ತಾಲ್ಲೂಕಿನ ಹಿರೇಉಪ್ಪೇರಿ ಗ್ರಾಮದಲ್ಲಿ ಸಾಗವಾನಿ ಮರ ಕಡಿದು ದೇವದುರ್ಗ ತಾಲ್ಲೂಕಿನ ಊಟಿ ಗ್ರಾಮಕ್ಕೆ ಅಕ್ರಮವಾಗಿ ಸಾಗುತ್ತಿದ್ದ ವೇಳೆ ಪಟ್ಟಣದ ಬಸವಸಾಗರ ವೃತ್ತದಲ್ಲಿ ಶನಿವಾರ ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.
ಮೂರು ಗೂಡ್ಸ್ ವಾಹನದಲ್ಲಿ 3.874 ಘನ ಮೀಟರ್ ಅಳತೆಯ 119 ಸಾಗವಾನಿ ಮರದ ತುಂಡುಗಳನ್ನು ಯಾವುದೇ ದಾಖಲಾತಿ ಇಲ್ಲದೆ ಊಟಿ ಗ್ರಾಮಕ್ಕೆ ಸಾಗಿಸುತ್ತಿದ್ದ ವೇಳೆಯಲ್ಲಿ ಪಿಐ ಹೊಸಕೇರಪ್ಪ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದ್ದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಿಡಿಲು ಬಡಿದು ಮೃತಪಟ್ಟ ರೈತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ವಿತರಣೆ
ಈ ವೇಳೆ ₹ 4,82,761 ಮೌಲ್ಯದ ಸಾಗವಾನಿ ಮರದ ತುಂಡುಗಳು ಹಾಗೂ ಮೂರು ಗೂಡ್ಸ್ ವಾಹನಗಳನ್ನು ಜಪ್ತಿ ಮಾಡಿ ಗ್ರೂಡ್ಸ್ ವಾಹನಗಳ ಚಾಲಕರಾದ ಮಲ್ಲೇಶ ಹುಣಸಿಗಿಡದ, ಅಭಿಜಿತ, ಫಕ್ರುದ್ದೀನ್ ಮುಲ್ಲಾ, ಆಂಜನೇಯ ಮ್ಯಾಕಲರ್ ಹಾಗೂ ಜಮೀನು ಮಾಲಿಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.




