ಫಿಫಾ ವಿಶ್ವಕಪ್: ಫ್ರಾನ್ಸ್‌ಗೆ ಭರ್ಜರಿ ಜಯ; ಮೆಸ್ಸಿ ಸಾರ್ವಕಾಲಿಕ ದಾಖಲೆಯ ಸನಿಹಕ್ಕೆ ಎಂಬಾಪೆ

Date:

ಕಿಲಿಯನ್ ಎಂಬಾಪೆ ಅವರ ಆಕರ್ಷಕ ಅವಳಿ ಗೋಲು ಹಾಗೂ ಮೈಕಲ್ ಒಲೈಸ್ ಅವರ ಮಿಂಚಿನ ಆಟದ ನೆರವಿನಿಂದ ಫ್ರಾನ್ಸ್ ತಂಡವು ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ 32ರ ಘಟ್ಟದ ಪಂದ್ಯದಲ್ಲಿ ಸ್ವೀಡನ್ ವಿರುದ್ಧ 3-0 ಗೋಲುಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 16ರ ಘಟ್ಟಕ್ಕೆ ದರ್ಪದಿಂದ ಹೆಜ್ಜೆಹಾಕಿದೆ.

- Advertisement -

ಮಂಗಳವಾರ ನ್ಯೂಯಾರ್ಕ್-ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ 80,663 ವೀಕ್ಷಕರ ಸಮ್ಮುಖದಲ್ಲಿ ನಡೆದ ಪಂದ್ಯದಲ್ಲಿ ಫ್ರಾನ್ಸ್ ಸಂಪೂರ್ಣ ಪಾರುಪತ್ಯ ಮೆರೆಯಿತು. ಪಂದ್ಯದ ಮೊದಲಾರ್ಧದ ಕೊನೆಯಲ್ಲಿ ಎಂಬಾಪೆ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ಬಳಿಕ 53ನೇ ನಿಮಿಷದಲ್ಲಿ ಬ್ರಾಡ್ಲಿ ಬಾರ್ಕೋಲಾ ಎರಡನೇ ಗೋಲು ಸಿಡಿಸಿದರು. 74ನೇ ನಿಮಿಷದಲ್ಲಿ ಎಂಪಾಪೆ ಮತ್ತೊಂದು ಗೋಲು ಬಾರಿಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಈ ಮೂರೂ ಗೋಲುಗಳಿಗೆ ಅತ್ಯುತ್ತಮ ಅವಕಾಶ ಸೃಷ್ಟಿಸಿಕೊಡುವ ಮೂಲಕ ಮೈಕಲ್ ಒಲೈಸ್ ಪಂದ್ಯದ ಪ್ರಮುಖ ಆಕರ್ಷಣೆಯಾದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಗಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ...

ಈ ಪಂದ್ಯದಲ್ಲಿ ಎರಡು ಗೋಲು ಗಳಿಸುವ ಮೂಲಕ 27 ವರ್ಷದ ಕಿಲಿಯನ್ ಎಂಬಾಪೆ ಪ್ರಸಕ್ತ ಫಿಫಾ ವಿಶ್ವಕಪ್‌ನಲ್ಲಿ ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು 6ಕ್ಕೆ ಏರಿಸಿಕೊಂಡಿದ್ದಾರೆ. ಆ ಮೂಲಕ ‘ಗೋಲ್ಡನ್ ಬೂಟ್’ ರೇಸ್‌ನಲ್ಲಿ ಲಿಯೋನೆಲ್ ಮೆಸ್ಸಿ ಅವರೊಟ್ಟಿಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಎಂಬಾಪೆ ಅವರ ಒಟ್ಟು ಗೋಲುಗಳ ಸಂಖ್ಯೆ ಇದೀಗ 18ಕ್ಕೆ ತಲುಪಿದೆ. ಮೆಸ್ಸಿ ಅವರ ಹೆಸರಿನಲ್ಲಿರುವ 19 ಗೋಲುಗಳ ಸಾರ್ವಕಾಲಿಕ ದಾಖಲೆಗಿಂತ ಎಂಪಾಪೆ ಕೇವಲ ಒಂದು ಹೆಜ್ಜೆ ಹಿಂದಿದ್ದಾರೆ.

ತಮ್ಮ ಮೊದಲ ಗೋಲು ಗಳಿಸಿದ ತಕ್ಷಣವೇ ಓಡಿಹೋದ ಎಂಬಾಪೆ, ಕೋಚ್ ಡಿಡಿಯರ್ ಡೆಶಾಂಪ್ಸ್ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿದರು. ತಾಯಿಯ ನಿಧನದ ಕಾರಣದಿಂದಾಗಿ ನಾರ್ವೆ ವಿರುದ್ಧದ ಗುಂಪು ಹಂತದ ಕೊನೆಯ ಪಂದ್ಯಕ್ಕೆ ಗೈರಾಗಿದ್ದ ಡೆಶಾಂಪ್ಸ್, ಈ ಪಂದ್ಯಕ್ಕೆ ಮರಳಿದ್ದರು. 14 ವರ್ಷಗಳ ಯಶಸ್ವಿ ಮಾರ್ಗದರ್ಶನದ ನಂತರ ಡೆಶಾಂಪ್ಸ್ ಈ ಟೂರ್ನಿಯ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. 1998ರಲ್ಲಿ ನಾಯಕರಾಗಿ ಹಾಗೂ 2018ರಲ್ಲಿ ಕೋಚ್ ಆಗಿ ಅವರು ಫ್ರಾನ್ಸ್‌ಗೆ ಫಿಫಾ ವಿಶ್ವಕಪ್ ಗೆದ್ದುಕೊಟ್ಟ ಸಾಧನೆ ಮಾಡಿದ್ದಾರೆ.

ಶನಿವಾರ ಫಿಲಡೆಲ್ಫಿಯಾದಲ್ಲಿ ನಡೆಯಲಿರುವ 16ರ ಘಟ್ಟದ (ಪ್ರಿ-ಕ್ವಾರ್ಟರ್ ಫೈನಲ್) ಪಂದ್ಯದಲ್ಲಿ ಫ್ರಾನ್ಸ್ ತಂಡವು ದಕ್ಷಿಣ ಅಮೆರಿಕಾದ ಪೆರಗ್ವೆ ತಂಡವನ್ನು ಎದುರಿಸಲಿದೆ. ಕಾಕತಾಳೀಯವೆಂದರೆ, 1998ರ ಫಿಫಾ ವಿಶ್ವಕಪ್‌ನ 16ರ ಘಟ್ಟದಲ್ಲೂ ಫ್ರಾನ್ಸ್ ತಂಡವು ಪೆರಗ್ವೆಯನ್ನು ಎದುರಿಸಿ 1-0 ಅಂತರದಿಂದ ಗೆದ್ದಿತ್ತು (ಲಾರೆಂಟ್ ಬ್ಲಾಂಕ್ ಅವರ ಗೋಲ್ಡನ್ ಗೋಲ್ ನೆರವಿನಿಂದ). ಈಗ ಮತ್ತೊಮ್ಮೆ ಅದೇ ಇತಿಹಾಸ ಮರುಕಳಿಸುವ ನಿರೀಕ್ಷೆಯಿದೆ.

ಗ್ರಹಾಂ ಪಾಟರ್ ತರಬೇತಿಯ ಸ್ವೀಡನ್ ತಂಡದಲ್ಲಿ ವಿಕ್ಟರ್ ಗ್ಯೋಕೆರೆಸ್, ಅಲೆಕ್ಸಾಂಡರ್ ಇಸಾಕ್ ಮತ್ತು ಆಂಥೋನಿ ಎಲಾಂಗ ಅವರಂತಹ ಪ್ರೀಮಿಯರ್ ಲೀಗ್ ತಾರೆಯರಿದ್ದರೂ, ಫ್ರಾನ್ಸ್ ತಂಡದ ಬಲಿಷ್ಠ ಆಟದ ಮುಂದೆ ಮಂಕಾದರು. ಪ್ಲೇ-ಆಫ್ ಮೂಲಕ ಕಷ್ಟಪಟ್ಟು ಟೂರ್ನಿಗೆ ಪ್ರವೇಶಿಸಿದ್ದ ಸ್ವೀಡನ್ ತಂಡದ ಫಿಫಾ ವಿಶ್ವಕಪ್ ಪಯಣ ಇದೀಗ ಅಂತ್ಯಗೊಂಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ ಆಶ್ರಮ’

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್...

ಅಯೋಧ್ಯೆ ರಾಮಮಂದಿರ ಸಿಬ್ಬಂದಿಗೆ ಶೇ. 100ರಷ್ಟು ಪೊಲೀಸ್ ವೆರಿಫಿಕೇಷನ್; ಹಿನ್ನೆಲೆ ಪರಿಶೀಲನೆ ಕಡ್ಡಾಯ

ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು...

ಸಿಇಸಿ ಗ್ಯಾನೇಶ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ: ಅನುಮತಿ ನಿರಾಕರಣೆ; ಜಂತರ್ ಮಂತರ್‌ನಲ್ಲಿ ಬಿಗಿ ಭದ್ರತೆ

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ...