‘ಸಚಿನ್ ವೃತ್ತಿಬದುಕನ್ನೇ ನುಂಗುವಂತಿತ್ತು ಆ ಗಾಯ’: ವೈಭವ್ ಸೂರ್ಯವಂಶಿಗೆ ಕಾದಿದೆಯಾ ಕಂಟಕ?

Date:

ಹದಿನೈದು ವರ್ಷದ ಉದಯೋನ್ಮುಖ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಆಟದ ಬಗ್ಗೆ ಭಾರೀ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತಿರುವಂತೆಯೇ, ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಡ್ಯಾರಿಲ್ ಕಲ್ಲಿನನ್ ಕಳವಳ ವ್ಯಕ್ತಪಡಿಸಿದ್ದಾರೆ. ವೈಭವ್ ಅವರ ಸ್ಫೋಟಕ ಬ್ಯಾಟಿಂಗ್ ಶೈಲಿ ಹಾಗೂ ಹೆಚ್ಚುತ್ತಿರುವ ಕೆಲಸದೊತ್ತಡದಿಂದಾಗಿ ಅವರ ದೇಹದ ಮೇಲಾಗುವ ಪರಿಣಾಮಗಳ ಬಗ್ಗೆ ಕಲ್ಲಿನನ್ ಎಚ್ಚರಿಸಿದ್ದಾರೆ.

- Advertisement -

ವೈಭವ್ ತಮ್ಮ ನಿರ್ಭೀತ ಆಟ ಮತ್ತು ಬಲಿಷ್ಠ ಹೊಡೆತಗಳಿಂದಾಗಿ ಶೀಘ್ರವಾಗಿ ಜನಪ್ರಿಯತೆ ಗಳಿಸಿದ್ದಾರೆ. ಅವರ ಬ್ಯಾಟ್ ಬೀಸುವ ಅಸಾಧಾರಣ ವೇಗ ಅವರ ಆಟದ ಪ್ರಮುಖ ಆಕರ್ಷಣೆಯಾಗಿದೆ. ಆದರೆ, ಅವರು ದೈಹಿಕವಾಗಿ ಇನ್ನೂ ಬೆಳೆಯುತ್ತಿರುವ ಹಂತದಲ್ಲಿರುವ ಕಾರಣ, ಇಂತಹ ಆಕ್ರಮಣಕಾರಿ ಆಟವು ಮುಂದೊಂದು ದಿನ ಅವರ ದೇಹದ ಮೇಲೆ ಗಂಭೀರ ದುಷ್ಪರಿಣಾಮ ಬೀರಬಹುದು ಎಂದು ಕಲ್ಲಿನನ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ವೈಭವ್ 94 ರನ್‌ಗಳ ಮ್ಯಾಚ್-ವಿನ್ನಿಂಗ್ ಇನಿಂಗ್ಸ್ ಆಡಿದ ಬಳಿಕ, ಕಲ್ಲಿನನ್ ಲಿಂಕ್ಡ್‌ಇನ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ಈ ಯುವ ಆಟಗಾರನನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿದೆ. ಆದರೆ ನನ್ನನ್ನು ಕಾಡುತ್ತಿರುವ, ಮತ್ತು ಯಾರೂ ಮಾತನಾಡದ ವಿಚಾರವೆಂದರೆ ‘ಗಾಯದ ಸಮಸ್ಯೆ’. 15ನೇ ವಯಸ್ಸಿನಲ್ಲಿ, ಭಾರವಾದ ಬ್ಯಾಟ್ ಬೀಸುತ್ತಾ, ಇಷ್ಟೊಂದು ಕ್ರಿಕೆಟ್ ಆಡುತ್ತಿರುವುದು ಅವರ ಮಣಿಕಟ್ಟು, ಮೊಣಕೈ, ಕೀಲುಗಳು ಹಾಗೂ ಇತರ ಸೂಕ್ಷ್ಮ ಅಂಗಗಳ ಮೇಲೆ ಪರಿಣಾಮ ಬೀರಬಹುದು ಎಂಬ ಭಯ ನನಗಿದೆ. ಇದರ ಬಗ್ಗೆ ವೈದ್ಯಕೀಯ ವಲಯದ ಅಭಿಪ್ರಾಯವೇನು? ನೆನಪಿರಲಿ, ಮೊಣಕೈ ಗಾಯದಿಂದಾಗಿ (ಟೆನಿಸ್ ಎಲ್ಬೊ) ಸಚಿನ್ ತೆಂಡೂಲ್ಕರ್ ಅವರ ವೃತ್ತಿಜೀವನವೇ ಬಹುತೇಕ ಅಂತ್ಯವಾಗುವ ಹಂತಕ್ಕೆ ತಲುಪಿತ್ತು. ಖಂಡಿತವಾಗಿಯೂ ಸಚಿನ್ ಕೂಡ ಸೂರ್ಯವಂಶಿಯಷ್ಟು ವೇಗವಾಗಿ ಹಾಗೂ ಅಷ್ಟೊಂದು ಬಾರಿ ಬ್ಯಾಟ್ ಬೀಸುತ್ತಿರಲಿಲ್ಲ” ಎಂದು ಕಲ್ಲಿನನ್ ಬರೆದುಕೊಂಡಿದ್ದಾರೆ.

ಇದನ್ನು ಓದಿದ್ದೀರಾ? ‘ಐಪಿಎಲ್‌ಗೆ ಸೀಮಿತ’ ಎಂಬ ಟೀಕೆಗೆ ತಕ್ಕ ಉತ್ತರ: ಯುವ ತಾರೆ ಸೂರ್ಯವಂಶಿಯ ವಿಶ್ವದಾಖಲೆಯಾಟ

ವೈಭವ್ ಅವರ ಬಲಿಷ್ಠ ಹೊಡೆತಗಳಿಂದ ಉಂಟಾಗುವ ಒತ್ತಡವು ಕಾಲಾನಂತರದಲ್ಲಿ ಅವರ ದೇಹದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಕಲ್ಲಿನನ್ ದೃಢವಾಗಿ ನಂಬಿದ್ದಾರೆ. ಕಾಮೆಂಟ್ ಒಂದಕ್ಕೆ ಪ್ರತಿಕ್ರಿಯಿಸಿದ ಅವರು, “ಆತನಿಗಾಗಿ ಕಟ್ಟುನಿಟ್ಟಾದ ದಿನಚರಿಯನ್ನು ರೂಪಿಸಲಾಗಿದೆ ಎಂದು ಭಾವಿಸುತ್ತೇನೆ. ಆತ ಇನ್ನೂ ಬೆಳೆಯುತ್ತಿರುವ ಹುಡುಗ, ಹಾಗಾಗಿ ಆತನ ಕೀಲುಗಳು, ಅಸ್ಥಿರಜ್ಜುಗಳು (ligaments) ಮತ್ತು ಸ್ನಾಯುಗಳೂ ಬೆಳೆಯುತ್ತಿರುತ್ತವೆ. ಅವುಗಳ ಮೇಲೆ ವಿಪರೀತ ಒತ್ತಡ ಬೀಳುತ್ತಿದೆ ಎಂಬುದನ್ನು ನಾನು ಖಚಿತವಾಗಿ ಹೇಳಬಲ್ಲೆ” ಎಂದಿದ್ದಾರೆ.

ಸೂರ್ಯವಂಶಿ ಅವರನ್ನು ಆಗಾಗ್ಗೆ ಹೋಲಿಸುವ ಸಚಿನ್ ತೆಂಡೂಲ್ಕರ್ ಅವರ ಉದಾಹರಣೆಯನ್ನು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ನೀಡಿದ್ದಾರೆ. 24 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವಾರು ಪೆಟ್ಟುಗಳನ್ನು ತಿಂದಿದ್ದರೂ, 2004ರಲ್ಲಿ ಕಾಡಿದ ‘ಟೆನಿಸ್ ಎಲ್ಬೊ’ ಗಾಯದ ಸಮಸ್ಯೆಯು ತಾವು ಎದುರಿಸಿದ ಅತ್ಯಂತ ಕಠಿಣ ಹಿನ್ನಡೆ ಎಂದು ಸಚಿನ್ ಹೇಳಿದ್ದರು.

ಹಿಂದಿನ ತಲೆಮಾರುಗಳಿಗಿಂತ ಇಂದಿನ ಆಟಗಾರರು ಭಾರವಾದ ಬ್ಯಾಟ್‌ಗಳನ್ನು ಬಳಸುತ್ತಿರುವುದು ಮತ್ತು ವರ್ಷವಿಡೀ ಬಿಡುವಿಲ್ಲದ ಕ್ರಿಕೆಟ್ ಆಡುತ್ತಿರುವುದರಿಂದ ಯುವ ಕ್ರಿಕೆಟಿಗರು ದೀರ್ಘಕಾಲದ ಗಾಯದ ಸಮಸ್ಯೆಗಳನ್ನು ಎದುರಿಸುವ ಅಪಾಯ ಹೆಚ್ಚಿದೆ ಎಂದು ಕಲ್ಲಿನನ್ ವಿವರಿಸಿದ್ದಾರೆ. “ದೀರ್ಘಕಾಲದ ಮಣಿಕಟ್ಟಿನ ಸಮಸ್ಯೆಗಳಿಗೆ ತುತ್ತಾದ ಹಲವು ಆಟಗಾರರು ನನಗೆ ತಿಳಿದಿದ್ದಾರೆ. ನಾವು ಆಡುವಾಗ ಹಗುರವಾದ ಬ್ಯಾಟ್‌ಗಳನ್ನು ಬಳಸುತ್ತಿದ್ದೆವು ಮತ್ತು ಇಷ್ಟೊಂದು ಕ್ರಿಕೆಟ್ ಆಡುತ್ತಿರಲಿಲ್ಲ. ಆತ (ವೈಭವ್) ಇನ್ನೂ ಬೆಳೆಯುತ್ತಿದ್ದಾನೆ ಎಂಬುದನ್ನು ಮರೆಯಬಾರದು. ಇಂದಿನ ತರಬೇತಿ ಮತ್ತು ಚೇತರಿಕೆ ವಿಧಾನಗಳು ಸಹಾಯ ಮಾಡಬಹುದು. ಆದರೆ, ಆತನ ದೀರ್ಘಕಾಲೀನ ಭವಿಷ್ಯ ಮತ್ತು ಆರೋಗ್ಯದ ಬಗ್ಗೆ ನನಗೆ ನಿಜಕ್ಕೂ ಭಯವಿದೆ” ಎಂದು ದಕ್ಷಿಣ ಆಫ್ರಿಕಾ ಪರ 70 ಟೆಸ್ಟ್ ಹಾಗೂ 138 ಏಕದಿನ ಪಂದ್ಯಗಳನ್ನು ಆಡಿರುವ ಕಲ್ಲಿನನ್ ಆತಂಕ ವ್ಯಕ್ತಪಡಿಸಿದ್ದಾರೆ.

daryll cullinan
daryll cullinan
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ ಸಾಕೇ, ಇನ್ನಷ್ಟು ಬೇಕೇ?

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು....

ಕೇರಳದಲ್ಲಿ ಮತ್ತೆ ಭೂಕುಸಿತ; 9 ಮಂದಿ ಸಾವು, ಹಲವರು ನಾಪತ್ತೆ

ಕೇರಳ ರಾಜ್ಯದಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದ...

ವಿಧಾನ ಮಂಡಲದಲ್ಲಿ ಕಸ್ತೂರಿರಂಗನ್ ವರದಿ ಕುರಿತು ಗಂಭೀರ ಚರ್ಚೆ; ಕಾಡಂಚಿನ ಜನರ ಹಿತ ಕಾಯಲು ಶಾಸಕರ ಒಕ್ಕೊರಲ ಆಗ್ರಹ

ಸದನದಲ್ಲಿ ಮಾತನಾಡಿದ ಈ ಎಲ್ಲಾ ನಾಯಕರು, ಕಸ್ತೂರಿರಂಗನ್ ವರದಿಯನ್ನು ಅರಣ್ಯದ ಸಮೀಪ...

ಜಾರ್ಖಂಡ್ ಸಿಎಂ ಸೊರೇನ್ ವಿರುದ್ಧ ಹೇಳಿಕೆ: ಮಾಜಿ ಸಚಿವ ಯೋಗೇಂದ್ರ ಸಾವ್‌ಗೆ ಕಾಂಗ್ರೆಸ್‌ ಶೋಕಾಸ್ ನೋಟಿಸ್

ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿರುದ್ಧ ಮಾಜಿ ಸಚಿವ ಹಾಗೂ ಹಿರಿಯ...