ಬಡವರ ಪಾಲಿಗೆ ಉಳ್ಳವರ ಕನ್ನ; ಯುಪಿಎಸ್‌ಸಿ ‘EWS’ ಮೀಸಲಾತಿಯಲ್ಲಿ ಶ್ರೀಮಂತರ ದರ್ಬಾರು

Date:

ಆಯ್ಕೆಯಾದ 104 EWS ಅಭ್ಯರ್ಥಿಗಳ ಪೈಕಿ ಶೇ. 64.4ರಷ್ಟು ಮಂದಿ ಅತ್ಯಂತ ದುಬಾರಿ ಶುಲ್ಕದ ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆದಿದ್ದಾರೆ. ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿರುವ ವಾಜಿರಾಮ್ ಅಂಡ್ ರವಿ, ವಾಜಿರಾವ್ ಅಂಡ್ ರೆಡ್ಡಿ ಹಾಗೂ ದೃಷ್ಟಿ ಐಎಎಸ್‌ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕನಿಷ್ಠ 67 ಅಭ್ಯರ್ಥಿಗಳು ತರಬೇತಿ ಪಡೆದಿದ್ದು, ಈ ಸಂಸ್ಥೆಗಳ ವಾರ್ಷಿಕ ಶುಲ್ಕ ಬರೋಬ್ಬರಿ 2.65 ಲಕ್ಷ ರೂ.ಗಳವರೆಗೂ ಇರುತ್ತದೆ. ಫೋರಂ ಐಎಎಸ್, ನೆಕ್ಸ್ಟ್ ಐಎಎಸ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳನ್ನು ಲೆಕ್ಕಹಾಕಿದರೆ, ಒಟ್ಟಾರೆಯಾಗಿ 104ರ ಪೈಕಿ 84 ಮಂದಿ ಔಪಚಾರಿಕವಾಗಿ ದುಬಾರಿ ಸಂಸ್ಥೆಗಳಿಂದಲೇ ತರಬೇತಿ ಪಡೆದಿದ್ದಾರೆ

- Advertisement -

ಕೇಂದ್ರ ಲೋಕಸೇವಾ ಆಯೋಗ (UPSC) 2025ರ ಸಾಲಿನಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಡಬ್ಲ್ಯುಎಸ್ – EWS) ಶೇ. 10ರ ಮೀಸಲಾತಿಯಡಿ ಆಯ್ಕೆಯಾದವರ ಪಟ್ಟಿಯಲ್ಲಿ ಅಚ್ಚರಿಯ ಅಂಶಗಳು ಬೆಳಕಿಗೆ ಬಂದಿವೆ. ಬಡವರಿಗಾಗಿ ಮೀಸಲಾದ ಈ ಕೋಟಾದಡಿ ಭದ್ರತಾ ಸಿಬ್ಬಂದಿಯ ಮಗ ಅಥವಾ ರೈಲ್ವೆ ಪೋರ್ಟರ್ ಮಗಳಂತಹ ನೈಜ ಬಡ ಅಭ್ಯರ್ಥಿಗಳ ಜೊತೆಯಲ್ಲೇ, ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಲಕ್ಷಾಂತರ ರೂಪಾಯಿ ಶುಲ್ಕ ತೆತ್ತು ಓದಿದವರು, ಉದ್ಯಮಿಗಳ ಮಕ್ಕಳು, ಐಐಟಿ (IIT) ಪದವೀಧರರು ಹಾಗೂ ಬಹುರಾಷ್ಟ್ರೀಯ ಕಂಪನಿಗಳ (MNC) ಉದ್ಯೋಗಿಗಳು ಸ್ಥಾನ ಪಡೆದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮ್ಯಾಕಲ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಸಾಮಾನ್ಯ ವರ್ಗದ, ವಾರ್ಷಿಕ 8 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಅಭ್ಯರ್ಥಿಗಳಿಗೆ ನೆರವಾಗುವ ಉದ್ದೇಶದಿಂದ 2019ರಲ್ಲಿ ಇಡಬ್ಲ್ಯುಎಸ್ ಮೀಸಲಾತಿಯನ್ನು ಜಾರಿಗೆ ತರಲಾಯಿತು. ಈ ವರ್ಷ (2025) ಪ್ರಕಟವಾದ ಯುಪಿಎಸ್‌ಸಿ ಅಂತಿಮ ಫಲಿತಾಂಶದಲ್ಲಿ ಒಟ್ಟು 958 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇವರಲ್ಲಿ 104 ಮಂದಿ ಇಡಬ್ಲ್ಯುಎಸ್ ಕೋಟಾದಡಿ ಸೇವೆಗೆ ಸೇರ್ಪಡೆಯಾಗಿದ್ದಾರೆ. ಆದರೆ, ಈ 104 ಅಭ್ಯರ್ಥಿಗಳ ಸಾಮಾಜಿಕ ಜಾಲತಾಣಗಳ ಖಾತೆಗಳು, ಅವರು ವ್ಯಾಸಂಗ ಮಾಡಿದ ಶಾಲಾ-ಕಾಲೇಜುಗಳು ಹಾಗೂ ತರಬೇತಿ ಕೇಂದ್ರಗಳ ದಾಖಲೆಗಳನ್ನು ತನಿಖೆಗೊಳಪಡಿಸಿದಾಗ ಹಲವು ಬೆಚ್ಚಿಬೀಳಿಸುವ ಹಾಗೂ ಮೀಸಲಾತಿಯ ಅರ್ಹತೆಯ ಬಗ್ಗೆಯೇ ಪ್ರಶ್ನೆ ಮೂಡುವಂತಹ ನಿಖರ ಅಂಕಿ-ಅಂಶಗಳು ಲಭ್ಯವಾಗಿವೆ.

ವರದಿಯ ಪ್ರಕಾರ, ಆಯ್ಕೆಯಾದ 104 ಇಡಬ್ಲ್ಯುಎಸ್ ಅಭ್ಯರ್ಥಿಗಳ ಪೈಕಿ ಶೇ. 64.4ರಷ್ಟು ಮಂದಿ ಅತ್ಯಂತ ದುಬಾರಿ ಶುಲ್ಕದ ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆದಿದ್ದಾರೆ. ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿರುವ ವಾಜಿರಾಮ್ ಅಂಡ್ ರವಿ, ವಾಜಿರಾವ್ ಅಂಡ್ ರೆಡ್ಡಿ ಹಾಗೂ ದೃಷ್ಟಿ ಐಎಎಸ್‌ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕನಿಷ್ಠ 67 ಅಭ್ಯರ್ಥಿಗಳು ತರಬೇತಿ ಪಡೆದಿದ್ದು, ಈ ಸಂಸ್ಥೆಗಳ ವಾರ್ಷಿಕ ಶುಲ್ಕ ಬರೋಬ್ಬರಿ 2.65 ಲಕ್ಷ ರೂ.ಗಳವರೆಗೂ ಇರುತ್ತದೆ. ಫೋರಂ ಐಎಎಸ್, ನೆಕ್ಸ್ಟ್ ಐಎಎಸ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳನ್ನು ಲೆಕ್ಕಹಾಕಿದರೆ, ಒಟ್ಟಾರೆಯಾಗಿ 104ರ ಪೈಕಿ 84 ಮಂದಿ ಔಪಚಾರಿಕವಾಗಿ ದುಬಾರಿ ಸಂಸ್ಥೆಗಳಿಂದಲೇ ತರಬೇತಿ ಪಡೆದಿದ್ದಾರೆ.

ಇನ್ನು ಶೈಕ್ಷಣಿಕ ಹಿನ್ನೆಲೆಯನ್ನು ಗಮನಿಸಿದರೆ, ಶೇ. 44.4ರಷ್ಟು ಅಭ್ಯರ್ಥಿಗಳು (46 ಮಂದಿ) ತಮ್ಮ ಶಾಲಾ ಶಿಕ್ಷಣವನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಪೂರೈಸಿದ್ದಾರೆ. ದೆಹಲಿ (NCR), ಲಖನೌ, ರಾಯ್ಪುರ ಹಾಗೂ ಜೈಪುರದಂತಹ ನಗರಗಳಲ್ಲಿರುವ ಈ ಶಾಲೆಗಳ ವಾರ್ಷಿಕ ಶುಲ್ಕವೇ 45 ಸಾವಿರದಿಂದ 1.5 ಲಕ್ಷ ರೂಪಾಯಿಗಳಷ್ಟಿದೆ. ಉನ್ನತ ಶಿಕ್ಷಣದ ಅಂಕಿ-ಅಂಶಗಳು ಮತ್ತಷ್ಟು ಅಚ್ಚರಿ ಮೂಡಿಸುತ್ತವೆ; ಕನಿಷ್ಠ 14 ಮಂದಿ ಐಐಟಿ ಪದವೀಧರರು, 3 ಮಂದಿ ಎನ್‌ಐಟಿ (NIT) ವಿದ್ಯಾರ್ಥಿಗಳು, 27 ಮಂದಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಮೂವರು ದೆಹಲಿಯ ಜೆಎನ್‌ಯು (JNU) ವಿದ್ಯಾರ್ಥಿಗಳು ಈ ಬಡವರ ಪಟ್ಟಿಯಲ್ಲಿ ಸ್ಥಾನ ಪಡೆದು ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾರೆ.

ಕೇವಲ ಶಿಕ್ಷಣವಷ್ಟೇ ಅಲ್ಲ, ಈ ಅಭ್ಯರ್ಥಿಗಳ ಕೌಟುಂಬಿಕ ಹಾಗೂ ಔದ್ಯೋಗಿಕ ಹಿನ್ನೆಲೆಯೂ ಸುಭದ್ರವಾಗಿದೆ. ಕನಿಷ್ಠ 28 ಅಭ್ಯರ್ಥಿಗಳ (ಶೇ. 26.9) ಪೋಷಕರು ಸ್ವಂತ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ. ಬಟ್ಟೆ ಮಾರಾಟ, ಬೇಕರಿ, ಸ್ಟೀಲ್ ಫ್ಯಾಬ್ರಿಕೇಶನ್ ಮುಂತಾದ ವ್ಯಾಪಾರಗಳನ್ನು ನಡೆಸುತ್ತಿದ್ದಾರೆ. ಈ ಕುಟುಂಬಗಳಲ್ಲಿ 5 ಕುಟುಂಬಗಳು ದೆಹಲಿಯಲ್ಲಿ, 1 ಕುಟುಂಬ ಒಂದು ರಾಜ್ಯವೊಂದರ ರಾಜಧಾನಿಯಲ್ಲಿ ಮತ್ತು 8 ಕುಟುಂಬಗಳು ವಿವಿಧ ಜಿಲ್ಲೆಗಳ ಮುಖ್ಯ ನಗರಗಳಲ್ಲಿ ನೆಲೆಸಿವೆ. ಇದರ ಜೊತೆಗೆ, ಕನಿಷ್ಠ 10 ಅಭ್ಯರ್ಥಿಗಳು (ಶೇ. 9.6) ಯುಪಿಎಸ್‌ಸಿ ಸಿದ್ಧತೆ ಆರಂಭಿಸುವ ಮುನ್ನ ಬಹುರಾಷ್ಟ್ರೀಯ ಕಂಪನಿಗಳು, ಸಾಫ್ಟ್‌ವೇರ್ ಹಾಗೂ ನಿರ್ಮಾಣ ವಲಯದ ಬೃಹತ್ ಸಂಸ್ಥೆಗಳಲ್ಲಿ ಆಕರ್ಷಕ ವೇತನದ ಉದ್ಯೋಗದಲ್ಲಿದ್ದರು ಎಂಬುದು ತನಿಖೆಯಿಂದ ದೃಢಪಟ್ಟಿದೆ.

ಇದನ್ನು ಓದಿದ್ದೀರಾ? ‘ಬಡವರ ಬಂಧು’ ರಾಬಿನ್‌ ಹುಡ್‌ಗೆ ನೆರಳಾಗಿದ್ದ 1200 ವರ್ಷಗಳ ಐತಿಹಾಸಿಕ ‘ಮೇಜರ್ ಓಕ್’ ವೃಕ್ಷ ಅಂತ್ಯ

ಈ ಅಸಮಾನತೆಯ ನಡುವೆಯೂ, ಮೀಸಲಾತಿಯ ನೈಜ ಉದ್ದೇಶವನ್ನು ಸಾರ್ಥಕಗೊಳಿಸಿದ ಕೆಲವು ಸ್ಫೂರ್ತಿದಾಯಕ ಉದಾಹರಣೆಗಳೂ ಈ ಪಟ್ಟಿಯಲ್ಲಿವೆ. ನಿವೃತ್ತ ಯೋಧರೊಬ್ಬರ ಮಗ (ಪ್ರಸ್ತುತ ಭದ್ರತಾ ಸಿಬ್ಬಂದಿ), ಶಾಲಾ ಬಸ್ ನಿರ್ವಾಹಕನ ಮಗ, ಹಾಗೂ ರೈಲ್ವೆ ಪೋರ್ಟರ್ ಆಗಿದ್ದವರ ಮಗಳೊಬ್ಬಳು ಇದೇ ಕೋಟಾದಡಿ ಆಯ್ಕೆಯಾಗಿದ್ದಾರೆ. ಕನಿಷ್ಠ 7 ಅಭ್ಯರ್ಥಿಗಳು ಗ್ರಾಮೀಣ ಮಕ್ಕಳಿಗಾಗಿಯೇ ಇರುವ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಓದಿದವರಾಗಿದ್ದಾರೆ. ಒಟ್ಟು 29 ಅಭ್ಯರ್ಥಿಗಳ ಪೋಷಕರು ರೈತರಾಗಿದ್ದು, ಇವರಲ್ಲಿ ಉತ್ತರ ಪ್ರದೇಶದ 7, ಬಿಹಾರದ 4, ಹರಿಯಾಣದ 4, ಮಧ್ಯಪ್ರದೇಶದ 4 ಹಾಗೂ ದಕ್ಷಿಣ ಭಾರತದ ಒಂದೇ ಕುಟುಂಬದ ಇಬ್ಬರು ಸೇರಿದ್ದಾರೆ. ದಿನಗೂಲಿ ಕಾರ್ಮಿಕರು ಹಾಗೂ ನಿರುದ್ಯೋಗಿ ಪೋಷಕರ ಮಕ್ಕಳೂ ಈ ಸಾಧಕರ ಪಟ್ಟಿಯಲ್ಲಿದ್ದಾರೆ.

ಭೌಗೋಳಿಕವಾಗಿ ನೋಡುವುದಾದರೆ, ಆಯ್ಕೆಯಾದ 104 ಇಡಬ್ಲ್ಯುಎಸ್ ಅಭ್ಯರ್ಥಿಗಳು ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುತ್ತಾರೆ. ಉತ್ತರ ಪ್ರದೇಶದಿಂದ ಅತಿ ಹೆಚ್ಚು ಅಂದರೆ 25 ಮಂದಿ ಆಯ್ಕೆಯಾಗಿದ್ದರೆ, ಬಿಹಾರದಿಂದ 17, ಮಧ್ಯಪ್ರದೇಶದಿಂದ 14 ಹಾಗೂ ಹರಿಯಾಣದಿಂದ 9 ಅಭ್ಯರ್ಥಿಗಳು ಸ್ಥಾನ ಪಡೆದಿದ್ದಾರೆ. ರಾಜಸ್ಥಾನದಿಂದ 8, ಗುಜರಾತ್‌ನಿಂದ 5, ಉತ್ತರಾಖಂಡ ಹಾಗೂ ನಮ್ಮ ಕರ್ನಾಟಕದಿಂದ ತಲಾ 4, ಮತ್ತು ಕೇರಳದಿಂದ 3 ಅಭ್ಯರ್ಥಿಗಳು ಈ ಮೀಸಲಾತಿಯಡಿ ಯಶಸ್ಸು ಸಾಧಿಸಿದ್ದಾರೆ. ಈ ಮೂಲಕ ಇಡಬ್ಲ್ಯುಎಸ್ ಕೋಟಾದ ಫಲಾನುಭವಿಗಳು ದೇಶಾದ್ಯಂತ ಹರಡಿಕೊಂಡಿರುವುದು ಸ್ಪಷ್ಟವಾಗುತ್ತದೆ.

ಈ ಸಮಗ್ರ ತನಿಖಾ ವರದಿಯು ಇಡಬ್ಲ್ಯುಎಸ್ ಮೀಸಲಾತಿಯ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವ ತುರ್ತು ಅಗತ್ಯವನ್ನು ಯುಪಿಎಸ್‌ಸಿ ಹಾಗೂ ಕೇಂದ್ರ ಸರ್ಕಾರದ ಮುಂದಿಟ್ಟಿದೆ. “ಇಡಬ್ಲ್ಯುಎಸ್ ಕೋಟಾ ಕೇವಲ ಆದಾಯ ಮತ್ತು ಆಸ್ತಿಯ ಪ್ರಮಾಣಪತ್ರಗಳನ್ನು ಅವಲಂಬಿಸಿದೆ. ಅಧಿಕಾರಿಗಳು ಕೇವಲ ಸ್ವಯಂ-ಘೋಷಣೆ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಅನ್ನು ಮಾತ್ರ ನೋಡದೆ, ಕಟ್ಟುನಿಟ್ಟಾದ ಹಾಗೂ ಆಳವಾದ ಪರಿಶೀಲನೆ ನಡೆಸಬೇಕು. ಉಳ್ಳವರೇ ಈ ಮೀಸಲಾತಿಯ ಲಾಭ ಪಡೆದರೆ ಇಡಬ್ಲ್ಯುಎಸ್ ತಂದ ಮೂಲ ಉದ್ದೇಶವೇ ಸಂಪೂರ್ಣ ವಿಫಲವಾಗುತ್ತದೆ” ಎಂದು ನಿವೃತ್ತ ಮುಖ್ಯ ಮಾಹಿತಿ ಆಯುಕ್ತ ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (DoPT) ಮಾಜಿ ಕಾರ್ಯದರ್ಶಿ ಸತ್ಯಾನಂದ ಮಿಶ್ರಾ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ವರದಿಯು ಮೀಸಲಾತಿ ವ್ಯವಸ್ಥೆಯ ಪಾರದರ್ಶಕತೆ ಹಾಗೂ ನೈಜತೆಯ ಕುರಿತು ದೊಡ್ಡ ಚರ್ಚೆಗೆ ನಾಂದಿ ಹಾಡಿದೆ.

ಆಧಾರ: ಇಂಡಿಯನ್‌ ಎಕ್ಸ್‌ಪ್ರೆಸ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ | ಸೆ. 21, 22ರಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದೆ. ಭಾರತೀಯ ಹವಾಮಾನ ಇಲಾಖೆಯ (IMD) ಬೆಂಗಳೂರು...

ಸೌದಿ ಮೇಲೆ ಹೌತಿ ದಾಳಿ ತೀವ್ರ: ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ

ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಸೇರಿದಂತೆ ಪ್ರಮುಖ ನಗರಗಳ ಮೇಲೆ ಯೆಮೆನ್‌ನ...

ರಷ್ಯಾದಲ್ಲಿ ಪುತಿನ್ ಪಕ್ಷ ಮತ್ತೊಂದು ಗೆಲುವಿನ ಹೊಸ್ತಿಲಲ್ಲಿ…

ರಷ್ಯಾದಲ್ಲಿ ನಡೆಯುತ್ತಿರುವ 2026ರ 'ಸ್ಟೇಟ್ ಡೂಮಾ' (ಸಂಸತ್) ಚುನಾವಣೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್...