ಬೆಂಗಳೂರು | ಹಳೆ ವೈಷಮ್ಯ; ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಯುವಕನ ಕೊಚ್ಚಿ ಕೊಲೆ

Date:

ಹಳೆ ವೈಷಮ್ಯದ ಹಿನ್ನೆಲೆ, ಯುವಕನೊಬ್ಬನನ್ನು ನಡುರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಮರಸೂರು ಗ್ರಾಮದಲ್ಲಿ ನಡೆದಿದೆ.

- Advertisement -

ವಿಜಯ್ ಕುಮಾರ್ (27) ಕೊಲೆಯಾದವನು. ಫೆ.25ರಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ವಿಜಯ ಕುಮಾರ್‌ನನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್​ಪಿ ಮಲ್ಲಿಕಾರ್ಜುನ್ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ;...

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಕೇರಳ ಸರ್ಕಾರ ಈಗ ಮರುಜೀವ ನೀಡಿದೆ. ಪ್ರಕರಣವನ್ನು ವಿಜಿಲೆನ್ಸ್ ತನಿಖೆಗೆ ಆದೇಶ ಹೊರಡಿಸಿದೆ....

ನೊಬೆಲ್‌ ಪ್ರಶಸ್ತಿ ಸರಣಿ | ಶಾಸ್ತ್ರೀಯ ಪರಂಪರೆಗೆ ಸಮಕಾಲೀನ...

ಈ ಬಾರಿಯ ಸಾಹಿತ್ಯದ ನೊಬೆಲ್‌ ಪುರಸ್ಕಾರ ಕೆನಡಾದ ಆನ್‌ ಕಾರ್ಸನ್‌ ಅವರ ಮುಡಿಗೇರಿದೆ. ಇವರು ಕವಯತ್ರಿ, ಪ್ರಬಂಧಗಾರ್ತಿ ಹಾಗೂ ಅನುವಾದಕಿ. ಕ್ಲಾಸಿಕಲ್‌ ಗ್ರೀಕ್‌ ಸಾಹಿತ್ಯದ ಪ್ರೇಮಿಯಾದ ಕಾರ್‌ಸನ್‌ ಶಾಸ್ತ್ರೀಯ ಮಾದರಿಯನ್ನು ಸಮಕಾಲೀನ ಸಂದರ್ಭಗಳಲ್ಲಿ...

ಏನಿದು ಘಟನೆ?

ಮೃತ ವ್ಯಕ್ತಿ ವಿಜಯ್‌ ಕುಮಾರ್ ಈ ಹಿಂದೆ 2017ರಲ್ಲಿ ನಡೆದಿದ್ದ ಮನೋಜ್ ಅಲಿಯಾಸ್​ ಬಬ್ಲು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಈತ ಐದು ವರ್ಷ ಜೈಲಿನಲ್ಲಿದ್ದನು.

ಕಳೆದ 7-8 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದನು. ಮನೋಜ್ ಅಲಿಯಾಸ್​ ಬಬ್ಲು ಕೊಲೆಯ ಪ್ರತಿಕಾರ ತೀರಿಸಿಕೊಳ್ಳಲು ಕಾಯುತ್ತಿದ್ದ ಆತನ ಸಹಚರರು ವಿಜಯ ಕುಮಾರ್​ನನ್ನು ಕರೆದೊಯ್ದು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಸುದ್ದಿ ಓದಿದ್ದೀರಾ? ‘ದೇವಾಲಯದ ತೀರ್ಥ ಪ್ರಸಾದ ಬೇಡ, ಉನ್ನತ ಶಿಕ್ಷಣಕ್ಕಾಗಿ ಬಸ್‌ ಬೇಕು’; ಸಿಎಂಗೆ ಪತ್ರ ಬರೆದ ವಿದ್ಯಾರ್ಥಿನಿ

ಮನೋಜ್ ಕುಮಾರ್ ಸಹೋದರ ಅರ್ಜುನ್ ವಿಜಯ್‌ ಕುಮಾರ್‌ನನ್ನು ಕೊಲೆ ಮಾಡಿದ್ದಾನೆ ಎಂದು ವಿಜಯ್ ಕುಮಾರ್​ ತಂದೆ ಆರೋಪ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಬರಗಾಲದಲ್ಲಿ ಸ್ಥಳೀಯರಿಗೆ ಹೆಚ್ಚಿನ ಕೆಲಸ ನೀಡಿ, ವಾರದೊಳಗೆ ಕೂಲಿ ಪಾವತಿಸಿ: ಡಿಸಿಎಂ ಪರಮೇಶ್ವರ

ತೀವ್ರ ಬರಗಾಲವಿರುವ ಕಾರಣ ವಿಬಿ ಜಿ ರಾಮ್‌ಜಿ ಯೋಜನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ...

ಕಲಬುರಗಿ | ಬೆಣ್ಣೂರ ಬಿ ಗ್ರಾಮಕ್ಕೆ ಪ್ರತ್ಯೇಕ ಬಸ್‌ ಸೌಲಭ್ಯಕ್ಕೆ ವಿದ್ಯಾರ್ಥಿಗಳ ಆಗ್ರಹ

ಕಾಳಗಿ ತಾಲೂಕಿನ ಬೆಣ್ಣೂರ ಬಿ ಗ್ರಾಮಕ್ಕೆ ಸಮರ್ಪಕ ಬಸ್‌ ಸಂಚಾರವಿಲ್ಲದೆ ಕಳೆದ...

ಯಾದಗಿರಿ | ‘ಬೆಂಕಿ ಹಚ್ಚುತ್ತೇನೆ’ ಹೇಳಿಕೆ ಶಾಸಕರ ಘನತೆಗೆ ತಕ್ಕುದಲ್ಲ: ಮಂಜುನಾಥ ಮೇತ್ರಿ

ಅಕ್ರಮ ಮರಳು ಸಾಗಾಟ ಹಾಗೂ ಓವರ್‌ಲೋಡ್ ಟಿಪ್ಪರ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸುವುದು...

ಯಾದಗಿರಿ | ಯುವಜನರಲ್ಲಿ ಸಂವಿಧಾನ ಪ್ರಜ್ಞೆ ಬೆಳೆಸಲು ಅ.17ರಿಂದ ತರಬೇತಿ ಶಿಬಿರ

ಯುವಜನರಲ್ಲಿ ಸಂವಿಧಾನಾತ್ಮಕ ಅರಿವು, ಸಾಮಾಜಿಕ ಪ್ರಜ್ಞೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ...