ಅಬುಧಾಬಿಯಲ್ಲಿ ರಷ್ಯಾ-ಉಕ್ರೇನ್ ಶಾಂತಿ ಮಾತುಕತೆ; ಅಮೆರಿಕದ ಸಂಧಾನ ಪ್ರಯತ್ನ!

Date:

ಸುಮಾರು ಐದು ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧಕ್ಕೆ ಶಾಶ್ವತ ತೆರೆ ಎಳೆಯುವ ಉದ್ದೇಶದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಜಧಾನಿ ಅಬುಧಾಬಿಯಲ್ಲಿ ಎರಡೂ ದೇಶಗಳ ಪ್ರತಿನಿಧಿಗಳ ನಡುವೆ ಉನ್ನತ ಮಟ್ಟದ ತ್ರಿಪಕ್ಷೀಯ ಮಾತುಕತೆ ಆರಂಭವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಯಭಾರಿಗಳ ಮಧ್ಯಸ್ಥಿಕೆಯಲ್ಲಿ ಈ ಮಾತುಕತೆ ನಡೆಯುತ್ತಿದ್ದು, 2022ರ ಫೆಬ್ರವರಿಯ ನಂತರ ನಡೆಯುತ್ತಿರುವ ಮೊದಲ ನೇರ ಸಂಧಾನ ಸಭೆ ಇದಾಗಿದೆ. ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಮತ್ತು ಯುರೋಪಿನ ಭದ್ರತಾ ಚೌಕಟ್ಟನ್ನು ಮರುನಿರ್ಮಾಣ ಮಾಡಲು ಅಮೆರಿಕ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸುತ್ತಿದೆ.

- Advertisement -

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಲಗೈ ಭಂಟ ಹಾಗೂ ಹಿರಿಯ ರಾಯಭಾರಿ ಜೇರೆಡ್ ಕುಶ್ನರ್ ಮತ್ತು ಸ್ಟೀವ್ ವಿಟ್ಕಾಫ್ ಈ ಸಂಧಾನದ ಉಸ್ತುವಾರಿ ವಹಿಸಿದ್ದಾರೆ. ರಷ್ಯಾ ಮತ್ತು ಯುರೋಪಿಯನ್ ರಾಷ್ಟ್ರಗಳನ್ನು ಒಳಗೊಂಡ ‘ಹೊಸ ಯುರೋಪಿಯನ್ ಭದ್ರತಾ ವ್ಯವಸ್ಥೆ’ ರೂಪಿಸಲು ಕುಶ್ನರ್ ಪ್ರಸ್ತಾಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊರಗೆ ‘ರಾಮ’-ಒಳಗೆ ‘ನಾಥೂರಾಮ’: ಗಾಂಧೀಜಿಯವರ ತಾತ್ವಿಕತೆಯ ಮುಂದೆ ಬಲಪಂಥೀಯ...

ಗಾಂಧೀಜಿಯವರನ್ನು ವಿರೋಧಿಸುವ ರಾಜಕೀಯ ಪ್ರಯತ್ನಗಳು ಅವರ ವ್ಯಕ್ತಿತ್ವವನ್ನು ಕುಗ್ಗಿಸುವ ಬದಲು, ಅವರ ಆದರ್ಶಗಳ ಪ್ರಸ್ತುತತೆಯನ್ನು ಮತ್ತಷ್ಟು ಮುನ್ನೆಲೆಗೆ ತರುತ್ತಿವೆ. ಸತ್ಯ, ಅಹಿಂಸೆ, ಮಾನವೀಯತೆ, ಸಾಮಾಜಿಕ ಸಮಾನತೆ ಮತ್ತು ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳು ಇಂದಿಗೂ...

ಎಲ್ಲವನ್ನೂ ಕಣ್ಣುಮುಚ್ಚಿ ಪಾಲಿಸುವ ವಿಭೀಷಣನೆ ಈ ಸಮಾಜಕ್ಕೆ ಸೂಕ್ತ,...

ರಾಮಾಯಣವನ್ನು ಗೌರವಿಸುವ ನಾವು ರಾವಣನ ದೃಷ್ಟಿಕೋನದಿಂದಲೂ ಕಥೆಯನ್ನು ಓದಬೇಕು. ಈ ಕಾಲಕ್ಕೆ ರಿಟೆಲ್ಲಿಂಗ್ಸ್, ಕೌಂಟರ್ ನರೇಟಿವ್ಸ್ ಹಾಗೂ ಹ್ಯೂಮನೈಸಿಂಗ್ ಸ್ಟೋರಿಸ್ ಅಗತ್ಯತೆ ಬಹಳವಾಗಿದೆ. ಶಿವ ನಮ್ಮ ಅಚ್ಚುಮೆಚ್ಚಿನ ದೇವನಾಗಿದ್ದ. ಅವನನ್ನ ನಾವು ಅತಿಯಾಗಿ ಪ್ರೀತಿಸುತಿದ್ದೆವು....

ರಾಷ್ಟ್ರೀಯ ಶಿಕ್ಷಣ ದಿನ | ಶಿಕ್ಷಣ ಕ್ರಾಂತಿಯ ಹರಿಕಾರ-ಮೌಲಾನ...

ಮೌಲಾನಾ ಅಬುಲ್ ಕಲಾಂ ಆಜಾದ್ ಇದು ಅಪರೂಪದ ರಾಷ್ಟ್ರೀಯ ವ್ಯಕ್ತಿತ್ವ. ಅವರ ಹೆಸರು ಆಜಾದ್. ಅವರ ಕನಸು ಸ್ವತಂತ್ರ ಭಾರತ. ಅವರ ಹೋರಾಟ ರಾಷ್ಟ್ರೀಯ ಏಕತೆ. ಅವರ ನಂಬಿಕೆ ಶಿಕ್ಷಣ. ಅವರ ವೈಚಾರಿಕ...

ಈ ಕುರಿತು ಮಾತನಾಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ, “ಯುದ್ಧದ ನಂತರ ಉಕ್ರೇನ್‌ಗೆ ನೀಡಲಾಗುವ ಭದ್ರತಾ ಅಭಯಕ್ಕೆ ರಷ್ಯಾದ ಸಮ್ಮತಿಯೂ ಅಗತ್ಯ. ಉಕ್ರೇನ್‌ಗೆ ಸುರಕ್ಷತೆಯ ಭರವಸೆ ಸಿಕ್ಕಾಗ ಮಾತ್ರ ಯುದ್ಧವನ್ನು ಅಂತ್ಯಗೊಳಿಸಲು ಸಾಧ್ಯ,” ಎಂದು ಸ್ಪಷ್ಟಪಡಿಸಿದ್ದಾರೆ.

ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅಮೆರಿಕದ ಈ ನಡೆಯನ್ನು ಶ್ಲಾಘಿಸಿದ್ದು, “ಹಿಂದಿನ ಬೈಡೆನ್ ಆಡಳಿತವು ರಷ್ಯಾದ ಭದ್ರತಾ ಕಾಳಜಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಆದರೆ ಪ್ರಸ್ತುತ ಟ್ರಂಪ್ ಆಡಳಿತವು ಸಮಗ್ರ ಭದ್ರತಾ ಚರ್ಚೆಗೆ ವೇದಿಕೆ ಕಲ್ಪಿಸಿದೆ,” ಎಂದಿದ್ದಾರೆ.

ಮಾತುಕತೆ ಆರಂಭವಾಗಿದ್ದರೂ, ಯುದ್ಧ ಕೊನೆಗೊಳಿಸುವ ಮೂಲಭೂತ ಷರತ್ತುಗಳ ವಿಷಯದಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಭಿನ್ನಾಭಿಪ್ರಾಯಗಳು ಮುಂದುವರಿದಿವೆ. 

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ನ ಲನೆಟ್ಸ್ಕ್, ಲುಹಾನ್ಸ್ಕ್, ಜಪೋರಿಝ್ಯಾ ಮತ್ತು ಖೇರ್ಸನ್ ಪ್ರದೇಶಗಳಿಂದ ಉಕ್ರೇನಿ ಸೇನೆ ಸಂಪೂರ್ಣವಾಗಿ ಹಿಂದೆ ಸರಿಯಬೇಕು ಎಂದು ಪಟ್ಟು ಹಿಡಿದಿದ್ದಾರೆ. ಜೊತೆಗೆ, ಉಕ್ರೇನ್ ಎಂದಿಗೂ ‘ನೇಟೋ’ (NATO) ಒಕ್ಕೂಟ ಸೇರಬಾರದು ಮತ್ತು ತನ್ನ ಸೇನಾ ಬಲಕ್ಕೆ ಮಿತಿ ಹೇರಿಕೊಳ್ಳಬೇಕು ಎಂದು ಷರತ್ತು ವಿಧಿಸಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಅಕ್ರಮ ಭೂಸ್ವಾಧೀನವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ತಕ್ಷಣದ ಕದನ ವಿರಾಮವೇ ಮೊದಲ ಹೆಜ್ಜೆಯಾಗಬೇಕು ಮತ್ತು ಭವಿಷ್ಯದಲ್ಲಿ ರಷ್ಯಾ ಮತ್ತೆ ಆಕ್ರಮಣ ಮಾಡದಂತೆ ತಡೆಯಲು ಪಾಶ್ಚಿಮಾತ್ಯ ದೇಶಗಳ ಭದ್ರತಾ ಗ್ಯಾರಂಟಿ ಅಗತ್ಯತೆಯನ್ನ ಉಕ್ರೇನ್ ಪ್ರತಿಪಾದಿಸಿದೆ.

ಈ ಮಹತ್ವದ ಮಾತುಕತೆಗೆ ಎರಡೂ ದೇಶಗಳು ತಮ್ಮ ಅನುಭವೀ ರಾಜತಾಂತ್ರಿಕರನ್ನು ಕಳುಹಿಸಿಕೊಟ್ಟಿವೆ. ಪುಟಿನ್ ಅವರ ಆಪ್ತ ವ್ಲಾಡಿಮಿರ್ ಮೆಡಿನ್ಸ್ಕಿ ನಾಯಕತ್ವದಲ್ಲಿ, ಉಪ ವಿದೇಶಾಂಗ ಸಚಿವರಾದ ಸೆರ್ಗೆಯ್ ರಿಯಾಬ್ಕೋವ್, ಮಿಖಾಯಿಲ್ ಗಲುಝಿನ್ ಮತ್ತು ರಷ್ಯಾದ ಸೇನಾ ಗುಪ್ತಚರ ಸಂಸ್ಥೆ (GRU) ಮುಖ್ಯಸ್ಥ ಇಗೋರ್ ಕೊಸ್ಟ್ಯುಕೋವ್ ಸೇರಿದಂತೆ 11 ಜನರ ತಂಡ ಭಾಗವಹಿಸಿದೆ.

ಉಕ್ರೇನ್‌ನ ವಿದೇಶಿ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ರಸ್ಟೆಮ್ ಉಮೆರೊವ್ ನಾಯಕತ್ವದ ತಂಡದಲ್ಲಿ ಅಧ್ಯಕ್ಷರ ಮುಖ್ಯಸ್ಥ ಕೈರಿಲೊ ಬುಡಾನೊವ್ ಮತ್ತು ಸಂಸದೀಯ ನಾಯಕ ದಾವಿಡ್ ಅರಾಖಮಿಯಾ ಇದ್ದಾರೆ. ತ್ರಿಪಕ್ಷೀಯ ಸಭೆಗೆ ಮುನ್ನ ಉಕ್ರೇನ್ ನಿಯೋಗವು ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ನೇಟೋ ಪ್ರತಿನಿಧಿಗಳೊಂದಿಗೆ ಪ್ರತ್ಯೇಕ ಸಮಾಲೋಚನೆ ನಡೆಸಿದೆ.

ಇತ್ತೀಚೆಗೆ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವು ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಈ ಮಾತುಕತೆ ನಡೆಯುತ್ತಿದೆ. ದೇಶೀಯವಾಗಿ ರಾಜಕೀಯ ಸವಾಲು ಎದುರಿಸುತ್ತಿರುವ ಡೊನಾಲ್ಡ್ ಟ್ರಂಪ್, ವಿದೇಶಾಂಗ ನೀತಿಯಲ್ಲಿ ದೊಡ್ಡ ಸಾಧನೆ ಮಾಡಲು ಉತ್ಸುಕರಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಮತ್ತೊಂದೆಡೆ, ಉಕ್ರೇನ್‌ಗೆ ನೀಡಲಾಗುವ ಸೇನಾ ನೆರವು ಮತ್ತು ನಿರ್ಬಂಧಗಳ ವಿಷಯದಲ್ಲಿ ಅಮೆರಿಕದ ಮುಂಬರುವ ಡೆಮಾಕ್ರಟಿಕ್ ನೇತೃತ್ವದ ಕಾಂಗ್ರೆಸ್ ಟ್ರಂಪ್ ಆಡಳಿತದ ತೀರ್ಮಾನಗಳನ್ನು ಮರುಪರಿಶೀಲಿಸುವ ಸಾಧ್ಯತೆಯಿದೆ. ಆದರೆ, ಸದ್ಯಕ್ಕೆ ಅಬುಧಾಬಿಯಲ್ಲಿ ನಡೆಯುತ್ತಿರುವ ಈ ಎರಡು ದಿನಗಳ ಸಭೆಯು ಯುರೋಪ್‌ನಲ್ಲಿ ಶಾಂತಿ ಸ್ಥಾಪನೆಯಾಗುತ್ತದೆಯೇ ಎಂಬುದನ್ನು ನಿರ್ಧರಿಸುವ ಪ್ರಮುಖ ಮೈಲಿಗಲ್ಲಾಗಲಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಲ್ಲವನ್ನೂ ಕಣ್ಣುಮುಚ್ಚಿ ಪಾಲಿಸುವ ವಿಭೀಷಣನೆ ಈ ಸಮಾಜಕ್ಕೆ ಸೂಕ್ತ, ಪ್ರಶ್ನಿಸುವ ನಾನಲ್ಲ- ರಾವಣ

ರಾಮಾಯಣವನ್ನು ಗೌರವಿಸುವ ನಾವು ರಾವಣನ ದೃಷ್ಟಿಕೋನದಿಂದಲೂ ಕಥೆಯನ್ನು ಓದಬೇಕು. ಈ ಕಾಲಕ್ಕೆ...

ರೈತರು ಆತಂಕ ಪಡಬೇಕಿಲ್ಲ, ಬರ ಪರಿಹಾರ ತಲುಪಲಿದೆ: ಸಿಎಂ‌ ಡಿ ಕೆ‌ ಶಿವಕುಮಾರ್

ರಾಜ್ಯದ ರೈತ ಬಾಂಧವರಿಗೆ ಬರ ಪರಿಹಾರದ ಕುರಿತು ಯಾವುದೇ ರೀತಿಯ ಗೊಂದಲ...

ಶೇಖ್ ಹಸೀನಾ ವಾಪಸಾದರೆ ನೇರ ಗಲ್ಲು: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ, ಸರಣಿ ಸ್ಫೋಟ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ತಾಯ್ನಾಡಿಗೆ ಮರಳುವ...

ಪ್ರಣವ್ ಮುಖರ್ಜಿಯ ಪ್ರಧಾನಿ ಆಸೆ ನನಗೆ ಆಘಾತ ತಂದಿತ್ತು: ಸೋನಿಯಾ ಗಾಂಧಿ!

ಭಾರತೀಯ ರಾಜಕಾರಣದ ಅತ್ಯಂತ ಪ್ರಭಾವಿ ಹಾಗೂ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದ...