ಐಪಿಎಲ್ 2023 |ರೋಹಿತ್‌ ಶರ್ಮಾ ಸ್ಪೋಟಕ ಆಟದಿಂದ ಮುಂಬೈಗೆ ಮೊದಲ ಗೆಲುವು

Date:

ನಾಯಕ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್ ಅವರ ಸ್ಫೋಟಕ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ 16ನೇ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿತು.

ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 173 ರನ್‌ಗಳ ಗುರಿಯನ್ನು 20ನೇ ಓವರ್‌ನ ರೋಚಕ ಆಟದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.

ಕಳೆದ ಹಲವು ಪಂದ್ಯಗಳಲ್ಲಿ ಫಾರ್ಮ್‌ ಕಳೆದುಕೊಂಡಿದ್ದ ನಾಯಕ ರೋಹಿತ್‌ ಶರ್ಮಾ ಇಂದು ಭರ್ಜರಿ ಬ್ಯಾಟಿಂಗ್‌ ಆಡಿವಾಡಿದರು. 45 ಚೆಂಡುಗಳಲ್ಲಿ 4 ಸಿಕ್ಸರ್‌ ಹಾಗೂ 6 ಬೌಂಡರಿಯೊಂದಿಗೆ 65 ರನ್‌ ಬಾರಿಸಿದರು. ತಿಲಕ್‌ ವರ್ಮಾ ಕೂಡ 29 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ 41 ಸ್ಫೋಟಿಸಿ ಗೆಲುವಿನಲ್ಲಿ ನೆರವಾದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈಗಾಗಲೇ ಮೂರು ಸೋಲುಗಳನ್ನು ಕಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಟೂರ್ನಿಯ ನಾಲ್ಕನೇ ಸೋಲಾಗಿದೆ.

ಅಕ್ಸರ್ – ವಾರ್ನರ್‌ ಜೊತೆಯಾಟ

ಟಾಸ್‌ ಸೋತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಲ್‌ರೌಂಡರ್‌ ಅಕ್ಸರ್ ಪಟೇಲ್‌ ಅವರ ಸಿಕ್ಸರ್‌, ಬೌಂಡರಿಗಳ ಭರ್ಜರಿಯಾಟ ಹಾಗೂ ನಾಯಕ ಡೇವಿಡ್‌ ವಾರ್ನರ್‌ ಸಮಯೋಚಿತ ಆಟದಿಂದ 172 ರನ್‌ಗಳ ಗೌರವಾನ್ವಿತ ಮೊತ್ತ ದಾಖಲಿಸಿತು.

ಡೆಲ್ಲಿ ನಾಲ್ಕನೇ ಓವರ್‌ನಲ್ಲಿಯೇ ಪೃಥ್ವಿ ಶಾ (15) ಅವರ ವಿಕೆಟ್ ಕಳೆದುಕೊಂಡಿತು. ಮನೀಶ್‌ ಪಾಂಡೆಯೊಂದಿಗೆ ಆಟವಾಡಿದ ನಾಯಕ ವಾರ್ನರ್ ಎರಡನೇ ವಿಕೆಟ್ ಜೊತೆಯಾಟಕ್ಕೆ 43 ರನ್‌ ಕಲೆಯಾಕಿದರು. ತಂಡದ ಮೊತ್ತ 81 ರನ್‌ ಆಗಿದ್ದಾಗ ಚಾವ್ಲಾ ಬೌಲಿಂಗ್‌ನಲ್ಲಿ ಪಾಂಡೆ ಔಟಾದರು.

ಇವರ ನಂತರ ಬಂದ ಯಶ್‌ ಧುಲ್‌,ರೋವಮನ್‌ ಪೋವಲ್, ಲಲಿತ್‌ ಯಾದವ್‌ ಹೆಚ್ಚು ಹೊತ್ತು ನಿಲ್ಲದೆ ಪೆವಿಲಿಯನ್‌ ಕಡೆ ಮುಖ ಮಾಡಿದರು. 7ನೇ ಕ್ರಮಾಂಕದ ಆಟಗಾರ ಆಲ್‌ರೌಂಡರ್‌ ಅಕ್ಸರ್‌ ಪಟೇಲ್‌ ಆಗಮಿಸಿದ ನಂತರ ತಂಡದ ಮೊತ್ತ ಬಿರುಸು ಪಡೆಯಿತು. ಇವರಿಬ್ಬರು 6ನೇ ವಿಕೆಟ್‌ ಜೊತೆಯಾಟದಲ್ಲಿ 34 ಎಸೆತಗಳಲ್ಲಿ 67 ರನ್‌ ಬಾರಿಸಿದರು.

ಅಕ್ಸರ್‌ ಪಟೇಲ್ 25 ಚೆಂಡುಗಳಲ್ಲಿ 5 ಸಿಕ್ಸರ್,4 ಬೌಂಡರಿಯೊಂದಿಗೆ 54 ಸಿಡಿಸಿದರೆ,ನಾಯಕ ಡೇವಿಡ್‌ ವಾರ್ನರ್ 47 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 51 ಪೇರಿಸಿದರು. ಅಂತಿಮವಾಗಿ ಡೆಲ್ಲಿ ತಂಡ 19.4 ಓವರ್‌ಗಳಲ್ಲಿ 172 ರನ್‌ಗೆ ಆಲೌಟ್‌ ಆಯಿತು.

ಮುಂಬೈ ಪರ ಜೇಸನ್ ಬೆಹ್ರೆನ್‌ಡಾರ್ಫ್ 23/3 ಹಾಗೂ ಪಿಯೂಶ್ ಚಾವ್ಲಾ 22/3 ಹಾಗೂ ರೈಲೀ ಮೆರೆಡಿತ್  34/2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್‌ ಎನಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ಪಂಜಾಬ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ಮೂರು ವಿಕೆಟ್‌ಗಳ ಜಯ

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌...

ಐಪಿಎಲ್ | ರೋಚಕ ಹಣಾಹಣಿಯಲ್ಲಿ ಕೈಕೊಟ್ಟ ನಸೀಬು: ಕೆಕೆಆರ್‌ ವಿರುದ್ಧ ಆರ್‌ಸಿಬಿಗೆ 1 ರನ್‌ಗಳ ಸೋಲು

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂದು ನಡೆದ ಐಪಿಎಲ್ 36ನೇ ಪಂದ್ಯದಲ್ಲಿ ರಾಯಲ್...

ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ‘ಕೆಎಂಎಫ್’ ಪ್ರಯೋಜಕತ್ವ

ನಂದಿನಿ ಬ್ರಾಂಡ್‌ನೊಂದಿಗೆ ಡೇರಿ ಉದ್ಯಮಗಳಲ್ಲಿ ಎಲ್ಲಡೆ ಹೆಸರುವಾಸಿಯಾಗಿರುವ ಕರ್ನಾಟಕ ಹಾಲು ಒಕ್ಕೂಟ...