ಶಿವಂ ದುಬೆ ಹಾಗೂ ಯಶಸ್ವಿ ಜೈಸ್ವಾಲ್ ಅವರ ಅಮೋಘ ಆಟದ ನೆರವಿನಿಂದ ಭಾರತ ತಂಡ ಅಫ್ಗಾನ್ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ 6 ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0 ರಿಂದ ಗೆದ್ದುಕೊಂಡಿತು.
ಇಂಧೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಫ್ಗಾನ್ ನೀಡಿದ 172 ರನ್‌ಗಳ ಸವಾಲನ್ನು ಬೆನ್ನಟ್ಟಿದ ಟೀಂ ಇಂಡಿಯಾ 15.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿಮುಟ್ಟಿತು.
ಭಾರತದ ಪರ ಶಿವಂ ದುಬೆ (63) ಹಾಗೂ ಯಶಸ್ವಿ ಜೈಸ್ವಾಲ್ (68) ಭರ್ಜರಿ ಅರ್ಧ ಶತಕ ಗಳಿಸಿದರು. ಜೈಸ್ವಾಲ್ 34 ಎಸೆತಗಳಲ್ಲಿ 5 ಬೌಂಡರಿ, 6 ಸ್ಪೋಟಕ ಸಿಕ್ಸ್ ಗಳನ್ನು ಸಿಡಿಸಿದರು. ಶಿವಂ ದುಬೆ 32 ಚೆಂಡುಗಳಲ್ಲಿ 5 ಬೌಂಡರಿ, 4 ಸಿಕ್ಸ್ ಮೂಲಕ ಅಜೇಯರಾಗಿ ಉಳಿದರು.
ಈ ಸುದ್ದಿ ಓದಿದ್ದೀರಾ: ಈ ದಿನ ಸಂಪಾದಕೀಯ | ಅಂದು ಪಕೋಡ, ಇಂದು ಶ್ರೀರಾಮ ಭಜನೆ; ನಿರುದ್ಯೋಗ ನಿವಾರಣೆಯಾಯಿತೇ?
ಇದಕ್ಕೂ ಮೊದಲು ಟಾಸ್ ಸೋತ ಅಪ್ಗಾನ್ ಮೊದಲು ಬ್ಯಾಟಿಂಗ್ ಮಾಡಿ ಗುಲ್ಬದಿನ್ ನಾಯಬ್ (57) ಬ್ಯಾಟಿಂಗ್ ನೆರವಿನೊಂದಿಗೆ 20 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 171 ರನ್ ಕಲೆ ಹಾಕಿತು.
ಗುಲ್ಬದಿನ್ ನಾಯಬ್ ಹೊರತುಪಡಿಸಿ ಅಫ್ಗಾನ್ ಪರ ನಜೀಬುಲ್ಲಾ ಜದ್ರಾನ್ (23), ಕರೀಂ ಜನತ್(20), ಮೊಹಮ್ಮದ್ ನಬಿ (14),ರಹಮಾನುಲ್ಲಾ ಗುರ್ಬಾಜ್(14) ರನ್ ಗಳಿಸಿ ತಂಡದ ಮೊತ್ತ 170 ರನ್ ಗಡಿ ದಾಟಲು ಕಾರಣರಾದರು.
ಭಾರತದ ಪರ ಅಕ್ಸರ್ ಪಟೇಲ್ 17/2, ರವಿ ಬಿಷ್ಣೋಯ್ 39/2,ಅರ್ಷದೀಪ್ ಸಿಂಗ್ 31/3 ಹಾಗೂ ಶಿವಂ ದುಬೆ 36/2 ವಿಕೆಟ್ ಕಬಳಿಸಿದರು.