ಹಾವೇರಿ ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳು ಸಕ್ಕರೆ ಪ್ರಮಾಣದ ಪರೀಕ್ಷೆ ಮಾಡುವ ಲ್ಯಾಬ್ ನಿಂದ ರೈತರಿಗೆ ಮೋಸ ಆಗುತ್ತಿದೆ. ಇದೊಂದು ವ್ಯವಸ್ಥಿತವಾದ ಜಾಲವಾಗಿದ್ದು ಈ ಬಗ್ಗೆ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಒತ್ತಾಯಿಸಿದ್ದಾರೆ.
ಹಾವೇರಿ ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಡರಾತ್ರಿವರಿಗೂ ಮೂರು ಕಂಪನಿಗಳ ಮಾಲೀಕರು ರೈತರ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸಕ್ಕರೆ ಸಚಿವರು ಪೊಲೀಸ್ ವರಿಷ್ಠಾಧಿಕಾರಿಗಳು ಭಾಗವಹಿಸಿ 3225 ರೂಪಾಯಿಗೆ ದರ ನಿಗದಿ ಮಾಡಿ ಸಂಧಾನ ಮಾಡಿದರು ಅದು ಸಹ ರೈತರಿಗೆ ಸಮಾಧಾನಕರವಾಗಲಿಲ್ಲ ಅದರ ಜೊತೆ ನಮ್ಮ ಇನ್ನೂ ಅನೇಕ ಸಮಸ್ಯೆಗಳಿವೆ ಎಂದು ರೈತರು ಹೇಳಿಕೊಂಡರು
ಹಾವೇರಿ ತಾಲೂಕಿನ ಸಂಗೂರ ಸಕ್ಕರೆ ಕಾರ್ಖಾನೆಯಲ್ಲಿ ಈ ಹಿಂದೆ ಸಹಕಾರ ಸಂಘ ನಡೆಸುತ್ತಿತ್ತು. ಆಗ ಶೇಕಡಾ 10.30 ರಿಂದ 11:30 ರಷ್ಟು ಸಕ್ಕರೆ ಇಳುವರಿ ಇರುತ್ತಿತ್ತು ಆದರೆ ಈ ಕಾರ್ಖಾನೆ ನಿರ್ವಹಣೆಯನ್ನು ಜಿಎಂ ಶುಗರ್ಸ್ ನವರು 30 ವರ್ಷ ಗುತ್ತಿಗೆ ಪಡೆದಿದ್ದಾರೆ. ಸಹಕಾರಿ ಸಂಘ ಕಬ್ಬುನೂರಿಸುವ ಸಂದರ್ಭದಲ್ಲಿ ಇದ್ದ ಸಕ್ಕರೆ ಇಳುವರಿ ಈಗ ದಿಢೀರ್ ಖುಷಿಯಲು ಕಾರಣ ಜಿಎಂ ಶುಗರ್ 18 ವರ್ಷದಿಂದ ರೈತರಿಗೆ ಮೋಸ ಮಾಡುತ್ತಾ ಬಂದಿರುವುದು ಎಂದು ರೈತರು ಸಚಿವರ ಗಮನಕ್ಕೆ ತಂದರು.
18 ವರ್ಷಗಳಿಂದ ಜಿಎಂ ಶುಗರ್ ಕಾರ್ಖಾನೆ ನಡೆಸುತ್ತಿದ್ದಾರೆ ಕಬ್ಬಿನ ಮಾದರಿಗಳನ್ನು ತಮ್ಮದೇ ಲ್ಯಾಬಿನಲ್ಲಿ ಪರೀಕ್ಷೆ ಮಾಡಿ ಹೊರಡಿಸಿದ್ದ ವರದಿ ಸಿದ್ದಪಡಿಸುತ್ತಿದ್ದಾರೆ. ಪ್ರತಿ ವರ್ಷವೂ ಸಕ್ಕರೆ ಇಳುವರಿ ಕಡಿಮೆಯಾಗಿದೆ. ಕಾರ್ಖಾನೆ ಲ್ಯಾಬ್ ನಿಂದಲೇ ರೈತರಿಗೆ ಮೋಸ ಆಗುತ್ತಿದ್ದು, ಸರ್ಕಾರಕ್ಕೂ ಹಾಗೂ ರೈತರಿಗೆ ಇಬ್ಬರಿಗೂ ಕಾರ್ಖಾನೆಯವರು ವಂಚನೆ ಮಾಡುತ್ತಿದ್ದಾರೆ ಎಂದು ದೂರಿದರು .
ಸಕ್ಕರೆ ಇಳುವರಿ ಪರೀಕ್ಷೆ ಮಾಡುವ ಲ್ಯಾಬ್ ನ ಪರಿಶೀಲನೆ ನಡೆಸಬೇಕು. ವರದಿ ಸಿದ್ದಪಡಿಸಿದ ಪ್ರತಿಯೊಬ್ಬ ತಜ್ಞರನ್ನು ವಿಚಾರಣೆ ನಡೆಸಬೇಕು. ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ರೈತರಿಗೆ ನ್ಯಾಯವೊದಗಿಸಬೇಕು, ಕಾರ್ಖಾನೆ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅಗ್ರಹಿಸಿದರು
ತೂಕದಲ್ಲಿಯೂ ಸಹ ಮೋಸ : ರೈತರ ಜಮೀನುಗಳಿಂದ ತರುವ ಕಬ್ಬಿನ ವಾಹನವನ್ನು ಕಾರ್ಖಾನೆ ಆವರಣದಲ್ಲಿರುವ ತೂಕದ ಯಂತ್ರದಲ್ಲಿಯೇ ತೂಕ ಮಾಡಲಾಗುತ್ತಿದೆ. ಇದರಲ್ಲೂ ಮೋಸ ಆಗುತ್ತಿದ್ದು ಕಡಿಮೆ ತೂಕ ತೋರಿಸಿ ರೈತರನ್ನು ವಂಚಿಸಲಾಗುತ್ತಿದೆ ಎಂದು ಕಬ್ಬು ಬೆಳೆಗಾರರು ದೂರಿದ್ದಾರೆ. ಆ ಕಾರಣದಿಂದಾಗಿ ಈ ವರ್ಷದಿಂದಲೇ ಸರ್ಕಾರದಿಂದ ಒಂದು ರಿಕವರಿ ಲ್ಯಾಬ್ ಹಾಗೂ ಮೂರು ಕಾರ್ಖಾನೆಗಳ ಎದುರು ತೂಕದ ಯಂತ್ರವನ್ನು ನಿರ್ಮಿಸಿ ಕೊಡಬೇಕೆಂದು ಕರ್ನಾಟಕ ಸರ್ಕಾರದ ಸಕ್ಕರೆ ಸಚಿವರಾದ ರುದ್ರಪ್ಪ ಲಮಾಣಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ತಿಳಿಸಿದ್ದಾರೆ



