ಬಂಗಾಳ ರಾಜಕಾರಣದ ಮಹಾ ಕುಸಿತ: ಅಭಿಷೇಕ್ ಬ್ಯಾನರ್ಜಿ ಪತನಕ್ಕೆ ಕಾರಣವೇನು?

Date:

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ 2026ರ ಏಪ್ರಿಲ್-ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯು ಅತ್ಯಂತ ಆಘಾತಕಾರಿ ತಿರುವುಗಳನ್ನು ತಂದೊಡ್ಡಿದೆ. ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕಳೆದ ಹದಿನೈದು ವರ್ಷಗಳಿಂದ ಅಜೇಯ ಶಕ್ತಿಯಾಗಿ ಮೆರೆದಿದ್ದ ಟಿಎಂಸಿ ಸಾಮ್ರಾಜ್ಯವು ಪತನಗೊಂಡಿದ್ದು ಮಾತ್ರವಲ್ಲ, ಧೂಳೀಪಟವಾಗಿದೆ. ತಂತ್ರ-ಕುತಂತ್ರಗಳ ಮೂಲಕ 207 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, ಮೊದಲ ಬಾರಿಗೆ ಬಂಗಾಳದ ಅಧಿಕಾರ ಚುಕ್ಕಾಣಿ ಹಿಡಿದಿದೆ. ಸರ್ವಾಧಿಕಾರಿ ಧೋರಣೆಯಲ್ಲಿ ಆಡಳಿತ ಆರಂಭಿಸಿದೆ. ಬಿಜೆಪಿಯ ಕೋಮು ರಾಜಕಾರಣವನ್ನು ಬಲವಾಗಿ ಪ್ರತಿರೋಧಿಸಲೂ ಸಾಧ್ಯವಾಗದ ಪರಿಸ್ಥಿತಿಗೆ ಟಿಎಂಸಿ ಕುಸಿದಿದೆ. ಈ ಮಹಾ ಕುಸಿತದ ಬೆನ್ನಲ್ಲೇ, ಪಕ್ಷದೊಳಗೆ ಬಂಗಾಳದ ಕಾವು ಹೆಚ್ಚಾಗಿದೆ. ಟಿಎಂಸಿಯ ಹೆಚ್ಚಿನ ಶಾಸಕರು-ಸಂಸದರು ಪ್ರತ್ಯೇಕ ಬಣ ಕಟ್ಟಿಕೊಂಡು, ತಾವು ಅಧಿಕೃತವೆಂದು ಹೇಳಿಕೊಂಡಿದ್ದಾರೆ. ತಮ್ಮದೇ ಹೊಸ ಅಧ್ಯಕ್ಷರನ್ನು ನೇಮಿನಿಸಿಕೊಂಡಿದ್ದಾರೆ. ಸದ್ಯ, ಟಿಎಂಸಿಯೊಳಗಿನ ತೀವ್ರ ಕೋಲಾಹಲದ ಕೇಂದ್ರವಾಗಿ ಅಭಿಷೇಕ್ ಬ್ಯಾನರ್ಜಿ ಅವರತ್ತ ಬೊಟ್ಟು ಮಾಡಲಾಗುತ್ತಿದೆ.

- Advertisement -

ಟಿಎಂಸಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಅಭಿಷೇಕ್ ಅವರನ್ನು ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ‘ಯುವರಾಜ’ – ‘ಸೇನಾಪತಿ’ ಎಂದೇ ಕೊಂಡಾಡುತ್ತಿದ್ದರು. ಮಮತಾ ಅವರ ರಾಜಕೀಯ ಉತ್ತರಾಧಿಕಾರಿ ಎಂದೂ ಅಭಿಷೇಕ್ ಬ್ಯಾನರ್ಜಿ ಬಿಂಬಿತವಾಗಿದ್ದರು. ಆದರೆ, ಈಗ ಅವರ ರಾಜಕೀಯವು ಹಠಾತ್ ಪತನ ಕಂಡಿದೆ. ಇದಕ್ಕೆ ಕೇವಲ ಚುನಾವಣೆಯ ಸೋಲು ಮಾತ್ರ ಕಾರಣವಲ್ಲ. ಬದಲಿಗೆ, ಅವರ ಅತಿಯಾದ ಆತ್ಮವಿಶ್ವಾಸ, ಅಧಿಕಾರದ ಕೇಂದ್ರೀಕರಣ, ಹಿರಿಯ ನಾಯಕರ ಕಡೆಗಣನೆ ಹಾಗೂ ಸರಣಿ ಭ್ರಷ್ಟಾಚಾರದ ಆರೋಪಗಳು ಪ್ರಮುಖ ಕಾರಣಗಳಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಚುನಾವಣಾ ಸೋಲು, ಆಡಳಿತ ವಿರೋಧಿ ಅಲೆ ಹಾಗೂ ‘ಡೈಮಂಡ್ ಹಾರ್ಬರ್ ಮಾಡಲ್’ ವೈಫಲ್ಯ

ಟಿಎಂಸಿ ಸತತ 15 ವರ್ಷಗಳ ಕಾಲ ಆಡಳಿತ ನಡೆಸಿದ್ದರಿಂದ ಸಹಜವಾಗಿಯೇ ತಳಮಟ್ಟದಲ್ಲಿ ತೀವ್ರ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿತ್ತು. ಜನರಲ್ಲಿದ್ದ ಈ ಅಸಮಾಧಾನವನ್ನು ಸರಿಯಾಗಿ ಗ್ರಹಿಸುವಲ್ಲಿ ಅಭಿಷೇಕ್ ಬ್ಯಾನರ್ಜಿ ನೇತೃತ್ವದ ಚುನಾವಣಾ ತಂತ್ರಗಾರಿಕೆ ಸಂಪೂರ್ಣವಾಗಿ ವಿಫಲವಾಯಿತು. ಅಭಿಷೇಕ್ ಅವರು ಪಕ್ಷದೊಳಗೆ ತಾವೇ ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಸ್ಥಳೀಯ ಸಮೀಕರಣಗಳನ್ನು ಮತ್ತು ಪ್ರಭಾವಿ ನಾಯಕರ ಅಭಿಪ್ರಾಯಗಳನ್ನು ಬದಿಗೊತ್ತಿ, ಕೇವಲ ತಮ್ಮ ಆಪ್ತ ವಲಯಕ್ಕೆ ಟಿಕೆಟ್ ಹಂಚಿಕೆ ಮಾಡಿದ್ದು ಇಡೀ ಪಕ್ಷಕ್ಕೆ ಮುಳುವಾಯಿತು.

ಅಭಿಷೇಕ್ ಬ್ಯಾನರ್ಜಿ ಅವರು ತಮ್ಮದೇ ಕ್ಷೇತ್ರವಾದ ಡೈಮಂಡ್ ಹಾರ್ಬರ್‌ನಲ್ಲಿ ಜಾರಿಗೆ ತಂದಿದ್ದ ‘ಡೈಮಂಡ್ ಹಾರ್ಬರ್ ಮಾಡಲ್’ಅನ್ನು ಇಡೀ ರಾಜ್ಯಕ್ಕೆ ಮಾದರಿ ಎಂದು ಪಕ್ಷದಾದ್ಯಂತ ಭಾರಿ ಪ್ರಚಾರ ಮಾಡಲಾಗಿತ್ತು. ತಳಮಟ್ಟದ ಪ್ರಚಾರ ಕಾರ್ಯವಿಧಾನ, ಕಾರ್ಪೊರೇಟ್ ಶೈಲಿಯ ಡಿಜಿಟಲ್ ಕ್ಯಾಂಪೇನ್ ಹಾಗೂ ತಂತ್ರಜ್ಞಾನ ಆಧಾರಿತ ನಿರ್ವಹಣೆಯನ್ನೊಳಗೊಂಡ ಈ ಮಾದರಿಯು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿತ್ತು. ಆದರೆ, ನೆಲದಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಇದಕ್ಕೆ ಅತ್ಯಂತ ಸ್ಪಷ್ಟ ಉದಾಹರಣೆಯೆಂದರೆ, ಫಲ್ತಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಪರಮ ಆಪ್ತರಾಗಿದ್ದ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಅವರು ಭೀಕರ ಸೋಲು ಕಂಡು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಈ ಬೆಳವಣಿಗೆಯು ಅಭಿಷೇಕ್ ಅವರ ರಾಜಕೀಯ ರಣತಂತ್ರದ ಬೆನ್ನೆಲುಬಾಗಿದ್ದ ‘ಡೈಮಂಡ್ ಹಾರ್ಬರ್ ಮಾದರಿ’ಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿತು.

ಹಿರಿಯ ನಾಯಕರ ಬಂಡಾಯ

ಅಭಿಷೇಕ್ ಬ್ಯಾನರ್ಜಿ ಅವರ ತ್ವರಿತ ರಾಜಕೀಯ ಏಳಿಗೆ ಮತ್ತು ಅವರ ದರ್ಪದ ನಾಯಕತ್ವ ಶೈಲಿಯು ಟಿಎಂಸಿಯ ಹಿರಿಯ ನಾಯಕರಲ್ಲಿ ದೀರ್ಘಕಾಲದಿಂದ ತೀವ್ರ ಅಸಮಾಧಾನವನ್ನು ಉಂಟುಮಾಡಿತ್ತು. ಮಮತಾ ಬ್ಯಾನರ್ಜಿ ಅವರೊಂದಿಗೆ ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದ ಹಿರಿಯ ನಾಯಕರನ್ನು ಅಭಿಷೇಕ್ ನಡೆಸಿಕೊಂಡ ರೀತಿ ಮತ್ತು ಅವರಿಗೆ ಮಾಡಿದ ಮುಜುಗರಗಳು ಚುನಾವಣೆಯ ನಂತರ ಭಾರೀ ದಂಗೆಯಾಗಿ ಸ್ಫೋಟಗೊಂಡವು. ಪಕ್ಷದ ಒಟ್ಟು 28 ಲೋಕಸಭಾ ಸಂಸದರ ಪೈಕಿ 20ಕ್ಕೂ ಹೆಚ್ಚು ಸಂಸದರು ಮತ್ತು ಸುಮಾರು 60 ಕ್ಕೂ ಹೆಚ್ಚು ಶಾಸಕರು ಅಭಿಷೇಕ್ ವಿರುದ್ಧ ಬಹಿರಂಗವಾಗಿಯೇ ಬಂಡಾಯವೆದ್ದಿದ್ದರು. ಈ ಬಂಡಾಯಗಾರರು ಬಂಗಾಳ ಮೂಲದ ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡ್ಲಾ’ (NCPI) ಎಂಬ ಪಕ್ಷದೊಂದಿಗೆ ವಿಲೀನಗೊಳ್ಳುವುದಾಗಿ ಘೋಷಿಸಿ, ಸಂಸತ್ತಿನಲ್ಲಿ ಪ್ರತ್ಯೇಕ ಬಣವಾಗಿ ಗುರುತಿಸುವಂತೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಸಲ್ಲಿಸಿದರು. ಇದು ಟಿಎಂಸಿಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಒಡಕಾಗಿದೆ.

ಆದಾಗ್ಯೂ, ಬಂಡಾಯಕ್ಕೆ ಅಭಿಷೇಕ್ ಬ್ಯಾನರ್ಜಿ ವಿರುದ್ಧದ ಅಸಮಾಧಾನಕ್ಕಿಂತಲೂ ಬಂಗಾಳದಲ್ಲಿ ಬಿಜೆಪಿಯ ಗೂಂಡಾ ಆಳ್ವಿಕೆಯ ಆರಂಭ ಮತ್ತು ಬೆದರಿಕೆಗಳೇ ಮುಖ್ಯ ಕಾರಣವೆಂದು ಆರೋಪಿಸಲಾಗಿದೆ.

ಅಧಿಕಾರದ ಕೇಂದ್ರೀಕರಣ, ನೆಪೋಟಿಸಂ ಮತ್ತು ಭ್ರಷ್ಟಾಚಾರದ ಕರಾಳ ನೆರಳು

ಅಭಿಷೇಕ್ ಬ್ಯಾನರ್ಜಿ ವಿರುದ್ಧ ಕೇಳಿಬಂದ ಮತ್ತೊಂದು ಪ್ರಮುಖ ಆರೋಪವೆಂದರೆ ಅತಿಯಾದ ಆಡಳಿತ ಕೇಂದ್ರೀಕರಣ. ಪಕ್ಷದ ಯಾವುದೇ ಹಿರಿಯ ನಾಯಕರಿಗಾಗಲಿ ಅಥವಾ ಕಾರ್ಯಕರ್ತರಿಗಾಗಲಿ ಅಭಿಷೇಕ್ ಸುಲಭವಾಗಿ ಸಿಗುತ್ತಿರಲಿಲ್ಲ. ಅವರ ಸುತ್ತಲೂ ಇದ್ದ ಐ-ಪ್ಯಾಕ್ ಸಂಸ್ಥೆಯ ಪ್ರತಿನಿಧಿಗಳು ಮತ್ತು ಕೆಲವು ಕಾರ್ಪೊರೇಟ್ ಶೈಲಿಯ ಆಪ್ತರ ಸಣ್ಣ ಗುಂಪು ಮಾತ್ರ ಇಡೀ ಪಕ್ಷದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು. ಇದು ಪಕ್ಷದ ಆಂತರಿಕ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಹತ್ತಿಕ್ಕಿತು. ವಿರೋಧ ಪಕ್ಷಗಳು ಮತ್ತು ಸ್ವತಃ ಪಕ್ಷದ ಒಳಗಿನ ವಿಮರ್ಶಕರು ಅಭಿಷೇಕ್ ಅವರನ್ನು ಕೇವಲ ಮಮತಾ ಅವರ ನೆರಳಿನಲ್ಲಿ ಬೆಳೆದ ‘ನೆಪೋ ಕಿಡ್’ (ವಂಶಪಾರಂಪರ್ಯದ ಶಿಶು) ಎಂದು ಕರೆಯಲು ಪ್ರಾರಂಭಿಸಿದರು. ಇದು ಸಾರ್ವಜನಿಕ ವಲಯದಲ್ಲಿ ಅವರ ಇಮೇಜ್‌ಗೆ ಭಾರಿ ಹಾನಿ ಉಂಟುಮಾಡಿತು.

ಈ ಲೇಖನ ಓದಿದ್ದೀರಾ?: ಸಂಜಯ್ ಗಾಂಧಿ ಸಾವಿಗೀಡಾದಾಗ ಪಿ. ಲಂಕೇಶ್ ಬರೆದದ್ದು: ಮುಳ್ಳಿನ ತೋಟದ ಕನಸುಗಾರ

ಇದರೊಂದಿಗೆ, ಅಭಿಷೇಕ್ ಬ್ಯಾನರ್ಜಿ ದೀರ್ಘಕಾಲದಿಂದಲೂ ಕೇಂದ್ರ ತನಿಖಾ ಸಂಸ್ಥೆಗಳ ಕಣ್ಗಾವಲಿನಲ್ಲಿದ್ದರು. ಜಾರಿ ನಿರ್ದೇಶನಾಲಯ (ED) ಮತ್ತು ಸಿಬಿಐನಂತಹ ತನಿಖಾ ಸಂಸ್ಥೆಗಳು ಬಂಗಾಳದ ಕಲ್ಲಿದ್ದಲು ಕಳ್ಳಸಾಗಣೆ, ದನಗಳ ಕಳ್ಳಸಾಗಣೆ ಹಾಗೂ ಶಿಕ್ಷಕರ ನೇಮಕಾತಿ ಹಗರಣಗಳಿಗೆ ಸಂಬಂಧಿಸಿದಂತೆ ಅಭಿಷೇಕ್ ಅವರನ್ನು ಸರಣಿ ವಿಚಾರಣೆಗಳಿಗೆ ಒಳಪಡಿಸಿದ್ದವು. ಚುನಾವಣೆಯ ಬೆನ್ನಲ್ಲೇ, ಅಭಿಷೇಕ್ ಬ್ಯಾನರ್ಜಿ ಅವರ ಪೋಷಕರು ಮತ್ತು ಅವರ ಒಡೆತನದ ‘ಲೀಪ್ಸ್ ಆಂಡ್ ಬೌಂಡ್ಸ್’ ಸಂಸ್ಥೆಗೆ ಸೇರಿದ 17 ಕಟ್ಟಡಗಳು ಅಕ್ರಮವಾಗಿ ನಿರ್ಮಾಣವಾಗಿವೆ ಎಂದು ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ನೋಟಿಸ್ ಜಾರಿ ಮಾಡಿತು. ಅಷ್ಟೇ ಅಲ್ಲದೆ, ಅವರ ಪರಮ ಆಪ್ತ ಜಹಾಂಗೀರ್ ಖಾನ್ ವಿವಿಧ ಅಪರಾಧ ಆರೋಪಗಳ ಅಡಿಯಲ್ಲಿ ಬಂಧನಕ್ಕೊಳಗಾಗಿದ್ದು, ಅಭಿಷೇಕ್ ಸುತ್ತಲಿನ ಭ್ರಷ್ಟಾಚಾರದ ಜಾಲದ ಆರೋಪವನ್ನು ಸಾರ್ವಜನಿಕವಾಗಿ ಬಯಲು ಮಾಡಿತು.

ಬಿಜೆಪಿ ಕುತಂತ್ರ ಮತ್ತು ಸುವೇಂದು ಅಧಿಕಾರಿ ಪ್ರಭಾವ

ಟಿಎಂಸಿಯ ಈ ಆಂತರಿಕ ಬಿಕ್ಕಟ್ಟು ಮತ್ತು ಜನರ ಅಸಮಾಧಾನವನ್ನು ಬಿಜೆಪಿ ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಂಡಿತು. 2021ರ ಚುನಾವಣೆಯ ಸೋಲಿನ ನಂತರ ಬಿಜೆಪಿ ತನ್ನ ಸಾಂಪ್ರದಾಯಿಕ ಶೈಲಿಯನ್ನು ಬದಲಾಯಿಸಿ, ಟಿಎಂಸಿಯ ಸ್ಥಳೀಯ ನಾಯಕರ ಅಸಮಾಧಾನವನ್ನೇ ತನ್ನ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿತು. ಒಂದು ಕಾಲದಲ್ಲಿ ಮಮತಾರ ಬಲಗೈ ಭಂಟನಾಗಿದ್ದ ಹಿಂದಿನ ವಿಪಕ್ಷ ನಾಯಕ, ಹಾಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಅಭಿಷೇಕ್ ಅವರೊಂದಿಗಿನ ಹಳೆಯ ರಾಜಕೀಯ ವೈರತ್ವವನ್ನು ಮುಂದುವರಿಸಿದರು. ಚುನಾವಣಾ ಪ್ರಚಾರದ ಅವಧಿಯಲ್ಲಿ ಅಭಿಷೇಕ್ ಮಾಡಿದ್ದ ಕೆಲವು ಪ್ರಚೋದನಾಕಾರಿ ಭಾಷಣಗಳ ವಿರುದ್ಧ ಪೊಲೀಸ್ ಪ್ರಕರಣಗಳನ್ನು ದಾಖಲಿಸಿ, ಸಿಐಡಿ ತನಿಖೆಗೆ ಒಪ್ಪಿಸುವ ಮೂಲಕ ಅಭಿಷೇಕ್ ಅವರನ್ನು ಸಂಪೂರ್ಣವಾಗಿ ರಕ್ಷಣಾತ್ಮಕ ಆಟಕ್ಕೆ ತಳ್ಳುವಲ್ಲಿ ಬಿಜೆಪಿ ಯಶಸ್ವಿಯಾಯಿತು.

ಇದೆಲ್ಲವೂ ಚುನಾವಣಾ ಅಖಾಡ ಬದಿಯಲ್ಲಿ ನಡೆಯುತ್ತಿದ್ದ ಆಟಗಳಾಗಿದ್ದವು. ಇವುಗಳ ಅಭಿಷೇಕ್ ಬ್ಯಾನರ್ಜಿ ಅವರ ವರ್ಚಸ್ಸಿನ ಪತನಕ್ಕೆ ಕಾರಣವಾಗಿದ್ದರೂ, ಚುನಾವಣಾ ಸೋಲಿಗೆ ಇವಷ್ಟೇ ಕಾರಣವಾಗಿರಲಿಲ್ಲ. ಯಾಕೆಂದರೆ, ಇವುಗಳೆಲ್ಲದರ ನಡುವೆ, ಅಖಾಡ ಮುಖ್ಯವೇದಿಕೆಯಲ್ಲಿ ಬಿಜೆಪಿಯು ಬಂಗಾಳಿಗರ ಮತಗಳನ್ನು ಲೂಟಿ ಮಾಡುವ ಸಂಚನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿತು. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಕೈಗೊಂಬೆಯಾಗಿರುವ ‘ಚುನಾವಣಾ ಆಯೋಗ’ವನ್ನು ಬಳಸಿಕೊಂಡು ‘ಎಸ್‌ಐಆರ್‌’ಅನ್ನು ಬಂಗಾಳದಲ್ಲಿ ಹೇರಿತು. ‘ಲಾಜಿಕಲ್ ಡಿಸ್ಕ್ರಿಪ್ಶಿಯನ್ಸಿ’ ಎಂಬ ಹೊಸ ತಂತ್ರಜ್ಞಾನವನ್ನು ಸೇರಿಸಿ, 90 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಿತು. ಅವರಲ್ಲಿ, 27 ಲಕ್ಷ ಮಂದಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರೂ, ಅವರ ಬಳಿ ಅಗತ್ಯ ದಾಖಲೆಗಳಿದ್ದರೂ ಅವರು ಕಳೆದ ಚುನಾವಣೆಯಲ್ಲಿ ಮತಚಲಾಯಿಸಲು ಅವಕಾಶ ನೀಡಲಿಲ್ಲ.

ಬರೋಬ್ಬರಿ ಸುಮಾರು 1 ಕೋಟಿ ಮತದಾರರನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಟ್ಟು ನಡೆದ ಚುನಾವಣೆಯಲ್ಲಿ ಬಿಜೆಪಿ ಬೃಹತ್ ಗೆಲುವು ದಾಖಲಿಸಿತು. ಎಸ್‌ಐಆರ್‌ ವಿರುದ್ಧ ಮಮತಾ ಬ್ಯಾನರ್ಜಿ ಭಾರೀ ಪ್ರತಿಭಟನೆಗಳನ್ನು ನಡೆಸಿದರೂ, ಚುನಾವಣೆಯಲ್ಲಿ ಗೆಲ್ಲಲಾಗದೆ, ಅಧಿಕಾರ ಕಳೆದುಕೊಂಡರು. ರಾಜಕೀಯ ನೆಲದಲ್ಲಿ ತೀವ್ರ ಕುಸಿತ ಕಂಡರು.

ಪ್ರಸ್ತುತ ಸ್ಥಿತಿ ಮತ್ತು ಕಾಂಗ್ರೆಸ್ ಕಡೆಗೆ ಒಲವು

ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಟಿಎಂಸಿ ತನ್ನ ಅಸ್ತಿತ್ವದ ಭಾರಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಿತಬ್ರತ ಬ್ಯಾನರ್ಜಿ ನೇತೃತ್ವದ ದಂಗೆಕೋರ ಶಾಸಕರು ಮತ್ತು ಸಂಸದರ ಗುಂಪು ಮಮತಾ ಬ್ಯಾನರ್ಜಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸಿದೆ. ರಿತಬ್ರತ ಅವರನ್ನೇ ತಮ್ಮ ಹೊಸ ಅಧ್ಯಕ್ಷರನ್ನಾಗಿ ಘೋಷಿಸಿಕೊಂಡಿದೆ. ಅಲ್ಲದೆ, ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದಿಂದ ಅಮಾನತು ಮಾಡಿರುವುದಾಗಿ ಹಕ್ಕು ಮಂಡಿಸಿದೆ.

ಮುಳುಗುತ್ತಿರುವ ಹಡಗಿನಂತಾಗಿರುವ ಟಿಎಂಸಿಯನ್ನು ಉಳಿಸಿಕೊಳ್ಳಲು ಜೂನ್ 8 ರಂದು ದೆಹಲಿಯಲ್ಲಿ ನಡೆದ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಸಭೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರು ಸೋನಿಯಾ ಗಾಂಧಿ ಅವರನ್ನು ಮತ್ತು ಅಭಿಷೇಕ್ ಬ್ಯಾನರ್ಜಿ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಈ ಸಭೆಯು ಮುಂಬರುವ ದಿನಗಳಲ್ಲಿ ಟಿಎಂಸಿಯನ್ನು ಅದರ ಮೂಲ ಪಕ್ಷವಾದ ಕಾಂಗ್ರೆಸ್‌ನೊಂದಿಗೆ ಸಂಪೂರ್ಣವಾಗಿ ವಿಲೀನಗೊಳಿಸುವ ಮುನ್ಸೂಚನೆಯಾಗಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾವೇರಿ ವಿವಾದ: 20 ಟಿಎಂಸಿ ಕೊರತೆ ಎಂದ ತಮಿಳುನಾಡು, ತೀವ್ರ ಬರಗಾಲದ ಸಂಕಷ್ಟ ಬಿಚ್ಚಿಟ್ಟ ಕರ್ನಾಟಕ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ...

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...

‘ದೇವರೇ ಈ ದೇಶವನ್ನು ಕಾಪಾಡಬೇಕು’: ರೈಲು ಪ್ರಯಾಣದ ಗದ್ದಲಕ್ಕೆ ಬೇಸತ್ತ ತೇಜಸ್ವಿ ಸೂರ್ಯ ಪತ್ನಿ

ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಬಿಜೆಪಿ...