‘ದೇಗುಲದ ಸಂಪ್ರದಾಯಗಳನ್ನು ಹಿಂದೂಯೇತರರು ಗೌರವಿಸಬೇಕು’: ಸಿಎಂ ವಿಜಯ್ ಮುಚ್ಚಳಿಕೆ ಉಲ್ಲೇಖಿಸಿದ ಮದ್ರಾಸ್ ಹೈಕೋರ್ಟ್‌

Date:

ದೇಗುಲಗಳ ಬಗ್ಗೆ ಭಕ್ತಿ ತೋರಲು ಅಥವಾ ಸ್ಥಾಪಿತ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸಲು ಇಚ್ಛಿಸದ ಹಿಂದೂಯೇತರರಿಗೆ ‘ಆಗಮಿಕ’ ದೇವಾಲಯಗಳನ್ನು ಪ್ರವೇಶಿಸಲು ಅನುಮತಿ ನೀಡಬಾರದು ಎಂದು ಮದ್ರಾಸ್ ಹೈಕೋರ್ಟ್ ತೀತೀರ್ಪು ನೀಡಿದೆ. ದೇವಾಲಯಗಳ ಧಾರ್ಮಿಕ ಪಾವಿತ್ರ್ಯತೆಯನ್ನು ಕಾಪಾಡಲು ಇಂತಹ ನಿರ್ಬಂಧಗಳು ಅಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

- Advertisement -

ತಮಿಳುನಾಡು ದೇವಾಲಯ ಪ್ರವೇಶ ದೃಢೀಕರಣ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಮತ್ತು ಅದರ ನಿಯಮಗಳ ಉಲ್ಲಂಘನೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕೆ. ತಂಗಂ ವೆಂಕಟೇಶ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿ ನ್ಯಾಯಾಲಯ ಈ ಆದೇಶ ನೀಡಿದೆ.
ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ಪಿ. ಮುರುಗನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಮಂಗಳವಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತನ್ನ ಈ ವೀಕ್ಷಣೆಗಳು ಮತ್ತು ನಿರ್ದೇಶನಗಳು ಕೇವಲ ‘ಆಗಮಿಕ’ ದೇವಾಲಯಗಳಿಗೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಪ್ರಜಾಪ್ರಭುತ್ವದ ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಆಗಮ ಶಾಸ್ತ್ರಗಳ (ದೇವಾಲಯದ ವಾಸ್ತುಶಿಲ್ಪ, ಆಚರಣೆಗಳು ಮತ್ತು ಧಾರ್ಮಿಕ ಪದ್ಧತಿಗಳನ್ನು ನಿಯಂತ್ರಿಸುವ ಸಾಂಪ್ರದಾಯಿಕ ಗ್ರಂಥಗಳು) ಪ್ರಕಾರ ನಿರ್ಮಿಸಲಾದ, ಪ್ರತಿಷ್ಠಾಪಿಸಲಾದ ಮತ್ತು ನಿರ್ವಹಿಸಲ್ಪಡುವ ಹಿಂದೂ ಪ್ರಾರ್ಥನಾ ಮಂದಿರಗಳು ಇವಾಗಿವೆ.

ಧಾರ್ಮಿಕ ಗುರುತು ಮತ್ತು ದೇವಾಲಯದ ಸಂಪ್ರದಾಯಗಳ ಮೇಲಿನ ಗೌರವದ ನಡುವಿನ ವ್ಯತ್ಯಾಸವನ್ನು ವಿವರಿಸಿದ ನ್ಯಾಯಾಧೀಶರು, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪ್ರಸಿದ್ಧ ಮಧುರೈ ಮೀನಾಕ್ಷಿ ಅಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿದರು. ಕ್ರಿಶ್ಚಿಯನ್ ಧರ್ಮದವರಾದ ವಿಜಯ್ ಅವರು ಪ್ರಾರ್ಥನೆ ಸಲ್ಲಿಸುವ ಮೊದಲು ಅಗತ್ಯ ಮುಚ್ಚಳಿಕೆಗೆ (undertaking) ಸಹಿ ಹಾಕಿದ್ದರು ಎಂಬುದನ್ನು ನ್ಯಾಯಾಲಯ ಬೊಟ್ಟು ಮಾಡಿದೆ.

“ನಂಬಿಕೆಯಲ್ಲಿ ಕ್ರಿಶ್ಚಿಯನ್ ಆಗಿರುವ ಅವರನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಕೇಳಲಾಗಿಲ್ಲ. ದೇವತೆಯ ಮೇಲಿನ ತಮ್ಮ ಭಕ್ತಿಯನ್ನು ದೃಢೀಕರಿಸಲು ಮಾತ್ರ ಅವರನ್ನು ವಿನಂತಿಸಲಾಯಿತು. ಇದನ್ನೇ ನಾವು ಅಂತರ್ಗತ (inclusive) ವಿಧಾನ ಎಂದು ಕರೆಯುತ್ತೇವೆ,” ಎಂದು ಹೇಳಿದ ನ್ಯಾಯಾಧೀಶರು, ಸ್ಥಾಪಿತ ನಿಯಮಗಳನ್ನು ಗಾಳಿಗೆ ತೂರುವ ಘಟನೆಗಳೊಂದಿಗೆ ಇದನ್ನು ಹೋಲಿಸಿ ವಿಶ್ಲೇಷಿಸಿದರು.

ನ್ಯಾಯಾಧೀಶರು “ರಾಜಕೀಯ ಚಮಚಾಗಿರಿ” (political sycophancy) ಎಂದು ಕರೆಯಬಹುದಾದ ನಡವಳಿಕೆಗಳನ್ನು ಟೀಕಿಸಿದರು. ಚುನಾವಣಾ ಲಾಭಕ್ಕಾಗಿ ದೇವಾಲಯದ ಭೇಟಿಯ ಸಮಯದಲ್ಲಿ ಹಿಂದೂಯೇತರ ನಂಬಿಕೆಗಳ ರಾಜಕಾರಣಿಗಳು ಧಾರ್ಮಿಕ ಚಿಹ್ನೆಗಳು ಅಥವಾ ಗುರುತುಗಳನ್ನು ಪ್ರದರ್ಶಿಸುವ ಪ್ರಯತ್ನಗಳನ್ನು ನ್ಯಾಯಾಲಯ ಪ್ರಶ್ನಿಸಿತು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಕೆಲಸಕ್ಕೆ ಸಿದ್ಧರಿರುವ ಕೂಲಿಕಾರರಿಗೆ ಎರಡು ದಿನದಲ್ಲಿ ಉದ್ಯೋಗ ಕಲ್ಪಿಸಿ: ಸಿಇಒ ಮುಕುಲ್ ಜೈನ್

ಗ್ರಾಮೀಣ ಭಾಗದಲ್ಲಿ ಮಾನವ ದಿನಗಳ ಸೃಜನೆ ಹೆಚ್ಚಿಸಲು ವಿಬಿ-ಜಿ ರಾಮ್-ಜಿ ಯೋಜನೆಯಡಿ...

ಬ್ರೆಜಿಲ್ ಗಡಿ ದಾಟಿದ ಗೆಲುವು: ಜನತಂತ್ರಕ್ಕೆ ಆಶಾಕಿರಣವಾದ ಲುಲಾ, ಆದರೆ ಅಳಿಸಿಲ್ಲ ಬಲಪಂಥದ ಹೆಜ್ಜೆಗುರುತು

ಲ್ಯಾಟಿನ್ ಅಮೆರಿಕದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಬ್ರೆಜಿಲ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯು...