ನುಡಿ ನಮನ | ಮಧುರ ಗಾನಸಂಪತ್ತಿನ ಸುಮನ್ ಕಲ್ಯಾಣಪುರ್

Date:

ಮೇ 31ರಂದು ಮುಂಬೈಯಲ್ಲಿ, 89ನೇ ವಯಸ್ಸಿನಲ್ಲಿ ನಿಧನರಾದ ಸುಮನ್ ಕಲ್ಯಾಣಪುರ್, ಕರ್ನಾಟಕ ಮೂಲದವರು. ಭಾರತೀಯ ಚಲನಚಿತ್ರ ಸಂಗೀತ ಕ್ಷೇತ್ರದ ಹಿನ್ನೆಲೆ ಗಾಯಕಿಯಾಗಿ ಅಮೂಲ್ಯ ಕೊಡುಗೆ ಮತ್ತು ಮಧುರ ಗಾನಸಂಪತ್ತನ್ನು ನೀಡಿದವರು.

- Advertisement -

ಭಾರತೀಯ ಚಲನಚಿತ್ರ ಸಂಗೀತ ಕ್ಷೇತ್ರದ ಹಿನ್ನೆಲೆ ಗಾಯಕಿಯಾಗಿ ಅಮೂಲ್ಯ ಕೊಡುಗೆ ಮತ್ತು ಮಧುರ ಗಾನಸಂಪತ್ತನ್ನು ನೀಡಿದ ಸುಮನ್ ಕಲ್ಯಾಣಪುರ್ ಅವರು 2026ರ ಮೇ 31ರಂದು ಮುಂಬೈಯಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕನ್ನಡಿಗರು ಅವರನ್ನು ಸ್ಮರಿಸಲು ಹಲವಾರು ಕಾರಣಗಳಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಸುಮನ್ ಕಲ್ಯಾಣಪುರ್(1937–2026) ಅವರು ಭಾರತೀಯ ಚಲನಚಿತ್ರ ಸಂಗೀತದ ಸುವರ್ಣಯುಗದ ಅತ್ಯಂತ ಪ್ರತಿಭಾವಂತ ಹಿನ್ನೆಲೆ ಗಾಯಕರಲ್ಲಿ ಒಬ್ಬರು. ಅವರ ಮೂಲ ಹೆಸರು ಸುಮನ್ ಹೆಮ್ಮಾಡಿ. ತಾಯಿ ಸೀತಾ ಹೆಮ್ಮಾಡಿ. ತಂದೆ ಶಂಕರ್ ರಾವ್ ಹೆಮ್ಮಾಡಿ ಅವರು ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹೆಮ್ಮಾಡಿ ಗ್ರಾಮಕ್ಕೆ ಸೇರಿದ ಸಾರಸ್ವತ ಬ್ರಾಹ್ಮಣ ಕುಟುಂಬದವರು. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉನ್ನತ ಹುದ್ದೆಯಲ್ಲಿದ್ದ ಶಂಕರರಾವ್ ಹೆಮ್ಮಾಡಿ ಅವರು ದೀರ್ಘ ಕಾಲ ಬ್ರಿಟಿಷ್ ಭಾರತದ ಢಾಕದಲ್ಲಿ (ಈಗ ಬಾಂಗ್ಲಾ ದೇಶ) ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಹಿರಿಯ ಮಗಳು ಸುಮನ್ 1937ರಲ್ಲಿ ಢಾಕದಲ್ಲೇ ಜನಿಸಿದರು. ಬಾಲ್ಯವೆಲ್ಲ ಅಲ್ಲಿಯೇ ಕಳೆಯಿತು. 1943ರಲ್ಲಿ ಇವರ ಕುಟುಂಬವು ಮುಂಬೈಗೆ ಸ್ಥಳಾಂತರಗೊಂಡಿತು, ಆದರೂ ಅವರ ತಂದೆ ಕುಂದಾಪುರದ ಹೆಮ್ಮಾಡಿ ಮೂಲದವರಾದ ಕಾರಣ ಸುಮನ್ ಅವರಿಗೆ ಕರ್ನಾಟಕದ ನಂಟು ಹಾಗೆಯೇ ಉಳಿಯಿತು. ಅವರೂ ಸೇರಿದಂತೆ ಕರ್ನಾಟಕದ ಮೂಲದವರಾಗಿ ಹಿಂದೀ ಚಿತ್ರರಂಗದಲ್ಲಿ ಹೆಸರುವಾಸಿಯಾದ ಅಮೀರ್ ಬಾಯಿ ಕರ್ನಾಟಕಿ, ಗುರುದತ್, ಈಗಿನ ದೀಪಿಕಾ ಪಡುಕೋಣೆ ಮುಂತಾದವರ ವಿಶಿಷ್ಟ ಪರಂಪರೆಯ ಸರಪಳಿಯಲ್ಲಿ ಸುಮನ್ ಕಲ್ಯಾಣಪುರ್ ಸಹ ಒಂದು ಕೊಂಡಿಯಾಗಿದ್ದಾರೆ.

ಸುಮನ್, ಹಿಂದಿ ಚಿತ್ರರಂಗದಲ್ಲಿನ ತಮ್ಮ ಕೆಲಸಕ್ಕಾಗಿ ಹೆಚ್ಚು ಹೆಸರುವಾಸಿಯಾದ ಒಬ್ಬ ಭಾರತೀಯ ಹಿನ್ನೆಲೆ ಗಾಯಕಿ. ಅವರು ಹಿಂದಿ, ಬೆಂಗಾಲಿ, ಮರಾಠಿ, ಅಸ್ಸಾಮಿ, ಗುಜರಾತಿ, ಕನ್ನಡ, ಅಂಗಿಕಾ, ಭೋಜಪುರಿ, ರಾಜಸ್ಥಾನಿ, ಒಡಿಯಾ ಮತ್ತು ಪಂಜಾಬಿ ಸೇರಿದಂತೆ ಹಲವಾರು ಭಾಷೆಗಳ ಚಲನಚಿತ್ರಗಳಿಗಾಗಿ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.

suman1
ಸುಮನ್ ಕಲ್ಯಾಣಪುರ್, ಮದನ್ ಮೋಹನ್ ಮತ್ತು ಮೊಹಮ್ಮದ್ ರಫಿ

ಲತಾ ಮಂಗೇಶ್ಕರ್ ಅವರ ಧ್ವನಿಗೆ ಹೋಲುವ ಸ್ವರ ಮತ್ತು ವಿನ್ಯಾಸವನ್ನು ಹೊಂದಿದ್ದರಿಂದ, ಇವರ ಧ್ವನಿಯನ್ನು ಹಲವು ಬಾರಿ ಲತಾ ಮಂಗೇಶ್ಕರ್ ಅವರದ್ದೇ ಎಂದು ತಪ್ಪಾಗಿ ಭಾವಿಸಲಾಗುತ್ತಿತ್ತು. ಇವರ ವೃತ್ತಿಜೀವನವು 1954ರಲ್ಲಿ ಪ್ರಾರಂಭವಾಯಿತು ಮತ್ತು ಇವರು 1960 ಹಾಗೂ 1970ರ ದಶಕದಲ್ಲಿ ಅತ್ಯಂತ ಜನಪ್ರಿಯ ಗಾಯಕಿಯಾಗಿ ಹೊರಹೊಮ್ಮಿದರು.

ಇದನ್ನು ಓದಿದ್ದೀರಾ?: ಅಕಿರಾ ಕುರೊಸಾವಾನ ‘ಡೆರ್ಸು ಉಜಾಲಾ’ ಎಂಬ ಕಾಡಿನ ಸಂತನೂ, ಕಾಡುವ ಚಿತ್ರವೂ

ಕಲ್ಯಾಣಪುರ್ ಕುಟುಂಬದಲ್ಲಿ ತಂದೆ ಮತ್ತು ತಾಯಿ ಅವರಲ್ಲದೆ, 5 ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದು, ಸುಮನ್ ಸಹೋದರ-ಸಹೋದರಿಯರಲ್ಲಿ ಎಲ್ಲರಿಗಿಂತ ಹಿರಿಯವರಾಗಿದ್ದರು. 1943 ರಲ್ಲಿ ಇವರ ಕುಟುಂಬವು ಮುಂಬೈಗೆ ಸ್ಥಳಾಂತರಗೊಂಡಿತು. ಸುಮನ್ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆ ಮತ್ತು ಸಂಗೀತದ ಬಗ್ಗೆ ಅಪಾರ ಆಸಕ್ತಿ ಇತ್ತು. ಮುಂಬೈನ ಪ್ರಸಿದ್ಧ ಸೇಂಟ್ ಕೊಲಾಬಾ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಚಿತ್ರಕಲೆಯ ಉನ್ನತ ಅಧ್ಯಯನಕ್ಕಾಗಿ ಪ್ರತಿಷ್ಠಿತ ಸರ್ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ್‌ಗೆ ಪ್ರವೇಶ ಪಡೆದರು.

ಅದೇ ಸಮಯದಲ್ಲಿ, ಪುಣೆಯ ಪ್ರಭಾತ್ ಫಿಲ್ಮ್ಸ್ ಸಂಸ್ಥೆಯ ಸಂಗೀತ ನಿರ್ದೇಶಕರಾಗಿದ್ದ ಹಾಗೂ ಅವರ ಕುಟುಂಬದ ಆಪ್ತ ಸ್ನೇಹಿತರಾಗಿದ್ದ ಪಂಡಿತ ಕೇಶವರಾವ್ ಭೋಳೆ ಅವರಿಂದ ಶಾಸ್ತ್ರೀಯ ಸಂಗೀತದ ಗಾಯನ ತರಬೇತಿಯನ್ನು ಪಡೆಯಲು ಆರಂಭಿಸಿದರು. ಸುಮನ್ ಅವರೇ ಹೇಳಿದಂತೆ ಆರಂಭದಲ್ಲಿ ಗಾಯನವು ಅವರಿಗೆ ಕೇವಲ ಹವ್ಯಾಸವಾಗಿತ್ತು. ಆದರೆ ಕ್ರಮೇಣ ಸಂಗೀತದ ಮೇಲಿನ ಆಸಕ್ತಿ ಹೆಚ್ಚುತ್ತಾ ಹೋದಂತೆ, ಅದನ್ನು ವೃತ್ತಿಪರವಾಗಿ ಅಭ್ಯಾಸ ಮಾಡಲು ಆರಂಭಿಸಿದರು. ಅವರು ಉಸ್ತಾದ್ ಖಾನ್, ಅಬ್ದುಲ್ ರೆಹಮಾನ್ ಖಾನ್ ಹಾಗೂ ಗುರುಜಿ ಮಾಸ್ಟರ್ ನವರಂಗ್ ಅವರ ಮಾರ್ಗದರ್ಶನದಲ್ಲಿ ಸಂಗೀತ ಶಿಕ್ಷಣ ಪಡೆದರು.

1958ರಲ್ಲಿ ಸುಮನ್ ಹೆಮ್ಮಾಡಿ ಅವರು ಮುಂಬೈ ಮೂಲದ ಉದ್ಯಮಿ ರಮಾನಂದ ಕಲ್ಯಾಣಪುರ್ ಅವರನ್ನು ವಿವಾಹವಾದರು. ಬಳಿಕ ಅವರು ಸುಮನ್ ಕಲ್ಯಾಣಪುರ್ ಎಂಬ ಹೆಸರಿನಿಂದ ಪ್ರಸಿದ್ಧರಾದರು.

ಸುಮನ್ ಕಲ್ಯಾಣಪುರ್ ಅವರು 1950ರ ದಶಕದ ಆರಂಭದಲ್ಲಿ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಪ್ರವೇಶಿಸಿದರು. ದರ್ವಾಜಾ(1954) ಮತ್ತು ಮಂಗು(1954) ಮೊದಲಾದ ಚಿತ್ರಗಳ ಮೂಲಕ ಹಿಂದಿ ಚಿತ್ರರಂಗದಲ್ಲಿ ತಮ್ಮ ಗಾಯನಯಾತ್ರೆಯನ್ನು ಆರಂಭಿಸಿದರು. ಅವರ ಮಧುರ, ಮೃದು ಮತ್ತು ಭಾವಪೂರ್ಣ ಕಂಠವು ಶೀಘ್ರದಲ್ಲೇ ದೇಶದಾದ್ಯಂತ ಜನಪ್ರಿಯತೆಯನ್ನು ಗಳಿಸಿತು.

ಅವರು ಅನೇಕ ಭಾರತೀಯ ಭಾಷೆಗಳಲ್ಲಿ 740ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ನೌಶಾದ್, ಎಸ್.ಡಿ. ಬರ್ಮನ್, ಮದನ್ ಮೋಹನ್, ಶಂಕರ್–ಜೈಕಿಷನ್, ರೋಷನ್ ಮುಂತಾದ ಖ್ಯಾತ ಸಂಗೀತ ನಿರ್ದೇಶಕರೊಂದಿಗೆ ಅವರು ಕೆಲಸ ಮಾಡಿದ್ದಾರೆ. ಮೊಹಮ್ಮದ್ ರಫಿ ಅವರೊಂದಿಗೆ ಹಾಡಿದ ಯುಗಳಗೀತೆಗಳಿಗಾಗಿ ಸುಮನ್ ಕಲ್ಯಾಣಪುರ್ ವಿಶೇಷ ಖ್ಯಾತಿ ಪಡೆದರು. ರಫಿ ಅವರೊಂದಿಗೆ ಅವರು 140ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. “ಆಜ್ ಕಲ್ ತೇರೆ ಮೇರೆ ಪ್ಯಾರ್ ಕೆ ಚರ್ಚೇ,” “ನಾ ನಾ ಕರ್ತೇ ಪ್ಯಾರ್,” ಹಾಗೂ “ಪರ್ಬತೋಂ ಕೆ ಪೇಡೋಂ ಪರ್” ಅವರ ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಕೆಲವು.

ಅವರ ಗಾಯನ ಜೀವನದ ಒಂದು ವಿಶಿಷ್ಟ ಅಂಶವೆಂದರೆ, ಅವರ ಧ್ವನಿಯು ಲತಾ ಮಂಗೇಶ್ಕರ್ ಅವರ ಧ್ವನಿಯನ್ನು ಬಹಳ ಹೋಲುತ್ತಿತ್ತು. ಇದರಿಂದ ಅನೇಕ ಶ್ರೋತೃಗಳು ಈ ಇಬ್ಬರು ಗಾಯಕಿಯರ ಧ್ವನಿಗಳನ್ನು ಕೇಳುವಾಗ ಗೊಂದಲಕ್ಕೊಳಗಾಗುತ್ತಿದ್ದರು. ಆದಾಗ್ಯೂ, “ಇನ್ನೊಬ್ಬ ಲತಾ” ಎಂಬ ಹೋಲಿಕೆಗೆ ಸೀಮಿತವಾಗದೆ, ತಮ್ಮ ಮಧುರ ಕಂಠ, ಗಾಯನ ಕೌಶಲ್ಯ ಮತ್ತು ಭಾವಪೂರ್ಣ ಅಭಿವ್ಯಕ್ತಿಯ ಮೂಲಕ ಸುಮನ್ ಕಲ್ಯಾಣಪುರ್ ಭಾರತೀಯ ಚಿತ್ರಸಂಗೀತದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ನಿರ್ಮಿಸಿಕೊಂಡರು.

ಕರ್ನಾಟಕದ ಮೂಲದವರಾದರೂ ಸುಮನ್ ಕಲ್ಯಾಣಪುರ್ ಅವರು ಕನ್ನಡ ಸಿನೆಮಾಗಳಿಗೆ ಹಾಡಿದ್ದು ಕಡಿಮೆ. ಅವರು ಹಾಡಿರುವ ಕನ್ನಡ ಚಿತ್ರಗೀತೆಗಳ ನಿಖರ ಸಂಖ್ಯೆ ತಿಳಿದಿಲ್ಲ. ಲಭ್ಯ ಮಾಹಿತಿಯ ಪ್ರಕಾರ ಕಲಾವತಿ(1964) ಚಿತ್ರದಲ್ಲಿ ಒಂದು ಹಾಗೂ ಕಲ್ಪವೃಕ್ಷ(1969) ಚಿತ್ರದಲ್ಲಿ ಎರಡು ಹಾಡು, ಒಟ್ಟು ಮೂರು ಹಾಡುಗಳು ಈಗಲೂ ಕೇಳಲು ಸಿಗುತ್ತವೆ. ಮೂರು ಹಾಡುಗಳಲ್ಲಿ ಕಲಾವತಿ ಚಿತ್ರದ ಹಾಡು ಸೋಲೋ ಆದರೆ ಕಲ್ಪವೃಕ್ಷದ ಎರಡೂ ಹಾಡುಗಳು ಪಿ.ಬಿ. ಶ್ರೀನಿವಾಸ್ ಅವರ ಜೊತೆ ಹಾಡಿರುವ ಯುಗಳ ಗೀತೆಗಳು. ಮೂರು ಹಾಡುಗಳ ಸಮಾನ ಅಂಶವೆಂದರೆ ಎಲ್ಲವೂ ಪ್ರಣಯ ಭಾವವನ್ನು ವ್ಯಕ್ತಿಸುವ ಹಾಡುಗಳು. ಸುಮನ್ ಅವರ ಕಂಠದಲ್ಲಿ ಪ್ರಣಯದ ನವಿರು ಭಾವದ ಜೊತೆಗೆ ಮಾದಕತೆಯ ಲೇಪ ಹಾಗೂ ಪ್ರೇಮ ದಿವ್ಯಾನುಭಾವದ ಆನಂದವಿದೆ.

ಕಲ್ಪವೃಕ್ಷ ಚಿತ್ರದ ಹಾಡು

//ತಲ್ಲಣ ನೂರುಬಗೆ
ತಳಮಳ ಅಡಿಗಡಿಗೆ
ನೆಲೆಯ ನಾನರಿಯೆ
ಏನೋ ಹಸಿ ಏನೊ ಬಿಸಿ //

ಹಾಡಿನಲ್ಲಿ ಪ್ರೇಮಿಯ ಕಾತರ, ಹೊಸ ಅನುಭವ ತರುವ ಭಾವ ಕಂಪನವನ್ನು ಸುಮನ್ ಅವರ ಧ್ವನಿ ಸಮರ್ಥವಾಗಿ ದಾಟಿಸುತ್ತದೆ. ಅದೇ ಚಿತ್ರದ ಇನ್ನೊಂದು ಯುಗಳ ಗೀತೆ..

//ಹನಿ ಹನಿ ಹೀರಿ ತಣಿ ಹರೆಯ
ಮಾಧುರ್ಯ ಸಿರಿಯ ಲಾವಣ್ಯ ಝರಿಯ
ನಾನಾ ಪರಿಯ
ಪ್ರಣಯ ಲಹರಿಯ…//

ಇಲ್ಲೂ ಸಹ ಕುರಾಸೀ ಅವರ ಪ್ರಣಯ ಪದಜಾಲವನ್ನು ಸುಮನ್ ಅವರ ಧ್ವನಿಯು ಕೇಳುಗರಲ್ಲಿ ಪ್ರಣಯ ಚಿತ್ತಾರವನ್ನು ಬಿಡಿಸುತ್ತದೆ. ಚಿತ್ರದ ದೃಶ್ಯಗಳು ಈ ಹಾಡನ್ನು ಅನುಭವವಾಗಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿಲ್ಲ. ಆದ್ದರಿಂದ ಕೇಳುವುದರಲ್ಲೇ ಸೊಗಸಿದೆ ಅನಿಸುತ್ತದೆ.

ಇದನ್ನು ಓದಿದ್ದೀರಾ?: ಸ್ಥಿರಚಿತ್ರಕ್ಕೆ ಚಲನೆಯ ಜೀವ: ಚಿತ್ರಕಲೆ ಮತ್ತು ಸಿನಿಮಾದ ಬೆಸುಗೆ

ಕಲಾವತಿ ಚಿತ್ರದಲ್ಲಿ ಜಯಂತಿಯವರು ಅಭಿನಯಿಸಿರುವ

//ಒಡನಾಡಿ ಬೇಕೆಂದು ಮಿಡುಕಿಯೇ ಮಿದುಕಿದೆನು
ಕಡೆಗೆ ನೀ ಬಂದೆನ್ನಾ ಮಿಡುಕ ಕಳೆದೆ //

ಹಾಡಿನಲ್ಲೂ ಮಾದಕ ಭಾವದ ಶೃಂಗಾರದ ಹಾಡಾಗಿ ಅರಳಿದೆ. ಇಲ್ಲಿ ಕನ್ನಡ ಉಚ್ಚಾರಣೆಯಲ್ಲಿ ಇರುವ ಹಲವು ದೋಷಗಳ (ಒಡನಾಡಿ ಪದ ಒಡಾನಾಡಿ.. ಕಡೆಗೆ ನೀ ಬಂದೆನ್ನ ಪದ ಕಡೆಗೇನಿ ಬಂದೇನ್ನಾ ಆಗಿದೆ.. ಹೀಗೆ) ಮೇಲೆ ಅವರ ಮಧುರ ಕಂಠ  ಮುಸುಕೆಳೆದಿದೆ!!

ದೂರದ ಮುಂಬೈನಲ್ಲಿ ನೆಲೆಸಿದ ಕನ್ನಡನಾಡಿನ ಮೂಲದ ಗಾಯಕಿಯನ್ನು ಕನ್ನಡ ಚಿತ್ರರಂಗ ಸಮರ್ಪಕವಾಗಿ ಉಪಯೋಗಿಸಿಕೊಳ್ಳದಿರುವುದಕ್ಕೆ ಆ ಕಾಲದ ಕನ್ನಡ ಚಿತ್ರರಂಗದ ಪರಿಸ್ಥಿತಿಯೂ ಒಂದು ಕಾರಣ. ತನ್ನ ಗಾಯನ ಪ್ರತಿಭೆಗಾಗಿ ಪದ್ಮಭೂಷಣವೂ ಸೇರಿದಂತೆ ಮಹಾರಾಷ್ಟ್ರ ಸರ್ಕಾರದ ಲತಾ ಮಾಂಗೇಷ್ಕರ ಪ್ರಶಸ್ತಿ ಪುರಸ್ಕೃತರಾದ ಸುಮನ್ ಕಲ್ಯಾಣಪುರ್ ಅವರಿಗೆ, ಕನ್ನಡಿಗರ ಪರವಾಗಿ ನಮನಗಳು.

768 512 4492254 1081 4492254 1568900389709
ಸುಮನ್ ಕಲ್ಯಾಣಪುರ್ ಮತ್ತು ಲತಾ ಮಂಗೇಶ್ಕರ್

ಸುಮನ್ ಕಲ್ಯಾಣಪುರ್ ಅವರು ಹಾಡಿರುವ ಹಾಡುಗಳ ಸಂಖ್ಯೆಯು ಅವರ ಸಮಕಾಲೀನ ಗಾಯಕರಿಗೆ ಸಮನಾಗಿಲ್ಲದಿರಬಹುದು. ಆದರೆ, ತಮ್ಮ ಮಧುರವಾದ ಧ್ವನಿಯ ಮೂಲಕ ಅವರು ಹನ್ನೊಂದು ಭಾರತೀಯ ಭಾಷೆಗಳಲ್ಲಿ ನೂರಾರು ಹಾಡುಗಳನ್ನು ಹಾಡಿ ಮುಂದಿನ ಪೀಳಿಗೆಗೆ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ.

WhatsApp Image 2023 07 14 at 5.34.29 PM
ಡಾ. ಕೆ. ಪುಟ್ಟಸ್ವಾಮಿ
+ posts

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಕೆ. ಪುಟ್ಟಸ್ವಾಮಿ
ಡಾ. ಕೆ. ಪುಟ್ಟಸ್ವಾಮಿ

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಎಂಆರ್‌ಎಲ್ ಲಂಚ ಪ್ರಕರಣ: ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್‌ಗೆ ಇ.ಡಿ ಸಮನ್ಸ್

ಬಹುಚರ್ಚಿತ ಕೊಚ್ಚಿನ್ ಮಿನರಲ್ಸ್ ಅಂಡ್ ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಅಕ್ರಮ ಹಣ...

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ ಮೋದಿ ಪ್ರಚಾರ ನಡೆಸಿದರೆ ಶಿಷ್ಟಾಚಾರವೇ?

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ...

ವಿರಳಾತಿ ವಿರಳ ಪ್ರಕರಣ: ಮಾಲೆಗಾಂವ್ ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಅಪರಾಧಿಗೆ ಮರಣದಂಡನೆ ಶಿಕ್ಷೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ತಾಲೂಕಿನ ಡೋಂಗರಾಳೆ ಗ್ರಾಮದಲ್ಲಿ ಸಾಡೇನಾಲ್ಕು ವರ್ಷದ...