ನೀರಿಲ್ಲದೆ ಒಣಗುತ್ತಿರುವ ಕಲ್ಯಾಣ ಕರ್ನಾಟಕದ ‘ಮುದಗಲ್’

Date:

ಒಂದೆಡೆ ಕಲ್ಯಾಣ ಕರ್ನಾಟಕದ ಸುಡುವ ಬೇಸಿಗೆಯ ಬಿಸಿಲು, ಮತ್ತೊಂದೆಡೆ ಗಂಟಲು ಒಣಗಿಸುವ ನೀರಿನ ಕೊರತೆ. ಈ ಎರಡರ ಮಧ್ಯೆ ಮುದಗಲ್ ಪಟ್ಟಣದ ಜನರ ಬದುಕು ಹೈರಾಣಾಗಿ ಹೋಗಿದೆ. ಸ್ವತಂತ್ರ ಭಾರತದಲ್ಲಿ, 21ನೇ ಶತಮಾನದಲ್ಲೂ ಕೇವಲ ಕುಡಿಯುವ ನೀರಿಗಾಗಿ ಜನಸಾಮಾನ್ಯರು ಬೀದಿಗಿಳಿದು ಹೋರಾಟ ಮಾಡಬೇಕಾಗಿರುವುದು ನಮ್ಮ ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳ ವೈಫಲ್ಯಕ್ಕೆ ಹಿಡಿದ ಕನ್ನಡಿ.

- Advertisement -

ಒಂದೆಡೆ ಮನೆಯ ಜಗಲಿಯ ಮೇಲೆ ನೀರಿಲ್ಲದೆ ಒಣಗುತ್ತಿರುವ ಖಾಲಿ ಕೊಡಗಳ ಸಾಲು. ಮತ್ತೊಂದೆಡೆ ಅಡುಗೆ ಮನೆಯ ಸಣ್ಣ ಲೋಟದಿಂದ ಹಿಡಿದು ಕಣ್ಣಿಗೆ ಕಾಣುವ ಪ್ರತಿಯೊಂದು ಪಾತ್ರೆಯಲ್ಲೂ ತುಂಬಿಸಿಟ್ಟ ನೀರು. ಧಾನ್ಯ ಇಡಬೇಕಾಗಿದ್ದ ಬಾಕ್ಸ್‌ಗಳೂ ಸಹ ಈಗ ನೀರಿನ ಕೊಡಗಳಾಗಿ ಬದಲಾಗಿದ್ದು, ಅವುಗಳನ್ನು ಮಂಚದ ಕೆಳಗೆ, ಸಜ್ಜೆಯ ಮೇಲೆ ಮುಚ್ಚಿಡಲಾಗಿದೆ. ಅಲ್ಲಿನ ಜನರಿಗೆ ನೀರು ಬರೀ ನೀರಲ್ಲ, ಅಕ್ಷರಶಃ ಬಂಗಾರ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ

ಹಳ್ಳಿಗಳ ಮಣ್ಣಿನ ಸೊಗಡು, ಮಹಿಳೆಯರ ಬದುಕಿನ ಅನುಭವ, ಕುಟುಂಬದ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಸೋಬಾನೆ ಪದಗಳ ಗಾಯನಕ್ಕೆ ದಶಕಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಚಾಮರಾಜನಗರದ ಹಿರಿಯ ಜಾನಪದ...

ನವೆಂಬರ್ 1 | ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ; ಭಾರತದ...

ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ ಎಂಟು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಚನೆ, ಮರುರಚನೆ ಹಾಗೂ ವಿಮೋಚನೆಯ ಇತಿಹಾಸವೂ ಇದೆ. ಭಾಷಾವಾರು ರಾಜ್ಯಗಳಿಗಾಗಿ ನಡೆದ...

ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು

ವಿಜ್ಞಾನ ಓದು ಎಂದರೇನು? ಕನ್ನಡಕ್ಕಾಗಿ ಅಂತಹದೊಂದು ಬೇಕಾ? ಇಂತಹದ್ದೊಂದರ ಚರ್ಚೆ ಇಂದಿನ ಅಗತ್ಯಗಳಲ್ಲೊಂದು. ಏಕೆಂದರೆ ನಮ್ಮಲ್ಲಿ ಓದು ಎನ್ನುವುದು ಬಹುಪಾಲು ಸಾಹಿತ್ಯಕವಾದ ಓದೇ ಆಗಿದೆ. ಸಾಹಿತ್ಯದಲ್ಲಿ ಸಹಜವಾಗಿ ಕಾಣಬರುವ ಒಂದು ಬಗೆಯ ಎಲ್ಲವೂ...

ಖಾಲಿ ಕೊಡಗಳು ಜೀವಜಲವನ್ನ ತುಂಬಿಸಿಕೊಳ್ಳಲು ಕಾಯುತ್ತಿದ್ದರೆ, ಮನೆಯ ಒಳಗಿರುವ ಅಲ್ಪಸ್ವಲ್ಪ ನೀರೂ ಮುಗಿದು ಹೋದರೆ ಮುಂದೇನು ಎನ್ನುವ ಆತಂಕ ಮನೆಯ ಹಿರಿಯರದ್ದು. ನೀರಿನ ಹಾಹಾಕಾರವೇ ಮೈವೆದ್ದ ಈ ದೃಶ್ಯಗಳು ಕಂಡುಬಂದಿದ್ದು ಕಲ್ಯಾಣ ಕರ್ನಾಟಕದ ಹೆಮ್ಮೆಯ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ.

WATER CAN 1
ಮನೆಯ ಬಾಗಿಲಲ್ಲಿ ಖಾಲಿ ಕೊಡಪಾನಗಳ ಸಾಲು

‘ಕುಡಿಯುವ ನೀರಿಗೂ ಈ ಪಾಟಿ ಪರಿತಪಿಸುವುದ ನೋಡುತ್ತಿದ್ದರೆ, ಅದು ಬರೀ ಹೆಸರಿಗಷ್ಟೇ ಕಲ್ಯಾಣ ಕರ್ನಾಟಕ ಎನಿಸುತ್ತದೆ. ನೀರಿನ ಜೊತೆಗೆ ಅಗತ್ಯ ಮೂಲಸೌಕರ್ಯಗಳು ಸರಿಯಾಗಿ ಸಿಗದೆ ಇಲ್ಲಿನ ಜನಸಾಮಾನ್ಯರು ಪ್ರತಿದಿನ ನರಕಯಾತನೆ ಅನುಭವಿಸುವಂತಾಗಿದೆ. ಕನಿಷ್ಠ ಪಕ್ಷ ಕುಡಿಯಲು ನೀರು ಸಿಕ್ಕರೆ ಸಾಕು ಜೀವನ ಸಾಗುತ್ತದೆ. ಆದರೆ, ಅದೇ ನೀರು 15 ದಿನಕ್ಕೊಮ್ಮೆ ಮಾತ್ರ ಸಿಗುವ ಭೀಕರ ಪರಿಸ್ಥಿತಿ ಎದುರಾದರೆ ಜನರ ಬದುಕು ಎಷ್ಟು ದುಸ್ತರವಾಗಬೇಡ?

ನಮ್ಮ ಈ ದಿನ.ಕಾಮ್ ತಂಡ ಮುದಗಲ್ ಪಟ್ಟಣಕ್ಕೆ ಭೇಟಿ ನೀಡಿದಾಗ, ಅಲ್ಲಿನ ವಾಸ್ತವ ಸ್ಥಿತಿ ಕಣ್ಣೀರು ತರಿಸುವಂತಿತ್ತು. ಮನೆಗಳಲ್ಲಿರುವ ಸಣ್ಣ ಲೋಟದಿಂದ ಹಿಡಿದು ದೊಡ್ಡ ಡ್ರಮ್‌ಗಳವರೆಗೆ ಪ್ರತಿಯೊಂದರಲ್ಲೂ ನೀರನ್ನು ಜೀವದಂತೆ ಕಾಯ್ದಿರಿಸಲಾಗಿದೆ. ಹನಿ ಹನಿಯನ್ನೂ ಅತ್ಯಂತ ಜಾಗರೂಕತೆಯಿಂದ ಬಳಸಬೇಕಾದ ಅನಿವಾರ್ಯತೆ ಅಲ್ಲಿನದು. ಇಂದು ನೀರು ಹಿಡಿದರೆ, ಅದನ್ನು ಮುಂದಿನ 15 ದಿನಗಳವರೆಗೆ ಅತ್ಯಂತ ಮಿತವಾಗಿ ಬಳಸಲೇಬೇಕಾದ ದೊಡ್ಡ ಟಾಸ್ಕ್‌ ಅವರದ್ದು.

ಇದನ್ನೂ ಓದಿ : ಸರ್ಕಾರಗಳ ದಿವ್ಯ ನಿರ್ಲಕ್ಷ್ಯ: ಪಾಳುಬಿದ್ದ ಐತಿಹಾಸಿಕ ʼಮುದಗಲ್ ಕೋಟೆʼ!

“10 ದಿನಗಳು ಕಳೆಯುತ್ತಿದ್ದಂತೆ ಸಂಗ್ರಹಿಸಿಟ್ಟ ನೀರಿನಲ್ಲಿ ಹುಳುಗಳು ಹುಟ್ಟಲು ಆರಂಭಿಸುತ್ತವೆ. ಆದರೆ ಬದುಕಬೇಕಲ್ಲವೇ? ಬೇರೆ ದಾರಿಯಿಲ್ಲದೆ, ಅನಿವಾರ್ಯವಾಗಿ ಅದೇ ನೀರನ್ನು ಬಟ್ಟೆಯಲ್ಲಿ ಸೋಸಿಕೊಂಡು ಕುಡಿಯುವ ಪರಿಸ್ಥಿತಿ ನಮ್ಮದಾಗಿದೆ” ಎಂದು ಸ್ಥಳೀಯರು ತಮ್ಮ ನೋವು ತೋಡಿಕೊಳ್ಳುತ್ತಾರೆ.

WATER 5
ಸಣ್ಣ ಸಣ್ಣ ಪಾತ್ರೆಯಲ್ಲಿಯೂ ನೀರು

ಪುರಸಭೆ ವ್ಯಾಪ್ತಿಯಲ್ಲಿರುವ ಮುದಗಲ್ ಪಟ್ಟಣದಲ್ಲಿಯೇ ನೀರಿಗಾಗಿ ಇಷ್ಟೊಂದು ಹಾಹಾಕಾರವಿದ್ದರೆ, ಇನ್ನು ರಾಯಚೂರು ಭಾಗದ ಹಳ್ಳಿಗಳ ಪರಿಸ್ಥಿತಿ ದೇವರಿಗೇ ಪ್ರೀತಿ!

ಮನುಷ್ಯನಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಯಾವುದೇ ಸರ್ಕಾರದ ಆದ್ಯ ಕರ್ತವ್ಯ. ಆದರೆ, ಕಳೆದ 10-15 ವರ್ಷಗಳಿಂದ ರಾಯಚೂರು ಭಾಗದ ಜನರು ಇದೇ ನೀರಿನ ಸಮಸ್ಯೆಯನ್ನು ಬೆನ್ನಿಗೆ ಕಟ್ಟಿಕೊಂಡು ಬದುಕುತ್ತಿದ್ದಾರೆ. ವರ್ಷಗಳು ಉರುಳಿದವು, ಸರ್ಕಾರಗಳು ಬಂದವು, ಬೇರೆ ಬೇರೆ ರಾಜಕೀಯ ಪಕ್ಷದವರು ಅಧಿಕಾರದ ಚುಕ್ಕಾಣಿ ಹಿಡಿದರು. ಚುನಾವಣೆ ಬಂದಾಗ ಭಾರೀ ಭರವಸೆಗಳ ಮಹಾಪೂರವನ್ನೇ ಹರಿಸಿದರು. ಆದರೆ, ರಾಯಚೂರಿನ ಜನರ ದಾಹ ನೀಗಿಸುವ ಶಾಶ್ವತ ಪರಿಹಾರ ಮಾತ್ರ ಇಂದಿಗೂ ಸಿಕ್ಕೇ ಇಲ್ಲ.

“ನೀರಿನ ಭೀಕರ ಸಮಸ್ಯೆಯ ವಿರುದ್ಧ ನಾವೆಲ್ಲರೂ ಸೇರಿ ಪುರಸಭೆಯ ಎದುರು ಎಷ್ಟೋ ಬಾರಿ ಪ್ರತಿಭಟನೆ ಮಾಡಿದ್ದೇವೆ. ಆದರೂ ಆಡಳಿತ ವ್ಯವಸ್ಥೆಗೆ ಮರುಕ ಬಂದಿಲ್ಲ. ಇಂದಿಗೂ 15 ದಿನಕ್ಕೊಮ್ಮೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಒಮ್ಮೆ ನೀರು ಬಂದರೆ, ಮುಂದಿನ ಹದಿನೈದು ದಿನಗಳ ಕಾಲ ನಮ್ಮ ಇಡೀ ಸಂಸಾರ ಅದೇ ನೀರನ್ನು ನಂಬಿ ಬದುಕಬೇಕು” ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಸ್ಥಳೀಯ ನಿವಾಸಿ ವೆಂಕಟೇಶ ಹಿರೇಮನಿ.

ಈ ನೀರಿನ ಸಮಸ್ಯೆಯಿಂದಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಹೆಚ್ಚು ತೊಂದರೆ ಅನುಭವಿಸುತ್ತಿರುವವರು ಅಲ್ಲಿನ ಮನೆಯ ಹೆಣ್ಣುಮಕ್ಕಳು. ಮುಂಜಾನೆ ಎದ್ದು ಮನೆಯ ದಿನನಿತ್ಯದ ಕೆಲಸ ಮಾಡಬೇಕು, ಮಕ್ಕಳ ಆರೈಕೆ ಮಾಡಬೇಕು, ಸಂಸಾರ ಸಾಗಿಸಲು ಗಂಡನ ಹೆಗಲಿಗೆ ಹೆಗಲು ಕೊಟ್ಟು ಹೊಲದಲ್ಲಿ ದುಡಿಯಬೇಕು. ಇಷ್ಟೆಲ್ಲಾ ಕಷ್ಟಗಳ ಮಧ್ಯೆ ಕುಡಿಯುವ ನೀರನ್ನು ಹೊಂದಿಸುವುದೇ ಅವರಿಗೆ ದೊಡ್ಡ ಸವಾಲಾಗಿದೆ.

ವಿಚಿತ್ರ ಸಂಗತಿಯೆಂದರೆ, ಕೊಡುವ ನೀರನ್ನೂ ಸರಿಯಾದ ಸಮಯಕ್ಕೆ ಕೊಡುವುದಿಲ್ಲ. ನೀರು ಬಿಡುವುದು ಮಧ್ಯರಾತ್ರಿಯಲ್ಲಿ! ಆಗಿನ್ನು ನಿದ್ರೆಗೆ ಜಾರಿ ವಿಶ್ರಾಂತಿ ಪಡೆದುಕೊಳ್ಳುವ ಅವಧಿಯಲ್ಲೂ ಹೆಣ್ಣುಮಕ್ಕಳು ನೀರಿನ ಪೈಪನ್ನ ಹತ್ತಿರವಿಟ್ಟುಕೊಂಡು, ಜಾಗರಣೆ ಮಾಡುತ್ತಾ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ.

“15 ದಿನಕ್ಕೊಮ್ಮೆ ಬರುವ ನೀರು ನಮ್ಮ ದೈನಂದಿನ ಅಗತ್ಯಕ್ಕೆ ಸಾಲುವುದೇ ಇಲ್ಲ. ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ನಮಗೆ ಸಿಕ್ಕಿದ್ದು ಬರೀ ಆಶ್ವಾಸನೆಗಳೇ” ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.

ಕುಡಿಯಲು, ಅಡುಗೆಗೆ ಹಾಗೂ ಶೌಚ ಕಾರ್ಯಗಳಿಗೆ ನೀರನ್ನು ಅತ್ಯಂತ ಜಿಪುಣತನದಿಂದ ಬಳಸಬೇಕಾದ ಸ್ಥಿತಿ ಇರುವುದರಿಂದ, ಜನರ ದಿನನಿತ್ಯದ ನೆಮ್ಮದಿಯೇ ಹಾಳಾಗಿದೆ.

ಒಂದೆಡೆ ಕಲ್ಯಾಣ ಕರ್ನಾಟಕದ ಸುಡುವ ಬೇಸಿಗೆಯ ಬಿಸಿಲು, ಮತ್ತೊಂದೆಡೆ ಗಂಟಲು ಒಣಗಿಸುವ ನೀರಿನ ಕೊರತೆ. ಈ ಎರಡರ ಮಧ್ಯೆ ಮುದಗಲ್ ಪಟ್ಟಣದ ಜನರ ಬದುಕು ಹೈರಾಣಾಗಿ ಹೋಗಿದೆ. ಸ್ವತಂತ್ರ ಭಾರತದಲ್ಲಿ, 21ನೇ ಶತಮಾನದಲ್ಲೂ ಕೇವಲ ಕುಡಿಯುವ ನೀರಿಗಾಗಿ ಜನಸಾಮಾನ್ಯರು ಬೀದಿಗಿಳಿದು ಹೋರಾಟ ಮಾಡಬೇಕಾಗಿರುವುದು ನಮ್ಮ ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳ ವೈಫಲ್ಯಕ್ಕೆ ಹಿಡಿದ ಕನ್ನಡಿ.

“ನಮಗೆ 15 ದಿನಕ್ಕೊಮ್ಮೆ ಅಲ್ಲ, ಕನಿಷ್ಠ 4-5 ದಿನಗಳಿಗೊಮ್ಮೆಯಾದರೂ ನೀರನ್ನು ಬಿಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ನಾವ್ಯಾರೂ ಮತ ಚಲಾಯಿಸುವುದಿಲ್ಲ, ಸಂಪೂರ್ಣವಾಗಿ ಮತದಾನವನ್ನು ಬಹಿಷ್ಕರಿಸುತ್ತೇವೆ!” ಎಂದು ಮುದಗಲ್ ಪಟ್ಟಣದ ಜನರು ಆಡಳಿತ ವ್ಯವಸ್ಥೆಗೆ ಕಡಾಖಂಡಿತವಾಗಿ ಎಚ್ಚರಿಕೆ ನೀಡಿದ್ದಾರೆ. ಆ ಎಚ್ಚರಿಗೆ ಯಾರ ಮೇಲೆ ಎಷ್ಟು ಪ್ರಮಾಣದ ಪರಿಣಾಮ ಬೀರುವುದೋ ಬಲ್ಲವರಾರು?

MUDAGAL
ಮುದಗಲ್‌ ಪುರಸಭೆ ಕಾರ್ಯಾಲಯದ ದ್ವಾರ

ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ಮುಂದೆಯಾದರೂ ಎಚ್ಚೆತ್ತುಕೊಂಡು, ಮುದಗಲ್ ಸೇರಿದಂತೆ ಕುಡಿಯುವ ನೀರಿನ ಕೊರತೆ ಇರುವ ಹಳ್ಳಿ, ಪಟ್ಟಣಗಳ ಜನರ ದಾಹವನ್ನು ತೀರಿಸಲು ತಕ್ಷಣವೇ ಶಾಶ್ವತ ಕ್ರಮ ಕೈಗೊಳ್ಳಬೇಕಿದೆ. ಜನರ ತಾಳ್ಮೆ ಮೀರುವ ಮುನ್ನ ಆಡಳಿತ ವ್ಯವಸ್ಥೆ ಸೂಕ್ತವಾಗಿ ಸ್ಪಂದಿಸಲಿ ಎಂಬುದೇ ‘ಈದಿನ.ಕಾಮ್’ ಆಶಯ.

Manoj
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಪತ್ತೆಯಾಗಿದ್ದ ದೊಡ್ಡಬಳ್ಳಾಪುರದ ದಲಿತ ಮುಖಂಡ ಸಿ. ಗುರುರಾಜಪ್ಪ ಧರ್ಮಸ್ಥಳದಲ್ಲಿ ಶವವಾಗಿ ಪತ್ತೆ

​ದೊಡ್ಡಬಳ್ಳಾಪುರದ ಕಚೇರಿಪಾಳ್ಯದ ನಿವಾಸಿ, ದಲಿತ ಹಾಗೂ ಪ್ರಗತಿಪರ ಹೋರಾಟಗಾರ ಸಿ. ಗುರುರಾಜಪ್ಪ...

ರೈತ ಹೋರಾಟದಿಂದ ವಿಧಾನಸಭಾಧ್ಯಕ್ಷ ಸ್ಥಾನದವರೆಗೆ ಕಾಗೋಡು ತಿಮ್ಮಪ್ಪ ಹಾದಿ…

ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಹೋರಾಟ,...

ಈ ದಿನ ಕವಿತೆ | ಎರಡು ದೀಪಗಳು- ಅಲಿ ಸರ್ದಾರ್ ಜಾಫ್ರಿ

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಉರ್ದು ಕವಿ ಅಲಿ ಸರ್ದಾರ್ ಜಾಫ್ರಿಯವರ...

ಕರಸ್ಥಲದ ಲಿಂಗ ಮತ್ತು ಬೆರಳಿನ ಮಸಿ: ಸ್ಥಾವರ ಪ್ರಭುತ್ವದ ನಡುವೆ ಕಾಯಕ ಜೀವಿಯ ಘನತೆ

ಭಾರತೀಯ ಸಮಾಜದ ಹಳ್ಳಿಯ ಭೌತಿಕ ವಿನ್ಯಾಸವನ್ನು ಗಮನಿಸಿದರೆ ಅದೊಂದು ಅಪ್ಪಟ ಘನೀಕೃತ...