ಮತದಾನದ ಹಕ್ಕನ್ನು ತರಿದು ಹಾಕುವ ಹುನ್ನಾರದ ವಿರುದ್ಧದ ‘ಪ್ರತೀಕಾರ’ವೇ ಮತ ಪ್ರಮಾಣದ ಏರಿಕೆಗೆ ಕಾರಣ?

Date:

ಈ ‘ದಾಖಲೆ’ ಮತದಾನದ ಹಿಂದೆ ಕೇವಲ ಉತ್ಸಾಹ ಮಾತ್ರವಿಲ್ಲ, ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಸಾಮಾನ್ಯ ಮತದಾರ ನಡೆಸಿದ ಹೋರಾಟದ ಛಾಯೆ ಕಾಣಿಸುತ್ತಿದೆ. ಇದು ಕೇವಲ ಸೋಲು-ಗೆಲುವನ್ನು ನಿರ್ಧರಿಸುವುದಿಲ್ಲ, ಬದಲಾಗಿ ʼಪ್ರಭುತ್ವ ರಾಜಕಾರಣʼ ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಕ್ಕೆ ಮುಂದೆ ಹೇಗೆ ಜನರು ಪ್ರತಿಕ್ರಿಯಿಸಲಿದ್ದಾರೆ ಎನ್ನುವುದಕ್ಕೆ ನಾಂದಿ ಹಾಡಬಹುದು.

ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಚುನಾವಣಾ ಅಖಾಡದಲ್ಲಿ ಈಗ ಅಕ್ಷರಶಃ ಮತದಾನದ ಬಿರುಗಾಳಿ ಎದ್ದಿದೆ. ಕೇಂದ್ರ ಚುನಾವಣಾ ಆಯೋಗ ಎಸ್‌ಐಆರ್‌ ಮೂಲಕ ಪಶ್ಚಿಮ ಬಂಗಾಳದಲ್ಲಿ ಸುಮಾರು 91 ಲಕ್ಷ ಮತದಾರರ ಹೆಸರುಗಳನ್ನು, ತಮಿಳುನಾಡಿನಲ್ಲಿ  74 ಲಕ್ಷ ಮತದಾರರ ಹೆಸರನ್ನು ಮತಪಟ್ಟಿಯಿಂದ ಅಳಿಸಿ ಹಾಕಲಾಗಿತ್ತು. ಒಟ್ಟು ಮತದಾರರ ಪೈಕಿ ಪಶ್ಚಿಮ ಬಂಗಾಳದಲ್ಲಿ ಶೇ. 12ರಷ್ಟು, ತಮಿಳುನಾಡಿನ ಒಟ್ಟುಮತದಾರರ ಪೈಕಿ ಶೇ.11.5ರಷ್ಟು ಮತದಾರರ ಹೆಸರನ್ನು ತೆಗೆದು ಹಾಕಲಾಗಿದೆ. ಈಗ ಮತದಾನದಲ್ಲಿ ಶೇಕಡಾವಾರು ಹೆಚ್ಚಳವಾಗಿರುವುದನ್ನು ತನ್ನ ಮಹಾನ್‌ ಸಾಧನೆ ಎಂದು ಕೇಂದ್ರ ಚುನಾವಣಾ ಆಯೋಗ ಬಡಾಯಿ ಕೊಚ್ಚಿಕೊಳ್ಳುತ್ತಿದೆ.

SIR ಪ್ರಕ್ರಿಯೆ: ಮತದಾನದ ಹಕ್ಕಿನ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್?

- Advertisement -

ದೇಶದ ಎರಡು ಪ್ರಬಲ ರಾಜಕೀಯ ಶಕ್ತಿ ಕೇಂದ್ರಗಳಾದ ಪಶ್ಚಿಮ ಬಂಗಾಳ(ಮೊದಲ ಹಂತ) ಮತ್ತು ತಮಿಳುನಾಡಿನ ಚುನಾವಣೆಯಲ್ಲಿ ಈ ಬಾರಿ ಮತದಾನದ ಪ್ರಕ್ರಿಯೆ ಹೊಸ ಇತಿಹಾಸ ಬರೆದಿದೆ ಎಂದು ಚುನಾವಣಾ ಆಯೋಗ ಹೇಳಿಕೊಳ್ಳುತ್ತಿದೆ. ಆದರೆ, ಈ ‘ದಾಖಲೆ’ ಮತದಾನದ ಹಿಂದೆ ಕೇವಲ ಉತ್ಸಾಹ ಮಾತ್ರವಿಲ್ಲ, ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಸಾಮಾನ್ಯ ಮತದಾರ ನಡೆಸಿದ ಹೋರಾಟದ ಛಾಯೆ ಎದ್ದು ಕಾಣುತ್ತಿದೆ ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ.

ಕೇಂದ್ರ ಚುನಾವಣಾ ಆಯೋಗ ನಡೆಸಿದ ಎಸ್‌ಐಆರ್‌ ಪ್ರಕ್ರಿಯೆ ಈ ಬಾರಿಯ ಚುನಾವಣೆಗಳ ಕೇಂದ್ರಬಿಂದು. ‘ಅಕ್ರಮ ನುಸುಳುಕೋರರ’ ಪತ್ತೆಯ ಹೆಸರಿನಲ್ಲಿ ನಡೆದ ಈ ಪ್ರಕ್ರಿಯೆ ಅಸಲಿಗೆ ಸಾಮಾನ್ಯ ನಾಗರಿಕರನ್ನು ಮತದಾನದ ಹಕ್ಕಿನಿಂದ ವಂಚಿಸಿದೆ. ತಮ್ಮ ಹೆಸರು ಪಟ್ಟಿಯಲ್ಲಿ ಇರುತ್ತದೋ ಇಲ್ಲವೋ ಎಂಬ ಆತಂಕ, ಮೊದಲೇ ಜಾಗೃತಗೊಂಡಿದ್ದ ಮತದಾರರನ್ನು ಮತಗಟ್ಟೆಗೆ ಎಳೆತಂದಿದೆ. ಮತದಾನದ ಹಕ್ಕನ್ನು ತರಿದು ಹಾಕುವ ಹುನ್ನಾರದ ವಿರುದ್ಧದ ‘ಪ್ರತೀಕಾರ’ವೇ ಈ ಬಾರಿ ಎರಡು ರಾಜ್ಯಗಳಲ್ಲಿ ಮತದಾನದ ಪ್ರಮಾಣ ಹೆಚ್ಚಾಗಲು ಮುಖ್ಯ ಕಾರಣ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ದೇಶದ ನಾಗರಿಕರ ಮತದಾನದ ಹಕ್ಕಿನ ಮೇಲೆ ಅಕ್ಷರಶಃ ಕೇಂದ್ರ ಚುನಾವಣಾ ಆಯೋಗ ಎಸ್‌ಐಆರ್‌ ಪ್ರಕ್ರಿಯೆಯ ಮೂಲಕ ಬಿಜೆಪಿಗೆ ವರದಾನವಾಗುವ ಹಾಗೆ ಸರ್ಜಿಕಲ್‌ ಸ್ಟ್ರೈಕ್‌ ಮಾಡಿದೆ ಎಂಬಂತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಮತಪಟ್ಟಿಯಿಂದಲೇ ಬಿಜೆಪಿಯ ಹೊರತಾಗಿ ಬೇರೆ ಪಕ್ಷಗಳಿಗೆ ಹೋಗುವ ಮತಗಳನ್ನು ತೆಗೆದು ಹಾಕುವುದರ ಮೂಲಕ ಈ ವ್ಯವಸ್ಥಿತ ಹುನ್ನಾರ ನಡೆಸಿದೆ. ಮತ ಕಳ್ಳತನವನ್ನು ಅಧಿಕೃತವಾಗಿ, ಕಾನೂನು ಬದ್ಧ ಎನ್ನುವ ಹಾಗೆ ಮಾಡಿದೆ ಎಂಬ ವಾದಕ್ಕೆ ಹುರುಳಿಲ್ಲದ್ದಿಲ್ಲ.

ಇದನ್ನೂ ಓದಿ : ಕ್ಯಾಂಪಸ್ ರಾಜಕೀಯಕ್ಕೆ ಶಿಸ್ತಿನ ಕಡಿವಾಣ: ಲಿಂಗ್ಡೋ ಸಮಿತಿ ವರದಿಯ ಆಶಯ ಮತ್ತು ವಾಸ್ತವ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಒಂದು ತಾಂತ್ರಿಕ ಪ್ರಕ್ರಿಯೆಯಾಗಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪ್ರೇರಿತ ಕೇಂದ್ರ ಚುನಾವಣಾ ಆಯೋಗ ನಡೆಸಿದ ಎಸ್‌ಐಆರ್ ಕೇವಲ ಪರಿಷ್ಕರಣೆಯಾಗಿ ಉಳಿದಿಲ್ಲ, ಬದಲಾಗಿ ಇದು ವಿರೋಧ ಪಕ್ಷಗಳ ಭದ್ರಕೋಟೆಗಳಲ್ಲಿ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ‘ರಾಜಕೀಯ ಅಸ್ತ್ರ’ವಾಗಿ ಬಳಕೆಯಾಗಿರುವುದು ಸ್ಪಷ್ಟವಾಗಿ ಗೋಚರವಾಗಿದೆ. ಈ ‘ಮತ ಕಸಿಯುವ’ ತಂತ್ರದ ವಿರುದ್ಧ ನಡೆದ ಜಾಗೃತಿ ಅಭಿಯಾನವೇ ಮತದಾರರನ್ನು ಬೂತ್‌ಗಳಿಗೆ ಬರುವಂತೆ ಮಾಡಿದೆ ಎಂದರೆ ತಪ್ಪಿಲ್ಲ. ಇನ್ನು, ಈ ಬಾರಿಯ ಮತದಾನ ‘ಜನರ ಪ್ರಭುತ್ವ’ ಮತ್ತು ‘ವ್ಯವಸ್ಥೆಯ ತಂತ್ರ’ಗಳ ನಡುವಿನ ನೇರ ಹಣಾಹಣಿಯಂತೆ ಆಗಿದೆ. ಮತದಾರ ಜಾಗೃತನಾಗಿದ್ದಾನೆ ಎನ್ನುವುದಕ್ಕಿಂತ ಹೆಚ್ಚಾಗಿ, ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾನೆ ಎಂಬುದು ಕಟು ಸತ್ಯ.

SIR ಎಂಬ ರಾಜಕೀಯ ಸಂಚು

ಪಶ್ಚಿಮ ಬಂಗಾಳ ಮತ್ತು ತಮಿಳುನಾಡುಗಳಲ್ಲಿ ಕೋಟ್ಯಾಂತರ ಮತದಾರರನ್ನು ಮತಪಟ್ಟಿಯಿಂದ ಹೊರಹಾಕುವ ಮೂಲಕ ಬಿಜೆಪಿ ತನಗೆ ಪೂರಕವಲ್ಲದ ಮತ ಬ್ಯಾಂಕ್ ಅನ್ನು ಧ್ವಂಸ ಮಾಡಲು ಯತ್ನಿಸಿದೆ. ಪ್ರಮುಖವಾಗಿ ಬಡವರು, ಕಾರ್ಮಿಕ ವರ್ಗ ಮತ್ತು ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ದಾಖಲೆಗಳ ಕೊರತೆಯ ನೆಪದಲ್ಲಿ ನಾಗರಿಕರನ್ನು ಸತಾಯಿಸಿ, ಅಂತಿಮವಾಗಿ ಅವರ ಹೆಸರನ್ನೇ ಪಟ್ಟಿಯಿಂದ ಕೈಬಿಡಲಾಗಿದೆ. ಇದು ಕೇವಲ ತಾಂತ್ರಿಕ ದೋಷವಲ್ಲ, ಚುನಾವಣೆಗೂ ಮುನ್ನವೇ ಗೆಲುವನ್ನು ಖಾತರಿಪಡಿಸಿಕೊಳ್ಳಲು ಹೆಣೆದ ‘ರಾಜಕೀಯ ಸಂಚುʼ .

ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಎಂದರೆ ಅದು ಪ್ರಜಾಪ್ರಭುತ್ವದ ಆತ್ಮವನ್ನೇ ಹತ್ಯೆ ಮಾಡಿದಂತೆ.‌ ಎಸ್‌ಐಆರ್ ಹೆಸರಿನಲ್ಲಿ ನಡೆದಿರುವ ಈ ‘ಮತ ಕಡಿತ’ ಪ್ರಕ್ರಿಯೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಆಶಯಕ್ಕೆ ಕೊಡಲಿ ಪೆಟ್ಟು ನೀಡಿದೆ ಎನ್ನುವುದರಲ್ಲಿ ಸಂಶಯವಿಲ್ಲ.  ಬಿಜೆಪಿ ಅಧಿಕಾರಕ್ಕಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ತನ್ನ ಕೈಗೊಂಬೆಗಳನ್ನಾಗಿ ಬಳಸಿಕೊಂಡು, ಲಕ್ಷಾಂತರ ನಾಗರಿಕರನ್ನು ‘ಅದೃಶ್ಯ’ವಾಗಿಸಿದೆ. ಆದರೆ, ಈ ಎಸ್‌ಐಆರ್ ಪ್ರಕ್ರಿಯೆಯೇ ಈಗ ಬಿಜೆಪಿಗೆ ತಿರುಗುಬಾಣವಾಗುವ ಲಕ್ಷಣಗಳೆಂಬಂತೆ ಕಾಣುತ್ತಿವೆ. ಯಾವ ಸಮುದಾಯದವರನ್ನು ಮತಪಟ್ಟಿಯಿಂದ ಹೊರಗಿಡಲು ಯತ್ನಿಸಲಾಯಿತೋ, ಅಳಿದುಳಿದ ಆ ಸಮುದಾಯದ ಮತದಾರರು ಅಷ್ಟೇ ತೀವ್ರವಾಗಿ ಮತಗಟ್ಟೆಗೆ ಬಂದು ಬಿಜೆಪಿಯ ಸರ್ವಾಧಿಕಾರಿ ಧೋರಣೆಗೆ ಉತ್ತರ ನೀಡಿದಂತೆ ಮತ ಪ್ರಮಾಣ ಏರಿಕೆಯಾಗಿದೆ. ಆದರೇ, ಇಡೀ ಚುನಾವಣೆಯ ವ್ಯವಸ್ಥೆಯೇ ಸದ್ಯ, ಬಿಜೆಪಿಯ ಕೃಪಾಪೋಷಣೆಯಲ್ಲಿ ಇರುವುದರಿಂದ ಫಲಿತಾಂಶವನ್ನೂ ತಲೆಕೆಳಗಾಗಿಸಿದ್ದಲ್ಲಿ ಅಚ್ಚರಿ ಪಡಬೇಕಿಲ್ಲ.

ವಿಜಯ್ ಪ್ರವೇಶ ಮತ್ತು ಅಣ್ಣಾ ಡಿಎಂಕೆ ಮರುಹುಟ್ಟು

ತಮಿಳುನಾಡಿನ ಚಿತ್ರಣ ಕೊಂಚ ಭಿನ್ನವಾಗಿದೆ. ಇಲ್ಲಿಯೂ SIR ಪ್ರಕ್ರಿಯೆಯ ಬಗ್ಗೆ ಅಸಮಾಧಾನವಿದ್ದರೂ, ರಾಜಕೀಯ ಸಮೀಕರಣಗಳು ಕುತೂಹಲಕಾರಿಯಾಗಿವೆ. ನಟ ವಿಜಯ್ ಅವರ ಟಿವಿಕೆ ಪಕ್ಷದ ಪ್ರವೇಶ ತಮಿಳುನಾಡಿನ ರಾಜಕೀಯ ಸಮೀಕರಣದ ಲೆಕ್ಕಾಚಾರವನ್ನು ಗೊಂದಲದಲ್ಲಿರಿಸಿದೆ. ಯುವ ಮತದಾರರನ್ನು ಸೆಳೆಯುವಲ್ಲಿ ವಿಜಯ್ ಯಶಸ್ವಿಯಾಗಿದ್ದಾರೆ. ದ್ರಾವಿಡ ರಾಜಕಾರಣದ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ನಿಲ್ಲುವ ಅವರ ಪ್ರಯತ್ನ ಮತಗಟ್ಟೆಗಳಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ.

ಇನ್ನು, ಅಣ್ಣಾ ಡಿಎಂಕೆ ಪಕ್ಷಕ್ಕೆ ಈ ಬಾರಿಯ ಚುನಾವಣೆ ಅಸ್ತಿತ್ವದ ಪ್ರಶ್ನೆ. ದ್ರಾವಿಡ ಚಳವಳಿ ನಡೆದ ನೆಲದಲ್ಲಿ ಕೋಮುವಾದಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇರುವ ಕನಸಿನೊಂದಿಗೆ ನಡೆಸಿದ ಸಂಘಟಿತ ಹೋರಾಟವೂ ಕೊಂಚ ಮಟ್ಟಿಗೆ ಮತಗಳನ್ನು ಸೆಳೆದಿರುವಂತೆ ಕಾಣಿಸುತ್ತಿದೆ. ಆದರೆ, ಎಐಎಡಿಎಂಕೆ ಮೂಲಕ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿಗೆ, ನಟ ವಿಜಯ್ ಅವರ ರಾಜಕೀಯ ಪ್ರವೇಶ ಮತ್ತು ಯುವ ಮತದಾರರ ಜಾಗೃತ ಮನಸ್ಥಿತಿ ತಣ್ಣೀರು ಎರಚಿದೆ.

ಕೇಂದ್ರ ಬಿಜೆಪಿಯ ಕೃಪಾಪೋಷಣೆಯಲ್ಲೇ ನಡೆದ ಚುನಾವಣಾ ಆಯೋಗದ ಎಸ್‌ಐಆರ್‌ ಪ್ರಕ್ರಿಯೆಯ ಬಗ್ಗೆ ತಮಿಳುನಾಡಿನಲ್ಲೂ ಅಸಮಾಧಾನ ಭುಗಿಲೆದ್ದಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ತಮಿಳುನಾಡಿನ ಪ್ರಾದೇಶಿಕ ಅಸ್ಮಿತೆ ಮತ್ತು ದ್ರಾವಿಡ ರಾಜಕಾರಣ ಈ ಸಂಚನ್ನು ಮೆಟ್ಟಿ ನಿಂತ ಲಕ್ಷಣವನ್ನು ಮತ ಪ್ರಮಾಣದಲ್ಲಿ ಕಂಡ ಏರಿಕೆ ತೋರಿಸುತ್ತಿದೆ ಎನ್ನುದನ್ನು ತಳ್ಳಿ ಹಾಕುವಂತಹ ರಾಜಕೀಯ ವಾತಾವರಣವನ್ನು ಎಸ್‌ಐಆರ್‌ ನಿರ್ಮಿಸಿಕೊಟ್ಟಿಲ್ಲ ಎನ್ನುವುದು ಕೂಡ ಇಲ್ಲಿ ಮುಖ್ಯಾಂಶ.

ಫಲಿತಾಂಶದತ್ತ ಎಲ್ಲರ ಕಣ್ಣು

ಈಗ ಎಲ್ಲರ ಗಮನ ಏಪ್ರಿಲ್ 29ರಂದು ನಡೆಯಲಿರುವ ಬಂಗಾಳದ ಎರಡನೇ ಹಂತದ ಮತದಾನದ ಮೇಲೆ ನೆಟ್ಟಿದೆ. ಕೋಲ್ಕತ್ತಾ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಈ ಎಸ್‌ಐಆರ್ ಮೇಲಿನ ಅಸಮಾಧಾನ ಹೆಚ್ಚಿರುವುದರಿಂದ ಅಲ್ಲಿಯೂ ದಾಖಲೆ ಮತದಾನ ನಿರೀಕ್ಷಿಸಬಹುದಾಗಿದೆ.  ಬಂಗಾಳದ ಎರಡನೇ ಹಂತದ ಮತದಾನ ಕೇವಲ ಅಧಿಕಾರಕ್ಕಾಗಿ ನಡೆಯುತ್ತಿರುವ ಹೋರಾಟವಲ್ಲ, ಇದು ‘ಮತದ ಹಕ್ಕಿಗಾಗಿ ನಡೆಯುತ್ತಿರುವ ಸಂಗ್ರಾಮʼ.

ಒಟ್ಟಿನಲ್ಲಿ, ಮೇ 4ರಂದು ಹೊರಬರುವ ಫಲಿತಾಂಶ ಕೇವಲ ಅಂಕಿ-ಅಂಶಗಳನ್ನು ನೀಡುವುದಿಲ್ಲ, ಬದಲಾಗಿ ಮತದಾರರನ್ನು ವಂಚಿಸಿದ ಬಿಜೆಪಿಯ ತಂತ್ರಗಾರಿಕೆಗೆ ಜನರು ನೀಡುವ ಅಂತಿಮ ತೀರ್ಪಾಗಬಹುದು ಮತ್ತು ಕೇವಲ ಸೋಲು-ಗೆಲುವನ್ನು ನಿರ್ಧರಿಸುವುದಿಲ್ಲ, ಬದಲಾಗಿ ʼಪ್ರಭುತ್ವ ರಾಜಕಾರಣʼ ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಕ್ಕೆ ಮುಂದೆ ಹೇಗೆ ಜನರು ಪ್ರತಿಕ್ರಿಯಿಸಲಿದ್ದಾರೆ ಎನ್ನುವುದಕ್ಕೆ ನಾಂದಿ ಹಾಡಬಹುದು ಎನ್ನುವುದರಲ್ಲಿ ಸಂಶಯವಿಲ್ಲ.

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ | ನ.7ಕ್ಕೆ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ...

ಕೇಂದ್ರದ ಆಡಳಿತ ಕರಡು ತಿರಸ್ಕರಿಸಿದ ಲಡಾಖ್ ನಾಯಕರು: ‘ಏಕಪಕ್ಷೀಯ’ ನಿರ್ಧಾರ ಖಂಡಿಸಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಲಡಾಖ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಿದ್ಧಪಡಿಸಿರುವ ನೂತನ ಆಡಳಿತಾತ್ಮಕ ಕರಡನ್ನು ಪ್ರಮುಖ...

ಬೀದರ್‌ | 125 ಎಕರೆಯಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ : ಸಚಿವ ಈಶ್ವರ ಖಂಡ್ರೆ

ಬೀದರ್ ನಗರದ ಸಮೀಪ 125 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ...