ಉರಿಯುತ್ತಿರುವ ನ್ಯೂಯಾರ್ಕ್: ಕಂಗೆಟ್ಟ ಜನತೆಗೆ ಮೇಯರ್ ಮಮದಾನಿಯಿಂದ ವಿನೂತನ ಸಲಹೆ

Date:

ನ್ಯೂಯಾರ್ಕ್ ನಗರದಲ್ಲಿ ತೀವ್ರ ಬಿಸಿಗಾಳಿಯ ಪ್ರಭಾವ ವಿಪರೀತವಾಗಿ ಹೆಚ್ಚಾಗುತ್ತಿದ್ದು, ನಗರದ ವಿದ್ಯುತ್ ಗ್ರಿಡ್‌ಗಳ ಮೇಲಿನ ಅತಿಯಾದ ಒತ್ತಡವನ್ನು ತಗ್ಗಿಸುವ ಹಾಗೂ ಸಂಭವನೀಯ ವಿದ್ಯುತ್ ಕಡಿತವನ್ನು ತಪ್ಪಿಸುವ ನಿಟ್ಟಿನಲ್ಲಿ ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮದಾನಿ ಅವರು ನಾಗರಿಕರಿಗೆ ತುರ್ತು ಮನವಿ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲೇ ಅತಿ ತೀವ್ರವಾದ ಬಿಸಿಗಾಳಿ ಇದಾಗಿದ್ದು, ರಾಷ್ಟ್ರೀಯ ಹವಾಮಾನ ಸೇವೆಯು ‘ವಿಪರೀತ ಶಾಖದ ಎಚ್ಚರಿಕೆ’ಯನ್ನು ಅಧಿಕೃತವಾಗಿ ಪ್ರಕಟಿಸಿದೆ. ರಜಾದಿನಗಳವರೆಗೂ ಈ ಕಾವಿನ ವಾತಾವರಣ ಮುಂದುವರಿಯಲಿದೆ.

- Advertisement -

ಮುಂದಿನ ಕೆಲವು ದಿನಗಳಲ್ಲಿ ನಗರದ ತಾಪಮಾನವು 100 ಡಿಗ್ರಿ ಫ್ಯಾರನ್‌ಹೀಟ್‌ (ಸುಮಾರು 38°C) ಆಸುಪಾಸಿಗೆ ತಲುಪುವ ನಿರೀಕ್ಷೆಯಿದೆ. ಅದೇ ರೀತಿ ಶಾಖದ ಸೂಚ್ಯಂಕವು (ಹೀಟ್ ಇಂಡೆಕ್ಸ್) 112 ಡಿಗ್ರಿ ಫ್ಯಾರನ್‌ಹೀಟ್‌ ವರೆಗೆ((ಸುಮಾರು 44°C)) ಭಾರೀ ಏರಿಕೆಯಾಗುವ ಆತಂಕವಿದೆ. ಹೀಗಾಗಿ, ವಿದ್ಯುತ್ ಬಳಕೆಯನ್ನು ಗರಿಷ್ಠ ಮಟ್ಟದಲ್ಲಿ ಮಿತಿಗೊಳಿಸುವ ಉದ್ದೇಶದಿಂದ ನಾಗರಿಕರು ತಮ್ಮ ಮನೆಗಳ ಹವಾನಿಯಂತ್ರಕಗಳ (ಎಸಿ) ತಾಪಮಾನವನ್ನು 78 ಡಿಗ್ರಿ ಫ್ಯಾರನ್‌ಹೀಟ್ (ಸುಮಾರು 26°C) ನಿಗದಿಪಡಿಸುವಂತೆ ಮತ್ತು ಬಳಕೆಯಾಗದ ದೀಪಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಪ್ಲಗ್ ಕಡ್ಡಾಯವಾಗಿ ತೆಗೆಯುವಂತೆ ಮೇಯರ್ ಸಲಹೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಕೇವಲ ಸಾರ್ವಜನಿಕರಷ್ಟೇ ಅಲ್ಲದೆ, ನಗರ ಆಡಳಿತವು ಕೂಡ ವಿದ್ಯುತ್ ಉಳಿಸಲು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ನಗರದ ಎಲ್ಲ ಸರ್ಕಾರಿ ಕಟ್ಟಡಗಳಲ್ಲಿಯೂ ಎಸಿ ತಾಪಮಾನವನ್ನು ಕಡ್ಡಾಯವಾಗಿ 78 ಡಿಗ್ರಿ ಫ್ಯಾರನ್‌ಹೀಟ್ (ಸುಮಾರು 26°C) ಗೆ ನಿರ್ವಹಿಸಲಾಗುತ್ತಿದೆ. ವಿದ್ಯುತ್‌ಗೆ ಅತಿ ಹೆಚ್ಚು ಬೇಡಿಕೆಯಿರುವ ಪೀಕ್ ಸಮಯದಲ್ಲಿ ದೀಪಗಳನ್ನು ಮಂಕಾಗಿಸುವುದು ಅಥವಾ ಆಫ್ ಮಾಡುವುದು ಮತ್ತು ಅನಗತ್ಯ ಉಪಕರಣಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಮೂಲಕ ಸರ್ಕಾರವೇ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಹಾಗೂ ಖಾಸಗಿ ಸಂಸ್ಥೆಗಳಿಗೂ ಇದೇ ನಿಯಮ ಪಾಲಿಸಲು ಮನವಿ ಮಾಡಲಾಗಿದೆ.

ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಮಕ್ಕಳು, ವಯೋವೃದ್ಧರು, ಹೃದ್ರೋಗ ಹಾಗೂ ಉಸಿರಾಟದ ಸಮಸ್ಯೆ ಇರುವಂತಹ ಸೂಕ್ಷ್ಮ ಆರೋಗ್ಯದವರು ಮತ್ತು ಸಾಕುಪ್ರಾಣಿಗಳನ್ನು ಆದಷ್ಟು ಹವಾನಿಯಂತ್ರಿತ ಕೊಠಡಿಗಳಲ್ಲೇ ಇರಿಸಲು ಸೂಚಿಸಲಾಗಿದೆ. ಸ್ವಂತ ಎಸಿ ಸೌಲಭ್ಯವಿಲ್ಲದ ನಾಗರಿಕರು ಸುರಕ್ಷತೆಗಾಗಿ ನಗರದಾದ್ಯಂತ ಸರ್ಕಾರ ತೆರೆದಿರುವ ‘ಕೂಲಿಂಗ್ ಸೆಂಟರ್’ಗಳ (ತಂಪಾಗಿಸುವ ಕೇಂದ್ರ) ನೆರವು ಪಡೆಯಬಹುದು. ವಿಪರೀತ ಹವಾಮಾನದ ಬಿಕ್ಕಟ್ಟು ನಿರ್ವಹಿಸಲು ಪ್ರಸ್ತುತ ನಗರದಲ್ಲಿ ವಿವಿಧ ಏಜೆನ್ಸಿಗಳನ್ನು ಒಳಗೊಂಡ ‘ಶಾಖ ತುರ್ತು ಯೋಜನೆ’ಯನ್ನು ಸಕ್ರಿಯಗೊಳಿಸಲಾಗಿದೆ.

ಬಿಸಿಲಿನ ಝಳಕ್ಕೆ ಹೀಟ್ ಸ್ಟ್ರೋಕ್ ಉಂಟಾಗುವ ಗಂಭೀರ ಅಪಾಯವಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ತೀವ್ರ ಎಚ್ಚರಿಕೆ ವಹಿಸುವಂತೆ ನಗರಡಳಿತ ಸೂಚಿಸಿದೆ. ವಿಪರೀತ ಗೊಂದಲ, ತಲೆತಿರುಗುವಿಕೆ, ವಾಕರಿಕೆ ಮತ್ತು ಉಸಿರಾಟದ ತೊಂದರೆಯಂತಹ ಅಪಾಯಕಾರಿ ಲಕ್ಷಣಗಳು ಕಂಡುಬಂದರೆ ಒಂದು ಕ್ಷಣವೂ ವಿಳಂಬ ಮಾಡದೆ, ತಕ್ಷಣವೇ ತುರ್ತು ವೈದ್ಯಕೀಯ ಸೇವೆಗಳನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವಂತೆ ಮೇಯರ್ ಮಮದಾನಿ ಅವರು ಜನರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಇತ್ತೀಚೆಗೆ ಯುರೋಪ್‌ನಲ್ಲೂ ಇದೇ ರೀತಿಯ ಬಿಸಿಗಾಳಿಯಿಂದಾಗಿ ಫ್ರಾನ್ಸ್ ಮತ್ತು ಸ್ಪೇನ್‌ನಲ್ಲಿ ಎಸಿಗಳ ಮಾರಾಟ ಗಣನೀಯವಾಗಿ ಹೆಚ್ಚಾದಾಗ, ಯುರೋಪಿಯನ್ ಕಮಿಷನ್ ಇಂಧನ ದಕ್ಷತೆಯ ಕುರಿತು ಹೊಸ ನಿಯಮಗಳನ್ನು ಪ್ರಸ್ತಾಪಿಸಿತ್ತು. ಯುರೋಪ್‌ನ ಶಾಖದ ಬಿಸಿ ಇದೀಗ ನ್ಯೂಯಾರ್ಕ್‌ಗೂ ತಟ್ಟಿದೆ. “ವಿದ್ಯುತ್ ಗ್ರಿಡ್ ಸುಸ್ಥಿರವಾಗಿದ್ದರೆ ಮಾತ್ರ ಎಸಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ ಹಾಗೂ ಅಮೂಲ್ಯ ಜೀವಗಳನ್ನು ಉಳಿಸಬಹುದು. ನಾವೆಲ್ಲರೂ ಒಟ್ಟಾಗಿ ವಿದ್ಯುತ್ ಉಳಿಸಿ ಬೇಡಿಕೆಯ ಒತ್ತಡವನ್ನು ತಗ್ಗಿಸೋಣ” ಎಂದು ಕರೆ ನೀಡಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...