ಹಾವೇರಿ ಜಿಲ್ಲೆಯ ಶಿಗ್ಗಾವ್ ತಾಲೂಕಿನ ಹೊಸೂರು ಸರಕಾರಿ ಮಾದರಿ ಶಾಲೆಯ ಎಸ್‌ಡಿಎಂಸಿ (ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ) ಅಧ್ಯಕ್ಷರಾಗಿ ಶೇಖಪ್ಪ ಡಿ. ಮಾದರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಹಾಗೂ ಮುಖಂಡರು ಶೇಖಪ್ಪ ಡಿ. ಮಾದರ ಅವರಿಗೆ ಶುಭಾಶಯಗಳನ್ನು ಕೋರಿ, “ಶಾಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು. ಶಾಲೆಯ ಶೈಕ್ಷಣಿಕ ಗುಣಮಟ್ಟ, ಮೂಲಭೂತ ಸೌಕರ್ಯಗಳ ವೃದ್ಧಿ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ನೂತನ ಅಧ್ಯಕ್ಷರು ಶೇಖಪ್ಪ ಡಿ. ಮಾದರ ಮಾತನಾಡಿ, “ಶಾಲೆಯ ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಪೋಷಕರ ಸಹಭಾಗಿತ್ವಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು. ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕ ವೃಂದ ಹಾಗೂ ಸಿಬ್ಬಂದಿಯ ಸಹಕಾರದೊಂದಿಗೆ ಶಾಲೆಯನ್ನು ಮಾದರಿ ಶಿಕ್ಷಣ ಕೇಂದ್ರವನ್ನಾಗಿ ರೂಪಿಸಲು ಶ್ರಮಿಸುವುದಾಗಿ” ಹೇಳಿದರು.
ಗ್ರಾಮದ ಹಿರಿಯರು ಪ್ರಶಾಂತ ಕ್ಯಾಲಕೊಂಡ, ಪ್ರಕಾಶ ಡವಗಿ, ಡಿ.ಸಿ. ಬಡಿಗೇರ, ಪಕ್ಕಿರಗೌಡ್ರು ಕಿಡಕಿನಮನಿ, ಬಾಪುನಗೌಡ್ರು ಕಿಡಕಿನಮನಿ, ಸುರೇಶ್ ದೇವತಿ, ಗುಳಪ್ಪ ಬಾರಕೇರ, ಗಣೇಶ್ ರುದ್ರಪ್ಪ ಅದರಗುಂಚಿ, ಕಲ್ಲಪ್ಪ ಚಿಗಳ್ಳಿ, ಈರಪ್ಪ ಬಿಂದ್ಲಿ ಹಾಗೂ ಸುರೇಶ್ ಪರಸಣ್ಣವರ ಉಪಸ್ಥಿತರಿದ್ದರು.




