ಒಳಮೀಸಲು ರೋಸ್ಟರ್ ಬಿಂದು ಬಿಡುಗಡೆ; ಅಲೆಮಾರಿಗಳಿಗೆ ನಾಲ್ಕು ಹುದ್ದೆ ಮೀಸಲು

Date:

ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ (ಒಳಮೀಸಲಾತಿ) ಪ್ರಮಾಣ ಸಂಬಂಧ ಇತ್ತೀಚೆಗೆ ಸಚಿವ ಸಂಪುಟ ಕೈಗೊಂಡ ನಿರ್ಧಾರದ ಅನ್ವಯ, 400 ಬಿಂದುಗಳ ರೋಸ್ಟರ್ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಜೊತೆಗೆ ಒಳಮೀಸಲಾತಿ ಬಿಂದುಗಳನ್ನು ಗುರುತಿಸಿದೆ.

- Advertisement -

ಎಸ್ಸಿ ಮೀಸಲಾತಿಯನ್ನು ಮೂರು ಭಾಗಗಳಾಗಿ ವಿಭಾಗಿಸಿರುವ ಸರ್ಕಾರ ಪ್ರವರ್ಗ ‘ಎ’ಗೆ ಶೇ. 5.25, ‘ಬಿ’ಗೆ ಶೇ. 5.25 ಮತ್ತು ‘ಸಿ’ಗೆ ಶೇ. 4.5ರಷ್ಟು ಪಾಲನ್ನು ಮೀಸಲಿರಿಸಿದೆ. ಪ್ರವರ್ಗ ‘ಸಿ’ನಲ್ಲಿ ಸ್ಪೃಶ್ಯ ಸಮುದಾಯಗಳೊಂದಿಗೆ ಅಲೆಮಾರಿಗಳನ್ನೂ ಸೇರಿಸಿರುವುದರಿಂದ ಅಲೆಮಾರಿಗಳ ಪ್ರತಿರೋಧವನ್ನು ಶಮನ ಮಾಡಲು ಶೇ. 4.5ರೊಳಗೆ ಶೇ.20ರಷ್ಟು ಪ್ರಾತಿನಿಧ್ಯವನ್ನು ಕೊಡುವುದಾಗಿ ಸರ್ಕಾರ ಹೇಳಿತ್ತು. ಅದರನ್ವಯ ಅಲೆಮಾರಿಗಳಿಗೆ ನಾಲ್ಕು ಬಿಂದುಗಳನ್ನು ಸರ್ಕಾರ ಗುರುತಿಸಿ, 56,432 ಹುದ್ದೆಗಳ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇಂ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಪರಿಶಿಷ್ಟರಲ್ಲಿನ ಮೂರು ವರ್ಗಗಳಿಗೂ ಏಕಕಾಲದಲ್ಲಿ ಹುದ್ದೆಗಳು ಸಿಗದೆ ಹೋದಲ್ಲಿ, ಅಂತಹ ನೇಮಕಾತಿ ಪ್ರಕ್ರಿಯೆಯ ವೇಳೆ ಪರಿಶಿಷ್ಟ ಜಾತಿ ಮೀಸಲಾತಿಯನ್ನು ‘ಎಸ್ಸಿ ಜನರಲ್’ ಎಂದು ಪರಿಗಣಿಸಲು ಸರ್ಕಾರ ನಿರ್ಧರಿಸಿದೆ. ಸರ್ಕಾರ ಬಿಡುಗಡೆ ಮಾಡಿರುವ ಆದೇಶದ ‘ಅನುಬಂಧ-1’ರಲ್ಲಿ 400 ಬಿಂದುಗಳ ಸಾಮಾನ್ಯ ರೋಸ್ಟರ್ ಪಟ್ಟಿಯನ್ನು ತೋರಿಸಲಾಗಿದ್ದು, ‘ಅನುಬಂಧ-2’ರಲ್ಲಿ ಬೃಹತ್ ನೇಮಕಾತಿಗೆ ಅನ್ವಯವಾಗುವಂತೆ ಎಸ್ಸಿ ಒಳಮೀಸಲು ಸ್ಥಾನಗಳನ್ನು ಗುರುತಿಸಲಾಗಿದೆ.

400 ಬಿಂದುಗಳ ರೋಸ್ಟರ್‍‌ನಲ್ಲಿ ಒಟ್ಟು 60 ಹುದ್ದೆಗಳು ಎಸ್ಸಿಗೆ ಮೀಸಲಾಗಿದ್ದು, ಅದರಲ್ಲಿ ಎ, ಬಿ, ಸಿ ಪ್ರವರ್ಗಗಳಿಗೆ ಸ್ಥಾನಗಳನ್ನು ಅನುಬಂಧ-2ರಲ್ಲಿ ಗುರುತು ಹಾಕಲಾಗಿದೆ. ಪ್ರವರ್ಗ ‘ಸಿ’ನಲ್ಲಿ 59 ಅಲೆಮಾರಿಗಳಿಗೆ ಶೇ.20ರಷ್ಟು ಹುದ್ದೆಗಳನ್ನು ಕಡ್ಡಾಯವಾಗಿ ನೀಡಬೇಕಿದೆ. ಆದ್ದರಿಂದ ಅಲೆಮಾರಿಗಳಿಗೆ ಮೀಸಲಾದ ಬಿಂದುಗಳನ್ನು ಚುಕ್ಕಿ (ಸ್ಟಾರ್) ಮೂಲಕ ಗುರುತಿಸಲಾಗಿದೆ. ಹೀಗಾಗಿ ಒಳಮೀಸಲಾತಿ ಬಿಂದುಗಳಾದ 3, 20, 37, 54 ಅಲೆಮಾರಿ ಸಮುದಾಯಕ್ಕೆ ಮೀಸಲಾಗಿವೆ.

ಅಲೆಮಾರಿಗಳ ರೋಸ್ಟರ್ ಬಿಂದುಗಳು- 15, 127, 241, 353 ಆಗಿರುತ್ತವೆ. ಒಂದು ವೇಳೆ ಅಲೆಮಾರಿ ಅಭ್ಯರ್ಥಿಗಳು ಈ ಬಿಂದುಗಳಲ್ಲಿ ತುಂಬದೆ ಹೋದಲ್ಲಿ, ಈ ಸ್ಥಾನಗಳನ್ನು ‘ಸಿ’ ಗುಂಪಿನ ಇತರೆ ಜಾತಿಗಳಿಗೆ ವರ್ಗಾಯಿಸಲಾಗುತ್ತದೆ ಮತ್ತು ಅಲೆಮಾರಿಗಳಲ್ಲಿ ಬ್ಯಾಕ್‌ಲಾಗ್ ಸೃಷ್ಟಿಯಾಗುವುದು ಬಹುತೇಕ ಮರೀಚಿಕೆಯಾಗಿದೆ.

ಪ್ರವರ್ಗ ಎಗೆ ಮೀಸಲಾದ ರೋಸ್ಟರ್ ಬಿಂದುಗಳು: 1, 23, 41, 59, 81, 101, 115, 133, 153, 175, 193, 215, 227, 249, 267, 289, 309, 327, 341, 359, 381

ಪ್ರವರ್ಗ ಬಿಗೆ ಮೀಸಲಾದ ರೋಸ್ಟರ್ ಬಿಂದುಗಳು: 9, 27, 49, 67, 89, 109, 123, 141, 159, 181, 201, 223, 233, 253, 275, 293, 315, 333, 349, 367, 389.

ಪ್ರವರ್ಗ ಸಿಗೆ ಮೀಸಲಾದ ರೋಸ್ಟರ್ ಬಿಂದುಗಳು (ಚುಕ್ಕಿಯಲ್ಲಿ ಗುರುತಿಸಿದ ಸ್ಥಾನ ಅಲೆಮಾರಿಗಳಿಗೆ ಮೀಸಲು): 15, 33, 53, 75, 93, 127, 149, 167, 189, 209, 241, 259, 281, 301, 323, 353, 375, 393.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದ ಮತದಾರರಿಗೆ ‘ಎಚ್ಚೆತ್ತುಕೊಳ್ಳಿ’ ಎಂದ ಇರಾನ್: ಟ್ರಂಪ್‌ರನ್ನು ತಿರಸ್ಕರಿಸುವಂತೆ 25 ಪುಟಗಳ ಪತ್ರ ಬಿಡುಗಡೆ

ಅಮೆರಿಕದ ಮಧ್ಯಂತರ ಚುನಾವಣೆಗಳು (Midterm Elections) ಸಮೀಪಿಸುತ್ತಿರುವಂತೆಯೇ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ...

ಜೀವ ಉಳಿಸುವ ಔಷಧಿಗಳ ಹೆಸರಿನಲ್ಲಿ ‘ಹಗಲು ದರೋಡೆ’: ಕೇಂದ್ರಕ್ಕೆ ಸುಪ್ರೀಂ ಚಾಟಿ

ಕ್ಯಾನ್ಸರ್ ಸೇರಿದಂತೆ ಅತ್ಯಗತ್ಯ ಔಷಧಿಗಳ ಸಗಟು ದರ (ಚಿಲ್ಲರೆ ವ್ಯಾಪಾರಿಗಳಿಗೆ ನೀಡುವ...

ಬೀದರ್ ಕಾರುಣ್ಯ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಬೀದರ್ ಕಾರುಣ್ಯ ಸೌಹಾರ್ದ ಸಹಕಾರಿ ಸಂಘದಿಂದ 2025-26ನೇ ಸಾಲಿನಲ್ಲಿ 1,970 ಮಂದಿಗೆ...

ಮರದ ಕೊಂಬೆ ಬಿದ್ದು ವ್ಯಕ್ತಿಗೆ ಶಾಶ್ವತ ಅಂಗವೈಕಲ್ಯ; ₹2.77 ಕೋಟಿ ಪರಿಹಾರ ನೀಡಲು ಹೈಕೋರ್ಟ್ ಆದೇಶ

ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಗುಲ್ಮೋಹರ್‌ ಮರದ ಕೊಂಬೆ...