ಅಮಿತ್ ಶಾರನ್ನು ನಿವಾಳಿಸಿ ಎಸೆದ ಮಹುವಾ!

Date:

ಪಶ್ಚಿಮ ಬಂಗಾಳದ ರಾಜಕಾರಣವೆಂದರೆ ಅದು ಬರೀ ಮತಗಳಾಟವಲ್ಲ, ಅದು ಅಸ್ಮಿತೆ ಮತ್ತು ಸಿದ್ಧಾಂತಗಳ ನಡುವಿನ ಸಮರ. ಇತ್ತೀಚೆಗೆ ಕೋಲ್ಕತ್ತಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ತೋರಿದ ಆಕ್ರೋಶ ಕೇವಲ ರಾಜಕೀಯ ಭಾಷಣವಾಗಿರಲಿಲ್ಲ ಬದಲಿಗೆ ಅದು ದೆಹಲಿಯ ಅಧಿಕಾರಶಾಹಿಗೆ ಬೀಸಿದ ಚಾಟಿಯಾಗಿತ್ತು. ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳು ಸಾಮಾನ್ಯ. ಆದರೆ ಕೆಲವೊಮ್ಮೆ ಎತ್ತುವ ಪ್ರಶ್ನೆಗಳು  ಕೇವಲ ರಾಜಕೀಯಕ್ಕಷ್ಟೇ ಸೀಮಿತವಾಗಿರಲ್ಲ,  ಆ ಪ್ರಶ್ನೆಗಳು ಜನರ ಮುಂದೆ ಸತ್ಯವನ್ನು ತೆರೆದಿಡುತ್ತವೆ. ಇಂತಹ ಕೆಲವು ಪ್ರಶ್ನೆಗಳನ್ನು ಮಹುವಾ ಮೊಯಿತ್ರಾ ಅಮಿತ್ ಶಾಗೆ ಕೇಳಿರುವುದು. ಮಹುವಾ ಮೊಯಿತ್ರಾ ಅವರು ಈ ಪ್ರೆಸ್‌ಮೀಟ್‌ನಲ್ಲಿ ಅಮಿತ್ ಶಾ ಅವರ ಅಸಾಮರ್ಥ್ಯವನ್ನು ಬೆತ್ತಲೆ ಮಾಡುವಂತಹ ಎರಡು ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರ ನೀಡಲು ಇಡೀ ಬಿಜೆಪಿ ಸೈನ್ಯವೇ ತಡಬಡಾಯಿಸುತ್ತಿದೆ. 

- Advertisement -

ಮಮತಾ ಬ್ಯಾನರ್ಜಿ ಅವರ ಕುರಿತು ಅಮಿತ್ ಶಾ ನೀಡಿದ ಹೇಳಿಕೆಗಳನ್ನು “ಅವಮಾನಕರ” ಎಂದು ಕರೆದ ಮಹುವಾ, ಬಿಜೆಪಿಯ ಅಹಂಕಾರಕ್ಕೆ ಮೇ 4 ರಂದು ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಗುಡುಗಿದ್ದಾರೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

https://www.facebook.com/reel/1345673600930002?sfnsn=wiwspwa&mibextid=6AJuK9

ಅಮಿತ್ ಶಾ ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದಾಗಲೆಲ್ಲಾ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸುವುದು ಹೊಸದೇನಲ್ಲ. ಆದರೆ ಮಹುವಾ ಮೊಯಿತ್ರಾ ಅವರ ವಾದವೇನೆಂದರೆ, ಒಬ್ಬ ಗೃಹ ಸಚಿವರಾಗಿ ಶಾ ಅವರು ರಾಜ್ಯದ ಅಭಿವೃದ್ಧಿ ಅಥವಾ ಭದ್ರತೆಯ ಬಗ್ಗೆ ಮಾತನಾಡಬೇಕೇ ಹೊರತು, ಒಬ್ಬ ಮಹಿಳಾ ಮುಖ್ಯಮಂತ್ರಿಯ ವ್ಯಕ್ತಿತ್ವಕ್ಕೆ ಕುಂದು ತರುವಂತಹ ಮಾತುಗಳನ್ನಲ್ಲ. “ಬಂಗಾಳದ ಹೆಣ್ಣುಮಕ್ಕಳನ್ನು ಗೌರವಿಸುವುದು ಬಿಜೆಪಿಗೆ ಗೊತ್ತಿಲ್ಲ, ಅದಕ್ಕಾಗಿಯೇ ಅವರು ಇಂತಹ ಕೀಳುಮಟ್ಟದ ಟೀಕೆಗಳಿಗೆ ಇಳಿಯುತ್ತಾರೆ” ಎಂಬುದು ಮೊಯಿತ್ರಾ ಕಟುವಾಗೇ ಉತ್ತರಿಸಿದ್ದಾರೆ. 

ಮೊದಲನೆಯದು ಕೇಂದ್ರದ ಅನುದಾನದ ತಾರತಮ್ಯ: “ಬಂಗಾಳದ ಬಡ ಜನರಿಗೆ ಬರಬೇಕಾದ ಉದ್ಯೋಗ ಖಾತರಿ ಯೋಜನೆ (MGNREGA) ಮತ್ತು ಆವಾಸ್ ಯೋಜನೆಯ ಸಾವಿರಾರು ಕೋಟಿ ರೂಪಾಯಿಗಳ ಹಣವನ್ನು ಕೇಂದ್ರ ಸರ್ಕಾರ ಏಕೆ ತಡೆಹಿಡಿದಿದೆ? ಇದು ಬಂಗಾಳದ ಜನರ ಹಕ್ಕಲ್ಲವೇ? ನಿಮ್ಮ ರಾಜಕೀಯ ದ್ವೇಷಕ್ಕೆ ಬಡವರ ಹೊಟ್ಟೆ ಹೊಡೆಯುವುದು ಯಾವ ನ್ಯಾಯ?” ಎಂಬುದು ಅವರ ಮೊದಲ ಪ್ರಶ್ನೆ.

ಎರಡನೆಯ ಪ್ರಶ್ನೆ ತನಿಖಾ ಸಂಸ್ಥೆಗಳ ದುರ್ಬಳಕೆ: “ಕೇವಲ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಇಡಿ (ED) ಮತ್ತು ಸಿಬಿಐ (CBI) ಬಳಸುತ್ತಿರುವ ನಿಮ್ಮ ಬಿಜೆಪಿ ಪಕ್ಷಕ್ಕೆ ಸೇರಿದಾಕ್ಷಣ ಭ್ರಷ್ಟಾಚಾರದ ಆರೋಪ ಹೊತ್ತವರು ಹೇಗೆ ಶುದ್ಧಹಸ್ತರಾಗುತ್ತಾರೆ? ನಿಮ್ಮ ‘ವಾಷಿಂಗ್ ಮೆಷಿನ್’ ರಾಜಕಾರಣದ ಬಗ್ಗೆ ಸಾರ್ವಜನಿಕವಾಗಿ ಉತ್ತರಿಸುವ ಧೈರ್ಯ ನಿಮಗಿದೆಯೇ?” ಎಂದು ಮಹುವಾ ಸವಾಲು ಹಾಕಿದ್ದಾರೆ.

ಈ ಪ್ರಶ್ನೆಗಳಿಗೆ ಅಮಿತ್ ಶಾ ಅವರ ಬಳಿ ಯಾವುದೇ ಉತ್ತರವಿಲ್ಲ. ಕೇವಲ ಭಾವನಾತ್ಮಕ ಮಾತುಗಳಿಂದ ಮತ್ತು ಕೋಮು ಧ್ರುವೀಕರಣದಿಂದ ಜನರ ಗಮನ ಸೆಳೆಯಲು ಪ್ರಯತ್ನಿಸುತ್ತಿರುವ ಶಾ ಅವರಿಗೆ ಮೊಯಿತ್ರಾ ಅವರ ತರ್ಕಬದ್ಧ ಮಾತುಗಳು ನುಂಗಲಾರದ ತುತ್ತಾಗಿ ಪರಿಣಮಿಸಿವೆ.

ಇನ್ನು  ಸೋಷಿಯಲ್ ಮೀಡಿಯಾದಲ್ಲಿ ಮಹುವಾ ಮೊಯಿತ್ರಾ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಬಿಜೆಪಿಯ ಐಟಿ ಸೆಲ್ ಮತ್ತು ಬೆಂಬಲಿಗರು ಇದನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಯಾಕೆಂದರೆ, ಈ ವಿಡಿಯೋದಲ್ಲಿ ಮಹುವಾ ಅವರು ಬಳಸಿದ ಪ್ರತಿಯೊಂದು ಶಬ್ದವೂ ಶಾ ಅವರ “ಅಜೇಯ” ಎಂಬ ಬಿರುದನ್ನ ಪುಡಿಪುಡಿ ಮಾಡುತ್ತಿದೆ.

ಗೃಹ ಸಚಿವರಾಗಿ ದೇಶದ ಆಂತರಿಕ ಭದ್ರತೆ ಮತ್ತು ರಾಜ್ಯಗಳ ನಡುವಿನ ಸಮನ್ವಯ ಕಾಪಾಡುವಲ್ಲಿ ಶಾ ವಿಫಲರಾಗಿದ್ದಾರೆ ಎಂಬುದನ್ನು ಮಹುವಾ ಸಾಕ್ಷ್ಯ ಸಮೇತ ವಿವರಿಸಿದ್ದಾರೆ. ಸುಳ್ಳು ಭರವಸೆಗಳ ಕೋಟೆಯನ್ನು ಕಟ್ಟಿ ರಾಜಕೀಯ ಮಾಡುವವರಿಗೆ, ವಾಸ್ತವದ ನೆಲೆಗಟ್ಟಿನಲ್ಲಿ ಪ್ರಶ್ನೆ ಕೇಳಿದರೆ ಅವರು ಉತ್ತರಿಸಲಾಗದೆ ಓಡಿಹೋಗುತ್ತಾರೆ. ಅದಕ್ಕಾಗಿಯೇ “ಭಕ್ತರು” ಈ ವಿಡಿಯೋ ನೋಡಬೇಡಿ ಅಂತ ನಾವು ಸಜೆಸ್ಟ್‌  ಮಾಡಿದ್ದು. 

ದೇಶಪ್ರೇಮ ಎಂದರೆ ಕೇವಲ ಘೋಷಣೆ ಕೂಗುವುದಲ್ಲ. ದೇಶದ ಪ್ರತಿಯೊಂದು ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವುದು ಮತ್ತು ಸಂವಿಧಾನ ಬದ್ಧವಾಗಿ ಚುನಾಯಿತರಾದ ನಾಯಕರನ್ನು ಗೌರವಿಸುವುದು ನಿಜವಾದ ದೇಶಭಕ್ತಿ. ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಜನಾದೇಶವನ್ನು ಅವಮಾನಿಸುತ್ತಿದ್ದಾರೆ ಎಂದರೆ ಅದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಅವಮಾನ.

ಅಧಿಕಾರದಲ್ಲಿರುವವರು ಎಷ್ಟೇ ಬಲಿಷ್ಠರಾಗಿದ್ದರೂ, ಅವರನ್ನು ಪ್ರಶ್ನಿಸುವ ಹಕ್ಕು ಜನಸಾಮಾನ್ಯರಿಗಿದೆ. ನೀವು ನಿಜವಾದ ದೇಶಭಕ್ತರಾಗಿದ್ದರೆ, ಕೇವಲ ಒಂದು ಪಕ್ಷದ ಪರವಾಗಿ ಕುರುಡಾಗಿ ನಿಲ್ಲಬೇಡಿ. ಬದಲಾಗಿ, ಮಹುವಾ ಕೇಳಿದಂತೆ ದೇಶದ ಆರ್ಥಿಕತೆ, ನಿರುದ್ಯೋಗ ಮತ್ತು ರಾಜ್ಯಗಳಿಗೆ ಸಿಗಬೇಕಾದ ಹಕ್ಕಿನ ಬಗ್ಗೆ ಇನ್ನೂ ಹೆಚ್ಚಿನ ಪ್ರಶ್ನೆಗಳನ್ನು ಎತ್ತಿ.

ಮಹುವಾ ಮೊಯಿತ್ರಾ ಅವರ ಭವಿಷ್ಯವಾಣಿಯಂತೆ, ಬಿಜೆಪಿಯ ಅಹಂಕಾರಕ್ಕೆ ಬಂಗಾಳದ ಮಣ್ಣಿನಲ್ಲಿ ದೊಡ್ಡ ಹೊಡೆತ ಬೀಳುವ ಲಕ್ಷಣಗಳು ಕಾಣುತ್ತಿವೆ. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ರಾಜಕಾರಣಕ್ಕಿಂತ, ಹೊಟ್ಟೆಯ ಹಸಿವು ಮತ್ತು ಹಕ್ಕುಗಳ ಹೋರಾಟ ದೊಡ್ಡದು ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ.

ಅಮಿತ್ ಶಾ ಅವರೇ, ಸಂಸದೆಯ ಪ್ರಶ್ನೆಗಳು ಗಾಳಿಯಲ್ಲಿ ತೇಲಿ ಹೋಗುವ ಮಾತುಗಳಲ್ಲ. ಅವು ಬಂಗಾಳದ ಕೋಟ್ಯಂತರ ಜನರ ಆಕ್ರೋಶದ ದನಿ. ಈ ದನಿಯನ್ನು ಹತ್ತಿಕ್ಕಲು ನಿಮ್ಮಿಂದ ಸಾಧ್ಯವಿಲ್ಲ. ಸತ್ಯವನ್ನು ಎಷ್ಟು ದಿನ ಮುಚ್ಚಿಡುತ್ತೀರಿ? ಬಂಗಾಳದ ಜನತೆ ನಿಮ್ಮ “ಅವಮಾನಕರ” ರಾಜಕಾರಣಕ್ಕೆ ಚುನಾವಣೆ ಮೂಲಕವೇ ಉತ್ತರ ನೀಡಲಿದ್ದಾರೆ.

ಮಹುವಾ ಮೊಯಿತ್ರಾ ಇಂದು ಸರಿಯಾದ ಬದಿಯಲ್ಲಿ ನಿಂತು ಪ್ರಶ್ನೆ ಕೇಳುತ್ತಿದ್ದಾರೆ. ನೀವು ಎಲ್ಲಿ ನಿಂತಿದ್ದೀರಿ ಅಂತ ಪ್ರಶ್ನಿಸಿಕೊಳ್ಳಿ. ಮಹುವಾ ಮೊಯಿತ್ರಾ ಅವರ ಈ ವಿಡಿಯೋವನ್ನು ಕೇವಲ ರಾಜಕೀಯವಾಗಿ ನೋಡದೆ, ಒಂದು ಚಿಂತನೆಗೆ ಕಾರಣವಾಗುವ ವಿಷಯವಾಗಿ ನೋಡಬೇಕು. ನೀವು ನೋಡಿ, ಆಲೋಚಿಸಿ, ಮತ್ತು ನಿಮ್ಮದೇ ಪ್ರಶ್ನೆಗಳನ್ನು ಎತ್ತಿ. ಅದೇ ನಿಜವಾದ ಪ್ರಜಾಪ್ರಭುತ್ವ. 

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...