ಕೊಳಗೇರಿಗಳಲ್ಲಿ ವಾಸವಾಗಿರುವ ಶೇ.80 ರಷ್ಟು ಅಲೆಮಾರಿಗಳಿಗೆ ಶಿಕ್ಷಣ, ವಸತಿ, ಭೂ ಹಕ್ಕು ನೀಡಿಕೆಗೆ ಶಿಫಾರಸ್ಸು

Date:

ರಾಜ್ಯದಲ್ಲಿರುವ 51 ಅಲೆಮಾರಿ ಜನಾಂಗಗಳು ಇಂದಿಗೂ ಸರ್ಕಾರದ ಸೇವೆಗಳಿಂದ ವಂಚಿತವಾಗಿ ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿ ಬದುಕುತ್ತಿವೆ. ಇವರ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಕೂಡಲೇ ‘ವಿಶೇಷ ಅಭಿವೃದ್ಧಿ ಯೋಜನೆ’ಯನ್ನು ರೂಪಿಸಬೇಕು ಹಾಗೂ ಪ್ರಾಥಮಿಕದಿಂದ ಉನ್ನತ ಹಂತದವರೆಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸುರಕ್ಷಿತ ವಸತಿ ಮತ್ತು ಭೂ ಹಕ್ಕುಗಳನ್ನು ಒದಗಿಸಬೇಕು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

- Advertisement -

ಆಯೋಗದ ವರದಿಯ ಪ್ರಕಾರ, ರಾಜ್ಯದಲ್ಲಿರುವ ಒಟ್ಟು 51 ಅಲೆಮಾರಿ ಸಮುದಾಯಗಳ ಪೈಕಿ ಶೇ. 80ರಷ್ಟು ಜನರು ಕೊಳಗೇರಿ (ಸ್ಲಂ) ಪ್ರದೇಶಗಳಲ್ಲಿಯೇ ವಾಸಿಸುತ್ತಿದ್ದಾರೆ. ಇವರಿಗೆ ಕನಿಷ್ಠ ಮೂಲಭೂತ ಶಿಕ್ಷಣವೂ ಸಮರ್ಪಕವಾಗಿ ಲಭ್ಯವಾಗಿಲ್ಲ. ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಸುಮಾರು ಹತ್ತು ಅಲೆಮಾರಿ ಸಮುದಾಯಗಳಲ್ಲಿನ ಜನರು ಇದುವರೆಗೂ ಹೈಸ್ಕೂಲ್ ಶಿಕ್ಷಣವನ್ನೇ ಪೂರ್ಣಗೊಳಿಸಿಲ್ಲ. ಗುಣಮಟ್ಟದ ಶಾಲಾ ಶಿಕ್ಷಣದ ಕೊರತೆ, ತೀವ್ರ ಬಡತನ ಮತ್ತು ಸಮಾಜದಲ್ಲಿರುವ ಸಾಮಾಜಿಕ ಬಹಿಷ್ಕಾರಗಳು ಇವರ ಶೈಕ್ಷಣಿಕ ಹಿಂದುಳಿಯುವಿಕೆಗೆ ಪ್ರಮುಖ ಕಾರಣಗಳಾಗಿವೆ. ಇದರ ಪರಿಣಾಮವಾಗಿ ತಲೆಮಾರಿನಿಂದ ತಲೆಮಾರಿಗೆ ಈ ಹಿಂದುಳಿಯುವಿಕೆ ಮುಂದುವರಿಯುತ್ತಲೇ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳಾ ಮೀಸಲಾತಿ ಮರೆಯಲ್ಲಿ ಕ್ಷೇತ್ರ ಮರುವಿಂಗಡಣೆ: ವಿರೋಧ ಪಕ್ಷಗಳ...

2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅನಗತ್ಯವಾಗಿ ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ತಳುಕು ಹಾಕಿರುವ ಮೋದಿ ಸರ್ಕಾರದ ನಡೆ, ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂಸದೀಯ ಇತಿಹಾಸದಲ್ಲಿಯೇ ಒಂದು ಅಪರೂಪದ ರಾಜಕೀಯ ಹಾಗೂ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ....

ಖಾಸಗಿ ವೈದ್ಯರ ಎಡವಟ್ಟು; ಬಡ ಕುಟುಂಬದ ಆಧಾರ ಸ್ತಂಭ...

ಆತ ಕೂಲಿ‌ ಕೆಲಸ ಮಾಡಿಕೊಂಡು ಹಂಗೊ ಹೆಂಗೋ ಜೀವನ‌ ನಡೆಸಿಕೊಂಡು ಬಂದಿದ್ದ ಚಿರ ಯೌವ್ವನದ ಯುವಕ. ತನ್ನ ಮನೆ ಜವಾಬ್ದಾರಿಯನ್ನು ತನ್ನದೇ ಹೆಗಲ ಮೇಲೆರಿಸಿ ಕಷ್ಟಪಟ್ಟು ದುಡಿದು ತನ್ನ ಇಬ್ಬರು ಸಹೋದರಿಯರಿಗೆ ಮದುವೆಯನ್ನೂ...

ಭಾಷಣಗಳಲ್ಲಿ ಆಗಾಗ ಎಡವಟ್ಟು, ಸುಳ್ಳು-ಅತಿಶಯೋಕ್ತಿಯೇ ಮೇಲುಗೈ: ನವಭಾರತದ ‘ಪಪ್ಪು’...

ಒಂದು ಕಾಲದಲ್ಲಿ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡಲು ಬಳಸುತ್ತಿದ್ದ 'ಪಪ್ಪು' ಎಂಬ ಪದವೇ ಇದೀಗ ಮೋದಿ ಅವರತ್ತ ತಿರುಗಿದೆ. 1987-88ರ ಡಿಜಿಟಲ್ ಕ್ಯಾಮೆರಾ-ಇಮೇಲ್ ಕಥೆಯಿಂದ ಹಿಡಿದು ಐತಿಹಾಸಿಕ ಪ್ರಮಾದಗಳವರೆಗೆ, ಮೋದಿ ಅವರ...

​ಅಲೆಮಾರಿ ಜನಾಂಗದ ಸುಮಾರು 45 ಸಮುದಾಯಗಳಿಗೆ ಭಿಕ್ಷಾಟನೆ (ಭಿಕ್ಷೆ ಬೇಡುವುದು) ಸಾಂಪ್ರದಾಯಿಕ ಹಾಗೂ ಅನಿವಾರ್ಯ ಜೀವನೋಪಾಯವಾಗಿದೆ. ಆದರೆ ‘ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ’ಯಡಿ ಭಿಕ್ಷಾಟನೆಯನ್ನು ಅಪರಾಧವೆಂದು ಪರಿಗಣಿಸಿರುವುದರಿಂದ, ವಾಸ್ತವದಲ್ಲಿ ಬಡತನವನ್ನೇ ಅಪರಾಧೀಕರಿಸಿದಂತಾಗಿದೆ. ಈ ಕಾನೂನಿನಿಂದಾಗಿ ಅಲೆಮಾರಿ ಸಮುದಾಯದ ಜನರು ನಿರಂತರವಾಗಿ ದಂಡನೆಗೆ ಗುರಿಯಾಗುತ್ತಿದ್ದು, ಮತ್ತಷ್ಟು ಅತಂತ್ರ ಸ್ಥಿತಿಗೆ ತಳ್ಳಲ್ಪಡುತ್ತಿದ್ದಾರೆ ಎಂದು ವರದಿಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ.

​ಉಪಸಮಿತಿಯ ಪ್ರಮುಖ ಶಿಫಾರಸುಗಳು:

ಅಲೆಮಾರಿ ಸಮುದಾಯಗಳ ಹಕ್ಕುಗಳ ರಕ್ಷಣೆ ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಉಪಸಮಿತಿಯು ಈ ಕೆಳಗಿನ ಮಹತ್ವದ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದೆ:

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿದೇಶಗಳಲ್ಲಿ ದ್ವೇಷಕ್ಕೆ ಭಾರತೀಯರ ಬಲಿ- ಕೈಕಟ್ಟಿ ಕುಳಿತಿರುವರೇ ‘ವಿಶ್ವಗುರು’?

​ವಿಶೇಷ ಅಭಿವೃದ್ಧಿ ಯೋಜನೆ: ಅಲೆಮಾರಿ ಸಮುದಾಯದ ಸಮಗ್ರ ಪ್ರಗತಿಗಾಗಿ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ಪ್ರತ್ಯೇಕ ಹಾಗೂ ವಿಶೇಷ ಅಭಿವೃದ್ಧಿ ಯೋಜನೆಯೊಂದನ್ನು ಘೋಷಿಸಿ, ಜಾರಿಗೊಳಿಸಬೇಕು.

​ಶಿಕ್ಷಣದ ಹಕ್ಕು ಖಾತರಿ: ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಅಲೆಮಾರಿ ಸಮುದಾಯದ ಪ್ರತಿಯೊಂದು ಮಗು ಮತ್ತು ಯುವಕರಿಗೆ ಗುಣಮಟ್ಟದ ಶಿಕ್ಷಣಕ್ಕೆ ಸಂಪೂರ್ಣ ಅವಕಾಶ ಕಲ್ಪಿಸಬೇಕು. ಕಡುಬಡತನದಿಂದಾಗಿ ಮಕ್ಕಳು ಶಾಲೆ ಬಿಡುವುದನ್ನು ತಡೆಯಲು ಬೆಂಬಲ ಆಧಾರಿತ ವಿಶೇಷ ವ್ಯವಸ್ಥೆಗಳನ್ನು ರೂಪಿಸಬೇಕು.

​ಭೂಮಿ ಮತ್ತು ವಸತಿ ಹಕ್ಕು: ಅಲೆಮಾರಿ ಸಮುದಾಯಕ್ಕೆ ಅಲೆದಾಟದಿಂದ ಮುಕ್ತಿ ನೀಡಿ, ಸ್ಥಿರ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಸುರಕ್ಷಿತ ವಸತಿ ಹಾಗೂ ಭೂಮಿಯ ಹಕ್ಕುಗಳನ್ನು ಸರ್ಕಾರ ಕಡ್ಡಾಯವಾಗಿ ಖಚಿತಪಡಿಸಬೇಕು.

​ಪರ್ಯಾಯ ಉದ್ಯೋಗದ ಭರವಸೆ: ಭಿಕ್ಷಾಟನೆಯನ್ನೇ ನಂಬಿ ಬದುಕುತ್ತಿರುವ ಸಮುದಾಯಗಳನ್ನು ಗುರುತಿಸಿ, ಅವರಿಗೆ ಗೌರವಯುತವಾದ ಪರ್ಯಾಯ ಉದ್ಯೋಗಾವಕಾಶ ಹಾಗೂ ಕೌಶಲ್ಯ ತರಬೇತಿಯನ್ನು ಒದಗಿಸಬೇಕು.

ದಶಕಗಳಿಂದ ಸಮಾಜದ ಕಟ್ಟಕಡೆಯಲ್ಲಿರುವ, ಅಭಿವೃದ್ಧಿಯ ಬೆಳಕೇ ಕಾಣದ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ಹಕ್ಕುಗಳನ್ನು ತಲುಪಿಸಿ, ಅವರನ್ನು ನಿಕೃಷ್ಟ ಬದುಕಿನಿಂದ ಮೇಲೆತ್ತುವ ನಿಟ್ಟಿನಲ್ಲಿ ಸರ್ಕಾರ ತುರ್ತು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ ಎಂಬುದು ಆಯೋಗ ತನ್ನ ಶಿಫಾರಸ್ಸಿನಲ್ಲಿ ತಿಳಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

15,000 ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ: ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಪ್ರಕಟ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 15,000 ಪದವೀಧರ ಪ್ರಾಥಮಿಕ ಶಾಲಾ...

ಚಿಕಿತ್ಸಾ ನಿರ್ಲಕ್ಷ್ಯದಿಂದ ಮಹಿಳೆಗೆ ತೀವ್ರ ರಕ್ತಸ್ರಾವ: ಬೆಂಗಳೂರಿನ ವೈದ್ಯೆಗೆ ₹2 ಲಕ್ಷ ದಂಡ ವಿಧಿಸಿದ ಗ್ರಾಹಕರ ಆಯೋಗ

ವಿಫಲವಾದ ಗರ್ಭಧಾರಣೆಯ ಬಳಿಕ ಗರ್ಭಕೋಶವನ್ನು ಶುಚಿಗೊಳಿಸುವ ಶಸ್ತ್ರಚಿಕಿತ್ಸೆಯನ್ನು (ಡಿ ಆ್ಯಂಡ್ ಸಿ)...

ಬೈಕ್ ಟ್ಯಾಕ್ಸಿ ಪರ ಸುಪ್ರೀಮ್ ತೀರ್ಪು; ಆಟೋ ಯೂನಿಯನ್ ವಿರೋಧ, ರಾಜ್ಯ ಸರ್ಕಾರದ ನಿಲುವೇನು?

ಆ್ಯಪ್ ಆಧಾರಿತ ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿದ್ದ ಹೈಕೋರ್ಟ್ ಆದೇಶದ...