ಮಹಿಳೆಯರ ಮಂಗಳಸೂತ್ರದ ಮೇಲೆ ಕಣ್ಣಿಟ್ಟಿದ್ದಾರೆಯೇ ಮೋದಿ?

Date:

ಅಂದು ಕಾಂಗ್ರೆಸ್ ಹಿಂದು ಮಹಿಳೆಯರ ಚಿನ್ನದ ಮೇಲೆ ಕಣ್ಣಿಟ್ಟಿದೆ ಎಂದು ಆರೋಪಿಸಿದ್ದ ಮೋದಿ, ಈಗ ತಾವೇ ‘ವರ್ಷಪೂರ್ತಿ ಬಂಗಾರ ಖರೀದಿಸಬೇಡಿ’ ಎಂದು ಮನವಿ ಮಾಡುತ್ತಿದ್ದಾರೆ. ದೇಶದ ಆರ್ಥಿಕತೆಯನ್ನು ಉಳಿಸಲು, ಆಮದು ವೆಚ್ಚ ತಗ್ಗಿಸಲು ಮತ್ತು ರೂಪಾಯಿ ಮೌಲ್ಯ ಕುಸಿಯದಂತೆ ತಡೆಯಲು ಈ ಕ್ರಮ ಅಗತ್ಯ ಎಂದು ಮೋದಿ ಅವರ ಹೇಳಿಕೆಯನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ.

- Advertisement -

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು, ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದಾಗ, ‘ಸ್ವಿಸ್‌ ಬ್ಯಾಂಕ್‌ನಲ್ಲಿರುವ ಕಪ್ಪು ಹಣ ವಾಪಸ್‌ ಬರುತ್ತದೆ. ಭಾರತದ ರಸ್ತೆಗಳು ಚಿನ್ನದ ರಸ್ತೆಗಳಾಗುತ್ತವೆ’ ಎಂದು ಮೋದಿ ಭಕ್ತರು ಭಜನೆ ಮಾಡಿದ್ದರು. ಆದರೆ ಈಗ, ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಅವರು ಮುಂದಿನ ಒಂದು ವರ್ಷದವರೆಗೆ ಚಿನ್ನ ಖರೀದಿ ಮಾಡಬೇಡಿ ಎಂದು ಭಾರತೀಯರಿಗೆ ಮನವಿ ಮಾಡಿದ್ದಾರೆ. ಚಿನ್ನದ ರಸ್ತೆಗಳಾಗುವುದಿರಲಿ, ಗ್ರಾಮ್‌ಗಳಲ್ಲಿಯೂ ಚಿನ್ನ ಖರೀದಿಸದಂತೆ ತಾಕೀತು ಮಾಡುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಅವರ ಈ ಘೋಷಣೆ ಹೊರಬೀಳುತ್ತಿದ್ದಂತೆಯೇ, ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರು ಮಾಡಿದ್ದ ಭಾಷಣವು ಮತ್ತೆ ಮುನ್ನೆಲೆಗೆ ಬಂದಿದೆ. ಮಹಿಳೆಯರ ಮಂಗಳಸೂತ್ರದ ಕುರಿತು ಕಾಂಗ್ರೆಸ್‌ ವಿರುದ್ಧ ಮೋದಿ ಮಾಡಿದ್ದ ಆರೋಪಗಳಿಗೆ ಹೋಲಿಸಿ, ‘ಮೋದಿ ಅವರು ಮಹಿಳೆಯರು ಮಂಗಳಸೂತ್ರ ಖರೀದಿಸದಂತೆ ತಡೆಯುತ್ತಿದ್ದಾರೆ’ ಎಂದು ಅರ್ಥೈಸಬಹುದೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಅಬ್ಬರದ ಭಾಷಣಗಳನ್ನು ಮಾಡಿದ್ದರು. ಸುಳ್ಳು-ಪೊಳ್ಳು ಹೇಳಿಕೆಗಳೊಂದಿಗೆ ವಿವಾದಗಳನ್ನು ಸೃಷ್ಟಿಸಿದ್ದರು. 2024ರ ಪ್ರಚಾರದ ವೇಳೆ ರಾಜಸ್ಥಾನದ ಬನ್ಸ್ವಾರಾದಲ್ಲಿ ಮಾತನಾಡಿದ್ದ ಮೋದಿ, “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಆಸ್ತಿಯನ್ನು ಸರ್ವೆ ಮಾಡುತ್ತದೆ. ನಿಮ್ಮ ತಾಯಂದಿರು ಮತ್ತು ಸಹೋದರಿಯರ ಬಳಿ ಇರುವ ಚಿನ್ನವನ್ನು ಲೆಕ್ಕ ಹಾಕಿ, ಅದನ್ನು ನುಸುಳುಕೋರರಿಗೆ ಮತ್ತು ಅತಿ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚುತ್ತದೆ. ಅವರು ನಿಮ್ಮ ಮಂಗಳಸೂತ್ರವನ್ನೂ ಬಿಡುವುದಿಲ್ಲ” ಎಂದಿದ್ದರು. ಅವರ ಈ ಆರೋಪವು ನೇರವಾಗಿ ಭಾವನಾತ್ಮಕ ಮತ್ತು ಧಾರ್ಮಿಕ ಸಂಕೇತಗಳನ್ನು ಬಳಸಿಕೊಂಡು ಮತದಾರರಲ್ಲಿ ಭಯ ಮತ್ತು ಅನುಮಾನ ಹುಟ್ಟಿಸುವ ರಾಜಕೀಯ ತಂತ್ರವಾಗಿತ್ತು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಆರ್ಥಿಕ ಚರ್ಚೆಗಳು ಮತ್ತು ಘೋಷಣೆಗಳ ಆಯ್ದ ಸಾಲುಗಳು ಮತ್ತು 2024ರ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿದ್ದ ‘ಸಂಪತ್ತಿನ ಸಮೀಕ್ಷೆ’ ಕುರಿತು ಪ್ರಸ್ತಾಪವನ್ನು ಆರಿಸಿ, ಮೋದಿ ಆ ಆರೋಪಗಳನ್ನು ಮಾಡಿದ್ದರು.

ಗಮನಾರ್ಹವಾಗಿ, 2004-05ರ ಸಮಯದಲ್ಲಿ ದೇಶದ ಆರ್ಥಿಕ ಅಸಮಾನತೆ, ಸಂಪನ್ಮೂಲ ಹಂಚಿಕೆ ಹಾಗೂ ಹಿಂದುಳಿದ ಸಮುದಾಯಗಳ ಅಭಿವೃದ್ಧಿ ಕುರಿತ ಹಲವು ಚರ್ಚೆಗಳು ನಡೆದಿದ್ದವು. ಸಿಂಗ್‌ ಅವರು ‘ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ/ಪಂಗಡ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ದುರ್ಬಲ ವರ್ಗದವರಿಗೆ ಆದ್ಯತೆ ನೀಡಬೇಕು’ ಎಂದು ಹೇಳಿದ್ದರು. ಆರ್ಥಿಕ ತಜ್ಞರು ಕೂಡ, ಬಂಗಾರದ ಮೇಲಿನ ಹೂಡಿಕೆಯನ್ನು ಕಡಿಮೆ ಮಾಡಿ, ಅದನ್ನು ಉತ್ಪಾದಕ ಆರ್ಥಿಕ ಚಟುವಟಿಕೆಗಳಿಗೆ ಬಳಸುವ ಕುರಿತು ಚರ್ಚಿಸಿದ್ದರು. ಆದರೆ, ಯಾವುದೇ ಒಂದು ಸಮುದಾಯಕ್ಕಾಗಿ ಚಿನ್ನವನ್ನು ಕಿತ್ತುಕೊಳ್ಳಬೇಕು ಎಂದು ಆಗ ಹೇಳಿರಲಿಲ್ಲ. ಅಂತೆಯೇ, 2024ರ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿಯೂ ‘ಸಂಪತ್ತಿನ ಸಮೀಕ್ಷೆ’ ಬಗ್ಗೆ ಮಾತನಾಡಿತ್ತೇ ಹೊರತು, ಎಲ್ಲೂ ಮಂಗಳಸೂತ್ರ ಕಸಿದುಕೊಳ್ಳುವ ಅಥವಾ ಒಂದು ಸಮುದಾಯಕ್ಕೆ ಹಂಚುವ ಮಾತನ್ನಾಡಿರಲಿಲ್ಲ. ಆದರೆ, ಮೋದಿ ಅವರು ಎರಡೂ ಸಂದರ್ಭವನ್ನು ತಮಗೆ ಬೇಕಾದಂತೆ ತಿರುಚಿ, ಜೊತೆಗೆ, ಸ್ಯಾಮ್ ಪಿತ್ರೋಡಾ ಅವರು ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ಯ ಬಗ್ಗೆ ನೀಡಿದ ಉದಾಹರಣೆಯನ್ನು ಮೋದಿ ಅವರು ನೇರವಾಗಿ ಹಿಂದು ಮಹಿಳೆಯರ ಅಸ್ಮಿತೆಯಾದ ಮಂಗಳಸೂತ್ರಕ್ಕೆ ಲಿಂಕ್ ಮಾಡಿ ಕೋಮು ದ್ವೇಷದ ಭಾಷಣ ಮಾಡಿದ್ದರು.

ಭಾರತೀಯರಿಗೆ ಭಾವನಾತ್ಮಕವಾಗಿಯೂ ಮತ್ತು ಸಾಂಸ್ಕೃತಿಕವಾಗಿ ಗೌರವದ ಸಂಕೇತವೆಂದು ನಂಬಲಾಗಿರುವ ‘ಬಂಗಾರ’/’ಮಂಗಳಸೂತ್ರ’ವನ್ನು ಮೋದಿ ಅವರು ತಮ್ಮ 2024ರ ಭಾಷಣದಲ್ಲಿ ರಾಜಕೀಯಕ್ಕೆ ಬಳಸಿಕೊಂಡಿದ್ದರು. ಸಾಮಾನ್ಯ ಮತದಾರರ ಮನಸ್ಸಿನಲ್ಲಿ ತೀವ್ರ ಭಾವನೆ ಮತ್ತು ಆತಂಕ ಮೂಡಿಸಲು ವಿಫಲಯತ್ನ ಮಾಡಿದ್ದರು.

ಆ ಯತ್ನದ ಹಿಂದೆ, ತಮ್ಮ 10 ವರ್ಷಗಳ ಆಡಳಿತಾತ್ಮಕ ವೈಫಲ್ಯಗಳನ್ನು ಮರೆಮಾಚುವ ದುರುದ್ದೇಶವೂ ಇತ್ತು. ಅಭಿವೃದ್ಧಿ, ನಿರುದ್ಯೋಗ ಹಾಗೂ ಬೆಲೆ ಏರಿಕೆಯಂತಹ ನೈಜ ಸಮಸ್ಯೆಗಳ ಚರ್ಚೆ ನಡೆಯಬೇಕಾದ ಸಮಯದಲ್ಲಿ ಮಂಗಳಸೂತ್ರ, ಮಂದಿರ-ಮಸೀದಿಯಂತಹ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದಿದ್ದರು. ಎದುರಾಳಿಗಳ ಆರ್ಥಿಕ ಸಲಹೆಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗದಂತೆ ತಿರುಚಿ, ಅದನ್ನು ‘ಧರ್ಮಕ್ಕೆ ಬಂದ ಸಂಕಟ’ ಎಂದು ಬಿಂಬಿಸಿದ್ದರು. ಆದ್ದರಿಂದಲೇ, ಕಾಂಗ್ರೆಸ್‌ ಪ್ರಸ್ತಾಪಿಸಿದ್ದ ‘ಸಂಪತ್ತಿನ ಸಮೀಕ್ಷೆ’ ಮತ್ತು ‘ಸಂಪತ್ತಿನ ಸಮಾನ ಹಂಚಿಕೆ’ಯ ಚರ್ಚೆಯನ್ನು ‘ಹಿಂದೂ vs ಮುಸ್ಲಿಂ’ ಯುದ್ಧವಾಗಿ ಪರಿವರ್ತಿಸಲು ಹವಣಿಸಿದ್ದರು.

ವಿಪರ್ಯಾಸವೆಂದರೆ, ಅಂದು ಕಾಂಗ್ರೆಸ್ ಹಿಂದು ಮಹಿಳೆಯರ ಚಿನ್ನದ ಮೇಲೆ ಕಣ್ಣಿಟ್ಟಿದೆ ಎಂದು ಆರೋಪಿಸಿದ್ದ ಮೋದಿ, ಈಗ ತಾವೇ ‘ವರ್ಷಪೂರ್ತಿ ಬಂಗಾರ ಖರೀದಿಸಬೇಡಿ’ ಎಂದು ಮನವಿ ಮಾಡುತ್ತಿದ್ದಾರೆ. ದೇಶದ ಆರ್ಥಿಕತೆಯನ್ನು ಉಳಿಸಲು, ಆಮದು ವೆಚ್ಚ ತಗ್ಗಿಸಲು ಮತ್ತು ರೂಪಾಯಿ ಮೌಲ್ಯ ಕುಸಿಯದಂತೆ ತಡೆಯಲು ಈ ಕ್ರಮ ಅಗತ್ಯ ಎಂದು ಮೋದಿ ಅವರ ಹೇಳಿಕೆಯನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ.

ಈ ಲೇಖನ ಓದಿದ್ದೀರಾ?: ಅನುದಾನ ಬೇಕಂದ್ರೆ ಬಿಜೆಪಿ ಸೇರಬೇಕಾ; ದಕ್ಷಿಣದ ರಾಜ್ಯಗಳಿಗೆ ಮೋದಿ ಕೊಟ್ರಾ ಎಚ್ಚರಿಕೆ?

ಆದರೂ, ಕಾಂಗ್ರೆಸ್‌ ವಿರುದ್ಧ ‘ಹಿಂದೂಗಳ ತಾಳಿ ಕಿತ್ತುಕೊಳ್ಳುವ ತಂತ್ರ’ ಎಂದು ಆರೋಪಗಳ ಸುರಿಮಳೆಗೈದಿದ್ದ ಮೋದಿ, ಈಗ ತಾವೇ ತಮ್ಮ ಆರೋಪದ ದಾರಿಯಲ್ಲಿ ನಡೆಯುತ್ತಿರುವುದು ಅವರ ರಾಜಕೀಯ ಡೋಲಾಯಮಾನವನ್ನು ತೋರಿಸುತ್ತದೆ. ಮೋದಿ ಅವರ ಆರೋಪವನ್ನು ತರ್ಕ ಮಾಡಿದರೆ, ಮೋದಿಯವರ ಮನವಿಯನ್ನೂ ‘ಹಿಂದು ಮಹಿಳೆಯರ ಆಭರಣದ ಹಕ್ಕಿನ ಮೇಲಿನ ಹಲ್ಲೆ’ ಎಂದು ಬಣ್ಣಿಸಬಹುದು.

ಇದನ್ನೂ ಓದಿ ಪ್ರೀಮಿಯಂ ಲೇಖನ | ದೇಶದಲ್ಲಿ ಎಡಪಂಥೀಯ ರಾಜಕಾರಣಕ್ಕೆ ಗ್ರಹಣ ಹಿಡಿದಿದೆಯೇ?

ಆದರೆ, ರಾಜಕೀಯ ಲಾಭಕ್ಕಾಗಿ ಯಾವುದೇ ಹಂತಕ್ಕೆ ಬೇಕಿದ್ದರೂ ಇಳಿಯಬಹುದು ಎಂಬುದು ಪ್ರಜಾಪ್ರಭುತ್ವಕ್ಕೆ ಮಾರಕ. ಆದರೆ, ಮೋದಿ-ಶಾ ಜೋಡಿ ಮತ್ತು ಅವರ ಬಿಜೆಪಿ ಎಲ್ಲ ಹಂತಕ್ಕೂ ಇಳಿದು ರಾಜಕೀಯ ಮಾಡುತ್ತಿದೆ. ಅಂದು ಮಂಗಳಸೂತ್ರದ ಹೆಸರಲ್ಲಿ ಕೋಮು ಬೆಂಕಿ ಹಚ್ಚಿದವರು, ಇಂದು ದೇಶದ ಆರ್ಥಿಕ ಕಾರಣ ನೀಡಿ ಅದೇ ಚಿನ್ನದ ಖರೀದಿಗೆ ನಿರ್ಬಂಧ ಹೇರಲು ಮುಂದಾಗಿದ್ದಾರೆ.

ವಿರೋಧ ಪಕ್ಷ ಹೇಳಿದಾಗ ಅದನ್ನು ‘ಹಿಂದು ಹೆಣ್ಣುಮಕ್ಕಳ ತಾಳಿ ಕಸಿಯುವ ಸಂಚು’ ಎಂದು ಚಿತ್ರಿಸುವುದು, ಆದರೆ ಆಡಳಿತಪಕ್ಷ ಹೇಳಿದಾಗ ಅದನ್ನು ‘ಆರ್ಥಿಕ ಸಲಹೆ’ ಎಂದು ಸಮರ್ಥಿಸುವುದು ರಾಜಕೀಯ ವೈರುಧ್ಯವನ್ನು ಎತ್ತಿ ತೋರುತ್ತದೆ. ಇದನ್ನು, ಮೋದಿ ಸರ್ಕಾರದ ‘ಡಬಲ್ ಸ್ಟಾಂಡ್’ ಧೋರಣೆಯೆಂದು ವಿಮರ್ಶಕರು ಟೀಕಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನ್ ವಿರುದ್ಧ ಸಿಎಂಆರ್‌ಎಲ್ ಪ್ರಕರಣ: ಇಡಿ ಹೇಳಿದ ತಕ್ಷಣ ಎಫ್‌ಐಆರ್ ದಾಖಲಿಸಲಾಗದು ಎಂದು ಕೇರಳ ಗೃಹ ಸಚಿವ

ಜಾರಿ ನಿರ್ದೇಶನಾಲಯ (ಇಡಿ) ಕೋರಿದೆ ಎಂದಮಾತ್ರಕ್ಕೆ ತಕ್ಷಣವೇ ಎಫ್‌ಐಆರ್ ನೋಂದಾಯಿಸಲು ಸಾಧ್ಯವಿಲ್ಲ....

4 ವರ್ಷಗಳಲ್ಲಿ 111 ಸಂಸದರು, ಶಾಸಕರ ಪಕ್ಷಾಂತರ: ಶೇ. 26ರಷ್ಟು ನಾಯಕರನ್ನು ಸೇರಿಸಿಕೊಂಡ ಬಿಜೆಪಿ!

ದೇಶದ ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಪಕ್ಷಾಂತರ ಪರ್ವ ತಡೆಯಿಲ್ಲದೆ ಮುಂದುವರಿದಿದೆ. ಅದರಲ್ಲೂ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ...