ಪ್ರಜ್ವಲ್‌ ರೇವಣ್ಣ ಪ್ರಕರಣ ಯಾವುದೇ ಡಿಟರ್ಜೆಂಟ್‌ನಿಂದ ಹೋಗುವ ಕಲೆಯಲ್ಲ: ಮಾಜಿ ರಾಜ್ಯಸಭಾ ಸದಸ್ಯ ಜವರೇಗೌಡ

Date:

ದೇವೇಗೌಡ ಅವರ ಕುಟುಂಬದಿಂದ ಸಮಾಜದ ಮೇಲಾಗಿರುವ ಅತ್ಯಾಚಾರ, ದುರ್ನಡತೆಯನ್ನು ಯಾವುದೇ ನಾಗರಿಕರೂ ಕ್ಷಮಿಸಲು, ಸಹಿಸಲು ಸಾಧ್ಯವೇ ಇಲ್ಲ. ಯಾವುದೇ ಡಿಟರ್ಜೆಂಟ್‌ನಿಂದ ಹೋಗಬಲ್ಲ ಕಲೆಯಲ್ಲ. ಅತ್ಯಾಚಾರದ ಕಲೆಯು ಸಮಾಜದ ಮನಸ್ಸಿನ ಆಳಕ್ಕೆ ಇಳಿದಿದೆ ಎಂದು ಹಾಸನದ ಹಿರಿಯ ವಕೀಲ, ಮಾಜಿ ಸಂಸದ ಜವರೇಗೌಡ ಅವರು ತಮ್ಮ ಮನದಾಳದ ಅಭಿಪ್ರಾಯವನ್ನು ಹೊರಹಾಕಿದರು.

‌ದೇಶಾದ್ಯಂದ ಸುದ್ದಿಯಲ್ಲಿರುವ ಪ್ರಜ್ವಲ್‌ ರೇವಣ್ಣನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಜವರೇಗೌಡ ಅವರೊಂದಿಗೆ ಈ ದಿನ.ಕಾಮ್‌ ನಡೆಸಿದ ಸಂದರ್ಶನದಲ್ಲಿ ದೇವೇಗೌಡರ ಈ ಹಿಂದಿನ ಸ್ವಭಾವಗಳಿಗೂ, ಈಗಿನ ಸ್ವಭಾವದ ಕುರಿತು ಮಾತನಾಡಿದರು.

“ನಾವು ನೋಡಿದಂತಹ ದೇವೇಗೌಡರು ಇದ್ದಾರೆಯೇ? ಇಲ್ಲ. ಅವರ ದೇಹ ಇದೆ. ಬದಲಾಗಿ ಅವರ ವಿಚಾರಗಳಿಲ್ಲ. ಅವರು ಏನನ್ನಾದರೂ ಫೇಸ್‌ ಮಾಡಬಹುದು. ಆದರೆ ಈ ಅತ್ಯಾಚಾರ ಪ್ರಕರಣವನ್ನು ಫೇಸ್‌ ಮಾಡಲು ಸಾಧ್ಯವೇ ಇಲ್ಲ. ನ್ಯಾಯಾಲಯದ ತೀರ್ಪು ಏನಾಗುತ್ತದೋ ಬಿಡುತ್ತದೋ ಎಂಬುದು ಪ್ರಶ್ನೆಯಲ್ಲ. ಆದರೆ, ಈ ಸಮಾಜದ ಮೇಲಾಗಿರುವ ಅತ್ಯಾಚಾರ ಮಾಸುವುದೇ ಇಲ್ಲ” ಎಂದು ನೋವಿನಿಂದ ಬೇಸರ ವ್ಯಕ್ತಪಡಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವೇಗೌಡರ ಕುಟುಂಬದ ಹೇಳಿಕೆಯನ್ನು ಸಮಾಜವೇನೂ ಕಾಯುತ್ತಿಲ್ಲ. ಈಗಾಗಲೇ ಸಮಾಜ ಒಟ್ಟಾರೆಯಾಗಿ ಅವನನ್ನು ರಿಜೆಕ್ಟ್‌ ಮಾಡಿದೆ. ಅವರು ನಾಗರಿಕತೆಗೆ ಅವಮಾನ ಮಾಡಿದ್ದಾರೆ” ಎಂದರು.

“ಎಸ್‌ಐಟಿ ತುಂಬಾ ಚುರುಕಾಗಿದ್ದು, ಅಶ್ಲೀಲ ವೀಡಿಯೋಗಳಿಗೆ ಸಂಬಂಧಿಸಿದಂತೆ ವೀಡಿಯೋಗಳನ್ನು ಮಾಡಿದವರು ಯಾರು? ವಿಡಿಯೋಗಳನ್ನು ಹರಿಬಿಟ್ಟವರು ಯಾರು? ಎಂಬುದನ್ನು ತೀಕ್ಷ್ಣವಾಗಿ ಪತ್ತೆಹಚ್ಚಲಿದೆ. ಜತೆಗೆ ಭಾರತದ ಕಾನೂನು ಪ್ರಬಲವಾಗಿದ್ದು, ಆರೋಪಿಗಳು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನ್ಯಾಯ ಬೇಕೆನ್ನುವ ಸಂತ್ರಸ್ತೆಯರು ಪ್ರತಿರಿಕ್ತವಾದ ಹೇಳಿಕೆ ನೀಡಿದಾಗ ಮಾತ್ರ ಕಾನೂನು ದುರ್ಬಲವಾಗಬಹುದು. ಹೇಳಿಕೆಗಳನ್ನು ನೀಡದೆ ಸತ್ರಸ್ತೆಯರು ಉಲ್ಟಾ ಆದಲ್ಲಿ ಕೇಸ್‌ ನಿಲ್ಲುವುದಿಲ್ಲ” ಎಂದು ಹೇಳಿದರು.

“ದೇವೇಗೌಡರಿಗೆ ನಾನು ಅಂಧಾಭಿಮಾನಿಯಾಗಿದ್ದೆ. ಕಾರಣ ಅವರು ಕೊಟ್ಟಂತ ಪ್ರೀತಿ ಅವರ ನಡವಳಿಕೆಗಳೇ ನಮ್ಮ ಊರಿನ ಜನರಿಗೆ ಅಚ್ಚುಮೆಚ್ಚಾಗಿದ್ದವು. ನಾವು ಚಿಕ್ಕವರಿರುವಾಗ ದೇವೇಗೌಡರು ಯಾರೆಂದು ಗೊತ್ತಿಲ್ಲದಿದ್ದರೂ ಅವರ ಮೇಲೆ ಅಪಾರವಾದ ಪ್ರೀತಿ ಇತ್ತು. ಏಕೆಂದರೆ ಅವರ ನಡವಳಿಕೆಗಳು, ಅವರ ಪ್ರೀತಿ, ಜನಸಾಮಾನ್ಯರ ಮೇಲಿದ್ದಂತಹ ಕಳಕಳಿ ಇವೆಲ್ಲವೂ ದೇವೇಗೌಡರನ್ನು ಉತ್ತುಂಗಕ್ಕೇರಿಸಿದ್ದವು. ಅವರು ಜನಸಾಮಾನ್ಯರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದರು. ಒಂದು ರೀತಿಯಲ್ಲಿ ಹೋರಾಟಗಾರರಾಗಿ ಹೊರಹೊಮ್ಮಿದ್ದರು” ಎಂದು ಹಿಂದಿನ ದೇವೇಗೌಡರನ್ನು ಮೆಲುಕು ಹಾಕಿದರು.

“ಇಡೀ ಜಿಲ್ಲೆ ದೇವೇಗೌಡರು ಇಲ್ಲದೆ ಯಾರೂ ಇಲ್ಲ ಎನ್ನುವ ಕಾಲಘಟ್ಟವಿತ್ತು. 1991ರ ಆ ಕಾಲದಲ್ಲಿ ನಾನೂ ಕೂಡ ಅವರ ಅಂಧಾಭಿಮಾನಿಯಾಗಿದ್ದೆ. ಅವರೇನು ಹೇಳಿದರೂ ಅದೇ ಫೈನಲ್‌ ಎನ್ನುವಂತಿತ್ತು. ಜನರಿಗೆ ಸ್ಪಂದಿಸುವ ಗುಣವಿತ್ತು. ಅದರಿಂದ ಮುಖ್ಯಮಂತ್ರಿಯಾದರು, ಪ್ರಧಾನಿಯೂ ಆದರು. ಆದರ ದೇವೇಗೌಡರು ಇಂದು ಅಂತಹ ನಂಬಿಕೆಗಳನ್ನು ಉಳಿಸಿಕೊಂಡಿದ್ದಾರೆಯೇ?, ಅವರ ವ್ಯಕ್ತಿತ್ವವನ್ನು ಉಳಿಸಿಕೊಂಡಿದ್ದಾರೆಯೇ? ಇಲ್ಲ. ಅವರು ಇವತ್ತು ಅದಾವುದನ್ನೂ ಉಳಿಸಿಕೊಂಡಿಲ್ಲ” ಎಂದರು.

“ದೇವೇಗೌಡರಿಗೆ ಕುಟುಂಬದ ವಿಚಾರ ಬಂದಾಗ ಬೇರೆ ಯಾರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಅಂತಿಮವಾಗಿ ಹೇಗೆ ಸಮಾಧಾನ ಮಾಡಬೇಕೋ ಎಂಬುದನ್ನು ಮಾಡಿಬಿಡುತ್ತಾರೆ. ಯಾರೇ ಬೆಂಬಲಿಗರ ಮಾತನ್ನೂ ಕೇಳುವುದಿಲ್ಲ. ಕೇಳಿಕೊಂಡರು ಕೂಡ ತೀರ್ಮಾನ ಮಾಡುವುದನ್ನು ಕಳೆದುಕೊಂಡಿದ್ದರು” ಎಂದು ಹೇಳಿದರು.

“ದೇವೇಗೌಡರನ್ನು ಹೊರತು ಪಡಿಸಿದರೆ ಅವರ ಕುಟುಂಬವೇನೂ ಅಲ್ಲ. ದೇವೇಗೌಡರ ನೆರಳಿನಲ್ಲಿ ಅವರ ಕುಟುಂಬ ಬದುಕುತ್ತಿದೆ. ಅಧಿಕಾರದ ರುಚಿಯನ್ನು ಬೇರೆಯವರಿಗೆ ಹಂಚಿಕೆ ಮಾಡಲು ಮನಸ್ಸು ಬರುವುದಿಲ್ಲ. ಹಾಗಾಗಿ ಅವರದೇ ಪಕ್ಷ, ಅವರೇ ಕಟ್ಟಿರುವುದರಿಂದ ಕುಟುಂಬವೇ ಅಧಿಕಾರ ಫಲ ಉಣ್ಣುವ ತೀರ್ಮಾನ ಮಾಡಿದ್ದಾರೆ” ಎಂದು ತಿಳಿಸಿದರು.

“ಪ್ರಜ್ವಲ್‌ ರೇವಣ್ಣನ್ನು ಹಾಸನ ಲೋಕಸಭಾ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸದಂತೆ ನಾನು ಹೇಳಿದೆ, ಆದರೆ ಅವರನ್ನು ಒಪ್ಪಿಸಲು ಸಾಧ್ಯವಾಗಲಿಲ್ಲ. ಅಪ್ಪಾಜಿಯರೇ ತೀರ್ಮಾನ ಮಾಡಿದರೆಂದು ಕುಮಾರಸ್ವಾಮಿಯವರು ಸಾರ್ವಜನಿಕವಾಗಿ ಹೇಳಿದ್ದಾರೆ. ಕುಮಾರಸ್ವಾಮಿಯವರ ಮಾತು ನಡೆದಿದ್ದರೆ, ಪ್ರಜ್ವಲ್‌ ಅಭ್ಯರ್ಥಿ ಆಗುತ್ತಿರಲಿಲ್ಲ. ಕಾರಣಗಳನ್ನು ಕೊಟ್ಟರೂ ಕೂಡ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಒಪ್ಪಲಿಲ್ಲ. ಡಾ. ಸಿ ಎನ್‌ ಮಂಜುನಾಥ್‌ ಅವರನ್ನೇ ಹಾಸನದಲ್ಲಿ ಕಣಕ್ಕಿಳಿಸಲು ಬಿಡಲಿಲ್ಲವೆಂಬ ಮಾಹಿತಿ ಇದೆ. ಅಂದಮೇಲೆ ಅವರ ಕುಟುಂಬ ರಾಜಕಾರಣ ಸ್ಪಷ್ಟ. ಇದೀಗ ದೇವೇಗೌಡರು ಕುಮಾರಸ್ವಾಮಿ ಮಾತು ಕೇಳಬೇಕಾಗಿತ್ತು. ಬೇರೆ ಅಭ್ಯರ್ಥಿ ಘೋಷಿಸಬೇಕಾಗಿತ್ತು ಎಂದು ಯೋಚನೆ ಮಾಡಿದರೆ ಕಾಲ ಮೀರಿದೆ” ಎಂದರು.

“ಈ ಕೃತ್ಯವನ್ನು ಯಾರು ಖಂಡಿಸುವುದಿಲ್ಲವೋ, ಯಾರು ಛೀಮಾರಿ ಹಾಕುವುದಿಲ್ಲವೋ ಅಂಥವರು ನೈತಿಕತೆಯಿಂದ ಮಾತನಾಡಲು ಆಗುವುದಿಲ್ಲ. ವೀಡಿಯೋ ಹಂಚಿರುವುದು ತಪ್ಪು ಎನ್ನುವುದಾದರೆ, ಕೃತ್ಯ ಎಸಗಿರುವುದು ಸರಿ, ಹಾಗೆ ಕೃತ್ಯ ಮುಂದುವರೆಯಲಿ, ಯಾರಿಗೂ ಬಹಿರಂಗವಾಗುವುದು ಬೇಡ ಎನ್ನುವ ಮನಸ್ಥಿತಿಯಿಂದ ಹೀಗೆ ಮಾತನಾಡುತ್ತಿರುವರೇ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿದ್ದೀರಾ? ದೇವೇಗೌಡರ ಕುಟುಂಬದ ಕಿರುಕುಳಕ್ಕೆ ಅಧಿಕಾರಿಗಳು ಕುಗ್ಗಿ ಹೋಗಿದ್ದಾರೆ, ಪತ್ರಕರ್ತರು ಭಯದಲ್ಲಿದ್ದಾರೆ : ಆರ್.ಪಿ.ವೆಂಕಟೇಶ್ ಮೂರ್ತಿ

“ನ್ಯಾಯಾಲಯದಲ್ಲಿ ಘೋಷಿತ ಅಪರಾಧಿ ಎನ್ನುವವರೆಗೆ ಪ್ರಜ್ವಲ್‌ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಯಾವ ಆರೋಪಗಳೂ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಒಂದು ವೇಳೆ ಚುನಾವಣೆಯಲ್ಲಿ ಗೆದ್ದರೆ, ಅವರು ಎಂಪಿ ಆಗಿಯೇ ಮುಂದುವರೆಯುತ್ತಾರೆ. ನ್ಯಾಯಾಲಯದಲ್ಲಿ ಸಾಕ್ಷಿ ರುಜುವಾತಾದರೆ, ಅವರ ಮೆಂಬರ್‌ಶಿಪ್‌ ಹೋಗುತ್ತದೆ. ಇದಲ್ಲದೆ ಪ್ರಜ್ವಲ್‌ ರೇವಣ್ಣ ವಿರುದ್ಧ ಸುಪ್ರಿಂ ಕೋರ್ಟ್‌ನಲ್ಲಿ ಇನ್ನೊಂದು ಪ್ರಕರಣವಿದೆ. ಅದನ್ನು ಹೈಕೋರ್ಟ್‌ ಎತ್ತಿ ಹಿಡಿದರೆ ಅದರಿಂದಲೇ ಅವರ ಮೆಂಬರ್‌ಶಿಪ್‌ ಕ್ಯಾನ್ಸಲ್‌ ಆಗುತ್ತದೆ. ಇನ್ನು ಆರು ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ” ಎಂದು ಹೇಳಿದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇವದಾರಿ ಗಣಿಗಾರಿಕೆ ಯೋಜನೆ ಬಗ್ಗೆ ಕಳವಳ ಬೇಡ: ಕೇಂದ್ರ ಸಚಿವ ಕುಮಾರಸ್ವಾಮಿ

ಬಳ್ಳಾರಿಯ ಸಂಡೂರು ವ್ಯಾಪ್ತಿಯ ದೇವದಾರಿ ಪ್ರದೇಶದಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿ...

ಜೂನ್ 19ರಂದು ಅಂಗನವಾಡಿ ನೌಕರರ ಸಂಘ ಅನಿರ್ದಿಷ್ಟಾವಧಿ ಹೋರಾಟ

ಅಂಗನವಾಡಿ ಕೇಂದ್ರಗಳಲ್ಲಿ ಇಸಿಸಿಇ (ECCE) ಜಾರಿಗಾಗಿ ಒತ್ತಾಯಿಸಿ, ಕೂಸಿನ ಮನೆ ರದ್ದು...

ಗದಗ | ಅತಿವೃಷ್ಟಿಯಿಂದಾದ ಹಾನಿಯ ಕುರಿತು ಸಭೆ; ಮುಂಜಾಗೃತಾ ಕ್ರಮಕ್ಕೆ ಡಿಸಿ ಸೂಚನೆ

ಅಧಿಕ ಮಳೆಯಿಂದಾಗುವ ಅತಿವೃಷ್ಟಿ ನಿಯಂತ್ರಣಕ್ಕೆ ಗದಗ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು...

ಸಾಹಿತಿಗಳೂ ರಾಜಕಾರಣಿಗಳೇ, ಸರ್ಕಾರದಿಂದ ನೇಮಕವಾಗಿದ್ದಾರೆ, ಸಭೆ ಮಾಡಿದ್ದೇನೆ: ಡಿ ಕೆ ಶಿವಕುಮಾರ್

ಇತ್ತೀಚೆಗೆ ಕೆಪಿಸಿಸಿ ಕಚೇರಿಗೆ ಸಾಹಿತ್ಯ, ಸಂಸ್ಕೃತಿ ಹಾಗೂ ಇತರ ಅಕಾಡೆಮಿಗಳ ಅಧ್ಯಕ್ಷರ...