2025ರ ಐಪಿಎಲ್‌ನಲ್ಲೂ ಎಂಎಸ್ ಧೋನಿ ಆಡುವುದು ಅವರಿಗೆ ಬಿಟ್ಟ ವಿಚಾರ: ಚೆನ್ನೈ ಸಿಇಓ ಕಾಸಿ ವಿಶ್ವನಾಥನ್

Date:

ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಅವರ ನಿವೃತ್ತಿ ವಿಚಾರವಾಗಿ ಚೆನ್ನೈ ತಂಡದ ಸಿಇಓ ಮಹತ್ವದ ಹೇಳಿಕೆ ನೀಡಿದ್ದು, 2025ರ ಐಪಿಎಲ್‌ನಲ್ಲೂ ಎಂಎಸ್ ಧೋನಿ ಆಡುವುದು ಅವರಿಗೆ ಬಿಟ್ಟ ವಿಚಾರ. ಅವರು ಲಭ್ಯವಿರುತ್ತಾರೆ ಎಂದು ನಾವು ತುಂಬಾ ಭರವಸೆ ಹೊಂದಿದ್ದೇವೆ” ಎಂದಿದ್ದಾರೆ.

ಚೆನ್ನೈ ಈ ಬಾರಿಯ ಐಪಿಎಲ್‌ನಲ್ಲಿ ಮೇ 18ರಂದು ಆರ್‌ಸಿಬಿ ವಿರುದ್ಧ 27 ರನ್‌ಗಳಿಂದ ಸೋತು, ಪ್ಲೇ ಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಈ ಪಂದ್ಯ ಮುಗಿದ ಬಳಿಕ ಸಿಇಓ ಕಾಸಿ ವಿಶ್ವನಾಥನ್ ಅವರೊಂದಿಗಿನ ಸಂದರ್ಶನವನ್ನು ಚೆನ್ನೈ ತಂಡ ಬಿಡುಗಡೆ ಮಾಡಿದೆ. ಈ ಸಂದರ್ಶನದ ವೇಳೆ ಧೋನಿ ನಿವೃತ್ತಿ ಬಗ್ಗೆ ಕೇಳಿದಾಗ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

“ಎಂ ಎಸ್ ಧೋನಿ ಐಪಿಎಲ್‌ 2025ರ ಟೂರ್ನಿಯಲ್ಲೂ ಆಡುವ ಸಾಧ್ಯತೆ ಇದೆ” ಎಂದು ಹೇಳಿರುವ ಕಾಸಿ ವಿಶ್ವನಾಥ್‌, “ತಂಡಕ್ಕೆ ಐದು ಬಾರಿ ಟ್ರೋಫಿ ಗೆದ್ದುಕೊಟ್ಟಿರುವ ನಾಯಕನ ಯಾವುದೇ ನಿರ್ಧಾರಕ್ಕೆ ಫ್ರಾಂಚೈಸಿ ಗೌರವಿಸುತ್ತೇವೆ. ಅಭಿಮಾನಿಗಳಂತೆ ತಾವು ಕೂಡ ಮತ್ತೊಮ್ಮೆ ಧೋನಿ ಆಟ ವೀಕ್ಷಿಸುವ ಬಯಕೆ ಹೊಂದಿದ್ದೇನೆ” ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಧೋನಿ ಭವಿಷ್ಯ ಏನು? ಈ ಪ್ರಶ್ನೆಗೆ ನನ್ನ ಬಳಿ ಸದ್ಯಕ್ಕೆ ಉತ್ತರ ಇಲ್ಲ. ಇದಕ್ಕೆ ಒಬ್ಬರಿಂದಲೇ ಉತ್ತರ ಸಿಗಲು ಸಾಧ್ಯ. ಅದು ಮಹೇಂದ್ರ ಸಿಂಗ್ ಧೋನಿ ಅಷ್ಟೇ. ಇನ್ನು ನಮ್ಮ ಕಡೆಯಿಂದ ಸಿಗುವ ಉತ್ತರ ಏನೆಂದರೆ, ನಾವು ಸದಾ ಧೋನಿ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೆ ಗೌರವಿಸುತ್ತಾ ಬಂದಿದ್ದೇವೆ. ಹೀಗಾಗಿ ನಿವೃತ್ತಿ ವಿಚಾರವನ್ನು ಅವರ ಇಷ್ಟಕ್ಕೆ ಬಿಟ್ಟಿದ್ದೇವೆ. ನಮ್ಮೆಲ್ಲರಿಗೆ ಈಗಾಗಲೇ ತಿಳಿದಿರುವ ಹಾಗೆ ಧೋನಿ ಈಗಾಗಲೇ ತಮ್ಮ ನಿರ್ಧಾರದ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ. ಸರಿಯಾದ ಸಮಯಕ್ಕೆ ಅವರು ತಮ್ಮ ನಿರ್ಧಾರವನ್ನು ಜನರ ಮುಂದೆ ಹಂಚಿಕೊಳ್ಳುತ್ತಾರೆ” ಎಂದು ಸಂದರ್ಶನದಲ್ಲಿ ಕಾಸಿ ವಿಶ್ವನಾಥನ್‌ ಹೇಳಿದ್ದಾರೆ.

“ಧೋನಿ ಯಾವಾಗ ಬೇಕಾದರೂ ತಮ್ಮ ನಿರ್ಧಾರ ತಿಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ಆದರೆ, ನಮಗಂತೂ ಅವರು ಮತ್ತೊಂದು ಟೂರ್ನಿಯಲ್ಲಿ ಆಡಬೇಕು ಎಂಬ ಆಶಾಭಾವವಿದೆ. ಮುಂದಿನ ವರ್ಷವೂ ಸಿಎಸ್‌ಕೆ ಪರ ಆಡಲಿ ಎಂಬ ಬಯಕೆ ಇದೆ. ಇದು ನಮ್ಮ ದೃಷ್ಟಿಕೋನ ಮತ್ತು ಅಭಿಮಾನಿಗಳ ಬಯಕೆ ಕೂಡ ಅದೇ ಆಗಿದೆ” ಎಂದು ಚೆನ್ನೈ ಸಿಇಓ ಹೇಳಿದ್ದಾರೆ.

ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಲೀಗ್‌ ಹಂತದಲ್ಲಿ ಸಿಎಸ್‌ಕೆ ಆಡಿದ ತನ್ನ ಕಡೇ ಲೀಗ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎದುರು 27 ರನ್‌ಗಳಿಂದ ಸೋತು ಸ್ಪರ್ಧೆಯಿಂದ ಹೊರಬಿದ್ದಿತ್ತು. ಇದರಿಂದ ಟ್ರೋಫಿ ಗೆದ್ದು ಟೂರ್ನಿಗೆ ವಿದಾಯ ಹೇಳುವ ಧೋನಿ ಕನಸು ನುಚ್ಚು ನೂರಾಗಿತ್ತು. ಇದರ ಬಳಿಕ ತಮ್ಮ ಮುಂದಿನ ನಡೆ ಏನೆಂಬುದರ ಬಗ್ಗೆ ಧೋನಿ ಎಲ್ಲಿಯೂ ಬಹಿರಂಗಪಡಿಸದೆ ಮೌನಕ್ಕೆ ಜಾರಿದ್ದಾರೆ.

ಇದನ್ನು ಓದಿದ್ದೀರಾ? ನಾಕೌಟ್‌ ಪಂದ್ಯ | ಆರ್‌ಸಿಬಿ ಗೆಲುವಿಗೆ ಕಾರಣವಾದದ್ದು ಧೋನಿ ಬಾರಿಸಿದ 110 ಮೀಟರ್‌ನ ಸಿಕ್ಸ್!

ಐಪಿಎಲ್‌ 2024 ಟೂರ್ನಿಯಲ್ಲಿ ಬಹುತೇಕ ಕೊನೆಯ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಬ್ಯಾಟ್‌ ಬೀಸಿದ್ದ ಧೋನಿ, 220ರ ಸರಾಸರಿ ಸ್ಟ್ರೈಕ್‌ರೇಟ್‌ನಲ್ಲಿ 161 ರನ್‌ಗಳನ್ನು ಸಿಡಿಸಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿ20 ವಿಶ್ವಕಪ್ | ಆತಿಥೇಯ ಅಮೆರಿಕ ಸೋಲಿಸಿ ಸೂಪರ್ 8ರ ಘಟ್ಟಕ್ಕೆ ಪ್ರವೇಶಿಸಿದ ಟೀಮ್ ಇಂಡಿಯಾ

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ ಐಸಿಸಿ...

ಟಿ20 ವಿಶ್ವಕಪ್‌ | ಭಾರತಕ್ಕೆ ಗೆಲ್ಲಲು 111 ರನ್‌ಗಳ ಗುರಿ ನೀಡಿದ ಆತಿಥೇಯ ಅಮೆರಿಕ: ಮಿಂಚಿದ ಅರ್ಷ್‌ದೀಪ್ ಸಿಂಗ್

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಐಸಿಸಿ...

ಟಿ20 ವಿಶ್ವಕಪ್ | ಟೀಮ್ ಇಂಡಿಯಾ-ಅಮೆರಿಕ ಮೊದಲ ಮುಖಾಮುಖಿ: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ರೋಹಿತ್ ಶರ್ಮಾ

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಐಸಿಸಿ...

2026ರ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿ | ಕತಾರ್​ ಮೋಸದಾಟಕ್ಕೆ ಭಾರತ ಫುಟ್ಬಾಲ್​ ತಂಡ ‘ಔಟ್’; ವ್ಯಾಪಕ ಆಕ್ರೋಶ

ಕ್ರಿಕೆಟ್​​ನಂತೆ ಫುಟ್ಬಾಲ್​ನಲ್ಲಿ ಮಹತ್ತರ ಬದಲಾವಣೆ ತರಬೇಕಿದೆ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ...