ವೆನೆಜುವೆಲಾ ಹಂಗಾಮಿ ಅಧ್ಯಕ್ಷ ನಾನೇ’: ಟ್ರಂಪ್ ಘೋಷಣೆ; ಮಡುರೊ ಬಂಧನದ ಬಳಿಕ ಅಮೆರಿಕದ ನಡೆ

Date:

ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕದ ಪಡೆಗಳು ಬಂಧಿಸಿದ ಬೆನ್ನಲ್ಲೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮನ್ನು ತಾವು ‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡಿದ್ದಾರೆ. ಭಾನುವಾರ (ಜ.11) ತಮ್ಮ ಸಾಮಾಜಿಕ ಜಾಲತಾಣವಾದ ‘ಟ್ರುತ್ ಸೋಷಿಯಲ್’ನಲ್ಲಿ (Truth Social) ಈ ಬಗ್ಗೆ ಅವರು ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದಾರೆ.

- Advertisement -

​ಅಮೆರಿಕದ 45ನೇ ಮತ್ತು 47ನೇ ಅಧ್ಯಕ್ಷರಾಗಿರುವ ಟ್ರಂಪ್, ತಮ್ಮ ಭಾವಚಿತ್ರದೊಂದಿಗೆ ‘ವೆನೆಜುವೆಲಾ ಹಂಗಾಮಿ ಅಧ್ಯಕ್ಷ – ಜನವರಿ 2026 ರಿಂದ ಅಧಿಕಾರರೂಢ’ ಎಂದು ನಮೂದಿಸಿಕೊಂಡಿದ್ದಾರೆ. ಈ ನಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

​ಹಿನ್ನೆಲೆ ಏನು?
ಕಳೆದ ಜನವರಿ 3, 2026ರಂದು ಅಮೆರಿಕದ ಪಡೆಗಳು ರಾತ್ರೋರಾತ್ರಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಕ್ಕೆ ಪಡೆದು, ದೇಶದಿಂದ ಹೊರಗೆ ಕರೆದೊಯ್ದಿದ್ದವು. ತೈಲ ಸಂಪನ್ಮೂಲದಿಂದ ಶ್ರೀಮಂತವಾಗಿರುವ ದಕ್ಷಿಣ ಅಮೆರಿಕದ ರಾಷ್ಟ್ರವಾದ ವೆನೆಜುವೆಲಾದ ಮೇಲೆ ಕಳೆದ ಕೆಲವು ತಿಂಗಳುಗಳಿಂದ ಅಮೆರಿಕ ತೀವ್ರ ಒತ್ತಡ ಹೇರಿತ್ತು. ಇದರ ಮುಂದುವರಿದ ಭಾಗವಾಗಿ ವೈಮಾನಿಕ ದಾಳಿಗಳ ಮೂಲಕ ಈ ಕಾರ್ಯಾಚರಣೆ ನಡೆದಿತ್ತು.

​ಅಮೆರಿಕದ ವಾದವೇನು?
ಮಡುರೊ ಬಂಧನದ ನಂತರ ಫ್ಲೋರಿಡಾದ ತಮ್ಮ ‘ಮಾರ್-ಎ-ಲಾಗೊ’ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಟ್ರಂಪ್, “ವೆನೆಜುವೆಲಾದಲ್ಲಿ ಅಮೆರಿಕದ ಉಪಸ್ಥಿತಿ ಈಗಾಗಲೇ ಇದೆ. ಸುರಕ್ಷಿತ ಮತ್ತು ನ್ಯಾಯಯುತ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯುವವರೆಗೂ ಅಮೆರಿಕ ಸರ್ಕಾರವೇ ವೆನೆಜುವೆಲಾದ ಆಡಳಿತವನ್ನು ನಡೆಸಲಿದೆ,” ಎಂದು ಹೇಳಿದ್ದರು.

ಇದನ್ನು ಓದಿದ್ದೀರಾ? ಪುಟ್ಟಪರ್ತಿ ಸಾಯಿಬಾಬಾ ಭಕ್ತರಾಗಿದ್ದ ವೆನೆಜುವೆಲಾ ಮಾಜಿ ಅಧ್ಯಕ್ಷ ನಿಕೋಲಸ್‌ ಮಡುರೊ

​ಅಲ್ಲದೆ, ವೆನೆಜುವೆಲಾದಲ್ಲಿರುವ ವಿಫುಲ ತೈಲ ಸಂಪನ್ಮೂಲಗಳನ್ನು ಬಳಸಿಕೊಂಡು, ಅದನ್ನು ಇತರ ದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುವ ಇಂಗಿತವನ್ನೂ ಟ್ರಂಪ್ ವ್ಯಕ್ತಪಡಿಸಿದ್ದರು. ಈ ಕಾರ್ಯಾಚರಣೆಯನ್ನು ಅವರು “ಅಮೆರಿಕದ ಸಾಮರ್ಥ್ಯ ಮತ್ತು ಆತ್ಮವಿಶ್ವಾಸದ ಪ್ರಬಲ ಪ್ರದರ್ಶನ” ಎಂದು ಬಣ್ಣಿಸಿದ್ದರು.

​ವೆನೆಜುವೆಲಾ ಸುಪ್ರೀಂ ಕೋರ್ಟ್ ಆದೇಶವೇನು?
ಟ್ರಂಪ್ ಅವರ ಈ ಘೋಷಣೆಯ ನಡುವೆಯೇ, ವೆನೆಜುವೆಲಾದ ಸಾಂವಿಧಾನಿಕ ಬಿಕ್ಕಟ್ಟು ತೀವ್ರಗೊಂಡಿದೆ. ಜನವರಿ 3 ರಂದು ವೆನೆಜುವೆಲಾ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಆದೇಶವೊಂದನ್ನು ಹೊರಡಿಸಿದ್ದು, ಮಡುರೊ ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದೆ.

​”ರಾಷ್ಟ್ರದ ಸಮಗ್ರ ರಕ್ಷಣೆ ಮತ್ತು ಆಡಳಿತಾತ್ಮಕ ನಿರಂತರತೆಯನ್ನು ಕಾಯ್ದುಕೊಳ್ಳಲು ಡೆಲ್ಸಿ ರಾಡ್ರಿಗಸ್ ಅವರು ಬೊಲಿವೇರಿಯನ್ ರಿಪಬ್ಲಿಕ್ ಆಫ್ ವೆನೆಜುವೆಲಾದ ಅಧ್ಯಕ್ಷರ ಕಚೇರಿಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ,” ಎಂದು ಕೋರ್ಟ್ ಹೇಳಿದೆ. ಇತ್ತ ಹಂಗಾಮಿ ನಾಯಕಿ ರಾಡ್ರಿಗಸ್ ಅವರು, ಮದುರೊ ಅವರೇ ದೇಶದ ಕಾನೂನುಬದ್ಧ ನಾಯಕ ಎಂದು ಪ್ರತಿಪಾದಿಸಿದ್ದು, ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಅಮೆರಿಕವನ್ನು ಒತ್ತಾಯಿಸಿದ್ದಾರೆ.

ವೆನೆಜುವೆಲಾದಲ್ಲಿ ಒಂದೆಡೆ ಅಮೆರಿಕದ ಅಧ್ಯಕ್ಷರು ತಾವೇ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದರೆ, ಇನ್ನೊಂದೆಡೆ ಸ್ಥಳೀಯ ಸುಪ್ರೀಂ ಕೋರ್ಟ್ ಅಲ್ಲಿನ ಉಪಾಧ್ಯಕ್ಷರಿಗೆ ಅಧಿಕಾರ ನೀಡಿದೆ. ಈ ಬೆಳವಣಿಗೆಯಿಂದಾಗಿ ವೆನೆಜುವೆಲಾದ ರಾಜಕೀಯ ಭವಿಷ್ಯ ಅನಿಶ್ಚಿತತೆಯತ್ತ ಸಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದ ಮೇಲೆ 100% ಸುಂಕ ಹೇರುವ ನಿರ್ಧಾರ ರದ್ದು: ಟ್ರಂಪ್

ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುತ್ತಿರುವ ಭಾರತ ಸೇರಿದಂತೆ ವಿಶ್ವದ ಪ್ರಮುಖ...

ಅಮೆರಿಕ ಸರ್ಕಾರದ ವಿರುದ್ಧ ನ್ಯಾಯಾಲಯದ ಮಹತ್ವದ ಆದೇಶ: 55 ಸಾವಿರ ಗ್ರೀನ್ ಕಾರ್ಡ್ ಅರ್ಜಿಗಳ ಪರಿಗಣನೆಗೆ ಸೂಚನೆ

ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಬಯಸುವ ವಿದೇಶಿಯರಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ, ಜಗತ್ತಿನ...

ರಷ್ಯಾದಲ್ಲಿ 7 ತೀವ್ರತೆಯ ಭೂಕಂಪ; ಜಪಾನ್‌ನಲ್ಲಿ 9.9 ತೀವ್ರತೆಯ ತಪ್ಪು ಎಚ್ಚರಿಕೆ!

ರಷ್ಯಾದ ದೂರಪ್ರಾಚ್ಯದ ಕಮ್ಚಟ್ಕಾ ಪರ್ಯಾಯ ದ್ವೀಪ ಪ್ರದೇಶದಲ್ಲಿ 7.0 ತೀವ್ರತೆಯ ಭೂಕಂಪ...

ಅಂಟಾರ್ಕ್ಟಿಕದಲ್ಲಿ ಪೆಂಗ್ವಿನ್ ಎಣಿಸುವ ಅಪರೂಪದ ಉದ್ಯೋಗ: ಲಕ್ಷಗಳ ಸಂಭಾವನೆ, ಹೇಗಿರುತ್ತದೆ ಹಿಮದ ನಾಡಿನ ಬದುಕು?

ಜನಜಂಗುಳಿ, ಟ್ರಾಫಿಕ್ ಕಿರಿಕಿರಿ ಹಾಗೂ ದೈನಂದಿನ ಯಾಂತ್ರಿಕ ಬದುಕಿನಿಂದ ದೂರ ಸರಿದು,...