ಐಪಿಎಲ್ನಲ್ಲಿ ವಿಶ್ವ ದರ್ಜೆಯ ಬೌಲರ್ಗಳನ್ನು ಎದುರಿಸಿರುವ, ತಮ್ಮ ಬಿರುಗಾಳಿಯ ಬ್ಯಾಟಿಂಗ್ನಿಂದ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿಯನ್ನು ಶ್ರೀಲಂಕಾದ ದಂತಕಥೆ ಮತ್ತು ರಾಜಸ್ಥಾನ್ ರಾಯಲ್ಸ್ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ಶ್ಲಾಘಿಸಿದ್ದಾರೆ. ಐಪಿಎಲ್ನಲ್ಲಿ ಸೂರ್ಯವಂಶಿ ಪ್ರದರ್ಶನವು ಅವರು ಭಾರತವನ್ನು ಪ್ರತಿನಿಧಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದರ ಸೂಚಕ ಎಂದು ಹೇಳಿದ್ದಾರೆ.
15 ವರ್ಷದ ಈ ಆಟಗಾರ ರಾಜಸ್ಥಾನ ರಾಯಲ್ಸ್ ತಂಡದಿಂದ 1.1 ಕೋಟಿ ರೂ.ಗೆ ಐಪಿಎಲ್ ಒಪ್ಪಂದ ಪಡೆದು ದಾಖಲೆ ಬರೆದವರು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 47 ಎಸೆತಗಳಲ್ಲಿ 96 ರನ್ ಬಾರಿಸಿ ಮಿಂಚಿದ್ದರು. ಹಾಗೆಯೇ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿ ಪವರ್ಫುಲ್ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಇದನ್ನು ಓದಿದ್ದೀರಾ? ಮತ್ತೊಂದು ಇತಿಹಾಸ ನಿರ್ಮಿಸಿದ 13 ವರ್ಷದ ವೈಭವ್ ಸೂರ್ಯವಂಶಿ
ಈ ಐಪಿಎಲ್ ಸೀಸನ್ನ 237.31 ರ ಅದ್ಭುತ ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರ ಸೂರ್ಯವಂಶಿ, 776 ರನ್ಗಳನ್ನು ಗಳಿಸಿದ್ದಾರೆ. ಭಾನುವಾರದ ಫೈನಲ್ನಲ್ಲಿ ಶುಭ್ಮನ್ ಗಿಲ್ ಅಥವಾ ಸಾಯಿ ಸುದರ್ಶನ್ ಅವರು ವೈಭವ್ ಸೂರ್ಯವಂಶಿಯನ್ನು ಅಧಿಕ ರನ್ ಗಳಿಸಿದರಷ್ಟೇ ಸೂರ್ಯವಂಶಿಯನ್ನು ಹಿಂದಿಕ್ಕಲು ಸಾಧ್ಯ.

ಈ ನಡುವೆ ಹಿರಿಯ ಆಟಗಾರರು ರನ್ ಗಳಿಸಲು ಪರದಾಡುತ್ತಿದ್ದ ಸಂದರ್ಭದಲ್ಲೂ ವೈಭವ್ ಸೂರ್ಯವಂಶಿ ಅತ್ಯಂತ ಜವಾಬ್ದಾರಿಯುತವಾಗಿ ಮತ್ತು ಒತ್ತಡವನ್ನು ನಿಭಾಯಿಸಿ ಆಡಿದ್ದಾರೆ ಎಂದು ಸಂಗಕ್ಕಾರ ಶ್ಲಾಘಿಸಿದ್ದಾರೆ. ಐಪಿಎಲ್ನಲ್ಲಿ ತೋರಿದ ಅದ್ಭುತ ಪ್ರದರ್ಶನ ಮತ್ತು ಸ್ಥಿರತೆಯು ಅವರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸೂಕ್ತವಾಗಿದೆ ಎಂದೂ ಹೇಳಿದ್ದಾರೆ.




