ಫುಟ್‌ಪಾತ್ ಮೂಲಭೂತ ಹಕ್ಕು ಎಂದ ಸುಪ್ರೀಂ‌ ಕೋರ್ಟ್, ಮತದಾನದ ಹಕ್ಕಿಗೆ ಮೌನ ತಾಳಿತೆ?

Date:

ನ್ಯಾಯಾಲಯಗಳು ‘ನ್ಯಾಯದ ಸಾರ’ವನ್ನು ಮರೆತಾಗ ವಂಚಕರಿಗೆ ರಕ್ಷಾಕವಚ ಸಿಕ್ಕಂತಾಗುತ್ತದೆ. ಮತದಾನವೆಂದರೆ ಮತ ಚಲಾಯಿಸುವ ಹಕ್ಕು ಮಾತ್ರವಲ್ಲ, ಅದು ಪ್ರಭುತ್ವವನ್ನು ಪ್ರಶ್ನಿಸುವ ಹಕ್ಕು. ಆದರೆ, ಆ ಪ್ರಭುತ್ವವೇ ವ್ಯವಸ್ಥಿತವಾಗಿ ವಂಚನೆಯಲ್ಲಿ ತೊಡಗಿದ್ದರೆ, ಜನರಿಗೆ ಮತದಾನದ ಹಕ್ಕಿದ್ದರೂ ಏನು ಪ್ರಯೋಜನ? ಈ ವಂಚನೆಯನ್ನು ಕಡೆಗಣಿಸುವುದು ಎಂದರೆ, ಪ್ರಜಾಪ್ರಭುತ್ವದ ಬೇರುಗಳನ್ನ ಕತ್ತರಿಸಲು ಅವಕಾಶ ಮಾಡಿಕೊಟ್ಟಂತೆ.

- Advertisement -

ಭಾರತದಲ್ಲಿ ನಾಗರಿಕನೊಬ್ಬ ರಸ್ತೆಯ ಫುಟ್‌ಪಾತ್ ಮೇಲೆ ಹೆಜ್ಜೆ ಹಾಕಲು ಸಾಂವಿಧಾನಿಕ ಹಕ್ಕಿದೆ, ಆದರೆ ಆಡಳಿತಗಾರರನ್ನು ಆರಿಸುವ ಅದೇ ಪ್ರಜೆಯ ಮತದಾನದ ಹಕ್ಕು ಇಂದು ಅತಂತ್ರ ಸ್ಥಿತಿಯಲ್ಲಿದೆ. ಪಾದಚಾರಿಗಳ ಹಕ್ಕನ್ನು ಮೂಲಭೂತ ಹಕ್ಕಿನ ಎತ್ತರಕ್ಕೆ ಕೊಂಡೊಯ್ದ ಸುಪ್ರೀಂ ಕೋರ್ಟ್, ಅದೇ ವ್ಯವಸ್ಥೆಯೊಳಗೆ ಎಸ್‌ಐಆರ್ ಸೋಗಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಮಾತ್ರ ‘ಆಡಳಿತಾತ್ಮಕ ನೀತಿ’ ಎಂದು ಲೇಬಲ್ ಹಚ್ಚಿ ಜಾರಿಕೊಳ್ಳುತ್ತಿದೆ. ಇದು ಮತದಾರನ ಹಕ್ಕಿನ ಮೇಲೆ ಪ್ರಹಾರ ನಡೆಸುವವರನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಉಳಿಸಿಕೊಳ್ಳಲಾಗುತ್ತಿದೆಯೇ ಎನ್ನುವುದರ ಸುತ್ತರ ಗಂಭೀರ ಚರ್ಚೆಗೆ ಹಚ್ಚಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಪಾದಚಾರಿ ಮಾರ್ಗದಲ್ಲಿ (ಫುಟ್‌ಪಾತ್) ನಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಕಳೆದ ಶುಕ್ರವಾರ ಮಹತ್ವದ ತೀರ್ಪು ಘೋಷಿಸಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಎ.ಎಸ್. ಚಂದೂರ್ಕರ್ ಅವರಿದ್ದ ನ್ಯಾಯಪೀಠವು, ಪಾದಚಾರಿ ಮಾರ್ಗದಲ್ಲಿ ನಡೆಯುವ ನಾಗರಿಕರ ಹಕ್ಕು ಅತ್ಯಂತ ಪ್ರಾಥಮಿಕವಾದುದು ಮತ್ತು ಮೋಟಾರು ವಾಹನಗಳ ಸಂಚಾರಕ್ಕಿಂತಲೂ ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸ್ಪಷ್ಟಪಡಿಸಿದೆ.

ಈ ತೀರ್ಪಿನ ಪ್ರಕಾರ, ಪಾದಚಾರಿ ಮಾರ್ಗದಲ್ಲಿ ನಡೆಯುವ ಹಕ್ಕು ಸಂವಿಧಾನದ 19(1)(d) ವಿಧಿಯಡಿ ನೀಡಲಾದ ‘ಸಂಚಾರದ ಸ್ವಾತಂತ್ರ್ಯ’ ಮತ್ತು 21ನೇ ವಿಧಿಯಡಿ ಖಾತರಿಪಡಿಸಲಾದ ‘ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ’ ಅವಿಭಾಜ್ಯ ಅಂಗವಾಗಿದೆ. ತನ್ನ ಐದು ವರ್ಷದ ಮಗುವನ್ನು ಶಾಲೆಗೆ ಕರೆದೊಯ್ಯುತ್ತಿದ್ದಾಗ ನಡೆದ ದುರದೃಷ್ಟಕರ ಅಪಘಾತದಲ್ಲಿ ಮಗುವನ್ನು ಕಳೆದುಕೊಂಡ ತಂದೆಯೊಬ್ಬರು ಸಲ್ಲಿಸಿದ್ದ ಪರಿಹಾರ ಅರ್ಜಿಯ ವಿಚಾರಣೆ ನಡೆಸಿದ ವೇಳೆ, ನ್ಯಾಯಾಲಯವು ಈ ಮಹತ್ವದ ಆದೇಶವನ್ನು ನೀಡಿದೆ.

ಪಾದಚಾರಿಗಳ ಈ ಹಕ್ಕನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಒಂದು ಸ್ವತಂತ್ರ ‘ನಿಯಂತ್ರಕ ಸಂಸ್ಥೆ’ಯನ್ನು (Regulatory Body) ಸ್ಥಾಪಿಸಬೇಕೆಂದು ಕೋರ್ಟ್ ಬಲವಾಗಿ ಪ್ರತಿಪಾದಿಸಿದೆ. ಇಂತಹ ಸಂಸ್ಥೆಯು ಸರ್ಕಾರ ಅಥವಾ ಕೈಗಾರಿಕಾ ವಲಯಗಳ ಹಸ್ತಕ್ಷೇಪವಿಲ್ಲದೆ, ಸ್ವತಂತ್ರವಾಗಿ ಮತ್ತು ವಸ್ತುನಿಷ್ಠವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಸಾಂಸ್ಥಿಕ ಸಮಗ್ರತೆಯನ್ನು ಕಾಪಾಡಬೇಕು ಎಂದು ತಿಳಿಸಿದೆ.

ರಸ್ತೆ ನಿರ್ಮಾಣವಾದರೆ, ಅದರ ಪಕ್ಕದಲ್ಲಿ ಪಾದಚಾರಿಗಳಿಗಾಗಿ ಸುಸಜ್ಜಿತ ಫುಟ್‌ಪಾತ್‌ಗಳನ್ನು ನಿರ್ಮಿಸುವುದು ಮತ್ತು ಅವುಗಳನ್ನು ನಿರಂತರವಾಗಿ ನಿರ್ವಹಿಸುವುದು ಸಂಬಂಧಪಟ್ಟ ಸಂಸ್ಥೆಗಳ ಕರ್ತವ್ಯವಾಗಿದೆ ಎಂದು ಪೀಠ ಹೇಳಿದೆ. ನಗರ ಅಭಿವೃದ್ಧಿ ಪ್ರಾಧಿಕಾರಗಳು, ಮಹಾನಗರ ಪಾಲಿಕೆಗಳು, ಪುರಸಭೆಗಳು ಮತ್ತು ಪಂಚಾಯತ್‌ಗಳೇ ಇದಕ್ಕೆ ಹೊಣೆಗಾರರು ಎಂದು ನ್ಯಾಯಾಲಯ ಎಚ್ಚರಿಸಿದೆ. ಪಾದಚಾರಿಗಳಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸುವುದು ಮತ್ತು ಪಾದಚಾರಿ ಮಾರ್ಗಗಳನ್ನು ಸಂರಕ್ಷಿಸುವುದು ಈ ಸಂಸ್ಥೆಗಳ ಕಡ್ಡಾಯ ಜವಾಬ್ದಾರಿಯಾಗಿದೆ, ಏಕೆಂದರೆ ನಡೆದಾಡುವುದು ಜೀವನದ ಅವಿಭಾಜ್ಯ ಭಾಗವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ತೀರ್ಪಿನ ಪ್ರತಿಯನ್ನು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಗಳಿಗೆ ಕಳುಹಿಸುವಂತೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ. ದೇಶದಾದ್ಯಂತ ಪಾದಚಾರಿಗಳಿಗೆ ಸುರಕ್ಷಿತವಾದ ಮಾರ್ಗಗಳನ್ನು ಒದಗಿಸಲು ಅಗತ್ಯವಿರುವ ಕಾನೂನು ಚೌಕಟ್ಟನ್ನು ರೂಪಿಸುವ ತುರ್ತು ಅಗತ್ಯವನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಸುಪ್ರೀಂ ಕೋರ್ಟ್ ಕಳೆದ ಮೇ 27ರಂದು ಭಾರತೀಯ ಚುನಾವಣಾ ಆಯೋಗವು ಕೈಗೊಂಡಿರುವ ‘ವಿಶೇಷ ತೀವ್ರ ಸ್ವರೂಪದ ಪರಿಷ್ಕರಣೆ’ (SIR) ಪ್ರಕ್ರಿಯೆಯು ಸಂವಿಧಾನದ 324ನೇ ವಿಧಿಯಡಿ ಆಯೋಗಕ್ಕಿರುವ ಅಧಿಕಾರದ ವ್ಯಾಪ್ತಿಗೆ ಒಳಪಡುತ್ತದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಕೇವಲ ಮತದಾನದ ಪ್ರಕ್ರಿಯೆಯ ಮೇಲೆ ಮಾತ್ರವಲ್ಲದೆ, ಮತದಾರರ ಪಟ್ಟಿಯ ನಿಖರತೆ ಮತ್ತು ಸಮಗ್ರತೆಯ ಮೇಲೆ ಅವಲಂಬಿತವಾಗಿವೆ ಎಂದು ಎಸ್‌ಐಆರ್‌ ಕುರಿತ ಮಹತ್ವದ ತೀರ್ಪೊಂದನ್ನು ಪ್ರಕಟಿಸಿತು.

ಈ ತೀರ್ಪಿನ ಪ್ರಕಾರ, ಎಸ್‌ಐಆರ್ ಎನ್ನುವುದು ಯಾವುದೇ ಪೌರತ್ವ ಪರಿಶೀಲನೆಯ ಹಿಂದಿನ ಬಾಗಿಲಿನ ಪ್ರಯತ್ನವಲ್ಲ, ಬದಲಾಗಿ ಅರ್ಹ ಮತದಾರರನ್ನು ಮಾತ್ರ ಪಟ್ಟಿಯಲ್ಲಿ ಉಳಿಸಿಕೊಳ್ಳುವ ಒಂದು ಆಡಳಿತಾತ್ಮಕ ಅಗತ್ಯವಾಗಿದೆ. ದೇಶದ ನಗರೀಕರಣ, ವಲಸೆ, ಮರಣ ಮತ್ತು ವಿಳಾಸ ಬದಲಾವಣೆಗಳಿಂದಾಗಿ ದಶಕಗಳಿಂದ ಮತದಾರರ ಪಟ್ಟಿಯಲ್ಲಿ ಉಂಟಾಗಿರುವ ದೋಷಗಳನ್ನು ಸರಿಪಡಿಸಲು ಈ ಪರಿಷ್ಕರಣೆ ಅನಿವಾರ್ಯ ಎಂದು ಕೋರ್ಟ್ ಸಮರ್ಥಿಸಿಕೊಂಡಿತ್ತು.

ಬಿಹಾರದ ಎಸ್‌ಐಆರ್ ವೇಳೆ ಪೌರತ್ವದ ಆಧಾರದಲ್ಲಿ ಕೈಬಿಡಲಾದ ಹೆಸರುಗಳನ್ನು ಕೇಂದ್ರ ಸರ್ಕಾರದ ಸಮರ್ಥ ಪ್ರಾಧಿಕಾರದ ಮುಂದೆ ಮರುಪರಿಶೀಲನೆಗೆ ಕಳುಹಿಸಲು ನಾಲ್ಕು ವಾರಗಳ ಗಡುವನ್ನು ನೀಡಲಾಗಿತ್ತು. ಆದರೆ ಹೀಗೆ ಮರುಪರಿಶೀಲನೆಗೆ ಒಳಪಟ್ಟು, ಮತಪಟ್ಟಿಯಿಂದ ಹೊರಗುಳಿದಿದ್ದ ಲಕ್ಷಾಂತರ ದೇಶವಾಸಿಗಳು ತಮ್ಮ ಮತದಾನದ ಹಕ್ಕನ್ನ ಕಳೆದುಕೊಂಡಿದ್ದರು.

ಬಿಹಾರದಿಂದ ಪ್ರಾರಂಭವಾಗಿ ಇದೀಗ ದೇಶದ ಹಲವು ರಾಜ್ಯಗಳಿಗೆ ವಿಸ್ತರಿಸಿರುವ ಈ ಪ್ರಕ್ರಿಯೆಯು, ಲಕ್ಷಾಂತರ ಜನರನ್ನು ಮತದಾರರ ಪಟ್ಟಿಯಿಂದ ಹೊರಹಾಕುವ ಮೂಲಕ ಅವರನ್ನು ರಾಜಕೀಯ ಪ್ರಕ್ರಿಯೆಯಿಂದಲೇ ದೂರವಿರಿಸಿದೆ. ತಾಂತ್ರಿಕತೆಯ ಸೋಗಿನಲ್ಲಿ ನಡೆಯುತ್ತಿರುವ ಈ ವಜಾಗೊಳಿಸುವಿಕೆ ಅಥವಾ ‘ವೋಟರ್ ಪರ್ಜಿಂಗ್’ ಪ್ರಕ್ರಿಯೆಯು ಪಾರದರ್ಶಕವಾಗಿಲ್ಲದಿರುವುದು ಮತ್ತು ದೋಷಯುಕ್ತವಾಗಿರುವುದು ಪ್ರಜಾಪ್ರಭುತ್ವದ ಮೌಲ್ಯಗಳನ್ನ ಹೊಸಕಿ ಹಾಕುತ್ತಿದೆ. ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡವರು ಮತ್ತೆ ತಮ್ಮ ಹಕ್ಕು ಪಡೆಯಬೇಕೆಂದರೆ, ಅವರು ಕೇಂದ್ರ ಸರ್ಕಾರದ ಸಮರ್ಥ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಬೇಕು. ಹೀಗೆ ಹೊರಗುಳಿಯಲ್ಪಟ್ಟ ಬಹುತೇಕರು ಕಡಿಮೆ ಅಕ್ಷರಸ್ಥರು. ಇಂತಹ ವ್ಯವಸ್ಥೆಯಲ್ಲಿ ಬಡವರು ಮತ್ತು ಸಾಮಾನ್ಯ ನಾಗರಿಕರು ಸಾಕ್ಷ್ಯಾಧಾರಗಳನ್ನು ಒದಗಿಸಿ ಮತ್ತೆ ಪಟ್ಟಿಗೆ ಸೇರ್ಪಡೆಗೊಳ್ಳುವುದು ದುಸ್ತರ. ಇದು ಪರೋಕ್ಷವಾಗಿ ಅವರನ್ನು ಮತದಾನದಿಂದ ವಂಚಿತರನ್ನಾಗಿಯೇ ಮಾಡುವ ಹುನ್ನಾವಲ್ಲದೆ ಇನ್ನೇನಲ್ಲ.

ವಾಹನಗಳ ದಟ್ಟಣೆಯ ನಡುವೆ ಪಾದಚಾರಿಗಳ ಜೀವಕ್ಕೆ ಅಪಾಯವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ ಎನ್ನುತ್ತದೆ ನ್ಯಾಯಾಲಯ. ಫುಟ್‌ಪಾತ್ ಮೇಲೆ ನಡೆಯುವ ಹಕ್ಕು ‘ದೈಹಿಕ ಅಸ್ತಿತ್ವಕ್ಕೆ’ ಸಂಬಂಧಿಸಿದ್ದರೆ, ಮತದಾನದ ಹಕ್ಕು ‘ರಾಜಕೀಯ ಅಸ್ತಿತ್ವಕ್ಕೆ’ ಸಂಬಂಧಿಸಿದ್ದು. ದೈಹಿಕವಾಗಿ ಬದುಕಿದ್ದರೂ, ರಾಜಕೀಯವಾಗಿ ವ್ಯಕ್ತಿ ಅಸಹಾಯಕನಾಗಿದ್ದರೆ ಆ ಬದುಕಿಗೆ ಅರ್ಥವೇನು?

ಎಸ್‌ಐಆರ್ (SIR) ಹೆಸರಿನಲ್ಲಿ ನಡೆಯುವ ವಂಚನೆಗಳು ಇಂದು ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕ. ಸರ್ಕಾರಗಳು ಅಥವಾ ಪ್ರಬಲ ಸಂಸ್ಥೆಗಳು ಅಭಿವೃದ್ಧಿಯ ನೆಪದಲ್ಲಿ ನಡೆಸುವ ಇಂತಹ ವ್ಯವಸ್ಥಿತ ವಂಚನೆಗಳನ್ನು ನ್ಯಾಯಾಲಯಗಳು ‘ಆಡಳಿತಾತ್ಮಕ ನಿರ್ಧಾರ’ ಅಥವಾ ‘ನೀತಿ ವಿಷಯ’ ಎಂದು ಪರಿಗಣಿಸಿ ಸುಮ್ಮನಾಗುತ್ತವೆ. ವಂಚನೆಯು ತಾಂತ್ರಿಕವಾಗಿ ಕಾನೂನಿನ ಚೌಕಟ್ಟಿನಲ್ಲಿದೆ ಎಂಬ ಕಾರಣಕ್ಕೆ ನ್ಯಾಯಾಲಯಗಳು ಅದರ ಅಂತರಂಗದ ಅನ್ಯಾಯವನ್ನು ಕಡೆಗಣಿಸುತ್ತವೆ. ಆದರೆ, ಇದೇ ವ್ಯವಸ್ಥಿತ ವಂಚನೆಯು ಅಂತಿಮವಾಗಿ ಮತದಾನದ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ. ಜನರ ಹಕ್ಕನ್ನ ಕಸಿಯುವ ಹುನ್ನಾರಗಳಾಗುತ್ತವೆ. ಜನರ ತೆರಿಗೆ ಹಣವನ್ನು ಲೂಟಿ ಮಾಡಿ, ಅದೇ ಹಣದ ಮೂಲಕ ಮತಗಳನ್ನು ಪ್ರಭಾವಿಸುವ ಅಥವಾ ವ್ಯವಸ್ಥೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಪ್ರಕ್ರಿಯೆಗಳು ಎಸ್‌ಐಆರ್ ಅಡಿಯಲ್ಲಿ ಸುಲಲಿತವಾಗಿ ನಡೆಯುತ್ತವೆ.

ನ್ಯಾಯಾಲಯಗಳು ‘ನ್ಯಾಯದ ಸಾರ’ವನ್ನು ಮರೆತಾಗ ವಂಚಕರಿಗೆ ರಕ್ಷಾಕವಚ ಸಿಕ್ಕಂತಾಗುತ್ತದೆ. ಮತದಾನವೆಂದರೆ ಮತ ಚಲಾಯಿಸುವ ಹಕ್ಕು ಮಾತ್ರವಲ್ಲ, ಅದು ಪ್ರಭುತ್ವವನ್ನು ಪ್ರಶ್ನಿಸುವ ಹಕ್ಕು. ಆದರೆ, ಆ ಪ್ರಭುತ್ವವೇ ವ್ಯವಸ್ಥಿತವಾಗಿ ವಂಚನೆಯಲ್ಲಿ ತೊಡಗಿದ್ದರೆ, ಜನರಿಗೆ ಮತದಾನದ ಹಕ್ಕು ಇದ್ದರೂ ಏನು ಪ್ರಯೋಜನ? ಈ ವಂಚನೆಯನ್ನು ಕಡೆಗಣಿಸುವುದು ಎಂದರೆ ಪ್ರಜಾಪ್ರಭುತ್ವದ ಬೇರುಗಳನ್ನ ಕತ್ತರಿಸಲು ಅವಕಾಶ ಮಾಡಿಕೊಟ್ಟಂತೆ.

ಯಾವುದೇ ಬಡವನಿಗೆ ಫುಟ್‌ಪಾತ್ ಮೇಲೆ ನಡೆಯಲು ಹಕ್ಕಿರಬಹುದು, ಆದರೆ ಅವನ ಮತಕ್ಕೆ ಮೌಲ್ಯವಿಲ್ಲದಿದ್ದರೆ ಅಥವಾ ಅವನ ಮತದಿಂದ ಆಯ್ಕೆಯಾದ ಸರ್ಕಾರಗಳೇ ಅವನ ಶೋಷಣೆಗೆ ಕಾರಣವಾಗುತ್ತಿದ್ದರೆ, ಅದು ಹಕ್ಕು ಎನಿಸಿಕೊಳ್ಳುವುದಿಲ್ಲ. ಮತದಾನದ ಹಕ್ಕನ್ನು ಶಾಸನಬದ್ಧ ಹಕ್ಕಿನಿಂದ ಮೂಲಭೂತ ಹಕ್ಕಿನ ದರ್ಜೆಗೆ ಏರಿಸುವುದರಿಂದ ಮಾತ್ರ ಇಂತಹ ವಂಚನೆಗಳನ್ನು ನೇರವಾಗಿ ಪ್ರಶ್ನಿಸಲು ಸಾಧ್ಯ.

ಇದನ್ನೂ ಓದಿ: ಟ್ರಂಪ್‌ ದರ್ಪಕ್ಕೆ ಮೆಲೋನಿ ಶಿಸ್ತಿನ ಚಾಟಿ: ಮೋದಿಯವರ ‘ಮೆಲೋಡಿ’ ರಾಜಕಾರಣಕ್ಕೊಂದು ಪಾಠ!

ಸದ್ಯದ ಸ್ಥಿತಿಯಲ್ಲಿ ನ್ಯಾಯಾಲಯಗಳು ‘ಪ್ರೊಸೀಜರಲ್ ಲಾ’ (ಕಾರ್ಯವಿಧಾನದ ಕಾನೂನು) ಮತ್ತು ‘ಸಬ್‌ಸ್ಟಾಂಟಿವ್ ಜಸ್ಟಿಸ್’ (ನ್ಯಾಯದ ಸಾರ) ನಡುವೆ ಸಿಲುಕಿವೆ. ಸಾಂಸ್ಥಿಕ ಸುಧಾರಣೆಗಳ ಹೆಸರಿನಲ್ಲಿ ನಡೆಯುವ ವಂಚನೆಗಳು ನ್ಯಾಯಾಲಯದ ಮುಂದೆ ಬರುತ್ತವೆ. ಅಲ್ಲಿ ಎಲ್ಲವೂ ಕಾನೂನುಬದ್ಧವಾಗಿ ಕಾಣಿಸುತ್ತದೆ. ಆದರೆ, ಅದರ ಹಿಂದಿನ ವಂಚನೆಯನ್ನು ಅರಿಯುವ ಇಚ್ಛಾಶಕ್ತಿಯನ್ನು ನ್ಯಾಯಾಂಗ ತೋರಬೇಕಿದೆ. ಪಾದಚಾರಿಗಳ ಸುರಕ್ಷತೆಗೆ ತೋರುವ ಕಾಳಜಿಯನ್ನು, ಪ್ರಜಾಪ್ರಭುತ್ವದ ರಕ್ಷಣೆಯಲ್ಲೂ ತೋರಬೇಕಾದ ಅನಿವಾರ್ಯತೆ ಇದೆ.

ಮತದಾನದ ಹಕ್ಕನ್ನು ಮೂಲೆಗುಂಪು ಮಾಡಿ, ಕೇವಲ ದೈಹಿಕ ಹಕ್ಕುಗಳ ಮೇಲೆ ಗಮನ ಹರಿಸುವ ನ್ಯಾಯಾಂಗದ ಧೋರಣೆಗಳು ಮರುಪರಿಶೀಲನೆಗೆ ಒಳಪಡಬೇಕಿದೆ.  ಎಸ್‌ಐಆರ್‌ನಂತಹ ಪ್ರಕ್ರಿಯೆಗಳು ಜನಸಾಮಾನ್ಯರ ಹಿತದೃಷ್ಟಿಯಿಂದ ಇವೆಯೇ ಅಥವಾ ವ್ಯವಸ್ಥೆಯ ಲಾಭಕ್ಕಾಗಿ ಇವೆಯೇ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸುವುದು ನ್ಯಾಯಾಂಗದ ಹೊಣೆ. ಪಾದಚಾರಿಗಳಂತೆ ಮತದಾರರೂ ತಮ್ಮ ಹಕ್ಕನ್ನು ರಕ್ಷಿಸಿಕೊಳ್ಳಲು ಸುಪ್ರೀಂ ಕೋರ್ಟ್‌ನತ್ತ ನೋಡುತ್ತಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದರೆ, ನ್ಯಾಯಾಲಯಗಳು ವಂಚನೆಗಳ ವಿರುದ್ಧ ದಿಟ್ಟ ಹೆಜ್ಜೆ ಇಡಲೇಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ ಸಾಕೇ, ಇನ್ನಷ್ಟು ಬೇಕೇ?

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು....

ಕೇರಳದಲ್ಲಿ ಮತ್ತೆ ಭೂಕುಸಿತ; 9 ಮಂದಿ ಸಾವು, ಹಲವರು ನಾಪತ್ತೆ

ಕೇರಳ ರಾಜ್ಯದಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದ...

ವಿಧಾನ ಮಂಡಲದಲ್ಲಿ ಕಸ್ತೂರಿರಂಗನ್ ವರದಿ ಕುರಿತು ಗಂಭೀರ ಚರ್ಚೆ; ಕಾಡಂಚಿನ ಜನರ ಹಿತ ಕಾಯಲು ಶಾಸಕರ ಒಕ್ಕೊರಲ ಆಗ್ರಹ

ಸದನದಲ್ಲಿ ಮಾತನಾಡಿದ ಈ ಎಲ್ಲಾ ನಾಯಕರು, ಕಸ್ತೂರಿರಂಗನ್ ವರದಿಯನ್ನು ಅರಣ್ಯದ ಸಮೀಪ...

ಜಾರ್ಖಂಡ್ ಸಿಎಂ ಸೊರೇನ್ ವಿರುದ್ಧ ಹೇಳಿಕೆ: ಮಾಜಿ ಸಚಿವ ಯೋಗೇಂದ್ರ ಸಾವ್‌ಗೆ ಕಾಂಗ್ರೆಸ್‌ ಶೋಕಾಸ್ ನೋಟಿಸ್

ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿರುದ್ಧ ಮಾಜಿ ಸಚಿವ ಹಾಗೂ ಹಿರಿಯ...