ಉದ್ಯೋಗ ಅರ್ಜಿ ಹಾಕೋಕೆ ChatGPT ಬಳಸ್ತೀರಾ?- ಆಸ್ಕರ್ ವಿಜೇತೆ ಆನ್ ಹ್ಯಾಥ್ವೇ ಸಲಹೆ ತಿಳಿಯಿರಿ

Date:

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ChatGPT ನಂತಹ ಕೃತಕ ಬುದ್ಧಿಮತ್ತೆ (AI) ಬಳಸುವುದು ಸಾಮಾನ್ಯವಾಗಿ ಹೋಗಿದೆ. ಸಣ್ಣ ಸಂಶಯವಿದ್ದರೂ ChatGPT ಬಳಿ ಕೇಳುತ್ತೇವೆ. ವಿದ್ಯಾರ್ಥಿಗಳು ಪಿಪಿಟಿ, ಪ್ರಬಂಧ ಬರೆಯಲೂ ChatGPT ಬಳಸುತ್ತಾರೆ. ಹೀಗೆ ಉದ್ಯೋಗ ಅರ್ಜಿ ಹಾಕುವಾಗಲೂ ChatGPT ಬಳಸುವವರಿಗೆ ಹಾಲಿಸಿನಿಮಾ ಲೋಕದ ಖ್ಯಾತ ನಟಿ, ಆಸ್ಕರ್ ವಿಜೇತೆ ಆನ್ ಹ್ಯಾಥ್ವೇ ಎಚ್ಚರಿಕೆ ನೀಡಿದ್ದಾರೆ.

- Advertisement -

ಸಂದರ್ಶನವೊಂದರಲ್ಲಿ ಉದ್ಯೋಗ ಮಾರುಕಟ್ಟೆಯ ಇಂದಿನ ಸ್ಥಿತಿಯ ಬಗ್ಗೆ ಮಾತನಾಡುತ್ತಾ ಆನ್ ಹ್ಯಾಥ್ವೇ ಎಐ ಪರಿಕರಗಳನ್ನು ಅತಿಯಾಗಿ ಬಳಸುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ತಾವು ನೇಮಕಾತಿ ಮಾಡುವಾಗ ಅಭ್ಯರ್ಥಿಗಳು ಒಂದೇ ರೀತಿಯ ChatGPT-ರಚಿತ ರೆಸ್ಯೂಮೆ ನೀಡಿರುವುದನ್ನು ನೋಡಿ ಬೆರಗಾದೆ ಎನ್ನುತ್ತಾರೆ ಆನ್ ಹ್ಯಾಥ್ವೇ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮ್ಯಾಕಲ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಇದನ್ನೂ ಓದಿ: ChatGPTಯನ್ನ ʼದೆವ್ವʼ ಎಂದ ಎಲಾನ್ ಮಸ್ಕ್: ಯಾಕೆ ಗೊತ್ತಾ?

“ನಾನು ರೆಸ್ಯೂಮೆ ನೋಡಿ ಓಹ್ ಏನಿದು ಅಂದುಕೊಂಡೆ. ನಾನು ನೋಡಬಾರದದ್ದನ್ನು ನೋಡುತ್ತಿದ್ದೇನೆ ಎಂದನಿಸಿತು. ನೀವು ಏನು ತಿಳಿಯದಂತೆ ಮುಚ್ಚಿಡಲು ಬಯಸುತ್ತೀರೋ ಅದೇ ನಿಮ್ಮನ್ನು ಬಹಿರಂಗವಾಗುತ್ತದೆ” ಎಂದು ಹೇಳಿದ್ದಾರೆ.

“ChatGPT ಅಥವಾ ಯಾವುದೇ AI ಮಾದರಿಗಳು ನೀಡುವ ಬರಹಗಳು ವ್ಯಾಕರಣಬದ್ಧವಾಗಿ ಮತ್ತು ಆಕರ್ಷಕವಾಗಿ ಕಾಣುತ್ತದೆ. ಆದರೆ ಒಬ್ಬ ವ್ಯಕ್ತಿಯ ವೈಯಕ್ತಿಕ ಅನುಭವ, ಭಾವನೆ ಮತ್ತು ನೈಜ ಉತ್ಸಾಹ ಅದರಲ್ಲಿ ಇರಲ್ಲ. ಉದ್ಯೋಗದಾತರು ಕೇವಲ ತಾಂತ್ರಿಕವಾಗಿ ಪರಿಪೂರ್ಣವಾಗಿರುವ ಪತ್ರಗಳನ್ನಷ್ಟೇ ಬಯಸಲ್ಲ, ಬದಲಾಗಿ ಅಭ್ಯರ್ಥಿಯ ನೈಜ ವ್ಯಕ್ತಿತ್ವ ಏನೆಂದು ತಿಳಿಯಲು ಬಯಸ್ತಾರೆ” ಎಂದು ಅಭಿಪ್ರಾಯಿಸಿದ್ದಾರೆ.

ಇನ್ನು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಒಂದೇ ರೀತಿಯ AI ಪರಿಕರಗಳನ್ನು ಬಳಸಿ ರೆಸ್ಯೂಮೆ ಮತ್ತು ಕವರ್ ಲೆಟರ್ ಸಿದ್ಧಪಡಿಸಿದಾಗ, ಎಲ್ಲರ ಅರ್ಜಿಯ ಶೈಲಿಯೂ ಒಂದೇ ಮಾದರಿಯಲ್ಲಿರುತ್ತದೆ. ಇದು ನಿಮ್ಮನ್ನು ಇತರ ಅಭ್ಯರ್ಥಿಗಳಿಗಿಂತ ಭಿನ್ನವಾಗಿ ತೋರಿಸುವ ಬದಲು, ಎಲ್ಲರ ನಡುವೆ ನೀವೂ ಒಬ್ಬರಾಗಿ ಕಳೆದುಹೋಗುವಂತೆ ಮಾಡುತ್ತದೆ ಎಂದು ಆನ್ ಅಭಿಪ್ರಾಯಿಸಿದ್ದಾರೆ.

ಇನ್ನು “ನೀವು AI ಸಹಾಯದಿಂದ ಅತ್ಯುತ್ತಮ ಕವರ್ ಲೆಟರ್ ಬರೆದು ಮೊದಲ ಹಂತದಲ್ಲಿ ಆಯ್ಕೆಯಾದರೂ, ನೇರ ಸಂದರ್ಶನ ನಡೆಯುವಾಗ ನಿಮ್ಮ ಸಂವಹನ ಕೌಶಲ್ಯಕ್ಕೂ ಭಾಷಾ ಶೈಲಿಗೂ ಹೊಂದಾಣಿಕೆ ಇಲ್ಲದಿರುವುದು ಸಂದರ್ಶನ ಮಾಡುವವರಿಗೆ ಸುಲಭವಾಗಿ ತಿಳಿಯುವಂತೆ ಮಾಡುತ್ತದೆ. ಇದು ನಿಮ್ಮ ಮೇಲೆ ಹುಟ್ಟಬೇಕಾದ ನಂಬಿಕೆಗೆ ದಕ್ಕೆಯನ್ನುಂಟು ಮಾಡುತ್ತದೆ” ಎಂದು ಆನ್ ಹೇಳಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾರ್ಮುಜ್ ಬಳಿ ಎಲ್‌ಪಿಜಿ ಟ್ಯಾಂಕರ್ ಮೇಲೆ ದಾಳಿ: ಹಡಗಿನಲ್ಲಿದ್ದ 9 ಭಾರತೀಯರು ಸುರಕ್ಷಿತ

ಒಂಬತ್ತು ಮಂದಿ ಭಾರತೀಯ ನಾವಿಕರನ್ನು ಒಳಗೊಂಡಿದ್ದ ಲೈಬೀರಿಯಾ ಧ್ವಜವುಳ್ಳ ಎಲ್‌ಪಿಜಿ ಟ್ಯಾಂಕರ್...

ಏಷ್ಯನ್ ಗೇಮ್ಸ್ 2026: ಶೂಟಿಂಗ್‌ನಲ್ಲಿ ಭಾರತಕ್ಕೆ ಬೆಳ್ಳಿ, 3ಕ್ಕೇರಿದ ಪದಕಗಳ ಸಂಖ್ಯೆ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಕ್ರೀಡಾಕೂಟದಲ್ಲಿ ಭಾರತದ ಪದಕ...

ರಿಯಾಯಿತಿ ನೆಪದಲ್ಲಿ ನಿಯಮ ಉಲ್ಲಂಘನೆ: 16 ಫಾರ್ಮಸಿಗಳ ಲೈಸೆನ್ಸ್ ರದ್ದುಗೊಳಿಸಿದ FDA

ಭಾರಿ ಪ್ರಮಾಣದ ಡಿಸ್ಕೌಂಟ್ (ರಿಯಾಯಿತಿ) ನೀಡಿ ಔಷಧ ಮಾರಾಟ ಮಾಡುತ್ತಿದ್ದ ಹಾಗೂ...