43 ವರ್ಷಗಳ ಬಳಿಕ ಮೊದಲ ಪ್ರಶಸ್ತಿ ಗೆದ್ದ ವೆಸ್ಟ್‌ ಹ್ಯಾಮ್‌ ಯುನೈಟೆಡ್!

Date:

ಇಂಗ್ಲಿಷ್‌ ಪ್ರೀಮಿಯರ್ ಲೀಗ್‌ ಕ್ಲಬ್‌‌ ವೆಸ್ಟ್ ಹ್ಯಾಮ್‌ ಯುನೈಟೆಡ್‌ ತಂಡದ ನಾಲ್ಕು ದಶಕಗಳ ಟ್ರೋಫಿ ಬರ ಕೊನೆಗೂ ನೀಗಿದೆ.

ಯುರೋಪಾ ಕಾನ್ಫರೆನ್ಸ್ ಲೀಗ್ ಫೈನಲ್‌ ಪಂದ್ಯದಲ್ಲಿ ಫಿಯೊರೆಂಟಿನಾ ತಂಡವನ್ನು 2-1 ಗೋಲುಗಳ ಅಂತರದಲ್ಲಿ ರೋಚಕವಾಗಿ ಮಣಿಸಿದ ವೆಸ್ಟ್‌ ಹ್ಯಾಮ್‌, 43 ವರ್ಷಗಳ ಬಳಿಕ ಮೊದಲ ಬಾರಿಗೆ ಯುರೋಪ್‌ ಫುಟ್‌ಬಾಲ್‌ ಟೂರ್ನಿಯೊಂದರಲ್ಲಿ ಚಾಂಪಿಯನ್‌ ಪಟ್ಟವನ್ನೇರಿದೆ.

ಜೆಕ್ ಗಣರಾಜ್ಯದ ರಾಜಧಾನಿ ‌ಪ್ರಾಗ್‌ನಲ್ಲಿ ನಡೆದ ಫೈನಲ್‌ ಪಂದ್ಯದ ಪೂರ್ಣಾವಧಿಯ ಅಂತಿಮ ನಿಮಿಷದಲ್ಲಿ (90) ಜರೋಡ್ ಬೋವೆನ್ ಗಳಿಸಿದ ಗೋಲು ವೆಸ್ಟ್‌ ಹ್ಯಾಮ್‌ ತಂಡಕ್ಕೆ 1980ರ ಬಳಿಕ ಮೊದಲ ಟ್ರೋಫಿ ತಂದುಕೊಟ್ಟಿತು.

2022/23ನೇ ಸಾಲಿನ ಯುರೋಪಾ ಕಾನ್ಫರೆನ್ಸ್ ಲೀಗ್ ಟೂರ್ನಿಯಲ್ಲಿ ಫೈನಲ್‌ ಸೇರಿದಂತೆ ಒಟ್ಟು 13 ಪಂದ್ಯಗಳನ್ನಾಡಿರುವ ವೆಸ್ಟ್‌ ಹ್ಯಾಮ್‌. ಒಂದೇ ಒಂದು ಸೋಲು ಕಾಣದೆ ಚಾಂಪಿಯನ್‌ ಪಟ್ಟ ಅಲಂಕರಿಸಿದೆ.

ಪಂದ್ಯದ 62ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ್ದ ಸೈದ್ ಬೆನ್ರಹ್ಮಾ, ವೆಸ್ಟ್‌ ಹ್ಯಾಮ್‌ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು. ಆದರೆ 67ನೇ ನಿಮಿಷದಲ್ಲಿ ಜಿಯಾಕೊಮೊ ಬೊನಾವೆಂಟುರಾ ಗೋಲಿನ ಮೂಲಕ ಫಿಯೊರೆಂಟಿನಾ ತಂಡ ಸಮಬಲ ಸಾಧಿಸಿತ್ತು. UEFA Europa Conference League: Bowen late goal helps West Ham clinch title

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯಾ ಕಪ್ ಫೈನಲ್ | ಸಿರಾಜ್ ಮ್ಯಾಜಿಕ್; 8ನೇ ಬಾರಿಗೆ ಟೀಮ್ ಇಂಡಿಯಾ ಚಾಂಪಿಯನ್

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ 2023ರ...

ಏಷ್ಯಾ ಕಪ್ ಫೈನಲ್ | 50 ರನ್‌ಗೆ ಆಲೌಟಾದ ಶ್ರೀಲಂಕಾ!

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023ರ...

ಏಷ್ಯಾ ಕಪ್ ಫೈನಲ್ | ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಸಿರಾಜ್; ಲಂಕಾಗೆ ಆರಂಭಿಕ ಆಘಾತ

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023ರ...

ಇಂದು ಏಷ್ಯಾಕಪ್‌ ಫೈನಲ್‌ | ಭಾರತ-ಶ್ರೀಲಂಕಾ ಹಣಾಹಣಿ

ಏಷ್ಯಾಕಪ್ 2023ರ ಫೈನಲ್ ಪಂದ್ಯವು ಇಂದು (ಸೆ 17) ನಡೆಯುತ್ತಿದ್ದು, ಶ್ರೀಲಂಕಾ...