ಐಪಿಎಲ್‌ 2023| ಮಧ್ವಾಲ್‌ ಮುಂದೆ ಮಂಡಿಯೂರಿದ ಲಖನೌ! ʻಸೆಮಿಫೈನಲ್‌ʼಗೆ ಮುಂಬೈ ಇಂಡಿಯನ್ಸ್‌

Date:

ಐಪಿಎಲ್‌ 16ನೇ ಆವೃತ್ತಿಯ ಎಲಿಮಿನೇಟರ್‌ ಪಂದ್ಯದಲ್ಲಿ ಲಖನೌ ತಂಡವನ್ನು ಭರ್ಜರಿಯಾಗಿ ಮಣಿಸಿದ ಮುಂಬೈ ಇಂಡಿಯನ್ಸ್‌, ಕ್ವಾಲಿಫೈಯರ್‌-2 ಪಂದ್ಯಕ್ಕೆ ಅರ್ಹತೆ ಪಡೆದಿದೆ.

ಚೆನ್ನೈನ ಚೆಪಾಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌, ತಂಡದೆದುರು ಲಖನೌ ಸೂಪರ್​ಜೈಂಟ್ಸ್ 81 ರನ್‌ಗಳ ಅಂತರದ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಲಖನೌ ತಂಡದ ಅಭಿಯಾನ  ಅಂತ್ಯವಾಗಿದೆ.

ಮುಂಬೈ ಮುಂದಿಟ್ಟಿದ್ದ 183 ರನ್‌ಗಳ ಕಠಿಣ ಸವಾಲನ್ನು  ಬೆನ್ನಟ್ಟುವ ವೇಳೆ ಲಖನೌ 16.3 ಓವರ್‌ಗಳಲ್ಲಿ ಕೇವಲ 101 ರನ್‌ಗಳಿಗೆ ಸರ್ವಪತನ ಕಂಡಿತು. ಚೇಸಿಂಗ್‌ ವೇಳೆ ಯಾವುದೇ ಹಂತದಲ್ಲೂ ಕೃನಾಲ್‌ ಪಾಂಡ್ಯ ಪಡೆ ಗೆಲುವಿಗಾಗಿ ಹೋರಾಡಲಿಲ್ಲ.

5 ರನ್‌ ನೀಡಿ 5 ವಿಕೆಟ್‌ ಪಡೆದ ಆಕಾಶ್‌ ಮಧ್ವಾಲ್‌!

ಯುವ ವೇಗದ ಬೌಲರ್‌ ಆಕಾಶ್‌ ಮಧ್ವಾಲ್‌ 3.3 ಓವರ್‌ಗಳಲ್ಲಿ ಕೇವಲ 5 ರನ್‌ ನೀಡಿ 5 ವಿಕೆಟ್‌ ಪಡೆಯುವ ಮೂಲಕ ಲಖನೌ ತಂಡಕ್ಕೆ ಆಘಾತವಿಕ್ಕಿದರು. ಮುಂಬೈ ಮಿಂಚಿನ ಕ್ಷೇತ್ರರಕ್ಷಣೆಗೆ ಲಖನೌನ ಮೂರು ಬ್ಯಾಟರ್‌ಗಳು ರನೌಟ್‌ಗೆ ಬಲಿಯಾಗಿದ್ದು ಸಹ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

ಶುಕ್ರವಾರ ಅಹಮದಾಬಾದ್‌ನಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಸವಾಲನ್ನು ಮುಂಬೈ ಇಂಡಿಯನ್ಸ್ ಎದುರಿಸಲಿದೆ. ಮಂಗಳವಾರ ನಡೆದ ಕ್ವಾಲಿಫೈಯರ್‌-1 ಪಂದ್ಯದಲ್ಲಿ 4 ಬಾರಿಯ ಚಾಂಪಿಯನ್‌ ಚೆನ್ನೈ, ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌ ತಂಡವನ್ನು ಮಣಿಸಿ ದಾಖಲೆಯ 10ನೇ ಬಾರಿಗೆ ಫೈನಲ್‌ ಪ್ರವೇಶಿಸಿತ್ತು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

43 ವರ್ಷಗಳ ಬಳಿಕ ಮೊದಲ ಪ್ರಶಸ್ತಿ ಗೆದ್ದ ವೆಸ್ಟ್‌ ಹ್ಯಾಮ್‌ ಯುನೈಟೆಡ್!

ಇಂಗ್ಲಿಷ್‌ ಪ್ರೀಮಿಯರ್ ಲೀಗ್‌ ಕ್ಲಬ್‌‌ ವೆಸ್ಟ್ ಹ್ಯಾಮ್‌ ಯುನೈಟೆಡ್‌ ತಂಡದ ನಾಲ್ಕು...

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ | 469 ರನ್‌ಗಳಿಗೆ ಆಸ್ಟ್ರೇಲಿಯಾ ಆಲೌಟ್‌

4 ವಿಕೆಟ್‌ ಪಡೆದ ಮುಹಮ್ಮದ್‌ ಸಿರಾಜ್‌ 31ನೇ ಟೆಸ್ಟ್‌ ಶತಕ ಗಳಿಸಿದ ಸ್ಟೀವ್‌...

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ | ದಾಖಲೆಯ 31ನೇ ಶತಕ ಸಿಡಿಸಿದ ಸ್ಟೀವ್ ಸ್ಮಿತ್

ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ 422/7 ಭಾರತದ ವಿರುದ್ಧ 9ನೇ ಶತಕ ...

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ | ಭಾರತೀಯ ಬೌಲರ್‌ಗಳ ಬೆವರಿಳಿಸಿದ ಟ್ರಾವಿಸ್‌ ಹೆಡ್-ಸ್ಮಿತ್‌

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪಂದ್ಯದ ಮೊದಲ ದಿನವೇ ಆಸ್ಟ್ರೇಲಿಯಾ...