ಭಾರತ – ಪಾಕ್ ಟಿ20 ವಿಶ್ವಕಪ್ ಪಂದ್ಯದ ಪ್ರತಿ ಟಿಕೆಟ್ ಬೆಲೆ ಬರೋಬ್ಬರಿ 17 ಲಕ್ಷ ರೂ!

Date:

ಐಪಿಎಲ್ ಮುಗಿಯುತ್ತಾ ಬಂತು, ಇನ್ನೇನಿದ್ದರೂ ಕ್ರಿಕೆಟ್ ಅಭಿಮಾನಿಗಳಲ್ಲಿ ಟಿ20 ವಿಶ್ವಕಪ್ ಹುಚ್ಚು ಶುರುವಾಗಲಿದೆ. ಜೂನ್‌ 2 ರಿಂದ ಆರಂಭವಾಗುವ ವಿಶ್ವಕಪ್ ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದಲ್ಲಿ ಆಯೋಜನೆಗೊಳ್ಳಲಿದೆ.

ಜೂನ್‌ 5ರಂದು ಭಾರತವು ತನ್ನ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ಆದರೆ ಜೂನ್‌ 9 ರಂದು ಪಾಕಿಸ್ತಾನ ವಿರುದ್ಧದ ಪಂದ್ಯ ಮಾತ್ರ ಈ ಟೂರ್ನಿಯಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಕಳೆದ ವರ್ಷ ಅಕ್ಟೋಬರ್‌ 14 ರಂದು ಏಕದಿನ ವಿಶ್ವಕಪ್‌ನಲ್ಲಿ ಭಾರತವು ಅಹಮದಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿ ಜಯಗಳಿಸಿತ್ತು.

ಭಾರತ – ಪಾಕ್‌ ಪಂದ್ಯಕ್ಕೆ ಅಭಿಮಾನಿಗಳು ಆಕರ್ಷಿತರಾಗುವುದು ಹೆಚ್ಚು. ಇದನ್ನು ಬಿಸಿಸಿಐ ಒಳಗೊಂಡಂತೆ ವಿಶ್ವದ ಇತರ ಕ್ರಿಕೆಟ್ ಮಂಡಳಿಗಳು ಬಂಡವಾಳ ಮಾಡಿಕೊಳ್ಳುತ್ತಾರೆ. ಜೂನ್‌ 9 ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಟಿಕೆಟ್‌ಗಳ ಬೆಲೆ ಆಕಾಶವನ್ನು ದಾಟಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಪಂದ್ಯದಲ್ಲಿ ಅತೀ ಕಡಿಮೆ ಟಿಕೆಟ್ ಬೆಲೆಯೆ 300 ಡಾಲರ್‌. ಭಾರತೀಯ ರೂಪಾಯಿಗಳಲ್ಲಿ ಅಂದಾಜು 25 ಸಾವಿರ ರೂ. ಇದೆ. ಐಸಿಸಿ ಮಾಹಿತಿಯ ಪ್ರಕಾರ 300 ಡಾಲರ್‌ ಟಿಕೆಟ್‌ಗಳಲ್ಲವೂ ಈಗಾಗಲೇ ಮಾರಾಟವಾಗಿ ಬಿಟ್ಟಿವೆ.

ಈ ಸುದ್ದಿ ಓದಿದ್ದೀರಾ? ಸಚಿನ್ ತೆಂಡೂಲ್ಕರ್ ಮನೆಯಲ್ಲಿ ಭದ್ರತೆಗಿದ್ದ ಪೊಲೀಸ್ ಆತ್ಮಹತ್ಯೆ

ಇನ್ನುಳಿದಂತೆ 2000, 2500 ಹಾಗೂ 2750 ಡಾಲರ್‌ಗಳ ಟಿಕೆಟ್‌ಗಳು ಮಾರಾಟಕ್ಕಿದ್ದು ಭಾರತೀಯ ರೂಪಾಯಿಗಳಲ್ಲಿ ಈ ಟಿಕೆಟ್‌ಗಳ ಬೆಲೆ 1.50 ಲಕ್ಷ ರೂ. ದಾಟುತ್ತದೆ.

ಗರಿಷ್ಠ ಟಿಕೆಟ್ 10 ಸಾವಿರ ಡಾಲರ್‌ನಿಂದ 20 ಸಾವಿರ ಡಾಲರ್‌ವರೆಗೂ ಇದ್ದು, ಭಾರತೀಯ ರೂಪಾಯಿಗಳಲ್ಲಿ 20 ಸಾವಿರ ಡಾಲರ್‌ ಅಂದಾಜು 16.6 ಲಕ್ಷವಾಗುತ್ತದೆ. ತೆರಿಗೆಗಳು ಸೇರಿದರೆ ಈ ಟಿಕೆಟ್ ಬೆಲೆ 17 ಲಕ್ಷ ರೂ. ಆಗಬಹುದು.

ಉನ್ನತಸ್ತರದವರು, ಶ್ರೀಮಂತ ಕುಟುಂಬಗಳು ಮಾತ್ರ ಅಮೆರಿಕಕ್ಕೆ ತೆರಳಿ ಈ ಪಂದ್ಯವನ್ನು ನೋಡಬಹುದು. ಅಮೆರಿಕದಲ್ಲಿ ವಾಸ ಮಾಡುವವರಿಗೂ ಈ ಪಂದ್ಯದ ಟಿಕೆಟ್‌ಗಳ ಬೆಲೆ ಗರಿಷ್ಠವೆನಿಸಿದೆ. ಟಿಕೆಟ್‌ಗಳ ಬೆಲೆಯನ್ನು ಗಮನಿಸಿದರೆ ವಿದೇಶದಲ್ಲಿ ನೆಲಸಿರುವವರು ಒಳಗೊಂಡಂತೆ ಸಾಮಾನ್ಯರ್ಯಾರು ಭಾರತ – ಪಾಕ್‌ ಪಂದ್ಯವನ್ನು ನೋಡಲು ಸಾಧ್ಯವಿಲ್ಲ.

ಈ ಪಂದ್ಯವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಈಗಾಗಲೇ ಬಹುತೇಕ ಟಿಕೆಟ್‌ಗಳನ್ನು ಖರೀದಿಸಿದ್ದು, ತಮ್ಮದೇ ವೆಬ್‌ಸೈಟ್‌ಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ.

ಟಿಕೆಟ್‌ ಬೆಲೆ ಹಾಗೂ ಕಾಳಸಂತೆ ಮಾರಾಟ ನಿಷೇಧಕ್ಕೆ ಕಠಿಣ ನಿಯಮ ರೂಪಿಸಬೇಕು ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಗ್ರಹಿಸುತ್ತಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿ20 ವಿಶ್ವಕಪ್ | ಆತಿಥೇಯ ಅಮೆರಿಕ ಸೋಲಿಸಿ ಸೂಪರ್ 8ರ ಘಟ್ಟಕ್ಕೆ ಪ್ರವೇಶಿಸಿದ ಟೀಮ್ ಇಂಡಿಯಾ

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ ಐಸಿಸಿ...

ಟಿ20 ವಿಶ್ವಕಪ್‌ | ಭಾರತಕ್ಕೆ ಗೆಲ್ಲಲು 111 ರನ್‌ಗಳ ಗುರಿ ನೀಡಿದ ಆತಿಥೇಯ ಅಮೆರಿಕ: ಮಿಂಚಿದ ಅರ್ಷ್‌ದೀಪ್ ಸಿಂಗ್

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಐಸಿಸಿ...

ಟಿ20 ವಿಶ್ವಕಪ್ | ಟೀಮ್ ಇಂಡಿಯಾ-ಅಮೆರಿಕ ಮೊದಲ ಮುಖಾಮುಖಿ: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ರೋಹಿತ್ ಶರ್ಮಾ

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಐಸಿಸಿ...

2026ರ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿ | ಕತಾರ್​ ಮೋಸದಾಟಕ್ಕೆ ಭಾರತ ಫುಟ್ಬಾಲ್​ ತಂಡ ‘ಔಟ್’; ವ್ಯಾಪಕ ಆಕ್ರೋಶ

ಕ್ರಿಕೆಟ್​​ನಂತೆ ಫುಟ್ಬಾಲ್​ನಲ್ಲಿ ಮಹತ್ತರ ಬದಲಾವಣೆ ತರಬೇಕಿದೆ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ...