ಸರ್ಕಾರಕ್ಕೆ 3 ವರ್ಷ | ಸಂದಿಗ್ಧ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರ ಪರ ನಿಂತಿರುವ ಕಾಂಗ್ರೆಸ್ ಸರ್ಕಾರ

Date:

ಹಿಂದಿನ ಬಿಜೆಪಿ ಸರ್ಕಾರ ಹೇರಿದ್ದ ಹಿಜಾಬ್ ಮೇಲಿನ ನಿಷೇಧವನ್ನು ಇತ್ತೀಚೆಗೆ ನಮ್ಮ ಸರ್ಕಾರ ವಾಪಸ್ ಪಡೆದಿದೆ. ತನ್ಮೂಲಕ ಮುಸ್ಲಿಂ ಯುವತಿಯರ ವಿದ್ಯಾಭ್ಯಾಸಕ್ಕೆ, ಉನ್ನತ ವ್ಯಾಸಂಗಕ್ಕೆ ಇದ್ದ ತೊಡಕೊಂದನ್ನು ನಿವಾರಿಸಿದೆ. ಹೀಗೆ ಹತ್ತು ಹಲವು ರೀತಿಯಲ್ಲಿ ಕೋಮು ಸೌಹಾರ್ದತೆ ರಾಜ್ಯದಲ್ಲಿ ಮರಳಿ ನೆಲೆಸಲು ಕ್ರಮ ಕೈಗೊಂಡಿರುವ ಸರ್ಕಾರವು ಜೊತೆಜೊತೆಯಲ್ಲಿ ಅಲ್ಪಸಂಖ್ಯಾತರ ಆರ್ಥಿಕ ಅಭಿವೃದ್ಧಿಗೂ ಒತ್ತು ನೀಡಿದೆ.

- Advertisement -

ಭಾರತ-ಪಾಕಿಸ್ತಾನ ವಿಭಜನೆ ಎಂಬ ವಿಷಘಟನೆಯ ನಡುವೆಯೂ ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳಲ್ಲಿದ್ದ ನಾಯಕತ್ವವು ದೇಶದಲ್ಲಿ ಅಲ್ಪಸಂಖ್ಯಾತರಿಗೆ ಸುರಕ್ಷಿತ ವಾತಾವರಣವನ್ನೇ ರೂಪಿಸಿತ್ತು. ಅಲ್ಪಸಂಖ್ಯಾತರು ಮೊದಲ ಬಾರಿ ಅಧೀರರಾದುದು ಕಮಂಡಲದ ರಾಜಕಾರಣ ಮುನ್ನಲೆಗೆ ಬಂದಾಗ. ತದನಂತರ ಕೋಮುವಾದ ಹಂತಹಂತವಾಗಿ ತೀವ್ರಗೊಳ್ಳುತ್ತಿದ್ದಂತೆ ವರ್ಷದಿಂದ ವರ್ಷಕ್ಕೆ ಅಲ್ಪಸಂಖ್ಯಾತರ ಪರಿಸ್ಥಿತಿ ದಯನೀಯವಾಗತೊಡಗಿತು. 2014ರಿಂದ ಈಚೆಗೆ ಮುಸ್ಲಿಂ ದ್ವೇಷವೇ ರಾಜಕಾರಣದ ಬಹುಮುಖ್ಯ ಅಜೆಂಡಾ ಎನ್ನುವಂತೆ ಬದಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಇದು ದೇಶಾದ್ಯಂತ ಸಾಮಾನ್ಯವಾಗಿ ಕಂಡುಬರುತ್ತಿರುವ ಚಿತ್ರಣ. ಇದರ ನಡುವೆ ಕೆಲವೇ ಕೆಲವು ಕಡೆ ಸ್ವಲ್ಪ ಭಿನ್ನವಾದ ವಾತಾವರಣವನ್ನು ಕಾಣಬಹುದು. ಅಂಥವುಗಳ ಪೈಕಿ ಕರ್ನಾಟಕವೇ ಮಾದರಿ. ಕರ್ನಾಟಕದ ಅಲ್ಪಸಂಖ್ಯಾತರು, ಅದರಲ್ಲೂ ಮುಸ್ಲಿಮರು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬೇರೆ ಕಡೆಗಳಿಗಿಂತ ಸುರಕ್ಷಿತ ಭಾವದಿಂದ ಇದ್ದಾರೆ. ಇದಕ್ಕೆ 2013ರಿಂದ 2018ರವರೆಗೆ ಮತ್ತು 2023ರಿಂದ ಇಲ್ಲಿಯವರೆಗೆ ಇರುವ ಕಾಂಗ್ರೆಸ್ ಸರ್ಕಾರ ಕಾರಣ ಎನ್ನುವುದನ್ನು ಯಾವುದೇ ಅಂಜಿಕೆ ಇಲ್ಲದೆ ಹೇಳಬಹುದು.

ನಡುವೆ 2019ರಿಂದ 2023ರವರೆಗೆ ಇದ್ದ ಬಿಜೆಪಿ ಸರ್ಕಾರ ಕರ್ನಾಟಕದ ಸೌಹಾರ್ದ ವಾತಾವರಣವನ್ನು ಕೆಡಿಸಿತ್ತು. ಹಿಜಾಬ್ ವಿಷಯವನ್ನು ಮುನ್ನೆಲೆಗೆ ತಂದು ಲಕ್ಷಾಂತರ ಮುಸ್ಲಿಂ ಯುವತಿಯರ ವಿದ್ಯಾಭ್ಯಾಸಕ್ಕೆ ಕಲ್ಲು ಹಾಕಿತ್ತು. ಆಜಾನ್ ಮತ್ತಿತರ ವಿಷಯಗಳಲ್ಲಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿತ್ತು. ‘ಊಟ ತನ್ನಿಷ್ಟ’ ಎಂಬ ಕನಿಷ್ಠ ಸೌಜನ್ಯವೂ ಇಲ್ಲದೆ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿಷಯಗಳಲ್ಲಿ ಮುಸ್ಲಿಮರನ್ನು ಗುರಿ ಮಾಡಿಕೊಂಡಿತ್ತು. ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಬಡ ಮುಸ್ಲಿಮರನ್ನು ಬಿಡದೆ ಕಾಡಿತ್ತು. ಇವೆಲ್ಲವುಗಳಿಗೂ ಇತಿಶ್ರೀ ಹಾಡಿದ್ದು 2023ರಲ್ಲಿ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ.

ಕಾಂಗ್ರೆಸ್ ಪಕ್ಷ 2023ರ ಚುನಾವಣೆಗೆ ಹೋಗುವ ಮುನ್ನ ತನ್ನ ಪ್ರಣಾಳಿಕೆಯಲ್ಲೇ ‘ಸರ್ವ ಜನಾಂಗದ ಶಾಂತಿಯ ತೋಟ- ಇದುವೇ ಕಾಂಗ್ರೆಸ್ ಬದ್ಧತೆ’ ಎಂಬ ಆದ್ಯತೆಯನ್ನು ಸ್ಪಷ್ಟವಾಗಿ ತಿಳಿಸಿತ್ತು. ಕಳೆದ ಮೂರು ವರ್ಷಗಳಲ್ಲಿ ಅದನ್ನು ಮಾಡಿ ತೋರಿಸಿದೆ. ಇಷ್ಟರ ನಡುವೆಯೂ ಬಿಜೆಪಿ ತನ್ನ ಕೋಮುವಾದದ ಪ್ರಯೋಗಶಾಲೆ ಕರಾವಳಿಯಲ್ಲಿ ಶಾಂತಿ ಕದಡುವ ಯತ್ನ ನಡೆಸಿತು. ಎಚ್ಚೆತ್ತುಕೊಂಡ ಸರ್ಕಾರ ಕೂಡಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಮಂಗಳೂರು ಪೊಲೀಸ್ ಆಯುಕ್ತರನ್ನು ಬದಲಾಯಿಸಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವಂತೆ ಮಾಡಿತು. ಅದೇ ರೀತಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ರಾಜ್ಯದ ಅತ್ಯಂತ ಸೌಹಾರ್ದ ಜಿಲ್ಲೆಯಾದ ಮಂಡ್ಯದಲ್ಲಿ ಕೋಮು ಸಂಘರ್ಷವನ್ನು ಸೃಷ್ಟಿಸಲು ಯತ್ನಿಸಿದವು. ಅಷ್ಟೇ ತ್ವರಿತವಾಗಿ ಕ್ರಮ ಕೈಗೊಂಡ ಸರ್ಕಾರ ಮಂಡ್ಯದ ನೆಲದಲ್ಲಿ ನೆತ್ತರು ಹರಿಯಲು ಬಿಡಲಿಲ್ಲ.

ಸಾಮಾಜಿಕ ಸ್ವಾಸ್ಥ್ಯ ನೆಲೆಸಿಲ್ಲದ ನಾಡಿನಲ್ಲಿ ಯಾರೊಬ್ಬರೂ ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಅಭಿವೃದ್ಧಿಯೂ ಸಾಧ್ಯವಿಲ್ಲ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಚೆನ್ನಾಗಿ ಗೊತ್ತಿದೆ. ಅದರಿಂದಾಗಿಯೇ ತನ್ನ ಪ್ರಣಾಳಿಕೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟದ ನಿರ್ಮಾಣಕ್ಕೆ ಪಣ ತೊಡಲಾಗಿತ್ತು. ಸರ್ಕಾರ ಬಂದ ನಂತರ ಅದನ್ನು ಸಾಧಿಸಲಾಯಿತು. ಇದರ ಪರಿಣಾಮ ರಾಜ್ಯಕ್ಕೆ ಹರಿದು ಬರುತ್ತಿರುವ ಬಂಡವಾಳ ಹೆಚ್ಚಿದೆ. ರಾಜ್ಯದ ವ್ಯಾಪಾರ ವಹಿವಾಟು ಹೆಚ್ಚಾಗಿದೆ. ತೆರಿಗೆ ಸಂಗ್ರಹ ಜಾಸ್ತಿಯಾಗಿದೆ. ಹೆಚ್ಚಿನ ಉದ್ಯೋಗಗಳು ನಿರ್ಮಾಣವಾಗಿವೆ. ಮುಸ್ಲಿಮರಿಗೆ ಮಾತ್ರವಲ್ಲ, ಅಲ್ಪಸಂಖ್ಯಾತರಿಗೆ ಮಾತ್ರವಲ್ಲ, ಇಡೀ ರಾಜ್ಯದ ಜನರಿಗೆ ಒಳಿತಾಗುತ್ತಿದೆ.

ಹಿಂದಿನ ಬಿಜೆಪಿ ಸರ್ಕಾರ ಮಾಡಿದ್ದ ಹಿಜಾಬ್ ಮೇಲಿನ ನಿಷೇಧವನ್ನು ಇತ್ತೀಚೆಗೆ ನಮ್ಮ ಸರ್ಕಾರ ವಾಪಸ್ ಪಡೆದಿದೆ. ತನ್ಮೂಲಕ ಮುಸ್ಲಿಂ ಯುವತಿಯರ ವಿದ್ಯಾಭಾಸಕ್ಕೆ, ಉನ್ನತ ವ್ಯಾಸಂಗಕ್ಕೆ ಇದ್ದ ತೊಡಕೊಂದನ್ನು ನಿವಾರಿಸಿದೆ. ಹೀಗೆ ಹತ್ತು ಹಲವು ರೀತಿಯಲ್ಲಿ ಕೋಮು ಸೌಹಾರ್ದತೆ ರಾಜ್ಯದಲ್ಲಿ ಮರಳಿ ನೆಲೆಸಲು ಕ್ರಮ ಕೈಗೊಂಡಿರುವ ಸರ್ಕಾರವು ಜೊತೆಜೊತೆಯಲ್ಲಿ ಅಲ್ಪಸಂಖ್ಯಾತರ ಆರ್ಥಿಕ ಅಭಿವೃದ್ಧಿಗೂ ಒತ್ತು ನೀಡಿದೆ.

‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬುದು ಸಂವಿಧಾನದ ಮೂಲ ಆಶಯ. ಇದಕ್ಕೆ ಅನುಗುಣವಾಗಿಯೇ ಕಾಂಗ್ರೆಸ್ ಸರ್ಕಾರ ಎಲ್ಲರನ್ನೂ ಸಶಕ್ತಗೊಳಿಸಲು ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಅದು ಕೋಮು ಸಾಮರಸ್ಯದ ವಿಚಾರವಿರಲಿ ಅಥವಾ ಆರ್ಥಿಕ ಅಭಿವೃದ್ಧಿಯ ವಿಚಾರವಿರಲಿ ಕಾಂಗ್ರೆಸ್ ಬಾಯಿ ಮಾತಿಗೆ ಸೀಮಿತವಾಗಿಲ್ಲ. ನುಡಿದಂತೆ ನಡೆದಿದೆ. ಇದು ಹಿಂದಿನ ಬಿಜೆಪಿ ಸರ್ಕಾರ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ (ಮುಸ್ಲಿಮರಿಗೆ ಮಾತ್ರವಲ್ಲ) ನೀಡಿರುವ ಅನುದಾನವನ್ನು ಹೋಲಿಕೆ ಮಾಡಿದರೆ ಸ್ಪಷ್ಟವಾಗಿ ತಿಳಿಯುತ್ತದೆ.

2019ರಿಂದ 2023ರವರೆಗೆ (ಸುಮಾರು ನಾಲ್ಕು ವರ್ಷ) ಇದ್ದ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 5,097 ಕೋಟಿ ರೂಪಾಯಿಗಳನ್ನು ನೀಡಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಈ ಮೂರು ವರ್ಷದಲ್ಲಿ 14,378 ಕೋಟಿ ರೂಪಾಯಿ ನೀಡಿದೆ. ಇದನ್ನು ಬಿಜೆಪಿಯವರು, ಸಂಘ ಪರಿವಾರದವರು, ವಾಟ್ಸಾಪ್ ಯುನಿವರ್ಸಿಟಿಯವರು ತಿರುಚಿ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ ಎಂದು ಹೇಳಬಹುದು. ಆದರೆ ಇದು ಧಾರ್ಮಿಕ ಹಿನ್ನೆಲೆಯಲ್ಲಿ ನೀಡಿರುವುದಲ್ಲ. ಸಾಂವಿಧಾನಿಕ ರೀತಿಯಲ್ಲಿ ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಎನ್ನುವ ತತ್ವದಡಿ ಕೊಟ್ಟಿರುವುದು. ಇದನ್ನೂ ಮೀರಿ ವಾಸ್ತವದಲ್ಲಿ ಅಲ್ಪಸಂಖ್ಯಾತರಿಗೆ ಕೊಟ್ಟಿರುವುದು ತೀರಾ ಕಡಿಮೆಯೇ ಆಗಿರುವುದರಿಂದ ತುಷ್ಟೀಕರಣದ ಪ್ರಶ್ನೆಯೇ ಇಲ್ಲ.

ಹೇಗೆಂದರೆ, 2026-27ನೇ ಸಾಲಿನ ರಾಜ್ಯದ ಬಜೆಟ್ ಮೊತ್ತ 4,48,008 ಕೋಟಿ ರೂಪಾಯಿ. ಇದರಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಕೊಟ್ಟಿರುವ ಹಣ ಕೇವಲ 4,790 ಕೋಟಿ ರೂಪಾಯಿ. ಶೇಕಡಾವಾರು ಲೆಕ್ಕಾಚಾರದಲ್ಲಿ 1ರಷ್ಟು ಮಾತ್ರ. ಇದನ್ನು ನಾನು ವಿಧಾನಸಭೆಯ ಬಜೆಟ್ ಅಧಿವೇಶನದಲ್ಲೇ ಪ್ರಶ್ನೆ ಮಾಡಿದ್ದೇನೆ. ಸುಮಾರು ಶೇಕಡಾ 15ರಷ್ಟಿರುವ ಅಲ್ಪಸಂಖ್ಯಾತರಿಗೆ ಬಜೆಟ್ ನಲ್ಲಿ ಕೇವಲ ಶೇಕಡಾ 1ರಷ್ಟು ಕೊಟ್ಟರೆ ಸಾಕೆ? ಎಂದು ಕೇಳಿದ್ದೇನೆ. ಆದರೂ, ಹಿಂದಿನ ಸರ್ಕಾರಗಳು ಅಲ್ಪಸಂಖ್ಯಾತರನ್ನು ತೀರಾ ನಗಣ್ಯ ಮಾಡಿದ್ದಕ್ಕೆ ಹೋಲಿಕೆ ಮಾಡಿಕೊಡರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಕೊಡುಗೆ ಸಮಾಧಾನಪಟ್ಟುಕೊಳ್ಳುವಂತಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹೆಚ್ಚಿನ ಹಣ ಕೊಟ್ಟಿರುವುದು ಮಾತ್ರವಲ್ಲ, ಕಳೆದ ಮೂರು ವರ್ಷದಲ್ಲಿ ಅಲ್ಪಸಂಖ್ಯಾತರ ಅಭ್ಯುದಯಕ್ಕಾಗಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೊಡಲಾಗಿದೆ. ಪ್ರಮುಖ ನಿಗಮ ಮಂಡಳಿಗಳಿಗೆ ಮುಸ್ಲಿಂ ಸಮುದಾಯದ ನಾಯಕರನ್ನು ನೇಮಕ ಮಾಡಲಾಗಿದೆ. ಅಷ್ಟು ಮಾತ್ರವಲ್ಲದೆ ಸಂಘ ಪರಿವಾರದವರು, ಸಮಾಜಘಾತುಕ ಶಕ್ತಿಗಳು, ಸಮಾಜದ ಸ್ವಾಸ್ಥ್ಯವನ್ನು ಕದಡಲೇಬೇಕೆಂದು ಹಲವು ಬಗೆಯ ಮುಖವಾಡ ತೊಟ್ಟು ಅಖಾಡಕ್ಕಿಳಿಯುವವರು, ತೆರೆಯ ಹಿಂದೆ ನಿಂತು ಕುಮ್ಮಕ್ಕು ಕೊಡುವವರು ಒಟ್ಟೊಟ್ಟಿಗೆ ಮುಸ್ಲಿಮರನ್ನು ಅನುಮಾನಿಸುವ, ಅವಮಾನಿಸುವ, ಅಧೀರರನ್ನಾಗಿಸುವ ಪ್ರಯತ್ನ ಮಾಡಿದಾಗಲೆಲ್ಲಾ ಸಿದ್ದರಾಮಯ್ಯ ನೆರವಿಗೆ ಧಾವಿಸಿದ್ದಾರೆ.

ಸರ್ಕಾರದ ನೇತಾರ ಇಂಥದೊಂದು ದೃಢ ನಿರ್ಧಾರ ತೆಗೆದುಕೊಂಡಾಗ ಆಡಳಿತಯಂತ್ರ ತನ್ನಿಂದ ತಾನೇ ಜಾತ್ಯಾತೀತವಾಗುತ್ತದೆ. ಅಲ್ಪಸಂಖ್ಯಾತರ ರಕ್ಷಣೆಗೆ ಬರುತ್ತದೆ. ಕೋಮುವಾದಿಗಳ ಶಕ್ತಿ ಮತ್ತು ಧೈರ್ಯ ಕುಂದುತ್ತದೆ. ಕಳೆದ ಮೂರು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆದದ್ದು ಇದೇ. ಮತ್ತು ಅಲ್ಪಸಂಖ್ಯಾತರು ವಿಶೇಷವಾಗಿ ಮುಸ್ಲಿಮರು ನಿರೀಕ್ಷೆ ಮಾಡಿದ್ದು ಕೂಡ ಇದನ್ನೇ.

ಇದೇ ವೇಳೆ ಇನ್ನೊಂದು ವಿಷಯವನ್ನು ಅತ್ಯಂತ ಖಚಿತವಾಗಿ ಸ್ಪಷ್ಟಪಡಿಸಬೇಕಾಗಿದೆ. ನನಗೆ ನನ್ನ ಸಮುದಾಯ ಕೂಡ ನನ್ನ ಪಕ್ಷದಷ್ಟೇ ಮುಖ್ಯ. ಸರ್ಕಾರ ನಮ್ಮ ಸಮುದಾಯಕ್ಕೆ ಮಾಡಿರುವ ಕೆಲಸದ ಬಗ್ಗೆ ಸಮಾಧಾನವಿದೆಯೇ ವಿನಃ ತೃಪ್ತಿ ಇಲ್ಲ. ಮಾಡಬೇಕಿರುವ ಕೆಲಸಗಳು ಇನ್ನೂ ಇವೆ. ಮುಖ್ಯವಾಗಿ ಹಿಂದಿನ ಬಿಜೆಪಿ ಸರ್ಕಾರ ದ್ವೇಷದಿಂದ ತೆಗೆದುಹಾಕಿದ್ದ 2B ಮೀಸಲಾತಿಯನ್ನು ನಮ್ಮ ಸರ್ಕಾರ ಇಷ್ಟೊತ್ತಿಗೆ ಮರು ಸ್ಥಾಪಿಸಬೇಕಾಗಿತ್ತು. ಸಮುದಾಯದ ಯುವಕ/ಯುವತಿಯರ ವಿದ್ಯಾಭಾಸ ಮತ್ತು ಉದ್ಯೋಗದ ದೃಷ್ಟಿಯಿಂದ ಇದು ಆಗಲೇಬೇಕಾದ ಕೆಲಸ. ಆದರೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ತಡವಾಗುತ್ತಿದೆ. ಇದರ ಬಗ್ಗೆ ಸರ್ಕಾರದ ಹಲವು ಹಂತದಲ್ಲಿ ಚರ್ಚೆಗಳು ನಡೆದಿವೆ. ಶೀಘ್ರವೇ ಶುಭ ಸುದ್ದಿ ಸಿಗುವ ಎಲ್ಲಾ ಸಾಧ್ಯತೆಗಳು ಇವೆ.

ಇದನ್ನೂ ಓದಿ ಪ್ರೀಮಿಯಂ ಲೇಖನ | ನ್ಯಾಯಾಂಗ ವ್ಯವಸ್ಥೆಯಲ್ಲಿ ಹುಳುಕು; ನ್ಯಾಯದಾನ ಪ್ರಕ್ರಿಯೆಯಲ್ಲಿ ಒಡಕು…!

ಇದಲ್ಲದೆ ಹಿಂದಿನ ಬಿಜೆಪಿ ಸರ್ಕಾರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮಕ್ಕೆ 2020ರಲ್ಲಿ ತಿದ್ದುಪಡಿಯನ್ನು ತಂದು ಮುಸ್ಲಿಮರ ಆಹಾರ ಮತ್ತು ವ್ಯಾಪಾರಕ್ಕೆ ಹೊಡೆತ ನೀಡಿತ್ತು. ಗೋಮಾಂಸ ಸೇವನೆ ಮತ್ತು ಸಾಗಾಣೆಗೆ ನಿರ್ಬಂಧ ವಿಧಿಸಲಾಗಿತ್ತು. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಂತೆ ಈ ಕಾಯಿದೆಯನ್ನು ವಾಪಸ್ ಪಡೆಯಬೇಕಾಗಿತ್ತು. ಆದರೆ ಇದು ಸರ್ಕಾರ ಮಾಡಬೇಕಾದ ಕೆಲಸ ಎನ್ನುವುದಕ್ಕಿಂತ ಹೆಚ್ಚಾಗಿ ಶಾಸನ ಸಭೆ ಮಾಡಬೇಕಾದ ಕೆಲಸ. ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸಿಗೆ ಬಹುಮತ ಇಲ್ಲದ ಕಾರಣಕ್ಕೆ ಕಾಯಿದೆಯನ್ನು ವಾಪಸ್ ಪಡೆಯಲು ಸಾಧ್ಯವಾಗಿಲ್ಲ.

ಇದರ ಜೊತೆಗೆ ಹಿಂದಿನ ಬಿಜೆಪಿ ಸರ್ಕಾರ ಮುಸ್ಲಿಮರನ್ನೇ ಗುರಿಯಾಗಿರಿಸಿಕೊಂಡು ತಂದಿರುವ ಮತಾಂತರ ನಿಷೇಧ ತಿದ್ದುಪಡಿ ಕಾಯಿದೆಯನ್ನು ಬದಲಿಸುವುದಕ್ಕೂ ‘ಬಹುಮತದ ಸಮಸ್ಯೆ’ ಕಾಡುತ್ತಿದೆ. ಜುಲೈ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿಧಾನ ಪರಿಷತ್ತಿನಲ್ಲೂ ಬಹುಮತ ಲಭ್ಯವಾಗಲಿದ್ದು ತಕ್ಷಣವೇ ನಮ್ಮ ಸರ್ಕಾರ ತಿದ್ದುಪಡಿ ತರಲಿದೆ ಎನ್ನುವ ವಿಶ್ವಾಸವಿದೆ. ಹೀಗೆ ರಾಜ್ಯ ಕಾಂಗ್ರೆಸ್ ಸರ್ಕಾರ ತುಂಬಾ ಸಂದಿಗ್ದ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರ ಪರ ನಿಂತಿದೆ ಎನ್ನುವುದನ್ನು ಗಟ್ಟಿಯಾಗಿ ಹೇಳಬಹುದು.

Rizwan Arshad
ರಿಜ್ವಾನ್ ಅರ್ಷದ್
+ posts

ಕಾಂಗ್ರೆಸ್‌ ಶಾಸಕರು, ಶಿವಾಜಿನಗರ

ಪೋಸ್ಟ್ ಹಂಚಿಕೊಳ್ಳಿ:

ರಿಜ್ವಾನ್ ಅರ್ಷದ್
ರಿಜ್ವಾನ್ ಅರ್ಷದ್
ಕಾಂಗ್ರೆಸ್‌ ಶಾಸಕರು, ಶಿವಾಜಿನಗರ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ ಬಿದ್ದ ಸಮುದಾಯ ಭವನ

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ...

‌ಬೀದರ್‌ | ಮತದಾನ ಹಕ್ಕು ಕಸಿಯುವ ʼಎಸ್‌ಐಆರ್ʼ ಪ್ರಕ್ರಿಯೆ ವಿರೋಧಿಸಿ ಅ.12ರಂದು ಪ್ರತಿಭಟನೆ

ದೇಶಾದ್ಯಂತ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಮತದಾರರನ್ನು ಕೈಬಿಡಲಾಗಿರುವುದನ್ನು ಆರೋಪಿಸಿ,...

ವಿಜಯಪುರ | ದಸಂಸ ರಾಜ್ಯ ಸಂಘಟನಾ ಸಂಚಾಲಕಿಯಾಗಿ ಪ್ರತಿಭಾ ಹೊಸಮನಿ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ...

ʼವೋಟ್‌ ಚೋರಿʼ ಆರೋಪಕ್ಕೆ ಪುರಾವೆ ಅಗತ್ಯʼ: ಚುನಾವಣಾ ಆಯೋಗದ ಪರ 124 ನಿವೃತ್ತ ಅಧಿಕಾರಿಗಳ ಪತ್ರ

ಚುನಾವಣಾ ಅಕ್ರಮಗಳ ಆರೋಪಗಳಿಗೆ ವಿಶ್ವಾಸಾರ್ಹ ಪುರಾವೆಗಳು ಅಗತ್ಯ ಎಂದು ಪ್ರತಿಪಾದಿಸಿರುವ 124...