ದೀಪಾವಳಿ ಪಟಾಕಿ ಸಮರ್ಥಿಸಿಕೊಂಡ ಸಿಎಂ ಯೋಗಿ; ಮಾಲಿನ್ಯದ ಕಾಳಜಿಗಿಂತ ಪಟಾಕಿ ಮುಖ್ಯವೇ?

Date:

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಪಟಾಕಿ ಸಿಡಿಸಿರುವುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ. ಹಬ್ಬದ ಆಚರಣೆಗೆ ಸರ್ಕಾರ ಯಾವುದೇ ನಿರ್ಬಂಧ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಮಾಲಿನ್ಯದ ಕುರಿತು ಕೇಳಿಬಂದ ವಿಮರ್ಶೆಗಳಿಗೆ ತಿರುಗೇಟು ನೀಡಿದ್ದಾರೆ.

- Advertisement -

ಲಖನೌದಲ್ಲಿ ನಡೆದ ಸರ್ಕಾರಿ ಇಲಾಖೆಗಳ ಕಿರಿಯ ವಿಭಾಗೀಯ ಕ್ಲರ್ಕ್‌ ನೇಮಕಾತಿ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, “ದೀಪಾವಳಿಯನ್ನು ಧೂಮ್-ಧಡಾಕಾದಿಂದ ಆಚರಿಸಿ ಪಟಾಕಿ ಸಿಡಿಸಿದ್ದು ಒಳ್ಳೆಯದೇ ಆಯಿತು. ಮಾಲಿನ್ಯ ಉಂಟಾಗಿದ್ದರೆ ಅದನ್ನು ತಗ್ಗಿಸಲಾಗುತ್ತದೆ. ಭ್ರಷ್ಟಾಚಾರದ ಮೂಲಕ ಇಡೀ ವ್ಯವಸ್ಥೆಯನ್ನೇ ಕಲುಷಿತಗೊಳಿಸಿದವರ ಬಗ್ಗೆ ಯಾರೂ ಮಾತನಾಡುವುದಿಲ್ಲ, ಆದರೆ ಜನಸಾಮಾನ್ಯರು ಒಂದು ದಿನ ಪಟಾಕಿ ಸಿಡಿಸಿದರೆ ಮಾಲಿನ್ಯದ ಬಗ್ಗೆ ಧ್ವನಿ ಎತ್ತುತ್ತಾರೆ,” ಎಂದು ಹೇಳಿದ್ದಾರೆ. ಅಲ್ಲದೆ, ಅಯೋಧ್ಯೆಯ ದೀಪೋತ್ಸವ ಮತ್ತು ರಾಜ್ಯದ ಮಾರುಕಟ್ಟೆಗಳಲ್ಲಿ ಕಂಡುಬಂದ ವ್ಯಾಪಾರ ವಹಿವಾಟನ್ನು ಪ್ರಶಂಸಿಸಿದ ಸಿಎಂ, 2026ರ ಆಗಸ್ಟ್ 15ರ ವೇಳೆಗೆ 9.5 ಲಕ್ಷ ಹಾಗೂ ಜನೆವರಿ 26ರ ವೇಳೆಗೆ ಹೆಚ್ಚುವರಿಯಾಗಿ 1 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ನೀಡುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊರಗೆ ‘ರಾಮ’-ಒಳಗೆ ‘ನಾಥೂರಾಮ’: ಗಾಂಧೀಜಿಯವರ ತಾತ್ವಿಕತೆಯ ಮುಂದೆ ಬಲಪಂಥೀಯ...

ಗಾಂಧೀಜಿಯವರನ್ನು ವಿರೋಧಿಸುವ ರಾಜಕೀಯ ಪ್ರಯತ್ನಗಳು ಅವರ ವ್ಯಕ್ತಿತ್ವವನ್ನು ಕುಗ್ಗಿಸುವ ಬದಲು, ಅವರ ಆದರ್ಶಗಳ ಪ್ರಸ್ತುತತೆಯನ್ನು ಮತ್ತಷ್ಟು ಮುನ್ನೆಲೆಗೆ ತರುತ್ತಿವೆ. ಸತ್ಯ, ಅಹಿಂಸೆ, ಮಾನವೀಯತೆ, ಸಾಮಾಜಿಕ ಸಮಾನತೆ ಮತ್ತು ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳು ಇಂದಿಗೂ...

ಎಲ್ಲವನ್ನೂ ಕಣ್ಣುಮುಚ್ಚಿ ಪಾಲಿಸುವ ವಿಭೀಷಣನೆ ಈ ಸಮಾಜಕ್ಕೆ ಸೂಕ್ತ,...

ರಾಮಾಯಣವನ್ನು ಗೌರವಿಸುವ ನಾವು ರಾವಣನ ದೃಷ್ಟಿಕೋನದಿಂದಲೂ ಕಥೆಯನ್ನು ಓದಬೇಕು. ಈ ಕಾಲಕ್ಕೆ ರಿಟೆಲ್ಲಿಂಗ್ಸ್, ಕೌಂಟರ್ ನರೇಟಿವ್ಸ್ ಹಾಗೂ ಹ್ಯೂಮನೈಸಿಂಗ್ ಸ್ಟೋರಿಸ್ ಅಗತ್ಯತೆ ಬಹಳವಾಗಿದೆ. ಶಿವ ನಮ್ಮ ಅಚ್ಚುಮೆಚ್ಚಿನ ದೇವನಾಗಿದ್ದ. ಅವನನ್ನ ನಾವು ಅತಿಯಾಗಿ ಪ್ರೀತಿಸುತಿದ್ದೆವು....

ರಾಷ್ಟ್ರೀಯ ಶಿಕ್ಷಣ ದಿನ | ಶಿಕ್ಷಣ ಕ್ರಾಂತಿಯ ಹರಿಕಾರ-ಮೌಲಾನ...

ಮೌಲಾನಾ ಅಬುಲ್ ಕಲಾಂ ಆಜಾದ್ ಇದು ಅಪರೂಪದ ರಾಷ್ಟ್ರೀಯ ವ್ಯಕ್ತಿತ್ವ. ಅವರ ಹೆಸರು ಆಜಾದ್. ಅವರ ಕನಸು ಸ್ವತಂತ್ರ ಭಾರತ. ಅವರ ಹೋರಾಟ ರಾಷ್ಟ್ರೀಯ ಏಕತೆ. ಅವರ ನಂಬಿಕೆ ಶಿಕ್ಷಣ. ಅವರ ವೈಚಾರಿಕ...

ಒಂದೆಡೆ ಮುಖ್ಯಮಂತ್ರಿಗಳು ಪಟಾಕಿ ಆಚರಣೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ದೀಪಾವಳಿ ಬೆನ್ನಲ್ಲೇ ಉತ್ತರ ಭಾರತದಾದ್ಯಂತ ಗಾಳಿಯ ಗುಣಮಟ್ಟ (AQI) ತೀವ್ರವಾಗಿ ಕುಸಿದಿದೆ.

ಪ್ರತಿವರ್ಷ ಚಳಿಗಾಲದ ಆರಂಭದಲ್ಲಿ ಪಟಾಕಿ ಹೊಗೆ, ಕಸ ಸುಡುವುದು ಮತ್ತು ವಾಹನಗಳ ಮಾಲಿನ್ಯದಿಂದಾಗಿ ಗಾಳಿಯಲ್ಲಿ ವಿಷಕಾರಿ ಕಣಗಳ (PM 2.5 ಮತ್ತು PM 10) ಪ್ರಮಾಣ ಹೆಚ್ಚಾಗುತ್ತದೆ. ಇದು ಸಣ್ಣ ಮಕ್ಕಳು, ಹಿರಿಯರು ಮತ್ತು ಉಸಿರಾಟದ ತೊಂದರೆ ಇರುವವರ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

ಪರಿಸರ ತಜ್ಞರು ಹಾಗೂ ಶ್ವಾಸಕೋಶ ತಜ್ಞರು ಪಟಾಕಿ ಬಳಕೆಯನ್ನು ತಗ್ಗಿಸಲು ಆಡಳಿತಾತ್ಮಕ ಕ್ರಮಗಳಿಗೆ ಒತ್ತಾಯಿಸುತ್ತಿರುವಾಗ, ಜನಪ್ರಿಯತೆ ಹಾಗೂ ಭಾವನಾತ್ಮಕ ಕಾರಣಗಳಿಗಾಗಿ ನಾಯಕರು ಪಟಾಕಿ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವುದು ವಾಯು ಮಾಲಿನ್ಯ ತಡೆಗೆ ತೊಡಕಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.

ಅಭಿವೃದ್ಧಿ ಯೋಜನೆಗಳು ಮತ್ತು ಉದ್ಯೋಗ ಸೃಷ್ಟಿಯ ಜೊತೆಗೆ, ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗಿರುವ ವಾಯು ಮಾಲಿನ್ಯವನ್ನು ತಡೆಗಟ್ಟಲು ದೀರ್ಘಕಾಲೀನ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಹೊಣೆಗಾರಿಕೆಯಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇಶದ ಜಲಾಶಯಗಳ ಸಂಗ್ರಹ ಕುಸಿತ; ಆಹಾರ, ವಿದ್ಯುತ್ ಉತ್ಪಾದನೆಯ ಮೇಲೆ ಭಾರೀ ಹೊಡೆತ- ಕಾದಿವೆಯೇ ಕೆಟ್ಟ ದಿನಗಳು?

ನೈರುತ್ಯ ಮುಂಗಾರಿನ ತೀವ್ರ ಅಭಾವದಿಂದಾಗಿ ದೇಶದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ...

ಎಲ್ಲವನ್ನೂ ಕಣ್ಣುಮುಚ್ಚಿ ಪಾಲಿಸುವ ವಿಭೀಷಣನೆ ಈ ಸಮಾಜಕ್ಕೆ ಸೂಕ್ತ, ಪ್ರಶ್ನಿಸುವ ನಾನಲ್ಲ- ರಾವಣ

ರಾಮಾಯಣವನ್ನು ಗೌರವಿಸುವ ನಾವು ರಾವಣನ ದೃಷ್ಟಿಕೋನದಿಂದಲೂ ಕಥೆಯನ್ನು ಓದಬೇಕು. ಈ ಕಾಲಕ್ಕೆ...

ರೈತರು ಆತಂಕ ಪಡಬೇಕಿಲ್ಲ, ಬರ ಪರಿಹಾರ ತಲುಪಲಿದೆ: ಸಿಎಂ‌ ಡಿ ಕೆ‌ ಶಿವಕುಮಾರ್

ರಾಜ್ಯದ ರೈತ ಬಾಂಧವರಿಗೆ ಬರ ಪರಿಹಾರದ ಕುರಿತು ಯಾವುದೇ ರೀತಿಯ ಗೊಂದಲ...

ಶೇಖ್ ಹಸೀನಾ ವಾಪಸಾದರೆ ನೇರ ಗಲ್ಲು: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ, ಸರಣಿ ಸ್ಫೋಟ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ತಾಯ್ನಾಡಿಗೆ ಮರಳುವ...