ರೋಲಿಂಗ್ ಮೀಡಿಯಾ ಹೌಸ್, ಮೈಸೂರು ಫಿಲ್ಮ್ ಇನ್ಸ್ಟಿಟ್ಯೂಟ್ ಹಾಗೂ ಎಂ.ಟಿ.ಜಿ ಪ್ರೊಡಕ್ಷನ್ಸ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಮೂರು ವಿಭಿನ್ನ ಕನ್ನಡ ಕಿರುಚಿತ್ರಗಳ ಮುಹೂರ್ತ ಸಮಾರಂಭ ಭಾನುವಾರ ಮೈಸೂರಿನ ಕೆ.ಆರ್. ಮೊಹಲ್ಲಾದ ಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿತು.
ರೋಲಿಂಗ್ ಮೀಡಿಯಾ ಹೌಸ್ ನಿರ್ಮಾಣದಲ್ಲಿ, ಎಸ್.ಪಿ. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಸೆಕೆಂಡ್ ವೈಫ್’ (2nd Wife), ‘ವರಸ್ತ್ರೀ’ (Varastri) ಹಾಗೂ ‘ಪಜ್ಹಲ್’ (Puzzel) ಚಿತ್ರಗಳಿಗೆ ಸಾಂಪ್ರದಾಯಿಕವಾಗಿ ಮುಹೂರ್ತ ನೆರವೇರಿಸಲಾಯಿತು.
ಮಾಜಿ ಮೂಡ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡರಾದ ಹೆಚ್.ವಿ. ರಾಜೀವ್ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರೆ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ ಆರ್. ಅವರು ಕ್ಯಾಮೆರಾ ರೋಲಿಂಗ್ ಮಾಡುವ ಮೂಲಕ ಶುಭ ಹಾರೈಸಿದರು. ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರಗಳ ನಿರ್ಮಾಣ, ಕಥಾವಸ್ತು, ತಾರಾಗಣ ಹಾಗೂ ತಾಂತ್ರಿಕ ತಂಡದ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿತು.

ಚಿತ್ರಗಳ ನಿರ್ದೇಶನ ಮತ್ತು ತಾರಾಗಣ
‘ಸೆಕೆಂಡ್ ವೈಫ್’ ಚಿತ್ರಕ್ಕೆ ತ್ಯಾಗರಾಜು ದೇವರಹಳ್ಳಿ ಅವರು ನಿರ್ದೇಶನ ಮಾಡುತ್ತಿದ್ದು, ಪ್ರಮುಖ ಪಾತ್ರಗಳಲ್ಲಿ ಪ್ರಿನ್ಸ್ ಪುಟ್ಟು, ಮಾನಸ ಆನಂದ್ ಹಾಗೂ ಪ್ರಮೋದ್ ಕುಮಾರ್ ಎಸ್. ಅಭಿನಯಿಸುತ್ತಿದ್ದಾರೆ.
‘ವರಸ್ತ್ರೀ’ ಚಿತ್ರಕ್ಕೆ ಸತೀಶ್ ಪೊನ್ನಾಚಿ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದು, ವರ್ಷಾ ರಾಜ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ‘ಪಜ್ಹಲ್’ ಚಿತ್ರದ ವಿವರಗಳನ್ನು ಚಿತ್ರತಂಡ ಪ್ರಕಟಿಸಬೇಕಿದೆ.
ಈ ವಿಶೇಷ ವರದಿ ಓದಿದ್ದೀರಾ? ಕಾಡಿನ ಮಕ್ಕಳೇ ವನ್ಯಜೀವಿಗಳ ನಿಜವಾದ ಬಂಧುಗಳು: ಆದಿವಾಸಿಗಳ ಜ್ಞಾನ, ಸಹಬಾಳ್ವೆ-ಅರಣ್ಯ ಸಂರಕ್ಷಣೆಯ ಭವಿಷ್ಯ
ತಾಂತ್ರಿಕ ವರ್ಗ
ಮೂರು ಚಿತ್ರಗಳ ನಿರ್ಮಾಣದ ಜವಾಬ್ದಾರಿಯನ್ನು ಎಸ್.ಪಿ. ವಹಿಸಿಕೊಂಡಿದ್ದಾರೆ. ಛಾಯಾಗ್ರಹಣವನ್ನು ಪ್ರದೀಪ್ ಕುಮಾರ್ ಟಿ.ಆರ್., ಸಂಗೀತ ನಿರ್ದೇಶನವನ್ನು ಅಭಿಷೇಕ್ ಕಲ್ಕಿ ಹಾಗೂ ಸಂಕಲನವನ್ನು ಸಾಗರ್ ತೊರೆಮಾವು ನಿರ್ವಹಿಸುತ್ತಿದ್ದಾರೆ. ಸಹ ನಿರ್ದೇಶಕರಾಗಿ ಭಾಸ್ಕರ್, ಪ್ರಮೋದ್, ಗೌರಾಂಶ್ ಆರ್ಯ ಹಾಗೂ ಯಶಸ್ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ವಿಶೇಷ ವರದಿ ಓದಿದ್ದೀರಾ? ವನ್ಯಜೀವಿ ಸಂಘರ್ಷದ ಸುಳಿಯಲ್ಲಿ ಅರಣ್ಯದ ಭವಿಷ್ಯ: ಸಂರಕ್ಷಣೆಯ ಹೆಸರಿನಲ್ಲಿ ಹೊಸ ಹಿತಾಸಕ್ತಿಗಳಿಗೆ ಅವಕಾಶವೇ?
ಪತ್ರಿಕಾಗೋಷ್ಠಿಯಲ್ಲಿ ಸತೀಶ್ ಪೊನ್ನಾಚಿ, ತ್ಯಾಗರಾಜು ದೇವರಹಳ್ಳಿ, ಪ್ರಿನ್ಸ್ ಪುಟ್ಟು, ದಚ್ಚು ದಿವಾಕರ್, ನಾಗೇಂದ್ರ ಯಾದವ್, ಪ್ರಮೋದ್ ಕುಮಾರ್, ವರ್ಷರಾಜ್, ನಿಶಾ, ದಯಾನಂದ ಕಟ್ಟೆ, ಭಾಸ್ಕರ್, ಅಪರೂಪ್, ಪ್ರಮೋದ್ ಡಿ., ಯಶಸ್ ಕೈಲಾಶ್, ಸಂದೀಪ್, ಗಿರೀಶ್ ಸೇರಿದಂತೆ ಚಿತ್ರತಂಡದ ಸದಸ್ಯರು ಇದ್ದರು.



