷ್ಯದ ಯುದ್ಧಗಳು ಗಡಿಗಳಲ್ಲಿ ಮಾತ್ರ ನಡೆಯುವುದಿಲ್ಲ; ಅವು ಡೇಟಾ, ನೆಟ್‌ವರ್ಕ್ ಮತ್ತು ಡಿಜಿಟಲ್ ಜಗತ್ತಿನೊಳಗೆ ನಡೆಯಲಿವೆ. ಪರಿಣಾಮ- ಊಹೆಗೂ ನಿಲುಕದ್ದು.

ಇತ್ತೀಚೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್), ಕೃತಕ ಬುದ್ಧಿಮತ್ತೆ(ಎಐ) ಬಳಸಿ ನಡೆಯುತ್ತಿರುವ ಸೈಬರ್ ದಾಳಿ ಅಪಾಯಗಳನ್ನು ಹೆಚ್ಚಿಸುತ್ತಿದೆ, ಹಣಕಾಸು ವಹಿವಾಟು ಕ್ಷೇತ್ರಕ್ಕೆ ದೊಡ್ಡ ಮಟ್ಟದ ಆಪತ್ತು ಎದುರಾಗಲಿದೆ ಎಂದು ಎಚ್ಚರಿಸಿದೆ. ಇದು ಸರಳ ವಿಷಯವಲ್ಲ, ಸಾಮಾನ್ಯ ಸೈಬರ್‌ ಅಪರಾಧವೂ ಅಲ್ಲ. ದೇಶಕ್ಕೆ, ಪ್ರಪಂಚಕ್ಕೆ ಗಂಭೀರ ಗಂಡಾಂತರ ತರಬಲ್ಲ ಸಂಗತಿ.

- Advertisement -

ಏಕೆಂದರೆ, ಎಐ ಎನ್ನುವುದು ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಅಮೆರಿಕ ಮತ್ತು ಚೈನಾದಂತಹ ಮುಂದುವರೆದ ದೇಶಗಳು ದಿನಕ್ಕೊಂದು ಹೊಸ ಸುಧಾರಿತ- ಚಾಟ್ ಜಿಪಿಟಿ, ಗೂಗಲ್ ಜೆಮಿನಿ, ಆಂಥ್ರೋಪಿಕ್ ಕ್ಲೌಡ್, ಮೆಟಾ ಲಾಮ, ಗ್ರಾಕ್, ಡೀಪ್ ಸೀಕ್- ಎಐ ಮಾದರಿಗಳನ್ನು ಹೊರಜಗತ್ತಿಗೆ ಬಿಡುತ್ತಿವೆ. ಪ್ರತಿಷ್ಠೆ-ಪಾರಮ್ಯ ಮೆರೆಯುತ್ತಿವೆ. ಎಐ ಜನರ ಕೈಗೆ ಸುಲಭವಾಗಿ, ಉಚಿತವಾಗಿ ಸಿಗುತ್ತಿದೆ. ಕೇಳಿದ್ದನ್ನೆಲ್ಲ ಕೊಡುವ ಕಲ್ಪವೃಕ್ಷದಂತಿರುವ ಎಐ ತಂತ್ರಜ್ಞಾನ ಮಾನವ ಜೀವನವನ್ನು ಸುಲಭಗೊಳಿಸುವ ಸಾಧನವಾಗಿದೆ. ಆ ಕಾರಣಕ್ಕೇ ಅವುಗಳನ್ನು ಯಾವ ಎಗ್ಗೂ ಇಲ್ಲದೆ ಬಳಸುತ್ತಿದ್ದಾರೆ. ಹಾಗೆಯೇ ತಾವೇ ಹೆಣೆದುಕೊಂಡ ಬಲೆಯೊಳಗೆ ಬಂಧಿಯಾಗುತ್ತಿದ್ದಾರೆ.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಕಲಿತವರು ಕ್ಷಣಮಾತ್ರದಲ್ಲಿ ಕರವಸ್ತ್ರದಿಂದ ಹಿಡಿದು ಕಂಡರಿಯದ ಅಮೆಜಾನ್ ಕಾಡಿನವರೆಗೆ ಎಐ ಕೇಳುತ್ತಿದ್ದಾರೆ, ಮಾಹಿತಿ ಪಡೆಯುತ್ತಿದ್ದಾರೆ. 14ರಿಂದ 24ರವರೆಗಿನ ಹೊಸ ತಲೆಮಾರಿನ ಜನ ಎಐನೊಂದಿಗೆ ಸಂಭಾಷಣೆ ನಡೆಸಿ ನಂತರ ತಮ್ಮ ಆಯ್ಕೆ- ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಸಾಂಪ್ರದಾಯಿಕ ಸರ್ಚ್ ಎಂಜಿನ್‌ಗಳಿಗೆ ಪ್ರವೇಶಿಸುವ ಮುನ್ನ ಎಐ ಟೂಲ್‌ಗಳತ್ತ ಮುಖ ಮಾಡುತ್ತಿದ್ದಾರೆ. ಎಐ ಬಳಸುವುದು ಒಂದು ರೀತಿಯಲ್ಲಿ ‘ಓನರ್‍ಸ್ ಪ್ರೈಡ್, ನೇಬರ್‍ಸ್ ಎನಿಮಿ’ ಎಂಬಂತಾಗಿದೆ. ಹೀಗಾಗಿ ಎಐ ತಂತ್ರಜ್ಞಾನ ಪ್ರಪಂಚದಾದ್ಯಂತ ಅತ್ಯಂತ ವೇಗವಾಗಿ ತನ್ನ ಜಾಲವನ್ನು ವಿಸ್ತರಿಸುತ್ತಿದೆ. ಹಿಡಿತವನ್ನು ಬಿಗಿಗೊಳಿಸುತ್ತಿದೆ.

ಇದನ್ನು ಓದಿದ್ದೀರಾ?: ಬಿಡದಿ ಟೌನ್ ಶಿಪ್ ಯೋಜನೆ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರದ ದಂಧೆ?

ಹೊಸ ತಂತ್ರಜ್ಞಾನ ಯಾವಾಗಲೂ, ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತದೆ; ಅನುಕೂಲಕ್ಕೆ ಒದಗಿ ಬರುತ್ತದೆ ಎಂದು ಹೇಳುವ ಸ್ಥಿತಿಯಲ್ಲಿ ಈಗ ಯಾರೂ ಇಲ್ಲ. ಎಐ ತಂತ್ರಜ್ಞಾನ ಸಾಮಾನ್ಯರಿಗಷ್ಟೇ ಅಲ್ಲ, ಸೈಬರ್ ದಾಳಿಕೋರರಿಗೂ ಅನುಕೂಲಕರ ವಾತಾವರಣವನ್ನು ನಿರ್ಮಿಸುತ್ತಿದೆ ಎಂದು ಐಎಂಎಫ್‌ ಹೇಳುತ್ತಿರುವುದರಲ್ಲಿ ಸುಳ್ಳು ಇಲ್ಲ. ಸೈಬರ್ ದಾಳಿಗಳನ್ನು ಇನ್ನಷ್ಟು ವೇಗವಾಗಿ, ಕಡಿಮೆ ಖರ್ಚಿನಲ್ಲಿ ಮತ್ತು ಹೊಸವಿಧಾನದಲ್ಲಿ ಕೂತಲ್ಲೇ ಕಾರ್ಯಾಚರಿಸಲು ಎಐ ನೆರವಾಗುತ್ತಿದೆ. ಸೈಬರ್ ದಾಳಿಕೋರರು, ಸುಧಾರಿತ ಎಐ ಮಾದರಿಗಳ ಮೂಲಕ ಸಾಫ್ಟ್‌ವೇರ್‌ ದೌರ್ಬಲ್ಯಗಳನ್ನು ಕ್ಷಣಾರ್ಧದಲ್ಲಿ ಪತ್ತೆಹಚ್ಚುವ, ಹ್ಯಾಕ್ ಮಾಡುವ ನಿಪುಣರಾಗಿದ್ದಾರೆ.

ಈಗ ಎಐ ಮಾದರಿಗಳು ಕೆಲವೇ ನಿಮಿಷಗಳಲ್ಲಿ ಸಾವಿರಾರು ವ್ಯವಸ್ಥೆಗಳನ್ನು ಸ್ಕ್ಯಾನ್ ಮಾಡಬಲ್ಲವು. ದುರ್ಬಲ ದಾರಿಯನ್ನು ಪತ್ತೆಹಚ್ಚಬಲ್ಲವು. ಇ-ಮೇಲ್‌, ಧ್ವನಿ, ವೀಡಿಯೊ, ಬ್ಯಾಂಕ್ ಮೆಸೇಜ್‌ಗಳಂತೆ ಕಾಣುವ ಮೋಸದ ಲಿಂಕ್‌ಗಳು- ಈಗ ಎಐ ಮೂಲಕ ಕ್ಷಣಾರ್ಧದಲ್ಲಿ ಸೃಷ್ಟಿಯಾಗುತ್ತಿವೆ. ಇದರಿಂದ ಸೈಬರ್ ಅಪರಾಧದ ಸ್ವರೂಪವೇ ಬದಲಾಗಿದೆ. ಹಿಂದೆ ‘ಹ್ಯಾಕರ್’ ಎಂದರೆ ತಂತ್ರಜ್ಞಾನದ ಪರಿಣಿತ ಎನ್ನಲಾಗುತ್ತಿತ್ತು. ಈಗ ಸಾಮಾನ್ಯ ವ್ಯಕ್ತಿಯೂ ಕೆಲ ಎಐ ಸಾಧನಗಳನ್ನು ಬಳಸಿ ವಂಚನೆ ನಡೆಸುವ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ. ಇದು ಅಪರಾಧದ ಸ್ವರೂಪವನ್ನು ಬದಲಿಸಿದೆ, ಅಪಾಯದ ಗಂಭೀರತೆಯನ್ನು ಹೆಚ್ಚಿಸಿದೆ. ಏಕೆಂದರೆ, ಎಐಗೆ ಸರಿ-ತಪ್ಪುಗಳ ವಿವೇಚನೆ ಇಲ್ಲ. ಬಳಸುವವರ ಉದ್ದೇಶಕ್ಕೆ ಮಿತಿಯೂ ಇಲ್ಲ.

ಭಾರತದಂತಹ ಡಿಜಿಟಲ್ ಆರ್ಥಿಕತೆಯತ್ತ ವೇಗವಾಗಿ ಮುನ್ನುಗ್ಗುತ್ತಿರುವ ದೇಶಗಳಿಗೆ; ಯುಪಿಐ, ಮೊಬೈಲ್ ಬ್ಯಾಂಕಿಂಗ್‌, ಡಿಜಿಟಲ್ ವಹಿವಾಟು, ಫಿನ್‌ಟೆಕ್ ಸೇವೆಗಳೆಲ್ಲವೂ ಜೀವನದ ಅವಿಭಾಜ್ಯ ಅಂಗಗಳಾಗಿರುವಾಗ; ಅನಕ್ಷರಸ್ಥರು, ಗ್ರಾಮೀಣ ಜನರು ಕೂಡ ಇಂದು ಮೊಬೈಲ್ ಮೂಲಕ ಹಣ ವರ್ಗಾವಣೆ ಮಾಡುತ್ತಿರುವ ಸಂದರ್ಭದಲ್ಲಿ ಎಐ ಆಧಾರಿತ ಸೈಬರ್ ದಾಳಿಗೆ ದಿಡ್ಡಿಬಾಗಿಲು ತೆರೆದಂತಾಗಿದೆ. ಭಾರೀ ಅನಾಹುತಕ್ಕೆ ಆಹ್ವಾನವಿತ್ತಂತಾಗಿದೆ.

2024ರಲ್ಲಿ ನಡೆದ ರ್‍ಯಾನ್ಸಂವೇರ್ ಎಂಬ ಸೈಬರ್ ದಾಳಿಯಿಂದ ಸುಮಾರು 300 ಸಣ್ಣ ಭಾರತೀಯ ಬ್ಯಾಂಕ್‌ಗಳ ಪಾವತಿ ವ್ಯವಸ್ಥೆಗಳು ಸ್ಥಗಿತಗೊಂಡಿದ್ದರೆ; 2025ರಲ್ಲಿ ಎಸ್‌ಬಿಐನಲ್ಲಿ ಸುಮಾರು 15,956 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿ, 118 ಕೋಟಿಗೂ ಹೆಚ್ಚು ನಷ್ಟವಾಗಿತ್ತು. ಕಳೆದ ವರ್ಷವೊಂದರಲ್ಲಿಯೇ ಸೈಬರ್ ಅಪರಾಧಗಳಿಂದ ಉಂಟಾದ ಹಣಕಾಸು ನಷ್ಟವು ಸುಮಾರು 22,845 ಕೋಟಿ ಎಂದು ಅಂದಾಜಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಓಟಿಪಿ ವಂಚನೆ, ಡಿಜಿಟಲ್ ಅರೆಸ್ಟ್ ಮೋಸ, ನಕಲಿ ಕೆವೈಸಿ ಕರೆಗಳು, ಧ್ವನಿ ನಕಲಿ ವಂಚನೆಗಳು, ಹನಿ ಟ್ರ್ಯಾಪ್‌ಗಳು ಹೆಚ್ಚುತ್ತಿರುವುದು- ಎಐ ತಂತ್ರಜ್ಞಾನ ಕ್ರಿಮಿನಲ್‌ಗಳ ಕೈಗೆ ಸಿಕ್ಕಿದ ಪರಿಣಾಮಗಳೇ. ಈಗ ಇದೆಲ್ಲ ಸಣ್ಣ ಅಪರಾಧಗಳು. ಅಕಸ್ಮಾತ್‌ ಎಐ ಬಳಸಿ ಒಂದು ದೊಡ್ಡ ಸೈಬರ್ ದಾಳಿ ನಡೆದರೆ, ಅದು ಕೇವಲ ಬ್ಯಾಂಕ್ ಖಾತೆಗಳಿಗೆ ಮಾತ್ರವಲ್ಲ; ದೇಶದ ಅರ್ಥ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಮುಂದುವರೆದು, ಡೀಪ್‌ಫೇಕ್ ವೀಡಿಯೊಗಳ ಮೂಲಕ ರಾಜಕೀಯ ಅಸ್ಥಿರತೆ ಸೃಷ್ಟಿಸುವ ಅಪಾಯವೂ ಇದೆ.

ಸೈಬರ್ ದಾಳಿಗಳು ಈಗ ಕೇವಲ ವೈಯಕ್ತಿಕ ಸಮಸ್ಯೆಯಲ್ಲ; ಅದು ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯ ಪ್ರಶ್ನೆಯಾಗಿದೆ. ವಿದ್ಯುತ್ ವ್ಯವಸ್ಥೆ, ವಿಮಾನ ನಿಲ್ದಾಣ, ಆಸ್ಪತ್ರೆ, ಬ್ಯಾಂಕಿಂಗ್, ಷೇರು ಮಾರುಕಟ್ಟೆಗಳೆಲ್ಲವೂ ಡಿಜಿಟಲ್ ಜಾಲಗಳನ್ನು ಅವಲಂಬಿಸಿವೆ. ಇವುಗಳ ಮೇಲೆ ನಡೆಯುವ ದಾಳಿ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಬಹುದು. ಯುದ್ಧದ ಕಾಲದಲ್ಲಿ ಬಾಂಬ್‌ಗಳಿಗಿಂತಲೂ ದೊಡ್ಡ ಪರಿಣಾಮವನ್ನು ಸೈಬರ್ ದಾಳಿಗಳು ಉಂಟುಮಾಡುವ ಸಾಧ್ಯತೆ ಇದೆ ಎಂದು ಜಾಗತಿಕ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.

ಎಐ ಅಪಾಯಕಾರಿ ಆಗಿರುವಷ್ಟೇ ಪರಿಹಾರವೂ ಆಗಬಹುದು. ವಂಚನೆ ಪತ್ತೆಹಚ್ಚುವುದು, ಅನುಮಾನಾಸ್ಪದ ಚಟುವಟಿಕೆ ಗುರುತಿಸುವುದು, ದಾಳಿ ನಡೆಯುವ ಮುನ್ನವೇ ಎಚ್ಚರಿಸುವುದು- ಇವೆಲ್ಲಕ್ಕೂ ಎಐ ಬಳಕೆಯಾಗುತ್ತಿದೆ. ಹೀಗಾಗಿ ಪ್ರಶ್ನೆ ಎಐ ಒಳ್ಳೆಯದೇ ಕೆಟ್ಟದೇ ಎನ್ನುವುದಲ್ಲ; ಅದನ್ನು ಯಾರು, ಹೇಗೆ ಬಳಸುತ್ತಾರೆ ಎನ್ನುವುದಾಗಿದೆ.

ಇದಕ್ಕಾಗಿ ಸರ್ಕಾರಗಳು, ಬ್ಯಾಂಕುಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳು ಕೇವಲ ಲಾಭದ ದೃಷ್ಟಿಯಿಂದ ಡಿಜಿಟಲ್ ವಿಸ್ತರಣೆಗೆ ಒತ್ತುಕೊಡುವುದನ್ನು ಬಿಟ್ಟು, ಭದ್ರತೆ ಮತ್ತು ಸುರಕ್ಷತೆಯತ್ತಲೂ ಗಮನ ಹರಿಸಬೇಕಾಗಿದೆ. ಸೈಬರ್ ಭದ್ರತೆಯನ್ನು ಐಟಿ ವಿಭಾಗದ ಜವಾಬ್ದಾರಿಯ ಬದಲು, ರಾಷ್ಟ್ರೀಯ ನೀತಿಯಾಗಬೇಕಾಗಿದೆ. ಶಾಲಾ ಹಂತದಿಂದಲೇ ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್ ಜಾಗೃತಿ ಬಗ್ಗೆ ತಿಳಿವಳಿಕೆ ತುಂಬಬೇಕಾಗಿದೆ.

ಇದನ್ನು ಓದಿದ್ದೀರಾ?: ಮೂರು ವರ್ಷ ಮುಗಿಸಿದ್ದೇ ಸರ್ಕಾರದ ಮಹಾನ್ ಸಾಧನೆ!

ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವರ್ಷ, ಜವಾಬ್ದಾರಿಯಿಂದ ಎಐ ಬಳಸುವ ಬಗ್ಗೆ ಪ್ರಸ್ತಾಪಿಸಿತ್ತು. ಇದರ ಉದ್ದೇಶ ಆಡಳಿತ, ಪಾರದರ್ಶಕತೆ, ಲೆಕ್ಕಪರಿಶೋಧನೆ ಮತ್ತು ಸೈಬರ್ ಭದ್ರತೆಗಳಲ್ಲಿ ಕಟ್ಟುನಿಟ್ಟಿನ ರಕ್ಷಣಾತ್ಮಕ ಕ್ರಮಗಳೊಂದಿಗೆ ಎಐ ಬಳಕೆಯನ್ನು ಜಾರಿಗೊಳಿಸುವುದಾಗಿತ್ತು. ಆದರೂ ಇಂದಿಗೂ ಜನ ಜಾಗೃತರಾದಂತೆ ಕಾಣುತ್ತಿಲ್ಲ. ಪ್ರತಿದಿನ ಸೈಬರ್ ಅಪರಾಧ ಕೃತ್ಯಗಳು ದಾಖಲಾಗುವುದು ನಿಂತಿಲ್ಲ.

ತಂತ್ರಜ್ಞಾನ ಮಾನವನ ಕೈಯಲ್ಲಿರುವ ಶಕ್ತಿ. ಆದರೆ ಆ ಶಕ್ತಿ ನಿಯಂತ್ರಣ ತಪ್ಪಿದರೆ ಸಮಾಜಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಎಐ ಆಧಾರಿತ ಸೈಬರ್ ದಾಳಿಗಳು ನಮಗೆ ನೀಡುತ್ತಿರುವ ಎಚ್ಚರಿಕೆ ಸ್ಪಷ್ಟ- ಭವಿಷ್ಯದ ಯುದ್ಧಗಳು ಗಡಿಗಳಲ್ಲಿ ಮಾತ್ರ ನಡೆಯುವುದಿಲ್ಲ; ಅವು ಡೇಟಾ, ನೆಟ್‌ವರ್ಕ್ ಮತ್ತು ಡಿಜಿಟಲ್ ಜಗತ್ತಿನೊಳಗೆ ನಡೆಯಲಿವೆ. ಪರಿಣಾಮ- ಊಹೆಗೂ ನಿಲುಕದ್ದು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...