ಐಪಿಎಲ್‌ 2023 | ವೇಗದ ಅರ್ಧಶತಕ; ದಾಖಲೆ ಬರೆದ ಯಶಸ್ವಿ ಜೈಸ್ವಾಲ್

Date:

ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಐಪಿಎಲ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಕೇವಲ 13 ಎಸೆತಗಳಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ ಜೈಸ್ವಾಲ್, ಐಪಿಎಲ್ ಇತಿಹಾಸದಲ್ಲೇ ಅತಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಆ ಮೂಲಕ ಕನ್ನಡಿಗ ಕೆ.ಎಲ್ ರಾಹುಲ್ ಜೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದರು.

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್‌ 16ನೇ ಆವೃತ್ತಿಯ 56ನೇ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ರಾಯಲ್ಸ್‌ನ ಜೈಸ್ವಾಲ್‌ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2018ರಲ್ಲಿ ಡೆಲ್ಲಿ ತಂಡದ ವಿರುದ್ಧ ಕನ್ನಡಿಗ ಕೆ.ಎಲ್ ರಾಹುಲ್ , ಅರ್ಧಶತಕ ಬಾರಿಸಿ, ದಾಖಲೆ ನಿರ್ಮಿಸಿದ್ದರು. 2022ರಲ್ಲಿ ಪ್ಯಾಟ್ ಕಮಿನ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

ಮೊದಲ ಓವರ್‌ನಲ್ಲೇ 26 ರನ್!

ಚೇಸಿಂಗ್‌ ವೇಳೆ ಆರಂಭಿಕನಾಗಿ ಬಂದ ಜೈಸ್ವಾಲ್‌, ತಾನೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದ್ದರು. ಕೆಕೆಆರ್‌ ನಾಯಕ ನಿತೀಶ್‌ ರಾಣಾ ಎಸೆದ ಮೊದಲ ಓವರ್‌ನಲ್ಲೇ, 2 ಸಿಕ್ಸರ್ ಹಾಗೂ 3 ಬೌಂಡರಿ ಸೇರಿದಂತೆ ಬರೋಬ್ಬರಿ 26 ರನ್ ಚಚ್ಚಿದರು. ಒಟ್ಟು 47ಎಸೆತಗಳನ್ನು ಎದುರಿಸಿದ 21 ವರ್ಷದ ಎಡಗೈಬ್ಯಾಟರ್‌, 13 ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್‌ಗಳನ್ನೊಳಗೊಂಡ 98 ರನ್ ಗಳಿಸಿ ಅಜೇಯರಾಗಿ ಉಳಿದರು.

ಐಪಿಎಲ್‌ನ ವೇಗದ ಅರ್ಧಶತಕಗಳ ಪಟ್ಟಿ

  • ಯಶಸ್ವಿ ಜೈಸ್ವಾಲ್ : 13 ಎಸೆತ (VS ಕೋಲ್ಕತ್ತಾ)
  • ಕೆ.ಎಲ್.ರಾಹುಲ್ : 14 ಎಸೆತ (VS ಡೆಲ್ಲಿ)
  • ಪ್ಯಾಟ್ ಕಮಿನ್ಸ್ : 14 ಎಸೆತ (VS ಮುಂಬೈ)
  • ಯುಸೂಫ್ ಪಠಾಣ್ : 15 ಎಸೆತ (VS ಹೈದರಾಬಾದ್)
  • ಸುನಿಲ್ ನರೈನ್ : 15 ಎಸೆತ (VS ಆರ್‌ಸಿಬಿ)
  • ನಿಕೋಲಸ್ ಪೂರನ್ : 15 ಎಸೆತ (VS ಆರ್‌ಸಿಬಿ)
  • ಸುರೇಶ್ ರೈನಾ : 16 ಎಸೆತ (VS ಪಂಜಾಬ್)
  • ಇಶಾನ್ ಕಿಶನ್ : 16 ಎಸೆತ (VS ಹೈದಾರಾಬಾದ್)
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಪೈರ್ ಜೊತೆ ವಾಗ್ವಾದ: ಕೊಹ್ಲಿಗೆ ಶೇ.50 ರಷ್ಟು ದಂಡ

ಐಪಿಎಲ್‌ ಟೂರ್ನಿಯಲ್ಲಿ ಕೆಕೆಆರ್‌ ತಂಡದ ವಿರುದ್ಧದ ಪಂದ್ಯದಲ್ಲಿ ಅಂಪೈರ್‌ ವಿರುದ್ಧ ವಾಗ್ವಾದ...

ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ 17ರ ಹರೆಯದ ಭಾರತೀಯ ಡಿ ಗುಕೇಶ್

ಭಾರತದ 17 ವರ್ಷದ ಗ್ರ್ಯಾಂಡ್‌ ಮಾಸ್ಟರ್ ಡಿ ಗುಕೇಶ್ ಟೊರೊಂಟೊದಲ್ಲಿ ನಡೆದ...

ಐಪಿಎಲ್ | ಪಂಜಾಬ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ಮೂರು ವಿಕೆಟ್‌ಗಳ ಜಯ

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌...