ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಾರ್ನೆ ಮಾರ್ಕೆಲ್ ಅವರನ್ನು ಭಾರತದ ಕ್ರಿಕೆಟ್ ಪುರುಷರ ತಂಡದ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸೆಪ್ಟೆಂಬರ್ 1ರಿಂದ ಬಿಸಿಸಿಐ ಬೌಲಿಂಗ್ ಕೋಚ್ ಆಗಿ ಮಾರ್ಕೆಲ್ ಕಾರ್ಯನಿರ್ವಹಿಸಲಿದ್ದಾರೆ.
ಬಾಂಗ್ಲಾದೇಶದ ವಿರುದ್ಧ ಭಾರತದ ಎರಡು ಪಂದ್ಯಗಳ ಟೆಸ್ಟ್ ಸರಣಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಬೌಲಿಂಗ್ ಕೋಚ್ ನೀಡುವ ಮೂಲಕ ತಮ್ಮ ಕೋಚ್ ವೃತ್ತಿಯನ್ನು ಮಾರ್ನೆ ಮಾರ್ಕೆಲ್ ಆರಂಭಿಸಲಿದ್ದಾರೆ.
ಮಾರ್ನೆ ಮಾರ್ಕೆಲ್ ಬೌಲಿಂಗ್ ಕೋಚ್ ಆಗಿರುವ ಮಾಹಿತಿಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬುಧವಾರ ಖಚಿತಪಡಿಸಿದ್ದಾರೆ. “ಹೌದು, ಭಾರತದ ಪುರುಷರ ತಂಡಕ್ಕೆ ಮಾರ್ಕೆಲ್ ಅವರನ್ನು ತರಬೇತುದಾರರನ್ನಾಗಿ ನೇಮಿಸಲಾಗಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? 2027ರ ವಿಶ್ವಕಪ್‌ವರೆಗೂ ರೋಹಿತ್, ಕೊಹ್ಲಿ ಆಡುತ್ತಾರಾ?: ಮುಖ್ಯ ವಿಚಾರ ಬಿಚ್ಚಿಟ್ಟ ಕೋಚ್ ಗೌತಮ್ ಗಂಭೀರ್
ಈ ನೇಮಕಾತಿಯು ಭಾರತದ ಮುಖ್ಯ ಕೋಚ್ ಗೌತಮ್ ಅವರೊಂದಿಗೆ ಮತ್ತೆ ಮಾರ್ಕೆಲ್ ಕಾರ್ಯನಿರ್ವಹಣೆ ಮಾಡು ಅವಕಾಶ ನೀಡಿದೆ. ಇವರಿಬ್ಬರು ಐಪಿಎಲ್‌ನಲ್ಲಿ ಮೂರು ಸೀಸನ್‌ಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸಹ ಆಟಗಾರರಾಗಿದ್ದರು.
Morne Morkel appointed India's bowling coach: BCCI secretary Jay Shah confirms to PTI pic.twitter.com/yvtqQ26Bc3
— Press Trust of India (@PTI_News) August 14, 2024