ಇರಾನಿನ ಶಾಲೆಯ ಮೇಲೆ ನಡೆದ ದಾಳಿಯ ಕುರಿತ ತನಿಖಾ ವರದಿಯನ್ನು ಒಪ್ಪಿಸುವಂತೆ ವಿಶ್ವ ಸಂಸ್ಥೆಯ ಮಾನವ ಹಕ್ಕು ಆಯೋಗ ಅಮೆರಿಕಗೆ ಆದೇಶ ನೀಡಿದೆ.
ತಿಂಗಳ ಹಿಂದೆ ಗಲ್ಫ್ ಸಂಘರ್ಷದ ಮೊದಲ ದಿನ ಇರಾನಿನ ಶಾಲೆಯ ಮೇಲೆ ಮಿಸೈಲ್ ದಾಳಿಗೆ 168 ಮಂದಿ ಬಲಿಯಾಗಿದ್ದರು. ಇದರಲ್ಲಿ 110 ಶಾಲಾ ಮಕ್ಕಳು ಸಾವನ್ನಪ್ಪಿದ್ದರು.
ಇದನ್ನು ಓದಿದ್ದೀರಾ? ಇರಾನ್ – ಇಸ್ರೇಲ್ ಯುದ್ಧ: ತನ್ನ ಮಿತ್ರ ದೇಶದ ನೆಲದಲ್ಲೇ ಅಮೆರಿಕದ ಯುದ್ಧ ವಿಮಾನ ಪತನ
ವಿಶ್ವ ಮಾನವ ಹಕ್ಕು ಆಯೋಗದ ಮುಖ್ಯಸ್ಥ ವೋಲ್ಕರ್ ಟರ್ಕ್ ಈ ದಾಳಿಯನ್ನು ಅತ್ಯಂತ ರಾಕ್ಷಸೀಯ ಕೃತ್ಯ ಎಂದು ಕರೆದಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ ತುರ್ತು ಸಭೆ ಕರೆದ ಟರ್ಕ್ ಶಾಲೆ ಮೇಲಿನ ಬಾಂಬ್ ದಾಳಿಗೆ ಬೆಲೆ ನ್ಯಾಯ ಒದಗಿಸುವಂತೆ ಕರೆ ನೀಡಿದ್ದಾರೆ.
ಯುಎಸ್ ಮಾದ್ಯಮಗಳ ವರದಿಯ ಪ್ರಕಾರ ಅಮೆರಿಕಾದ ಸೇನೆಯೆ ಈ ದುಷ್ಕೃತ್ಯ ಎಸಗಿದೆ ಎನ್ನಲಾಗಿದೆ. ಆರೋಪವನ್ನು ತಳ್ಳಿಹಾಕಿದ್ದ ಅಮೆರಿಕ ರಕ್ಷಣಾ ಕಾರ್ಯದರ್ಶಿ ಹಗೆತ್ಸ್ ಘಟನೆಯ ಕುರಿತು ತನಿಖೆ ಕೈಗೊಳ್ಳಲಾಗುವುದು ಎಂದಿದ್ದರು.
ಈ ಕೃತ್ಯದಲ್ಲಿ ಅಮೆರಿಕದ ಕೈವಾಡವಿದ್ದದ್ದೇ ಆದರೆ ಮಧ್ಯಪ್ರಾಚ್ಯ ಜೊತೆಗಿನ ಸಂಘರ್ಷದಲ್ಲಿ ಅಮೆರಿಕ ನಾಗರಿಕ ಹಕ್ಕುಗಳನ್ನು ಉಲ್ಲಂಘಿಸಿದ ಅಪರಾಧಗಳಲ್ಲಿ ಇದು ಪ್ರಮುಖ ಪ್ರಕರಣವಾಗಲಿದೆ.
ʼಬಾಂಬ್ ದಾಳಿಗೆ ತುತ್ತಾದ ತರಗತಿಗಳು ಹಾಗೂ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಈ ಯುದ್ಧದಲ್ಲಿ ಯಾರು ಹೆಚ್ಚಿನ ಬೆಲೆ ತೆರುತ್ತಿದ್ದಾರೆ ಎಂಬುದನ್ನು ಸಾದರ ಪಡಿಸಿದೆ: ನಡೆಯುತ್ತಿರುವ ಸಂಘರ್ಷದಲ್ಲಿ ಯಾವ ಪಾತ್ರವೂ ಇರದ ಅಸಹಾಯಕ ನಾಗರಿಕರು ಬೆಲೆ ತೆರುತ್ತಿದ್ದಾರೆʼ ಎಂದು ವೋಲ್ಕರ್ ಟರ್ಕ್ ಹೇಳಿದ್ದಾರೆ.
ಮುಂದುವರೆದು ಯಾರೂ ಈ ದಾಳಿಯ ಕುರಿತು ತನಿಖೆ ನಡೆಸುವ ಹೊಣೆ ಹೊತ್ತಿದ್ದಾರೆ ಅವರು ಪಾರದರ್ಶಕವಾಗಿ, ತಾರತಮ್ಯವಿರದ ಪ್ರಾಮಾಣಿಕ ತನಿಖೆ ನಡೆಸಲಿ ಎಂದರು.
ಇದು ಅಮೆರಿಕ ನಡೆಸಿದ ಉದ್ದೇಶಪೂರ್ವಕ ದಾಳಿ, ಈ ದೌರ್ಜನ್ಯವನ್ನು ಮೌನವಾಗಿ ಸಹಿಸಲಾಗುವುದಿಲ್ಲ, ಇಂತಹ ಅಮಾನವೀಯ ಕೃತ್ಯಕ್ಕೆ ಕ್ಷಮೆಯಿಲ್ಲ. ಇದಕ್ಕೆ ತಕ್ಕ ಉತ್ತರ ಕೊಡಲಾಗುವುದು ಎಂದು ಇರಾನಿನ ವಿದೇಶಾಂಗ ಸಚಿವ ಅಗರಾಚಿ ವಿಡಿಯೊ ಮೂಲಕ ಸಂದೇಶ ನೀಡಿದ್ದಾರೆ.
ನುರಿತ ವಿಡಿಯೊ ವಿಶ್ಲೇ಼ಷಣಕಾರರ ವರದಿಯ ಪ್ರಕಾರ ಇರಾನ್ ಮೇಲಿನ ಮೊದಲ ದಿನದ ವೈಮಾನಿಕ ದಾಳಿಯಲ್ಲಿ ಬಳಕೆಯಾದ ಮಿಸೈಲ್‌ಗಳು ಅಮೆರಿಕ ಸೇನೆಗೆ ಸೇರಿದ್ದು. ಟೋಮ್‌ಹಾಕ್ ಮಿಸೈಲ್ ಹಲವು ಬಾರಿ ಈ ಪ್ರದೇಶಗಳ ಮೇಲೆ ದಾಳಿ ನಡೆಸಿದ ದೃಷ್ಯಗಳು ಸ್ಯಾಟಲೈಟ್‌ನಲ್ಲಿ ಸೆರೆಯಾಗಿವೆ ಎನ್ನಲಾಗಿದೆ.




