ಎಂ.ಉಷಾ ಅವರ‌ ‘ಬಾಳ‌ ಬಟ್ಟೆ’ ಕಾದಂಬರಿಗೆ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ

Date:

ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು 2024ನೇ ಸಾಲಿನ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಡಾ.ಎಂ.ಉಷಾ ಅವರ ‘ಬಾಳ‌ ಬಟ್ಟೆ’ ಕಾದಂಬರಿಯನ್ನು ಆಯ್ಕೆ ಮಾಡಿದೆ.

‘ಬಾಳ ಬಟ್ಟೆ’ ಕಾದಂಬರಿಯನ್ನು ಶಿವಮೊಗ್ಗದ ‘ಅಹರ್ನಿಶಿ’ ಪ್ರಕಾಶನ ಪ್ರಕಟಿಸಿದೆ. ಇನ್ನು 2022ರಲ್ಲಿ ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಸ್ಥಾಪನೆ ಮಾಡಿತ್ತು. ನಂತರ, ಈ ಪ್ರಶಸ್ತಿಗೆ 2020-2023ರ ಅವಧಿಯಲ್ಲಿ ಮಹಿಳೆಯರು ಪ್ರಕಟಿಸಿದ ಕಾದಂಬರಿಗಳನ್ನು ಆಹ್ವಾನಿಸಲಾಗಿತ್ತು.

ಲೇಖಕಿಯರು/ಪ್ರಕಾಶಕರು ಒಟ್ಟು 24 ಕಾದಂಬರಿಗಳನ್ನು ಕಳುಹಿಸಿದ್ದರು. ಈ ಕಾದಂಬರಿಗಳನ್ನು ಹಿರಿಯ‌ ಲೇಖಕರು, ಸಾಹಿತ್ಯ ವಿಮರ್ಶಕರಾದ ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ, ಡಾ.ಡಿ.ವಿಜಯಲಕ್ಷ್ಮಿ, ಡಾ.ಎಚ್.ಎಂ.ಕಲಾಶ್ರೀ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಅವಲೋಕನ ಮಾಡಿದೆ. ಈ ಪೈಕಿ ಉಷಾ ಅವರ ಮೊದಲ‌ ಕಾದಂಬರಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ₹25,000 ನಗದು ಬಹುಮಾನ ಹಾಗೂ ಫಲಕವನ್ನು ಒಳಗೊಂಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ವಿಜಯಾ ದಬ್ಬೆ ಹೆಸರಿನ ಪ್ರಶಸ್ತಿಯನ್ನು ಅವರ ವಿದ್ಯಾರ್ಥಿನಿಯೂ ಆದ ಭಾಷಾಂತರ, ಮಹಿಳಾ ಅಧ್ಯಯನ, ಸಾಹಿತ್ಯ ವಿಮರ್ಶೆ, ಸಾಂಸ್ಕೃತಿಕ ಅಧ್ಯಯನಗಳಲ್ಲಿ ಎರಡೂವರೆ ದಶಕದಿಂದ ತೊಡಗಿಸಿಕೊಂಡಿರುವ ಉಷಾ ಅವರಿಗೆ ನೀಡಲು ಸಂಸ್ಥೆ‌ ಹೆಮ್ಮೆ ಪಡುತ್ತದೆ. ಜುಲೈ 21ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ” ಎಂದು ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಂ.ಉಷಾ ಅವರ ಪರಿಚಯ

ಎಂ. ಉಷಾ ಅವರು ಮೂಲತಃ‌ ಚಾಮರಾಜನಗರ‌‌ ಜಿಲ್ಲೆಯವರು. ಮೈಸೂರು ವಿವಿಯಲ್ಲಿ‌ ಎಂ.ಎ, ಬೆಂಗಳೂರು ವಿವಿಯಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಹಂಪಿ‌ ಕನ್ನಡ ವಿವಿ‌‌‌ ಭಾಷಾಂತರ‌ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ‌ನಿರ್ವಹಿಸಿ 2019 ರಲ್ಲಿ ಸ್ವಯಂ‌ ನಿವೃತ್ತಿ ‌ಪಡೆದಿದ್ದಾರೆ.

ಸಂಸ್ಕೃತಿ ಚಿಂತನೆ ಮತ್ತು‌ ಭಾರತೀಯ ಸ್ತ್ರೀವಾದ, ಮಹಿಳಾ ಚಳುವಳಿ ಮತ್ತು ಮಹಿಳಾ ವಿಷಯಗಳು, ಮಹಿಳೆ ಮತ್ತು ಜಾತಿ, ಆಧುನಿಕ ಮಹಿಳಾ ಸಾಹಿತ್ಯ, ಇನ್ನಷ್ಟು ಪುಟಗಳು (ಸಂ), ಸುರುಚಿ, ಒಳಗಣ ರಣರಂಗ ಹೊರಗಣ ಶೃಂಗಾರ , ಭಾಷಾಂತರ ಮತ್ತು ಲಿಂಗರಾಜಕಾರಣ, ಭಾಷಾಂತರ ಪ್ರವೇಶಿಕೆ, ಕನ್ನಡ ಮ್ಯಾಕ್ ಬೆತ್, ಲಿಖ್ಯಂತೆ ದೇಶಭಾಷೆಯೊಳ್, ಹೆಣ್ಣೆಂಬ ಶಬುದ (ಸಂ) ಮುಂತಾದವು ಇವರ ಮುಖ್ಯ ಪ್ರಕಟಣೆಗಳು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ‘ಜಾಹೀರಾತು ಮುಕ್ತ ಅಭಿಯಾನ’ಕ್ಕೆ ಕೈ ಜೋಡಿಸಲು ನಾಗರಿಕರಲ್ಲಿ ಮನವಿ ಮಾಡಿದ ಬಿಬಿಎಂಪಿ

ಇವರ ‘ಶೂಲಿ ಹಬ್ಬ’ ಬೆಂಗ್ಳೂರು ನಾಟಕೋತ್ಸವ -2013 ರಲ್ಲಿ ಉತ್ತಮ ನಾಟಕ ರಚನಾ ಬಹುಮಾನ‌‌, ಕರ್ನಾಟಕ ಲೇಖಕಿಯರ ಸಂಘದ ಇಂದಿರಾವಾಣಿ ರಾವ್ ದತ್ತಿನಿಧಿ- 2015 ಬಹುಮಾನ ಮತ್ತು ‘ಅರ್ಧಕಥಾನಕ’ ಭಾಷಾಂತರ ಕೃತಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ‌ಪಡೆದಿವೆ. ಕನ್ನಡ ಮ್ಯಾಕ್ ಬೆತ್ ಕೃತಿ ಕರ್ನಾಟಕ ಸಾಹಿತ್ಯ‌ ಅಕಾಡೆಮಿಯ 2019 ರ ಪಿ.ಶ್ರೀನಿವಾಸ ರಾವ್ ದತ್ತಿ  ಮತ್ತು ಬಿಎಂಶ್ರೀ ಪ್ರತಿಷ್ಠಾನದ 2019ರ ಆರಗಂ ವಿಮರ್ಶಾ ಪ್ರಶಸ್ತಿಗಳಿಗೆ ಭಾಜನವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇವದಾರಿ ಗಣಿಗಾರಿಕೆ ಯೋಜನೆ ಬಗ್ಗೆ ಕಳವಳ ಬೇಡ: ಕೇಂದ್ರ ಸಚಿವ ಕುಮಾರಸ್ವಾಮಿ

ಬಳ್ಳಾರಿಯ ಸಂಡೂರು ವ್ಯಾಪ್ತಿಯ ದೇವದಾರಿ ಪ್ರದೇಶದಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿ...

ಜೂನ್ 19ರಂದು ಅಂಗನವಾಡಿ ನೌಕರರ ಸಂಘ ಅನಿರ್ದಿಷ್ಟಾವಧಿ ಹೋರಾಟ

ಅಂಗನವಾಡಿ ಕೇಂದ್ರಗಳಲ್ಲಿ ಇಸಿಸಿಇ (ECCE) ಜಾರಿಗಾಗಿ ಒತ್ತಾಯಿಸಿ, ಕೂಸಿನ ಮನೆ ರದ್ದು...

ಗದಗ | ಅತಿವೃಷ್ಟಿಯಿಂದಾದ ಹಾನಿಯ ಕುರಿತು ಸಭೆ; ಮುಂಜಾಗೃತಾ ಕ್ರಮಕ್ಕೆ ಡಿಸಿ ಸೂಚನೆ

ಅಧಿಕ ಮಳೆಯಿಂದಾಗುವ ಅತಿವೃಷ್ಟಿ ನಿಯಂತ್ರಣಕ್ಕೆ ಗದಗ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು...

ಬೆಂಗಳೂರು | ಕುಡಿಯುವ ನೀರಿನ ದರ ಏರಿಕೆ ಅನಿವಾರ್ಯ: ಡಿ.ಕೆ ಶಿವಕುಮಾರ್

ರಾಜ್ಯದಲ್ಲಿ ಸದ್ಯ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ....