ಅಂದು ಎಸ್‌ಐಆರ್ ಸಮರ್ಥನೆ, ಇಂದು ತಡೆಗೆ ಆಗ್ರಹ: ನಿಷ್ಫಲವಾಯಿತೇ ಬಿಜೆಪಿ ತಂತ್ರಗಾರಿಕೆ?

Date:

ರಾಜ್ಯದಲ್ಲಿ ಒಂದು ಕಡೆ ಅತಿಯಾದ ಮಳೆ, ಮತ್ತೊಂದು ಕಡೆ ರಣ ಬರದಿಂದ ಜನರು ನೆಂದು, ಬೆಂದು ಬಳಲುತ್ತಿರುವಾಗ ಈ ಜನರ ಸಂಕಷ್ಟಗಳಿಗೆ ಕಣ್ಣು ಕಿವಿಯಾಗಿ ಹೋರಾಡಬೇಕಾದ, ಸರ್ಕಾರವನ್ನು ಎಚ್ಚರಿಸಬೇಕಾದ ಬಿಜೆಪಿ, ಜೆಡಿಎಸ್ ಪಕ್ಷಗಳು, ಅದರ ನಾಯಕರುಗಳು ಓಟಿನ ರಾಜಕಾರಣದಲ್ಲಿ ನಿರತರಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಮೂಲಕ ಅಧಿಕಾರ ವಶಪಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ಕರ್ನಾಟದಲ್ಲಿ ಇದೀಗ ನಡೆಯುತ್ತಿರುವ ಎಸ್‌ಐಆರ್‌ನಿಂದಾಗಿ ತೀವ್ರ ಕಂಗಾಲಾಗದಂತೆ ಕಂಡು ಬರುತ್ತಿದೆ.

- Advertisement -

ದೇಶದಲ್ಲಿ ವಿಶೇಷ ಮತದಾರರಪಟ್ಟಿ ಪರಿಷ್ಕರಣೆ (ಎಸ್‌ಐಆರ್) ನೆಪದಲ್ಲಿ ತನ್ನ ಮತ ಬ್ಯಾಂಕನ್ನು ಭದ್ರಪಡಿಸಿಕೊಳ್ಳುವ ಮತ್ತು ವಿಪಕ್ಷಗಳ ಮತ ಸಮುದಾಯಗಳೆನ್ನುವ ಮತದಾರರನ್ನು ಮತದಾನದ ಹಕ್ಕಿನಿಂದಲೇ ಹೊರಗಟ್ಟುವ ಹೊಸ ರಾಜಕೀಯ ತಂತ್ರವನ್ನು ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ ಇದುವರೆಗೂ ಕೆಲವು ರಾಜ್ಯಗಳಲ್ಲಿ ನಡೆಸಿರುವ ಈ ಪ್ರಕ್ರಿಯೆಯಿಂದ ಆರು ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟಿದೆ ಎಂಬ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ;...

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಕೇರಳ ಸರ್ಕಾರ ಈಗ ಮರುಜೀವ ನೀಡಿದೆ. ಪ್ರಕರಣವನ್ನು ವಿಜಿಲೆನ್ಸ್ ತನಿಖೆಗೆ ಆದೇಶ ಹೊರಡಿಸಿದೆ....

ಇದನ್ನೂ ಓದಿ: ಕನ್ನಡಿಗರೇ ಎಚ್ಚರ: ಎಸ್‌ಐಆರ್‌ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!

ಪಶ್ಚಿಮ ಬಂಗಾಳದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಹೆಸರಲ್ಲಿ 92ಲಕ್ಷ ಮತದಾರರನ್ನು ಮತದಾನದ ಹಕ್ಕಿನಿಂದ ದೂರಮಾಡಿದ್ದು, ಇದರ ಪರಿಣಾಮ ಅಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿ ಸಫಲವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿದೆ.

ಆದರೆ, ಕೇರಳದಲ್ಲಿ ಈ ಪ್ರಯೋಗವನ್ನು ಕಾಂಗ್ರೆಸ್, ಎಡಪಂಥೀಯ ಪಕ್ಷಗಳು ವಿಫಲಗೊಳಿಸಿದ್ದು ಕೇರಳದಲ್ಲಿ ಅಧಿಕಾರದ ಕಡೆಗೆ ಹೆಜ್ಜೆ ಹಾಕುವ ಬಿಜೆಪಿಯ ಆಟ ನಡೆಯದಂತೆ ನೋಡಿಕೊಂಡಿವೆ. ಕೇರಳದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆ ಬಿಜೆಪಿಯ ರಾಜಕೀಯ ಮೈದಾನವಾಗದಂತೆ ಬಿಜೆಪಿಯೇತರ ಪಕ್ಷಗಳು (ಎನ್‌ಡಿಎ ಮಿತ್ರಪಕ್ಷಗಳು ಹೊರತುಪಡಿಸಿ) ಕಣ್ಗಾವಲು ನಡೆಸಿದ್ದವು.

ಈಗ ಕರ್ನಾಟಕದಲ್ಲೂ ಕೂಡ ಕೇರಳ ಮಾದರಿಯಲ್ಲಿಯೇ ಎಸ್‌ಐಆರ್‌ ಪ್ರಕ್ರಿಯೆಯನ್ನು ಕಾಂಗ್ರೆಸ್ ನಿಗಾವಹಿಸಿದ್ದು ಇದು ಬಿಜೆಪಿ ಮತ್ತು ಮಿತ್ರ ಪಕ್ಷ ಜೆಡಿಎಸ್‌ಗೆ ನುಂಗಲಾರದ ತುತ್ತಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಇಡೀ ಸರ್ಕಾರ ಮತ್ತು ಪಕ್ಷ ಎಸ್‌ಐಆರ್‌ನಲ್ಲಿ ಬಿಜೆಪಿ ಉದ್ದೇಶಿತ “ಕೈವಾಡ” ನಡೆಯದಂತೆ ಕಣ್ಗಾವಲು ನಡೆಸುತ್ತಿವೆ. ಈ ಪ್ರಕ್ರಿಯೆಯಲ್ಲಿ ತೊಡಗಿರುವ ಸರ್ಕಾರಿ ಅಧಿಕಾರಿಗಳು ಎಲ್ಲಿಯೂ ಬಿಜೆಪಿ ಒತ್ತಡಕ್ಕೆ ಒಳಗಾಗದಂತೆ ಕಟ್ಟಪ್ಪಣೆ ಹೊರಡಿಸಿದೆ.

ಎಸ್‌ಐಆರ್‌ನ್ನು ಆರಂಭದಿಂದಲೂ ಸಮರ್ಥಿಸಿಕೊಳ್ಳುತ್ತಲೇ, ಚುನಾವಣಾ ಆಯೋಗದ ವಕ್ತಾರರಂತೆ ವರ್ತಿಸುತ್ತಾ ಬಂದಿರುವ ಬಿಜೆಪಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಎಸ್‌ಐಆರ್‌ನಲ್ಲಿ ಸರಿಯಿಲ್ಲ, ಅದನ್ನು ತಾತ್ಕಾಲಿಕವಾಗಿ ತಡೆ ಹಿಡಿಯಬೇಕು ಎಂದು ಆಗ್ರಹಿಸತೊಡಗಿದೆ.

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯಿಂದಾಗಿ 2028ಕ್ಕೆ ಅಧಿಕಾರ ಹಿಡಿಯುವ ಲೆಕ್ಕಾಚಾರದಲ್ಲಿದ್ದ ಬಿಜೆಪಿ ಸ್ವತಃ ಈ ಪ್ರಕ್ರಿಯೆಯನ್ನು ತಡೆ ಹಿಡಿಯುವಂತೆ ಒತ್ತಾಯಿಸುತ್ತಿರುವುದು ಬಿಜೆಪಿಯ ಕಳವಳವನ್ನು ಕಾಣಿಸುತ್ತಿದೆ.

ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಎಸ್‌ಐಆರ್‌ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಗಾವಹಿಸಿದೆ. ಚುನಾವಣಾ ಆಯೋಗದ ಮೂಲಕ ಅಕ್ರಮ ಬಾಂಗ್ಲಾ ವಲಸಿಗರ ಹೆಸರಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಮತ್ತು ಬಿಜೆಪಿಯೇತರ ರಾಜಕೀಯ ಪಕ್ಷಗಳ ಮತಬ್ಯಾಂಕ್‌ಗಳನ್ನು ಛಿದ್ರಗೊಳಿಸುವ ಬಿಜೆಪಿಯ ಯಾವ ಕುತಂತ್ರಗಳಿಗೂ ಅವಕಾಶವಿಲ್ಲದಂತೆ ಬಿಜೆಪಿಯನ್ನು ಕಾಂಗ್ರೆಸ್ ಕಟ್ಟಿ ಹಾಕಿದೆ ಎನ್ನಬಹುದು.

ಇದನ್ನೂ ಓದಿ: ವಿಪಕ್ಷಗಳನ್ನು ಒಂದಾಗಿಸುತ್ತಿರುವ ಬಿಜೆಪಿಯ ಸರ್ವಾಧಿಕಾರಿ, ದಮನ, ದಬ್ಬಾಳಿಕೆಯ ಹೊಡೆತ

ಕರ್ನಾಟಕದಲ್ಲಿ ಎಸ್‌ಐಆರ್‌ ಬಗ್ಗೆ ಕೇವಲ ಕಾಂಗ್ರೆಸ್ ಪಕ್ಷವಲ್ಲದೆ ಜಾಗೃತ ಕರ್ನಾಟಕ ಸೇರಿದಂತೆ ಅನೇಕ ಪ್ರಗತಿಪರ ಸಂಘಟನೆಗಳು, ವ್ಯಕ್ತಿಗಳು ಮತದಾರರ ಪಟ್ಟಿಯ ಪರಿಷ್ಕರಣೆ ಸಂಬಂಧಿಸಿದಂತೆ ಮತದಾರರು ವಹಿಸಬೇಕಾದ ಎಚ್ಚರ ಮತ್ತು ಹೊಣೆಗಾರಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರವಾಗಿ ಅರಿವು ಮೂಡಿಸುತ್ತಿದ್ದು ಇದು ಕಾಂಗ್ರೆಸ್‌ಗೆ ಫಲಪ್ರದವೂ, ಬಿಜೆಪಿಯ ಉದ್ದೇಶಕ್ಕೆ ನಿಷ್ಫಲವೂ ಆಗಿ ಪರಿಣಮಿಸುತ್ತಿದೆ.

ತಮ್ಮ ಮತಗಳು ಕೈಬಿಟ್ಟು ಹೋಗುವ ಭೀತಿಯಲ್ಲಿರುವ ಅಲ್ಪಸಂಖ್ಯಾತರಲ್ಲಿ ಎಸ್‌ಐಆರ್‌ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಕಾಂಗ್ರೆಸ್ ಮತ್ತು ಸಾಮಾಜಿಕ ಸಂಘಟನೆಗಳು ಯಶಸ್ವಿಯಾಗಿವೆ. ಈ ಕಾರಣದಿಂದಾಗಿಯೇ ಅಲ್ಪಸಂಖ್ಯಾತ ಸಮುದಾಯವು ಸಾಮೂಹಿಕವಾಗಿ ಎಸ್‌ಐಆರ್‌ ಅರ್ಜಿಗಳನ್ನು ತುಂಬುವಲ್ಲಿ ನಿರತವಾಗಿವೆ.

ಕೇವಲ ಅಲ್ಪಸಂಖ್ಯಾತರಷ್ಟೇ ಅಲ್ಲದೆ ದಲಿತರು ಕೂಡ ಸಾಮೂಹಿಕವಾಗಿ ಈ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಸ್ಲಂಗಳಿಗೆ ಬಿಎಲ್‌ಒಗಳು ಹೋಗುವುದಿಲ್ಲ, ಎಲ್ಲರಿಗೂ ಅರ್ಜಿ ತುಂಬುವಷ್ಟು ಅರಿವು ಇಲ್ಲದಿರುವುದರಿಂದ ಸಮುದಾಯ ಭವನ, ಮಸೀದಿ, ದೊಡ್ಡ ಸಭಾಂಗಣಗಳಲ್ಲಿ ಸಾಮೂಹಿಕವಾಗಿ ಎಸ್‌ಐಆರ್‌ ಅರ್ಜಿಗಳನ್ನು ತುಂಬಲು ಸಹಕರಿಸಲಾಗುತ್ತಿದೆ. ಇದರಲ್ಲಿ ತಪ್ಪೇನಿದೆ ಎಂದು ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ನೀಡಿರುವ ಹೇಳಿಕೆ ಕಾಂಗ್ರೆಸ್ ನಿಭಾಯಿಸುತ್ತಿರುವ ರಾಜಕೀಯ ಜವಾಬ್ದಾರಿಯನ್ನು ತೋರಿಸುತ್ತಿದೆ. ಇದು ಬಿಜೆಪಿಗೆ ಕೊಟ್ಟ ದೊಡ್ಡ ಪೆಟ್ಟು ಕೂಡ.

ಕರ್ನಾಟಕದಲ್ಲಿ ಕಾಂಗ್ರೆಸ್ ಎಸ್‌ಐಆರ್‌ನಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಏನೆಲ್ಲಾ ಆರೋಪ ಮಾಡುತ್ತಿರುವ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ, ತನ್ನದೇ ಆಡಳಿತವಿರುವ ರಾಜ್ಯಗಳಲ್ಲಿ ಅದನ್ನೇ ಮಾಡಿತ್ತು ಎಂಬುದು ಇಷ್ಟು ಬೇಗ ಮರೆತು ಹೋಯಿತೆ?!

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ತಾವು ಅಂದುಕೊಂಡಂತೆ ನಡೆಸುವಲ್ಲಿ ಬಿಜೆಪಿಗೆ ಅವಕಾಶ ಸಿಗದಂತೆ ಒಂದು ಹಂತದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ದಿಗ್ಬಂಧನ ಹೇರಿಬಿಟ್ಟಿದೆ. ಇದರಿಂದ ಕಂಗಾಲಾಗಿರುವ ಬಿಜೆಪಿ, ಜೆಡಿಎಸ್ ದೆಹಲಿಯಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಮುಂದೆ ಅಹವಾಲು ಸಲ್ಲಿಸಿ ಕರ್ನಾಟಕದಲ್ಲಿ ಎಸ್‌ಐಆರ್‌ ಅನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಅಲವತ್ತು ಕೊಂಡಿವೆ.

ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ಹೆಚ್ ಡಿ ಕುಮಾರಸ್ವಾಮಿ ಅವರುಗಳೇ ಖುದ್ದಾಗಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಬಾಗಿಲು ಬಡಿದ್ದಾರೆ. ತಮ್ಮ ಆತಂಕವನ್ನು ಅರುಹಿಕೊಂಡಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರುಗಳು ಬೀದಿಯಲ್ಲಿ ನಿಂತು ಬಾಯಿ ಬಡಿದುಕೊಳ್ಳುತ್ತಿದ್ದಾರೆ.

ತಾವೇ ತಮ್ಮ ರಾಜಕೀಯ ಏಳಿಗೆಗೆ ಕಂಡುಕೊಂಡ ತಂತ್ರಗಾರಿಕೆ ಈಗ ತಮಗೆ ಮುಳುವಾಗುತ್ತಿರುವುದರಿಂದ ರಾಜ್ಯದಲ್ಲಿ ದಿಕ್ಕೆಟ್ಟಿರುವ ಬಿಜೆಪಿ ಮತ್ತು ಜೆಡಿಎಸ್ ಚುನಾವಣಾಧಿಕಾರಿಗಳಿಗೆ ದೂರು ನೀಡುತ್ತಿವೆ. ಇದೊಂದು ವ್ಯಂಗ್ಯವೇ ಸರಿ.

ರಾಜ್ಯದಲ್ಲಿ ಒಂದು ಕಡೆ ಅತಿಯಾದ ಮಳೆ, ಮತ್ತೊಂದು ಕಡೆ ರಣಬರದಿಂದ ಜನರು ನೆಂದು, ಬೆಂದು ಬಳಲುತ್ತಿರುವಾಗ ಈ ಜನರ ಸಂಕಷ್ಟಗಳಿಗೆ ಕಣ್ಣು ಕಿವಿಯಾಗಿ ಹೋರಾಡಬೇಕಾದ, ಸರ್ಕಾರವನ್ನು ಎಚ್ಚರಿಸಬೇಕಾದ ಬಿಜೆಪಿ, ಜೆಡಿಎಸ್ ಪಕ್ಷಗಳು, ಅದರ ನಾಯಕರುಗಳು ಓಟಿನ ರಾಜಕಾರಣದಲ್ಲಿ ನಿರತರಾಗಿದ್ದಾರೆ.

ನಾಯಕತ್ವದ ಕೊರತೆ, ಗುಂಪುಗಾರಿಕೆ, ಒಳಜಗಳ, ಹೊಂದಾಣಿಕೆ ರಾಜಕಾರಣದ ಅಪನಂಬಿಕೆಗಳಿಂದ ಹೈರಾಣಾಗಿರುವ ಬಿಜೆಪಿ ಎಸ್‌ಐಆರ್‌ ನೆಪದಲ್ಲಿ ಬೀದಿಗೆ ಬಂದಿದೆ.

ರಾಜ್ಯದಲ್ಲಿ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸುವ ಹುನ್ನಾರ ನಡೆದಿದೆ, ಅಕ್ರಮ ನಡೆದಿದೆ ಎನ್ನುವ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಹೆಚ್ ಡಿ ಕುಮಾರಸ್ವಾಮಿ, ಹೆಸರಿಗಷ್ಟೇ ಇರುವ ವಿಪಕ್ಷ ನಾಯಕ ಆರ್ ಅಶೋಕ್, ರಾಮನಗರ ಮುಂದೊಂದು ದಿನ ರಹೀಮ್ ನಗರ ಆಗುತ್ತದೆ ಎನ್ನುವ ಬಾಲ ರಾಜಕಾರಣಿ ನಿಖಿಲ್ ಕುಮಾರಸ್ವಾಮಿಯ ಹೇಳಿಕೆಗಳಲ್ಲಿ ಯಾವ ಜನಪರ ರಾಜಕಾರಣವೂ ಅಡಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಎನ್‌ ರವಿಕುಮಾರ್
ಎನ್‌ ರವಿಕುಮಾರ್
ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬ್ ಸಿಎಂ ಕಚೇರಿ ಭ್ರಷ್ಟಾಚಾರದ ಸಿಬಿಐ ತನಿಖೆ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳ...

ಬೆಳಗಾವಿ | ರಾಜ್ಯೋತ್ಸವ ಮೆರವಣಿಗೆಯಲ್ಲಿ ಡಿಜೆ ಶಬ್ದಕ್ಕೆ 80 ಡೆಸಿಬಲ್ ಮಿತಿ

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬೆಳಗಾವಿ ನಗರದಲ್ಲಿ ನಡೆಯಲಿರುವ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ...

ಪಶ್ಚಿಮ ಬಂಗಾಳ ಉಪಚುನಾವಣೆ ವೇಳೆ ಅಕ್ರಮದ ಆರೋಪ; ಮರುಮತದಾನಕ್ಕೆ ವಿಪಕ್ಷಗಳ ಆಗ್ರಹ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ...